Tuesday 20 November 2012

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....

ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
  ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!

                                                                                                                                ಧ್ವನಿ








Friday 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ

Tuesday 21 August 2012

`ಕಾಲದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

`ಕಾಲ'ದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

 

ತಾಯಿಯ ಹೊಟ್ಟೆಯಿಂದ ಭೂಮಿಗಿಳಿಯುವಾಗ ಸಣ್ಣದೊಂದು ಅಳುವಿನ ಜೊತೆಗೆ ಪುಕ್ಕಟೆಯಾಗಿ ಸಿಗುವುದು `ಮಗು ಎಂಬ ನಾಮಧೇಯವಷ್ಟೇ. ಆಸ್ಪತ್ರೆಯ ತೊಟ್ಟಿಲಲ್ಲಿ ಪಿಲಿ ಪಿಲಿ ಕಣ್ಣು ಬಿಡುತ್ತಾ ಅಮ್ಮನ ತೋಳ ತೆಕ್ಕೆಯ ಆಸರೆ ಬೇಡುತ್ತಿದ್ದರೆ ಅಲ್ಲಿ ನೆರೆದವರಿಗೆ ಅದೆಂಥದೋ ಪುಳಕ. ಹೆತ್ತ ತಾಯಿಗಂತೂ ಆ ಮಗುವಿನ ಆಳುವೇ ಸಾರ್ಥಕ ಎನಿಸುವಂಥ ಅನುಭವ. ಆದರೆ ಭೂಮಿಯ ಸ್ಪರ್ಶಕ್ಕೆ ಸಿಕ್ಕಿ ಕೆಲವೇ ಸೆಕೆಂಡ್ ಕಳೆದ ಮಗುವಿಗೆ ಜಗವೇ ನೂತನ....ಅಳು ಕಂಡು ನಗುವವರ ವ್ಯಕ್ತಿತ್ವ ವಿನೂತನ....ಹುಟ್ಟಿದ ಮಗುವಿನ ಅಳು ನಗುವಾಗಿ ಬದಲಾಗುವಾಗ ಅದಕ್ಕೊಂದು ಸ್ವಂತ ಹೆಸರಿನ ಆಸರೆ....ಮನೆಯವರೆಲ್ಲರ ಸ್ಪರ್ಶ....
ಸಣ್ಣ ವಯಸ್ಸಿನಲ್ಲೊಂದು ಇಂತಹ ಪ್ರೀತಿ, ಪ್ರತೀ ಮಗುವಿಗೂ ಸಿಗಬೇಕು. ಸಿಕ್ಕೇ ಸಿಗುತ್ತೆ ಕೂಡ...ಆದರೆ ಎಷ್ಟು ದಿನ?
ಆ ಮಗುವಿಗೂ ಕಾಲದ ಜವಾಬ್ದಾರಿಗೆ ಹೆಗಲು ಕೊಡುವ ಅನಿವಾರ್ಯತೆ ಬಂದೇ ಬರುತ್ತೆ ಅಲ್ವಾ?
ಹೌದು, ಬದಲಾವಣೆ ಜಗದ ನಿಯಮ..ಹುಟ್ಟು ಸಾವಿನ ಮಧ್ಯೆ ಕಂಡುಕೊಂಡ ಪ್ರತೀ ಹಾದಿಯಲ್ಲೂ ಜವಾಬ್ದಾರಿಯ ನೊಗ ಹೊತ್ತು ಸಾಗಬೇಕಾದದ್ದು ಅನಿವಾರ್ಯ....ಎಳೆಯ ವಯಸ್ಸಿನ ಆಟ, ತುಂಟಾಟಗಳು, ನಮ್ಮದೇ ಆದ ಜೀವನ, ಎಲ್ಲವೂ ದೂರ ಸರಿದು `ಜವಾಬ್ದಾರಿಯೆಂಬ ಹಣೆಪಟ್ಟಿ ಹೊತ್ತು ನಮ್ಮ ಹೆಗೆಲೇರುತ್ತದೆ.
ಇಂದೊಂಥರ ಅನ್ಯಗ್ರಹವನ್ನು ಪ್ರವೇಶಿಸಿದ ಹಾಗೆ...!
ಜೀವನ ಸುಗಮವಾಗಿರಲಿ ಎಂದು ಮುಂದಡಿಯಿಡುವ ಪ್ರತೀ ಜೀವವೂ ಬಯಸದೇ ಪಡೆದ ಭಾಗ್ಯ, ದೌಭರ್ಾಗ್ಯಗಳು ಎಷ್ಟು ಎನ್ನುವುದು ಕೇಳಿಯೂ ಕೇಳದಂತಿರುವ ದುರಂತ ಕಥಾನಕಗಳೇ ಸರಿ....
ಶಾಲಾ ದಿನಗಳಲ್ಲಿ ಜವಾಬ್ದಾರಿ ಅನ್ನುವುದನ್ನೇ ಮರೆತ ಅದೆಷ್ಟೋ ಗೆಳೆಯರ ಬಳಗ ನನ್ನ ಜೊತೆಯಲ್ಲಿತ್ತು. ಪ್ರತೀ ದಿನ, ಪ್ರತೀ ಕ್ಷಣ ಮನೋರಂಜನೆಯೊಂದನ್ನು ಬಿಟ್ಟರೆ ನನ್ನ ಗೆಳೆಯರ(ಒಂದು ವರ್ಗ) ಬಳಗಕ್ಕೆ ಕಾಲದ ಜೊತೆ ಬರುವ ಜವಾಬ್ದಾರಿಯ ಪರಿಚಯವೇ ಇರಲಿಲ್ಲ. ಆದರೆ ವಯಸ್ಸು 20 ದಾಟುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿದ್ದ ಶಾಲಾ ದಿನಗಳ ಗೆಳೆಯರು ಜವಾಬ್ದಾರಿಯ ಪರಿಚಯ ಮಾಡಿಸಿಕೊಂಡು ಒಂದು ಹಂತಕ್ಕೆ ಕುಟುಂಬದ ಬಂಡಿ ಎಳೆಯುವುದನ್ನು ಕಂಡಿದ್ದೇನೆ. ಆಗೆಲ್ಲಾ ಯೋಚಿಸಿದ್ದಿದೆ...
ನಿಜಕ್ಕೂ ಜವಾಬ್ದಾರಿ ಅಂದ್ರೆ ಇದೇನಾ?
ಹೌದೋ? ಅಲ್ವೋ? ನಂಗತ್ತೂ ಅಷ್ಟು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಶಾಲಾ ದಿನಗಳಲ್ಲಿ ಈ ಗೆಳೆಯರ ಬಳಗದ ವರ್ತನೆ ಕಂಡ ನಾನು ಇಂದು ಮಾತ್ರ ಮಾತೆತ್ತದೆ ಮೌನವಾಗಬೇಕಿದೆ. ಆ ದಿನಗಳಲ್ಲಿ ಶಿಕ್ಷಣದ ಸ್ಪರ್ಶ ಕಂಡರೆ ಬೆಚ್ಚಿ ಬೀಳುತ್ತಿದ್ದ ಈ ವರ್ಗ..ಇಂದು ಹೇಗೋ ಜವಾಬ್ದಾರಿಯ ಅರ್ಥವನ್ನು ಅಥರ್ೈಸಿ ಜೀವನ ಸಾಗಿಸುತ್ತಿದ್ದಾರೆ. ಕಾಲವೇ ಎಲ್ಲವನ್ನೂ ಕಲಿಸುತ್ತೆ ಅನ್ನೋದು ಬಹುಶಃ ಇದಕ್ಕೆ ಇರಬೇಕು...
ಏನೇ ಆದರೂ ಇಂಥವರಿಗೊಂದು ಸಲಾಂ ಮೀಸಲಿಡಲೇ ಬೇಕು. ನನ್ನ ಪ್ರಕಾರ ಸಾಧಕರಲ್ಲದಿದ್ದರು ಸಾಧಕರಿವರು!
ಪ್ರತೀ ಬಾರಿ ಬ್ಲಾಗ್ ಬರೆಯುವಾಗ ನನ್ನ ಚಿಂತನೆಗಳಿಗೆ ಕೆಲಸ ಕೊಡುವ ನಾನು ಈ ಬಾರಿ ಕಣ್ಣಿಗೆ ಬಿದ್ದ ನೈಜ ಪರಿಶ್ರಮದ ಬೆನ್ನು ಬಿದ್ದು ಬರೆದಿದ್ದೇನೆ. ಶಾಲಾ ದಿನಗಳಲ್ಲಿ ರೌಡಿಸಂ, ಗಲಾಟೆ, ಲವ್ ಎಂದು ಹುಚ್ಚರಂತೆ ಬೀದಿ ಸುತ್ತುತ್ತಿದ್ದ ನನ್ನ ಗೆಳೆಯರ ಬಳಗದ ಬಗ್ಗೆ(ಒಂದು ವರ್ಗ) ಬರೆಯಬೇಕೆನಿಸಿತು. ಆದರೆ ಈಗ ಮಾತ್ರ ಇವರ್ಯಾರೂ ಹಾಗಿಲ್ಲ. ಬದಲಾಗಿದ್ದಾರೆ...ಬದಲಾಗುತ್ತಿದ್ದಾರೆ...!
ಮೊದಲೇ ಹೇಳಿದ ಹಾಗೆ ಜವಾಬ್ದಾರಿಗಳನ್ನು ಅಥರ್ೈಸಿಕೊಂಡಿದ್ದಾರೆ. ಆ ದಿನಗಳಲ್ಲಿ ಇವರ ವರ್ತನೆಗೆ ಬೇಸರ ಪಟ್ಟುಕೊಂಡ ಜನರೂ ಇಂದು ತೃಪ್ತಿ ಪಟ್ಟುಕೊಳ್ಳಬೇಕು ಅನ್ನೋ ಹಾಗೆ ಜೀವನ ನಡೆಸುತ್ತಿದ್ದಾರೆ. 10ರಿಂದ 20 ಸಾವಿರ ಸಂಬಳ ಹಿಡಿಯದಿದ್ದರೂ ಸಾಮಾಜಿಕವಾಗಿ ಒಂದು ಹಂತಕ್ಕೆ ಗಟ್ಟಿಮುಟ್ಟು ಎನ್ನಬಹುದುದು.
ಫ್ರೆಂಡ್ಸ್, ಇಷ್ಟೆಲ್ಲಾ ಯಾಕೆ ಹೇಳಬೇಕೆನಿಸಿತು ಅಂದರೆ,,,
ಮೊನ್ನೆಯಷ್ಟೆ ನನ್ನೊಬ್ಬ ಆಕಾಲದ ಗೆಳೆಯ ಸಿಕ್ಕಿದ್ದ. ಅಂದು ಅವನಿದ್ದ ರೀತಿಗೂ ಇಂದು ಅವನಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿದ್ದ ಅಹಂಕಾರ, ಅರ್ಭಟ, ಮಾತೆತ್ತಿದರೆ ಸುಳಿಯುತ್ತಿದ್ದ ಕೋಪ ಇದ್ಯಾವುದೂ ಇಲ್ಲ. ಆಗೆಲ್ಲಾ ಇವರ ವರ್ತನೆ ಬದಲಾಗಲಿ ಎಂದು ಆಶಿಸುತ್ತಿದ್ದೆ. ಮುಂದೆ ಅದೇ ಗೆಳೆಯ ಜೀವನವನ್ನು ಈ ಮಟ್ಟಿಗೆ ಅಥರ್ೈಸಿಕೊಂಡು ಕಣ್ಣಿಗೆ ಬೀಳುತ್ತಾನೆ ಎಂಬ ಸಣ್ಣ ಊಹೆಯೂ ನನಗಿರಲಿಲ್ಲ. ಮಾತಿನಲ್ಲಿ ನಗುವಿನ ಸ್ಪರ್ಶ, ಗೌರವದ ಭಾವ, ಪ್ರೀತಿ ತುಂಬಿದ ಸ್ಪಷ್ಟ ನಿಲುವು....ಹಿಂದಿದ್ದ ವ್ಯಕ್ತಿತ್ವಕ್ಕೆ ಸಿಡಿಲು ಬಡಿದಂತೆ ಬದಲಾಗಿದ್ದ ನನ್ನ ಆತ್ಮೀಯ ಗೆಳೆಯ..!
ಇಂಥದ್ದೊಂದು ಬದಲಾವಣೆಗೆ ಕಾರಣನಾದ ಆ `ಕಾಲಕ್ಕೊಂದು ಥ್ಯಾಂಕ್ಸ್ ಹೇಳಲೇ ಬೇಕು.
ಫ್ರೆಂಡ್ಸ್, ಹಾಗಂತ ಬದಲಾವಣೆಯ ಪ್ರತೀ ಮಗ್ಗುಲನ್ನು ತಿರುವಿ ಹಾಕಿಕೊಂಡು ನೋಡುವ ಅಭ್ಯಾಸ ನನಗಿಲ್ಲ. ಒಬ್ಬನ ವ್ಯಕ್ತಿತ್ವ ನೋಡಿ ಗುಣಮಟ್ಟದ ಸಟರ್ಿಪಿಕೇಟ್ ಕೊಡುವ ಹಂತಕ್ಕೂ ನಾನು ಬೆಳೆದಿಲ್ಲ. ಆದರೆ ಎಲ್ಲೋ ಹಾಳಾಗಿ ಹೋಗುತ್ತಿದ್ದ ಹೊವೊಂದು ತುಂತುರು ಹನಿಗೆ ಮೈದಡವಿ ನಿಂತರೆ ಪೋಟೋ ಕ್ಲಿಕ್ಕಿಸಿ ಚೆಂದಗಾಣಿಸುವ ಅನ್ನೋ ಹವ್ಯಾಸವಷ್ಟೇ! ನನ್ನ ಹವ್ಯಾಸಗಳು ಕೆಲವರ ಪಾಲಿಗೆ ದುರಾಭ್ಯಾಸಗಳಾಗಿ ಕಂಡರೆ ನಾನು ಜವಾಬ್ದಾರನಲ್ಲ.
ಬದುಕಿನ ಪ್ರತೀ ಹಂತದಲ್ಲೂ ಎಡವಿ ಬೀಳುವ ವರ್ಗಕ್ಕಿಂತ, ಈ ಹಿಂದೆ ಎಡವಿ ಬಿದ್ದು ಈಗಷ್ಟೇ ಎದ್ದು ನಿಲ್ಲುತ್ತಿರುವ ನನ್ನ ಆ ಕಾಲದ ಗೆಳೆಯನ ವರ್ಗ ನನಗಿಷ್ಟ..
ಇವರು ಅಂದೆಲ್ಲಾ ಜೀವನದ ಪ್ರತೀ ಕ್ಷಣವನ್ನು ಇಂಚಿಂಚೂ ಎಂಜಾಯ್ ಮಾಡಿದ್ದಾರೆ...ಒಂದು ಕ್ಷಣವೂ ಭಾವುಕರಾಗದೆ ಸಣ್ಣ ವಯಸ್ಸಿನ ಸುಖವನ್ನು ಪ್ರತೀ ಕ್ಷಣವೂ ಅನುಭವಿಸಿದ್ದಾರೆ..ಜವಾಬ್ದಾರಿಯೆಂಬ ಕಾಲನ ಕರೆ ಬಂದಾಗ ನಿಯತ್ತಾಗಿ ಅದಕ್ಕೆ ಹೊಂದಿಕೊಂಡಿದ್ದಾರೆ.
ನಿಜಕ್ಕೂ ಈ ರೀತಿಯ ಜೀವನ ಗ್ರೇಟ್ ಅಲ್ವಾ?
ಫ್ರೆಂಡ್ಸ್, ಈ ಮೂಲಕ ಹೇಳುವುದಿಷ್ಟು...
ಯಾರೇ ಆಗಲಿ ವಯಸ್ಸಿನ ಒಂದು ಹಂತದವರಗೆ ಇರುವಷ್ಟು ದಿನಗಳನ್ನು ಎಂಜಾಯ್ ಮಾಡೋಣ, ನಕ್ಕು ನಲಿಯೋಣ, ಹೇಗಿದ್ದರೂ ಜವಾಬ್ದಾರಿಯೆಂಬ ಕಾಲನ ಕರೆಗೆ ಮತ್ತೆ ಕಿವಿಕೊಡಲೇ ಬೇಕಲ್ಲವೇ?
ನನ್ನ ಈ ಬ್ಲಾಗ್ ಬರಹದ ಉದ್ದೇಶವಿಷ್ಟೇ...ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ನನ್ನ ಆ ಕಾಲದ ಗೆಳೆಯರ ಜೊತೆ ಸಂಭ್ರಮಿಸಿಲ್ಲ. ನಕ್ಕು ನಲಿದಿರಲಿಲ್ಲ...ಎಲ್ಲಕ್ಕೂ ಲಕ್ಷ್ಮಣ ರೇಖೆ ಎಳೆದು ಜೀವಿಸಿದ್ದೆ. ಆದರೆ ಈಗ ಆ ಕಾಲ ಮಿಂಚಿ ಹೋಗಿದೆ. ಇದೀಗ ಜವಾಬ್ದಾರಿಯ ಕಾಲ...ಇಂದು ಸಂಭ್ರಮಿಸಲು ಸಮಯದ ತಿಕ್ಕಾಟ, ಕೆಲಸ ಕಾರ್ಯಗಳ ಜಂಜಾಟ ಬ್ರೇಕ್ ಹಾಕುತ್ತಿದೆ...ಅಪ್ಪಿ ತಪ್ಪಿ ಎಲ್ಲೋ ಒಂದೆರೆಡು ರಜಾ ದಿನಗಳಲ್ಲಿ ಆ ದಿನಗಳ ಸಂಭ್ರಮ ಮರುಕಳಿಸುತ್ತದೆ. ಅದು ಬಿಟ್ಟರೆ ಮುಂದಿನ ಜೀವನದ ಭವಿಷ್ಯತ್ ಕಾಲದಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎನ್ನಬಹುದು.
ಏನೇ ಆದರೂ ಜವಾಬ್ದಾರಿ ಮತ್ತು ಮಜಾ ಎಂಬ ಎರಡು ಶಬ್ದಕ್ಕೆ ಅಡ್ಡಗಾಲಿಡುವ `ಕಾಲ ಎಂಬ ಎರಡಕ್ಷರಕ್ಕೆ ದೊಡ್ಡದೊಂದು ಸಲಾಂ...

Wednesday 1 August 2012

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ಇವತ್ತು ರಕ್ಷಾ ಬಂದನ. ಸಹೋದರ-ಸಹೋದರಿಯರ ಸಂಬಂಧಕ್ಕೊಂದು ಗೌರವಯುತ ಅರ್ಥ ಕಲ್ಪಿಸಿದ ದಿನ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಂಥದ್ದೊಂದು ಮಾನವೀಯ ಸಂಬಂಧ ಇದ್ದೇ ಇರುತ್ತದೆ. ಕೆಲವರ ಜೀವನದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ಸಂಬಂಧಗಳಾದರೆ, ಇನ್ನು ಕೆಲವರ ಜೀವನದಲ್ಲಿ ಹಾಗೇ ಸುಮ್ಮನೆ ಸಿಕ್ಕ ಸಂಬಂಧಗಳು. ರಕ್ಷಾ ಬಂಧನದ ಈ ದಿನದಲ್ಲಿ ನನ್ನ ಜೀವನದಲ್ಲಿ ಬಂದು ಹೋದ ಅಕ್ಕನ ಬಗ್ಗೆ ಒಂದಿಷ್ಟು....

ಪ್ರತೀ ಕ್ಷಣವೂ ನೆನಪಾಗುವ ಜೀವದ ಬಗ್ಗೆ ಒಂದಿಷ್ಟು....ಹೆತ್ತಮ್ಮನ ನಂತರ ಹೆಚ್ಚು ಇಷ್ಟ ಪಟ್ಟ ಜೀವದ ಬಗ್ಗೆ ಒಂದಿಷ್ಟು....
ಜೀವನ ಅನ್ನೋದು ನಿಜಕ್ಕೂ ವಿಚಿತ್ರ. ಜೀವನದ ಅನಿಶ್ಚಿತತೆಯ ಪಯಣದಲ್ಲಿ ಯಾರೆಲ್ಲಾ ಸಿಗ್ತಾರೆ ಅನ್ನೋದನ್ನು ಹೇಳೋದು ಅಷ್ಟು ಸುಲಭವಲ್ಲ. ಹಾಗೆ ಊಹಿಸಲೂ ಆಗದ ನನ್ನ ಜೀವನದ ತಿರುವಿನಲ್ಲಿ ಸಿಕ್ಕ ವ್ಯಕ್ತಿಯೇ ಒಬ್ಬರು ಅಕ್ಕ. ಸದಾ ಮುಗುಳ್ನಗು, ನನ್ನ ಹೆತ್ತ ತಾಯಿಯನ್ನೇ ಹೋಲುವ ಸ್ವಭಾವ, ಜೀವನದ ಪ್ರತೀ ಕ್ಷಣದಲ್ಲೂ ಅತೀ ಭಾವುಕ ಜೀವಿ, ಸ್ವಲ್ಪ ಧೈರ್ಯ, ಅತ್ಯಲ್ಪ ಕೋಪ, ಬದುಕಿನ ಪ್ರತೀ ಕ್ಷಣವನ್ನೂ ನೋವಿನಲ್ಲೂ ಸಂಭ್ರಮಿಸುವ ವ್ಯಕ್ತಿತ್ವ. ಎಲ್ಲರಿಗೂ ಇಷ್ಟವಾಗುವ ಸ್ವಭಾವ. ಇದು ನನ್ನ ಅಕ್ಕನ ಬಗ್ಗೆ ಎರಡೇ ತಿಂಗಳಲ್ಲಿ ತಿಳಿದುಕೊಂಡ ಸತ್ಯ.
ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಕಥೆ. ಹೆಜ್ಜೆ ಹೆಜ್ಜೆಗೂ ಕಷ್ಟ ಪಟ್ಟ ನಾನು ಕೆಲಸಕ್ಕೆಂದು ಬಂದು ಸೇರಿದ್ದು ಸಣ್ಣದೊಂದು ಸಂಸ್ಥೆಗೆ. ಆಗೆಲ್ಲಾ ಗೊತ್ತಿದ್ದದ್ದು ಒಂದೇ....ಬೆಳಿಗ್ಗಿನಿಂದ ಸಂಜೆಯವರೆಗೆ ನಿಯತ್ತಿನಿಂದ ದುಡಿಯವುದು. ಸಂಬಂಧಗಳು ಎನ್ನುವುದು ನನ್ನ ಪಾಲಿಗೆ ಅಷ್ಟಕ್ಕಷ್ಟೇ. ಅದರಲ್ಲೂ ಹೆಣ್ಣು ಜೀವಗಳ ಜೊತೆಗೆ ಬೆಳೆಯದ ನನಗೆ ಹೆಣ್ಮಕ್ಕಳನ್ನು ಕಂಡರೆ ಒಂದು ರೀತಿಯ ನಾಚಿಕೆ ಸ್ವಭಾವ. ಮಾತಿಗಿಳಿಯಲು ಸಣ್ಣದೊಂದು ಭಯ. ಕೆಲಸಕ್ಕೆ ಸೇರುವ ವೇಳೆ ಅಲ್ಲಿ ನನಗೆ ಮಾಲೀಕರಿಗಿಂತ ಮೊದಲು ಪರಿಚಯವಾದದ್ದೇ ಈ ಅಕ್ಕ. ಮೊದಲ ವಾರದ ಸಂಬಳವನ್ನು ನನ್ನ ಕೈಗಿಟ್ಟದ್ದೇ ಆ ಅಕ್ಕ...ಒಂದು ತಿಂಗಳು ಕಳೆಯುವವರಗೆ ಇವರನ್ನು ಹಿಂದೂ ಧಮರ್ೀ ಎಂದೇ ಅಂದುಕೊಂಡಿದ್ದೆ. ಅದರಲ್ಲೂ ಇವರು ಕ್ರೈಸ್ತ ಧಮರ್ೀ ಎಂದು ತಿಳಿದದ್ದು ಒಂದು ತಿಂಗಳ ನಂತರ. ಬಹುಶಃ ಅಲ್ಲಿಯ ತನಕ ಒಂದು ಹೆಣ್ಣಿನೊಂದಿಗೆ ನಿರ್ಭಯವಾಗಿ ಮಾತನಾಡುವ ತಾಕತ್ತು ನನಗಿರಲಿಲ್ಲ. ಆದರೆ ಒಂದೇ ತಿಂಗಳಲ್ಲಿ ನನ್ನ ಅಕ್ಕನ ಜೊತೆ ತುಂಬಾನೇ ಅಂದ್ರೆ ತುಂಬಾನೇ ಕ್ಲೋಸ್ ಆಗಿ ಬಿಟ್ಟಿದ್ದೆ. ಪ್ರತೀ ದಿನ ಒಂದರ್ಧ ಘಂಟೆ ನನ್ನ ಅಕ್ಕನ ಜೊತೆ ಮಾತನಾಡಲಿಲ್ಲ ಅಂದ್ರೆ ಏನೋ ಕಳೆದುಕೊಂಡ ಅನುಭವ...ಕೆಲಸಕ್ಕೆ ರಜೆ ಮಾಡಿದರೆ ಎಲ್ಲಿ ಅಕ್ಕನ ಜೊತೆ ಮಾತನಾಡೋದು ತಪ್ಪಿ ಹೋಗುತ್ತೋ ಅನ್ನೋ ಭಯ..ಹಾಗಾಗಿಯೋ ಏನೋ ಪ್ರತೀ ದಿನ ಕೆಲಸಕ್ಕೆ ಹಾಜರಾಗುತ್ತಿದ್ದೆ.
ಯಾರಲ್ಲಿಯೂ ಹೇಳಿಕೊಳ್ಳದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳಿಕೊಳ್ಳುತ್ತಿದ್ದೆ. ತೀರಾ ನೋವಾದಾಗ ಅವರ ಮುಂದೆ ಕಣ್ಣೀರು ಹಾಕಿದ್ದೂ ಇದೆ. ಅಲ್ಲಿಯ ತನಕ ನಾನು ಜೀವನದ ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರು ಹಾಕಿದ್ದಿಲ್ಲ. ಬಹುಶಃ ಅಂತಹ ಅವಕಾಶ, ಜೀವಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಸಿಗದೇ ಇರೋದು ಕೂಡ ಕಾರಣ ಇರಬಹುದು.
ನನ್ನ ಅಕ್ಕನೂ ಅಷ್ಟೇ ...ನನ್ನನ್ನು ಅವರ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಇಷ್ಟ ಪಡೋರು. ಜೀವನದ ಪ್ರತೀ ಕ್ಷಣಗಳನ್ನೂ ನನ್ನ ಹತ್ತಿರ ಹೇಳ್ತಾ ಇರೋರು.. ಆಗೆಲ್ಲಾ ನನ್ನ ಅಕ್ಕ ತುಂಬಾನೇ ಅಂದ್ರೆ ತುಂಬಾನೇ ಹತ್ತಿರ ಆಗ್ತಾ ಇದ್ರೂ....
ನಾನೂ ಅಷ್ಟೇ, ಅಮ್ಮನ ಹತ್ತಿರ ಹೇಲೋಕೆ ಆಗದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳ್ತಾ ಇದ್ದೆ. ಐದಾರು ತಿಂಗಳ ನಂತ ಅವರ ಮನೆಯಲ್ಲಿ ನಾನು ಒಬ್ಬನಂತಾದೆ...
ಗೊತ್ತು ಗುರಿಯಿಲ್ಲದ ನನ್ನ ಜೀವನಕ್ಕೆ `ನೀನ್ ಜಾಗ್ ಆಗಬೆಕು, ನೀನ್ ಹೀಗ್ ಆಗ್ಬೇಕು...ಅಂತ ಸ್ಪೂತರ್ಿ ತುಂಬಿದ್ದು ಇದೇ ಅಕ್ಕ, ಇವತ್ತಿಗೂ ನನ್ನ ತಂದೆ ತೀರಿ ಹೋದ ಮೇಲೆ ನನ್ನ ಅಪ್ಪನ ಕುಟುಂಬ ನಮ್ಮ ಹತ್ತಿರ ಬಂದಿಲ್ಲ. ನಮ್ಮ ಭವಿಷ್ಯ ಹೇಗಿದೆ ಅಂತ ಚಿಂತಿಸಿಲ್ಲ. ಆದ್ರೆ ನನ್ನ ಅಕ್ಕ ನನಗೆ ಸಂಬಂದವೇ ಇಲ್ಲದ ನನ್ನ ಆಕಸ್ಮಿಕ ಅಮ್ಮ ನನ್ನಲ್ಲೂ ಒಂದು ಕನಸು ತುಂಬಿದ್ರೂ...ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪೂತರ್ಿ ತುಂಬಿದ್ರು.
ನನ್ನ ಬರಹಕ್ಕೆ ಮೊದಲ ಓಗುಗಳಾಗಿದ್ದಳು ಅಕ್ಕ
ಹಿಂದಿನಿಂದಲೂ ನನಗೆ ಬರವಣೆಗೆಯ ಹುಚ್ಚು...ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗ್ತಾ ಇದ್ದವು.. ಆರಂಭದ ದಿನಗಳಲ್ಲಿ ನನ್ನ ಬರಹಗಳು ಅಕ್ಕನನ್ನು ಮೆಚ್ಚಿಸುವ, ಅವಳನ್ನು ಇಷ್ಟ ಪಡಿಸುವ ಬರಹಗಳಾಗಿರುತ್ತಿದ್ದವು. ಪತ್ರಿಕೆಯಲ್ಲಿ ನನ್ನ ಬರಹ ಪ್ರಕಟಗೊಂಡರೆ ಸಾಕು...ಅಂಗಡಿಯಿಂದ ಪತ್ರಿಕೆ ತಂದು ಅವಳು ಬರುವ ಹೊತ್ತಿಗೆ ಟೇಬಲ್ ಮೇಲಿಟ್ಟು ದೂರದಿಂದ ಗಮನಿಸುತ್ತಿದ್ದೆ. ನನ್ನಕ್ಕ ನನ್ನ ಬರಹ ಓದ್ತಾರ ಅಂತ ಕಾತುರದಿಂದ ಕಾಯ್ತಾ ಇದ್ದೆ. ನನ್ನ ಪ್ರತೀ ಬರಹಗಳನ್ನು ನನ್ನ ಅಕ್ಕ ಓದ್ತಾ ಇದ್ದಳು. ಆದರೆ ಎಲ್ಲರಂತೆ ಶಹಬ್ಬಾಸ್ ಗಿರಿ ಕೊಡ್ತಾ ಇರಲಿಲ್ಲ. ಯಾಕ್ ಗೊತ್ತಾ?
ಆಕೆಯ ಸ್ವಭಾವವೇ ಅಂತದ್ದು...ಇಷ್ಟ-ಕಷ್ಟ ಯಾವುದನ್ನೂ ತೀರಾ ಹೆಚ್ಚಾಗಿ ತೋರ್ಪಡಿಸುವುದಿಲ್ಲ. ಇಷ್ಟ ಅದರೂ ನಗು...ನೋವಾದರೂ ನಗು....ಆದರೂ ನನ್ನ ಬರಹಗಳು ಅಕ್ಕನಿಗೆ ಇಷ್ಟ ಆಗ್ತಾ ಇದ್ದವು. ಅವಳ ಕಣ್ಣುಗಳೇ ಎಲ್ಲವನ್ನೂ ನನಗೆ ಹೇಳ್ತಾ ಇತ್ತು. ನನ್ನ ಬರಹಗಳನ್ನು ಯಾರು ಒದದೇ ಇದ್ದರೂ ಪರವಾಗಿಲ್ಲ. ನನ್ನ ಅಕ್ಕ ಮಾತ್ರ ಓದಲೇ ಬೇಕು ಅನ್ನೋವಷ್ಟು ಸ್ವಾಥರ್ಿ ನಾನು. ಇದು ಅಹಂಕಾರವೋ....ಓವರ್ ಕಾನ್ಫಿಡೆನ್ಸೋ ಗೊತ್ತಿಲ್ಲ. ಆದರೆ ಪ್ರೀತಿ ತುಂಬಿದ ಅಕ್ಕನ ಸ್ಫೂತರ್ಿಗೆ ಮಾತ್ರ ನಾನ್ ಕಾಯ್ತಾ ಇದ್ದೆ.
ಅಲ್ಲೀ ತನಕ ಇನ್ನೊಬ್ಬರಿಗೆ ಗಿಫ್ಟ್ ಕೊಟ್ಟು ನನಗೆ ಗೊತ್ತೇ ಇಲ್ಲ. ಅಕ್ಕನ ಹುಟ್ಟಿದ ಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿ. ಈ ಹಿಂದೆಯೆ ಕೂಡಿಟ್ಟಿದ್ದ ಸಾವಿರ ರೂಪಾಯಿ ಹಿಡಿದುಕೊಂಡು ಅದೊಂದು ಭಾನುವಾರ ಇಡೀ ಮಂಗಳೂರು ಸುತ್ತು ಹಾಕಿದ್ದೆ. ನಗರದ ಬಹುತೇಕ ಬಟ್ಟೆ ಮಳಿಗೆಗಳಿಗೆ ನುಗ್ಗಿ ಹೊರಬಂದಿದ್ದೆ. ಯಾಕ್ ಗೊತ್ತಾ? ನನ್ನ ಪ್ರೀತಿಯ ಅಕ್ಕನಿಗೆ ಚೂಡಿದಾರ ಉಡುಗೊರೆ ಕೊಡೋದಕ್ಕೆ. ಸುತ್ತಿ ಸುತ್ತಿ ಅಂತಿಮವಾಗಿ ಒಂದು ಶಾಪ್ನಲ್ಲಿ ನನ್ನ ಅಕ್ಕನಿಗೆ ಇಷ್ಟ ಆಗಬಹುದು ಅನ್ನೋ ಸಣ್ಣದೊಂದು ನಿರೀಕ್ಷೆಯಲ್ಲಿ ಹಸಿರು ಗುಲಾಬಿ ಬಣ್ಣ ಮಿಶ್ರಿತ ಚೂಡಿದಾರ ಖರೀದಿಸಿದೆ. ಅಲ್ಲಿಂದ ಮತ್ತೆ ಅಕ್ಕನಿಗೆ ಇಷ್ಟವಾಗುವ ರೀತಿಯ ಗ್ರೀಟಿಂಗ್ ಕಾಡರ್್ ತಲಾಷ್ಗೆ ನಿಂತೆ. ಇಲ್ಲೂ ಅಷ್ಟೇ, ನನ್ನ ಅಕ್ಕನ ಟೇಸ್ಟ್ಗೆ ಢಿಫರೆಂಟ್ ಆಗಿ ಕೊಡಬೇಕು ಅನ್ನೋ ನನ್ನ ಮನಸ್ಥಿತಿಗೆ ಹೊಂದುವ ಗ್ರೀಟಿಂಗ್ಸ್ ಸಿಗಲಿಲ್ಲ. ಕೊನೆಗೊಂದು ಆಗಬಹುದು ಅನ್ನೋ ಗೀಟಿಂಗ್ಸ್ ಕೈಗಿಟ್ಟು ಅಲ್ಲಿಂದ ಹೊರಟೆ....
ಅಂದು ನಾನು ಆ ಎರಡು ವಸ್ತುವಿನ ಖರೀದಿಗೆ ವ್ಯಯಿಸಿದ್ದು ಬರೋಬ್ಬರಿ 4 ಗಂಟೆ 15 ನಿಮಿಷ...
ಅಲ್ಲಿಯ ತನಕ ನನ್ನ ಬಟ್ಟೆ ಖರೀದಿಗೂ 15 ನಿಮಿಷಕ್ಕಿಂತ ಹೆಚ್ಚು ಸಮಯ ವ್ಯರ್ಥ ಮಾಡದ ಸ್ವಭಾವ ನಂದು. ಇನ್ನು ಮೂರು ದಿನ ಕಳೆದರೆ ಅಕ್ಕನ ಹುಟ್ಟಿದ ದಿನ...
ಎಲ್ಲದರಲ್ಲೂ ವಿಭಿವನ್ನವಾಗಿ ಯೋಚನೆ ಮಾಡುವ ನಾನು ಕೆಲವೊಮ್ಮೆ ತುಂಬಾನೇ ಅಂದ್ರೆ ತುಂಬಾನೇ ಸ್ವಾಥರ್ಿ ಆಗ್ತೀನಿ. ಅಕ್ಕನ ಹುಟ್ಟಿದ ಹಬ್ಬದ ದಿನವೂ ನನ್ನ ಈ ಮನಸ್ಥಿತಿ ಬದಲಾಗಲಿಲ್ಲ.
ಎಲ್ಲರಿಗಿಂತ ಮೊದಲು ನಾನೇ ವಿಶ್ ಮಾಡಬೇಕು, ಗಿಫ್ಟ್ ಕೊಡಬೆಕು ಅನ್ನೋ ಜಾಯಮಾನ. ರಾತ್ರಿ ಹನ್ನೆರೆಡು ಕಹೊಡೆದು ಸೆಕೆಂಡ್ ಕಳೆಯುವ ಮೊದಲೇ ಅಕ್ಕನ ಮೊಬೈಲ್ಗೆ ನನ್ನ ವಿಶಸ್ ತಲುಪಿಯಾಗಿತ್ತು. ಬಹುಶಃ ಅಂದಿನ ಮೊದಲ ಶುಭಾಶಯ ನನ್ನದೇ ಇರಬೇಕು...
ಬೆಳಿಗ್ಗೆ ಗಿಫ್ಟ್ ಕೊಡುವಾಗಲೂ ನಾನೇ ಫಸ್ಟ್ ಆಗಿರಬೆಕು ಅನ್ನೋ ಸ್ವಭಾವ...ಅಂದು ಐದು ಘಂಟೆಗೆ ಎದ್ದು...ಸ್ನಾನ ಮಾಡಿ ಸರಿಯಾಗಿ 6.10ಕಕ್ಕೆ ಮಂಗಳೂರಿನಲ್ಲಿದ್ದೆ. ಅಲ್ಲಿಂದ ಅಕ್ಕನಿಗೊಂದು ಕಾಲ್ ಮಾಡಿದಾಗ ಅಕ್ಕ ಚಚರ್್ನಲ್ಲಿದ್ದರು. ಹಾಗಾಗಿ ಫೋನ್ ತೆಗೆಯೋಕೆ ಆಗಿಲ್ಲ. ಚಚರ್ಿಂದ ಅಕ್ಕ ಬರೋ ದಾರಿಯಲ್ಲಿ ನಿಂತು ನಾನು ತಂದ ಗಿಫ್ಟ್ ಅಕ್ಕನ ಕೈಗಿಟ್ಟಿದ್ದೆ. ಆ ಸಮಯದಲ್ಲಿ ಅಕ್ಕನ ನಗು ತುಂಬಿದ ಮುಖ ನೋಡೋದೇ ಒಂಥರಾ ಖುಷಿಯಾಗಿತ್ತು.
ಇಷ್ಟೆಲ್ಲಾ ಆದ್ರೂ ನನ್ನ ಅಕ್ಕನಿಗೆ ಗಿಫ್ಟ್ ಖುಷಿಯಾಗರಬಹುದಾ? ಎಂಬ ಸಣ್ಣದೊಂದು ಭಯ! ಅಂದು ಇಡೀ ದಿನ ಅಕ್ಕನ ಫೋನ್ಗಾಗಿ ಕಾಯ್ತಾ ಇದ್ದೆ. ಆತ್ರಿ 8.35ಕ್ಕೆ ಸರಿಯಾಗಿ ಅಕ್ಕನ ಕಾಲ್ ಬಂತು. ಗಿಫ್ಟ್ ತುಂಬಾನೆ ಇಷ್ಟು ಆಯ್ತು ಅಂದರೂ ದ್ಯಾಟ್ ಡೇ ಐಯಮ್ ರಿಯಲಿ ವೆರಿ ಹ್ಯಾಪಿ....
ಒನ್ನೊಬ್ಬರ ಖುಷಿಯಲ್ಲಿ ಸಂತೋಷ ಕಾಣುವ ಮತ್ತೊಂದು ಸ್ವಭಾವ ಅಂದಿನಿಂದ ಆರಂಭವಾಯಿತು.
ಇಂದಿಗೂ ಆ ದಿನಗಳ ನನ್ನ ಮನಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲವೊಮ್ಮೆ ನನಗೊಬ್ಬಳು ಸ್ವಂತ ಅಕ್ಕ ಇರ್ಬಾದರ್ಿತ್ತಾ ಅಂತ ಕಣ್ಣೀರು ಹಾಕಿದ್ದೂ ಇದೆ.
ಕೆಲವೊಮ್ಮೆ ನಮಗೆ ಇಷ್ಟವಾಗುವ ಸಂಬಂಧಗಳು ನಮ್ಮ ಮನಸ್ಥಿತಿಗೆ ತುಂಬಾನೇ ಹತ್ತಿರ ಆಗ್ತಾರೆ...
ಅಂಥವರಲ್ಲಿ ನನ್ನ ಅಕ್ಕನೂ ಒಬ್ಬಳು...
ರಕ್ಷಾ ಬಂಧನದ ಈ ದಿನ ಅಕ್ಕನ ಬಗ್ಗೆ ಒಂದಿಷ್ಟು ಹೇಳಬೇಕೆನಿಸಿತು....ಹೇಳಿದ್ದೀನಿ
ಪ್ರತಿಯೊಬ್ಬರ ಜೀವನದಲ್ಲೂ ಇಂಥದ್ದೊಂದು ಸಂಬಂಧ ಇದ್ದಿರಬಹುದು ಅಲ್ವಾ?
ಅಂತಿಮವಾಗಿ ರಕ್ಷಾ ಬಂಧನದ ಶುಭಾಶಯಗಳು....

                                                                                            ಧ್ವನಿ

Sunday 20 May 2012

THANKS TO THIS SUNDAY..........!

THANKS TO THIS SUNDAY..........!

ಫ್ರೆಂಡ್ಸ್ ಬ್ಲಾಗ್ ಬರೆಯದೇ ತುಂಬಾ ದಿನಗಳೇ ಆದವು. ಎಕ್ಸಾಂನ ಒತ್ತಡದ ಮಧ್ಯೆ ನನ್ನ ಬರಹಕ್ಕೆ ಸಣ್ಣದೊಂದು ವಿರಾಮ ಕೊಟ್ಟಿದ್ದೆ. ಧ್ವನಿಯ ಬರಹಕ್ಕೆ ಮತ್ತೆ ಮುನ್ನುಡಿಯಿಡುತ್ತಿದ್ದೇನೆ.
ಪ್ರತೀ ಆದಿತ್ಯವಾರ ನನ್ನ ಜೀವನದಲ್ಲಿ ಜಸ್ಟ್ ರಿಲ್ಯಾಕ್ಸ್ ಆಗುವ ದಿನ.  ಕಳೆದು ಹೋದ ಒಂದು ವಾರವನ್ನು ಮತ್ತೆ ಮೆಲುಕು ಹಾಕುವ ದಿನ. ಅದೇ ಟೈಮ್ ವೇಸ್ಟ್ ಸಂಡೇ..ಅದೇ ಆಟ..ಅದೇ ಊಟ...
ಆದ್ರೆ ಈ ಬಾರಿಯ ಸಂಡೇ ಮಾತ್ರ ತುಂಬಾನೇ ಅಂದ್ರೆ ತುಂಬಾನೇ ವಿಶೇಷವಾಗಿತ್ತು.
ಸರಿಸುಮಾರು 12ವರ್ಷಗಳಾದವು ನಾನು ಆ ಸ್ಥಳಕ್ಕೆ ಹೋಗಿ. ಅಲ್ಲಿದ್ದವರ ಮುಖ ನೋಡಿಯೂ ಅಷ್ಟೇ ವರ್ಷಗಳಾಗಿತ್ತು. ತುಂಬಾ ಅಂದ್ರೆ ತುಂಬಾ ಬದಲಾಗಿತ್ತು ಆ ಊರು...ಬದಲಾಗಿತ್ತು ಅಲ್ಲಿನ ಜನಜೀವನ..ಬದಲಾಗಿತ್ತು ಅಲ್ಲಿನ ಜನರ ಜೀವನ ಪದ್ದತಿ..ಹೌದು ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಇದ್ದ ಯಾವ ಚಿತ್ರಣವೂ ಇಂದು ಅಲ್ಲಿಲ್ಲ. ಎಲ್ಲವೂ ಸ್ತಬ್ಧ..ಇಷ್ಟೆಲ್ಲಾ ಹೇಳ್ತಾ ಇರೋದು ಯಾವ ಸ್ಥಳದ ಬಗ್ಗೆ ಗೊತ್ತಾ?
ನನ್ನ ತಂದೆಯ ಊರಿನ ಬಗ್ಗೆ! ಹುಟ್ಟ್ಟಿದಾಕ್ಷಣ ಕಳೆದುಕೊಂಡ ಜೀವವೊಂದರ ತವರು ನೆಲದ ಬಗ್ಗೆ. ಬದುಕಿನ ಪ್ರತೀ ಕ್ಷಣವನ್ನೂ ಪಕ್ಕಾ ಸೆಂಟಿಮೆಂಟಲ್ ಆಗಿ ನೋಡುವ ನನಗೆ ಈ ಆದಿತ್ಯವಾರ ಅನ್ನೋದೇ ಒಂದು ಭಾವುಕ ದಿನ..ಭಾವುಕ ಕ್ಷಣ..ಎಲ್ಲವೂ ಆಗಿತ್ತು..
ನನ್ನ ತಂದೆಯ ಊರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರು. ಒಂದು ಕಾಲದಲ್ಲಿ ಸಂಪೂರ್ಣ ಹಳ್ಳಿಗಾಡು. ವಿಭಿನ್ನ ಜನಜೀವನ. ಆಡು ಭಾಷೆ ತುಳವೇ ಆದರೂ ಅಲ್ಲೂ ವಿಭಿನ್ನತೆ.   ರೈತಾಪಿ ವರ್ಗವನ್ನು ಗುರುತಿಸಬಹುದಾದ ಒಂದು ಸಣ್ಣ ಊರು. ನಾನಲ್ಲಿಗೆ ಕಾಲಿಟ್ಟು ಸರಿಸುಮಾರು ಹನ್ನೆರೆಡು ವರ್ಷಗಳೇ ಸಂದವು. ಆದರೆ ಈ ಬಾರಿ ಯಾಕೋ ಗೊತ್ತಿಲ್ಲ. ನನ್ನ ಮನಸ್ಸು ಅಲ್ಲಿಗೆ ಹೋಗಲೇ ಬೇಕು ಅಂತ ತುಡಿಯುತ್ತಿತ್ತು. ತುಡಿಯುವ ಮನಸ್ಸಿಗೆ ನಿರಾಸೆ ಮಾಡುವ ವ್ಯಕ್ತಿ ನಾನಲ್ಲ. ಬೈಕ್ ಏರಿ ಹೊರಟೇ ಬಿಟ್ಟೆ. ಆಗಲೇ ಅಲ್ಲಿನ ಬದಲಾದ ಚಿತ್ರಣದ ದರ್ಶನ ನನಗಾಗಿದ್ದು...
ಹಳ್ಳಿಗಳು ಎಂದಿಗೂ ಬದಲಾಗೋದಿಲ್ಲ ಅನ್ನುವವರಿದ್ದಾರೆ. ಆದ್ರೆ ಸಾಲೆತ್ತೂರು ಎಂಬ ಹಳ್ಳಿ ಸಣ್ಣ ಮಟ್ಟಿಗೆ ಬದಲಾಗಿದೆ. ಇಲ್ಲಿನ ಜನರ ಜೀವನ ವಿಧಾನ ಬದಲಾಗಿದೆ. ತಾಂತ್ರಿಕತೆ ಇಲ್ಲಿನ ಮನೆ ಹೊಕ್ಕಿದೆ. ಸಿಟಿ ಜನರ ಬದುಕಿನ 75%ದಷ್ಟನ್ನು ಇಲ್ಲಿನ ಜನ ಇಂದು ಅನುಸರಿಸುತ್ತಿದ್ದಾರೆ  ಮತ್ತು ಅನುಭವಿಸುತ್ತಿದ್ದಾರೆ! ಹಳ್ಳಿಗಳು ಉದ್ದಾರವಾಗುತ್ತಿಲ್ಲ ಎನ್ನುವವರಿಗೆ ಇದೊಂದು ಉತ್ತರ. ನಿಜಕ್ಕೂ ಇಲ್ಲಿನ ಜನರ ಜೀವನ ತುಂಬಾನೇ ಗ್ರೇಟ್.
ಆದರೂ ರೈತಾಪಿ ವರ್ಗ, ಉಳುವ ಭೂಮಿ, ಹಚ್ಚ ಹಸಿರಿನ ತೋಟ ಎಂಬ ಹಳ್ಳಿಗಾಡಿನ ಅಧ್ಬುತ ಸೊಗಡಿನ ಚಿತ್ರಣ ಮಾತ್ರ ಇಲ್ಲಿಲ್ಲ. ಈಗ ಎಲ್ಲವೂ ಹೈಫೈ. ನೇಗಿಲು ಹಿಡಿದು ಹೊಲದಲ್ಲಿ ದುಡಿಯುತ್ತಿದ್ದ ರೈತ ಇಂದು ಪ್ಯಾಂಟ್ ಶಟರ್್ ಏರಿಸಿಕೊಂಡು ಸಿಟಿಯತ್ತ ಮುಖಮಾಡಿದ್ದಾನೆ. ಉಳುವ ಭೂಮಿ ಹಚ್ಚ ಹಸಿರಿನ ಆಸರೆಯಿಲ್ಲದೆ ಪಾದಚಾರಿಗಳ ಸ್ವರ್ಗವಾಗಿ ಹೋಗಿದೆ! ಎಲ್ಲೋ ಒಂದೆರೆಡು ಅಡಕೆ ಮರಗಳಿದ್ದರೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ..ಇದನ್ನೆಲ್ಲಾ ನೋಡುವಾಗ ಕೊಂಚ ಬೇಸರವೂ ಆಯಿತು. ಆಗ ಮುಗ್ಧ ರೈತರನ್ನು ಮರಳು ಮಾಡಿದ ನಮ್ಮ ಮಾಡ್ರನ್ ಸಿಟಿ ಲೈಫ್ ಬಗ್ಗೆಯೇ ಅಸಹ್ಯ ಹುಟ್ಟಿತು. ಇವೆಲ್ಲದರ ಮಧ್ಯೆ ಹನ್ನೆರೆಡು ವರ್ಷಗಳ ನಂತರದ ಒಂದಷ್ಟು ಸೆಂಟಿಮೆಂಟ್ಗಳು ನೆನಪಾದವು...!
ಫ್ರೆಂಡ್ಸ್, ನಾವೆಲ್ಲಾ ಹೆಚ್ಚಾಗಿ ಪ್ರವಾಸ ಹೋಗ್ತೀವಿ. ಎಲ್ಲೋ ದೂರದ ಊರಿಗೋ, ಕಾಣದ ಜಾಗಕ್ಕೋ ಅಥವಾ ತುಂಬಾನೇ ಗ್ರೇಟ್ ಅನಿಸಿಕೊಂಡ ದೇವರ ಸನ್ನಿಧಾನಕ್ಕೋ ಅಷ್ಟೇ. ಆದ್ರೆ ಒಮ್ಮೆ ಈ ಮೊದಲು ನೀವು ಹೋಗಿದ್ದ, ಈಗ ಹೋಗದೇ ತುಂಬಾನೇ ವರ್ಷಗಳಾದ, ನಿಮ್ಮ ಜೀವಕ್ಕೆ, ಜೀವನಕ್ಕೆ ತುಂಬಾ ಹತ್ತಿರವಾದ, ಹೋದ ತಕ್ಷಣ ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸ್ಥಳಗಳಿಗೊಮ್ಮೆ ಜಸ್ಟ್ ಹಾಗೇನೆ ಹೋಗಿ ಬನ್ನಿ. ಆದ್ರೆ ನೆನಪಿರಲಿ, ಇದೊಂದು ಪ್ರವಾಸ ಆಗಿರಬಾರದು. ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸಣ್ಣದೊಂದು ಪುಸ್ತಕವಾಗಿರಬೇಕು. ಆಗ ನಿಮ್ಮ ಹಾದಿಯಲ್ಲಿ ಒಂದೊಂದೇ ನೆನಪಿನ ಪುಟಗಳು ತೆರೆದುಕೊಳ್ಳುತ್ತವೆ. ಜೀವನದಲ್ಲಿ ತುಂಬಾನೇ ಎಂಜಾಯ್ ಮಾಡುವ ವ್ಯಕ್ತಿತ್ವ ನಿಮ್ಮದಾಗಿದ್ದರೂ ಆ ಕ್ಷಣ ಮಾತ್ರ ನೀವೊಬ್ಬ ಭಾವುಕ ಜೀವಿಯಾಗ್ತೀರ. ಹಿಂದಿನ ಕ್ಷಣಗಳನ್ನು ನೆನಪು ಮಾಡಿಕೊಳ್ತೀರಾ..ಈ ಸಂದರ್ಭ ನಿಮ್ಮ ಮೈಂಡ್ ಸ್ವಲ್ಪ ರಿಲ್ಯಾಕ್ಸ್ ಆದ್ರೂ ಆಗಬಹುದು. ತರಲೆ, ಹುಚ್ಚಾಟ, ಜಗಳ ಎಲ್ಲದಕ್ಕೂ ಆ ಒಂದು ದಿನ ಬ್ರೇಕ್ ಬೀಳಬಹುದು. ನಿಮ್ಮಲ್ಲೂ ಒಬ್ಬ ಸಣ್ಣ ಚಿಂತಕನೋ ಭಾವುಕ ಜೀವಿಯೋ ಹುಟ್ಟಬಹುದು.
ಏನೇ ಆದರೂ ಈ ಬಾರಿಯ ಆದಿತ್ಯವಾರ ನನಗಂತೂ ತುಂಬಾನೇ ಸ್ಪ್ಪೆಷಲ್ ಡೇ. ಬದುಕಿನ ಪ್ರತೀ ಕ್ಷಣದಲ್ಲೂ ``LIFE IS NOT EASY, SO I AM ALWAYS BUSY’ ಎನ್ನುವ ನಾನು ಈ ಸಂಡೇ ಮಾತ್ರ ಫ್ರೀಯಾಗಿದ್ದ. ಜಂಜಾಟಗಳಿಂದ ದೂರವಿದ್ದೆ. ಕಳೆದು ಹೋದ ನೆನಪಿನ ಬಳಿಗೆ ಹೋಗಿ ಜಸ್ಟ್ ರಿಲ್ಯಾಕ್ಸ್ ಆದೆ.
THANKS TO THIS SUNDAY..........!

Sunday 6 May 2012

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?


ಮೊನ್ನೆಯಷ್ಟೇ ಜಗತ್ತಿನ ಅತೀ ಶ್ರೀಮಂತ ದೇವಸ್ಥಾನ ಎನ್ನಲಾದ ತಿರುಪತಿಯಲ್ಲಿ ವಿವಾದವೊಂದು ಸದ್ದು ಮಾಡಿತು. ಆಂಧ್ರದ ಮಾಜಿ ಮುಖ್ಯ ಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿಯ ಪುತ್ರ ರಾಜಕೀಯ ಧುರೀಣ ಜಗನ್‌ಮೋಹನ್ ರೆಡ್ಡಿಯೇ ಈ ವಿವಾದದ ಕೇಂದ್ರ ಬಿಂದು. ಕ್ರೈಸ್ತ ಧರ್ಮೀಯ ಜಗನ್ ತಿರುಪತಿ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕೆಲ ಕಟ್ಟುಕಟ್ಟಲೆಗಳನ್ನು ಪಾಲಿಸಿಲ್ಲ ಎನ್ನುವುದೇ ಈಗಿರುವ ವಿವಾದ. ದೇವಸ್ಥಾನದ ಮೂಲಗಳ ಪ್ರಕಾರ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯುವ ಮುನ್ನ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆಯಿದೆ, ಅಪಾರ ಭಕ್ತಿಯಿದೆ ಎಂದು ಬರೆದುಕೊಟ್ಟು ಹೋಗಬೇಕೆಂತೆ! ಆದರೆ ಈ ಕಟ್ಟುಕಟ್ಟಲೆಗಳನ್ನು ಜಗನ್ ಪಾಲಿಸದೆ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ ಇಲ್ಲಿ ಜಗನ್ ವಿವಾದಕ್ಕಿಂತಲೂ ಹೆಚ್ಚಾಗಿ ಚಿಂತಿಸ ಬೇಕಾದ ವಿಚಾರ ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ ಎನ್ನುವುದು.
ನನ್ನ ಪ್ರಕಾರ ಮುಸ್ಲಿಮರ ಮಕ್ಕಾದಿಂದ ಹಿಡಿದು ಕ್ರೈಸ್ತರ ರೋಮ್ ಚರ್ಚಿನವರೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದನ್ನು ಬಿಟ್ಟರೆ ದೇಶದ ಬಹುತೇಕ ಚರ್ಚ್, ಮಸೀದಿಗಳಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಈ ಮಾತನ್ನು ಆಯಾ ಧರ್ಮಗಳ ಧಾರ್ಮಿಕ ನಾಯಕರುಗಳೇ ಪುಷ್ಠೀಕರಿಸುತ್ತಾರೆ. ಆದರೆ ಹಿಂದುಗಳ ಅತೀ ನಂಬಿಕೆಯ ಕ್ಷೇತ್ರವಾದ ತಿರುಪತಿಯಲ್ಲಿ ಮಾತ್ರ ಯಾಕೆ ಹೀಗೆ? ಅದು ಕೂಡ ಲಿಖಿತವಾಗಿ ಬರೆದುಕೊಟ್ಟ ನಂತರವಷ್ಟೇ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವುದು ಎಷ್ಟು ಸರಿ? ಧರ್ಮ ಯಾವುದೇ ಆದರೂ ಕೆಲವರಿಗೆ ಬೇರೆ ಧರ್ಮದ ದೇವರಲ್ಲಿ ಅಪಾರ ನಂಬಿಕೆ. ಈ ವೇಳೆ ಆ ದೇವರ ದರ್ಶನ ಪಡೆಯುವುದು ಸಾಮಾನ್ಯ. ಉದಾಹರಣೆಗೆ ಕ್ರೈಸ್ತರ ಧಾರ್ಮಿಕ ಸ್ಥಳವಾದ ಕಾರ್ಕಳದ ಅತ್ತೂರು ಚರ್ಚ್‌ಗೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಹಿಂದುಗಳ ಪಾಲು ಹೆಚ್ಚೇ ಎನ್ನಬಹುದು. ಇನ್ನು ಉಳ್ಳಾಲದ ಇತಿಹಾಸ ಪ್ರಸಿದ್ದ ದರ್ಗಾಕ್ಕೂ ಹಿಂದುಗಳು ಭೇಟಿ ಕೊಡುತ್ತಾರೆ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಹಿಂದುಗಳ ಶಬರಿಮಲೆಗೂ ಲಕ್ಷಾಂತರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಭೇಟಿ ಕೊಡುತ್ತಾರೆ. ಇಲ್ಲೂ ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ತಿರುಪತಿಯಲ್ಲಿ ಈ ರೀತಿಯ ಕಟ್ಟುಕಟ್ಟಲೆಗಳನ್ನು ರೂಪಿಸಲು ಕಾರಣ ಏನು ಎನ್ನುವುದೇ ತಿಳಿಯುತ್ತಿಲ್ಲ.
ಹಿಂದೂ ಧರ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಪಡಿಸಬೇಕು, ನಮ್ಮ ಧರ್ಮ ಜಗತ್ತಿನಲ್ಲೇ ಮಾದರಿ ಧರ್ಮವಾಗಬೇಕು ಎನ್ನುವ ನಮ್ಮಲ್ಲಿ ಇಂತಹ ಆಚರಣೆಗಳಿದ್ದರೆ ಹೇಗೆ ತಾನೆ ಹಿಂದು ಧರ್ಮ ಜಗದ್ವಿಖ್ಯಾತವಾಗಲು ಸಾಧ್ಯ? ಹಿಂದು ಎನ್ನುವುದು ಧರ್ಮವಲ್ಲ, ಇದೊಂದು ಜೀವನ ವಿಧಾನ. ನಮ್ಮ ಆಚರಣೆಗಳು ಕೂಡ ನಮ್ಮ ಜೀವನ ವಿಧಾನಗಳೇ. ಹೀಗಿರುವಾಗ ತಿರುಪತಿಯಲ್ಲಿ ಆಚರಿಸಲ್ಪಡುತ್ತಿರುವ ಈ ಆಚರಣೆ ಹಿಂದೂ ವಿರೋಧಿಯಲ್ಲವೇ? ಈ ಬಗ್ಗೆ ಅಲ್ಲಿನ ಕೆಲವರು ಅದೆಷ್ಟೋ ಕಾರಣಗಳನ್ನು ನೀಡಬಹುದು. ಅನ್ಯಧರ್ಮೀಯರು ನಮ್ಮ ಸಂಸ್ಕೃತಿ ಪಾಲಿಸುವುದಿಲ್ಲ, ಅಶುದ್ದರಾಗಿ ದೇವಸ್ಥಾನ ಪ್ರವೇಶಿಸುತ್ತಾರೆ ಎನ್ನಬಹುದು. ಹಾಗೆಂದು ನಾವು ತಿಮ್ಮಪ್ಪನನ್ನು ನಂಬುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟರೆ ಅನ್ಯಧರ್ಮೀಯರು ಸಂಸ್ಕೃತಿ ಕಲಿಯುತ್ತಾರೆಯೇ? ಅಥವಾ ಪರಿಪೂರ್ಣ ಶುದ್ದರಾಗಿಯೇ ದೇವಸ್ಥಾನ ಪ್ರವೇಶಿಸಿದಂತಾ ಗುತ್ತದೆಯೇ? ದೇವರ ಆರಾಧಕ ಕೇಂದ್ರಗಳು ಎಂದಿಗೂ ಇನ್ನೊಬ್ಬರ ಸ್ವತ್ತಲ್ಲ ಎನ್ನುವುದು ನೆನಪಿರಲಿ. ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಅನ್ನುವುದಾದರೆ ಇಂದಿಗೂ ನಮ್ಮ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಹಾಳುಗೆಡಹುವ ಅದೆಷ್ಟೋ ವಿದ್ಯಮಾನಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯೇ ಅನಾಚಾರ ನಡೆಸುತ್ತಿದೆ. ದೇವಸ್ಥಾನಗಳ ಜಗಳ ಬೀದಿಗೆ ಬಂದಿವೆ. ಅಷ್ಟೇ ಯಾಕೆ ವಿವಾದದ ಕೇಂದ್ರ ಬಿಂದುವಾದ ತಿರುಪತಿಯಲ್ಲೇ ದೇವರ ದರ್ಶನದ ವಿಚಾರವಾಗಿ ಅದೆಷ್ಟೋ ಬಾರಿ ವಿವಾದಗಳೆದ್ದಿವೆ. ಇಷ್ಟೆಲ್ಲಾ ಅನಾಚಾರಗಳು ದೇವಸ್ಥಾನದ ಅಂಗಳದಲ್ಲೇ ನಡೆದರೆ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲವೇ? ಒಂದು ವೇಳೆ ಇದರಿಂದ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಅನ್ಯಧರ್ಮೀಯರ ಪ್ರವೇಶಕ್ಕೆ ತಿರುಪತಿಯಲ್ಲಿ ಅನುಸರಿಸುವ ನಿಯಮಗಳ ಬಗ್ಗೆ ನನ್ನ ಸಹಮತವಿದೆ.
ಇಂತಹ ಪದ್ದತಿ ತಿರುಪತಿಯಲ್ಲಿ ಮುಂದುವರೆದರೆ ವಿದೇಶಿಗರಿಗೆ ಜಗತ್ತಿನ ಅತೀ ಶ್ರೀಮಂತ ದೇವಾಲಯವನ್ನು ನೋಡುವ ಅವಕಾಶವೇ ತಪ್ಪಿ ಹೋಗಬಹುದು. ಇದರಿಂದ ಮುಂದೆ ನಮ್ಮ ಪ್ರವಾಸೋದ್ಯಮಕ್ಕೂ ಏಟು ಬೀಳಬಹುದು. ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್‌ನನ್ನು ನಂಬುತ್ತೇನೆ ಎಂದು ಬರೆದು ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ. ಆದರೆ ಎಂದೂ ಅನ್ಯಧಮೀಯರ ಪ್ರವೇಶವನ್ನು ಇವರು ನಿರ್ಬಂಧಿಸಿಲ್ಲ. ಬಹುಶಃ ಹೀಗಾಗಿಯೋ ಏನೋ ಜಗತ್ತಿನಲ್ಲೇ ಕ್ರೈಸ್ತ ಧರ್ಮ ಅತೀ ದೊಡ್ಡ ಧರ್ಮವಾಗಿ ಬೆಳೆದಿರುವುದು.
ಹಿಂದೂಗಳಿಗೆ ನಮ್ಮದೇ ಆದ ಕೆಲವೊಂದು ಆಚರಣೆಗಳು, ಧಾರ್ಮಿಕ ನಂಬಿಕೆಗಳು ಇದೇ ಎನ್ನುವುದೇನೋ ಸರಿ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಇತರೆ ಧರ್ಮೀಯರ ದೇವಸ್ಥಾನ ಪ್ರವೇಶಕ್ಕೆ ಲಿಖಿತ ಕಟ್ಟುಕಟ್ಟಲೆಗಳನ್ನು ವಿಧಿಸುವುದು ಸರಿಯಲ್ಲ. ಈಗಾಗಲೇ ತಿರುಪತಿ ಎನ್ನುವುದು ಹಣದ ಹೊಳೆ ಹರಿಸುವ ಧಾರ್ಮಿಕ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ನಂಬಿಕೆ, ಭಕ್ತಿ, ಪೂಜೆಗೆ ಜಾಗವಿರುವುದು ಕೆಲವೇ ಸಕೆಂಡ್‌ಗಳಷ್ಟೇ. ಹೀಗಿರುವಾಗ ತಿಮ್ಮಪ್ಪನ ಸನ್ನಿಧಾನದಲ್ಲಿ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ದೇವರ ಹೆಸರು ಕೆಡಿಸುವುದು ಎಷ್ಟು ಸರಿ?
ಹಿಂದು ಎಂಬ ಜೀವನ ವಿಧಾನವನ್ನು ಅನ್ಯಧರ್ಮಿಯರು ಆಚರಿಸಲಿ ಎಂದು ನಾವು ಹೇಳುವುದಿಲ್ಲ. ಅವರಾಗಿಯೇ ಇಷ್ಟಪಟ್ಟರೆ ವಿರೋಧಿಸುವವರೂ ಹಿಂದುಗಳಲ್ಲ. ಹೀಗಿರುವಾಗ ತಿರುಪತಿಯ ಘಟನೆಯನ್ನು ಹಿಂದುಗಳು ಖಂಡಿಸಲೇ ಬೇಕು. ರಾಮನಿಗೆ ರಾಮಮಂದಿರ ಕಟ್ಟಿ, ಜಗತ್ತಿಗೇ ಹಿಂದೂ ಧರ್ಮದ ಬಗ್ಗೆ ಸಾರಿ ಹೇಳಲು ಹೊರಟ ನಮಗೆ ಇಂಥ ಆಚರಣೆಗಳ ಅವಶ್ಯಕತೆ ಖಂಡಿತಾ ಇಲ್ಲ.

ಧ್ವನಿ

Wednesday 2 May 2012

ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?

ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?

 

ಕಾಮರ್ಿಕರ ಹಕ್ಕುಗಳನ್ನು ಎಚ್ಚರಗೊಳಿಸಿದ, ಕಾಮರ್ಿ ಕರಿಗೂ ಒಂದು ಆಚರಣೆಯನ್ನು ಕಲ್ಪಿಸಿಕೊಟ್ಟ ದಿನವೆಂದರೆ ಅದು ಕಾಮರ್ಿಕ ದಿನ. ಬಹುಶಃ ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿ ಕಾಮರ್ಿಕ ದಿನದ ಆಚರಣೆ ನಡೆದೇ ನಡೆಯು ತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಮರ್ಿಕ ದಿನವೆಂ ಬುದು ನೈಜ ಶ್ರಮಿಕ ವರ್ಗದಿಂದ ದೂರವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಕಾಮರ್ಿಕ ದಿನದಂದು   ಇರುವ ಸಕರ್ಾರಿ ರಜಾ ದಿನಗಳ ಬಿಡುವು ಕೂಡ ಮೈ ಬಗ್ಗಿಸಿ ದುಡಿಯುವ ಶ್ರಮಿಕ ವರ್ಗಕ್ಕೆ ಸಿಗುತ್ತಿಲ್ಲ. ಬದಲಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕಾಲ ಮೇಲೆ ಕಾಲು ಹಾಕಿ ದಿನಕ್ಕೆ ಇಂತಿಷ್ಟೇ ಎಂದು ಕೆಲಸ ಮಾಡುವ ಒಂದು ಐಶಾ ರಾಮಿ ವರ್ಗ ಮೇ ದಿನದ ಮಜಾ ಅನುಭವಿಸುತ್ತಿದೆ. ಇದು ಇಂದು ನಿನ್ನೆಯ ವಿಚಾರವಲ್ಲ. ಸರಿಸುಮಾರು ವರ್ಷಗಳಿಂದ ನೈಜ ಶ್ರಮಿಕ ವರ್ಗ ಮೇ ದಿನದ ಅಂದರೆ ತನ್ನದೇ ದಿನದ ಆಚರಣೆಯಿಂದ ವಂಚಿತವಾಗುತ್ತಿದೆ.
ದಿನಕ್ಕೆ ಎಂಟು ಘಂಟೆ ಕೆಲಸಕ್ಕೆ ಆಗ್ರಹಿಸಿ ಆರಂಭ ವಾದ ಶ್ರಮಿಕ ವರ್ಗದ ಹೋರಾಟಕ್ಕೆ ಮೇ ದಿನ(ಕಾಮರ್ಿಕ ದಿನ) ಒಂದು ದಿನವಷ್ಟೇ. ಈ ದಿನದಲ್ಲಾದರೂ ಕಾಮರ್ಿ ಕರು ತಮ್ಮ ನಿತ್ಯದ ಹೋರಾಟದ ಬದುಕನ್ನು ಬದಿಗಿಟ್ಟು ತನ್ನ ಭವಿಷ್ಯದ ಬಗ್ಗೆ ಚಿಂತಿಸಲಿ ಎನ್ನುವುದೇ ಈ ದಿನದ ಆಶಯ. ಆದರೆ ಈ ಆಶಯಗಳೇ ಇಂದು ಸಾಕಾರಗೊಳ್ಳು ತ್ತಿಲ್ಲ. ವರ್ಷಪೂತರ್ಿ ದುಡಿಯುವ ಕಾಮರ್ಿಕ ವರ್ಗ ಈ ದಿನವೂ ಬೆವರಿಳಿಸಿ ದುಡಿಯಬೇಕಾದ ಅನಿವಾರ್ಯತೆ ಒದ ಗಿದೆ. ಅನ್ನ ಹಾಕುವ ಒಡೆಯನ ಆಜ್ಞೆಗಳನ್ನು ಮೀರಿ ಮೇ ದಿನದ ನೆಪದಲ್ಲಿ ರಜಾ ಹಾಕಿದರೆ ಪ್ರತೀ ದಿನವೂ ಮೇ ದಿನವಾಗುವುದರಲ್ಲ್ಲಿ ಸಂದೇಹವಿಲ್ಲ. ಶ್ರಮಿಕ ವರ್ಗದ ಮೇಲೆ ಇಂತಹ ಅದೆಷ್ಟೋ ದೌರ್ಜನ್ಯಗಳು ಧನಿಕರಿಂದ ನಡೆಯು ತ್ತಲೇ ಇದೆ. ಎಂಟು ಘಂಟೆ ಕೆಲಸ ಮಾಡಬೇಕಾದ ಕಾಮರ್ಿಕ ಹತ್ತರಿಂದ ಹದಿನೈದು ಘಂಟೆ ದುಡಿಯುವುದೂ ಇದೆ. 
ಇದನ್ನು ವಿರೋಧಿಸಿದರೆ ಮುಂದಿನ ಭವಿಷ್ಯವೇ ಕತ್ತಲಾಗು ವುದು ನಿಶ್ಚಿತ. ಇನ್ನು ಕಾಮರ್ಿಕರಿಗೆ ದೊರಕಬೇಕಾದ ಸವ ಲತ್ತುಗಳು ಎನ್ನುವುದು ಮರೀಚಿಕೆಯೇ ಸರಿ. ಪಿಎಫ್, ಇಎಸ್ ಐನಂತಹ ಬಡ ಶ್ರಮಿಕ ವರ್ಗದ ಆಸರೆ ಯೋಜನೆಗಳು ಇಂದು ಎಷ್ಟು ಮಂದಿ ಕಾಮರ್ಿಕರಿಗೆ ಸಿಗುತ್ತಿದೆ? ಇಂತಹ ಯೋಜನೆಗಳ ಲಾಭ ಪಡೆಯುವುದು ತಿಂಗಳಿಗೆ 60-70ಸಾವಿರ ಸಂಬಳ ಪಡೆಯುವ ಉದ್ಯೋಗಿಗಳೇ ಹೊರತು ದಿನಪೂತರ್ಿ ಬಿಸಿಲಿನ ಬೇಗೆಗೆ ಬೆವರಿಳಿಸಿ ದುಡಿಯುವ ಕಾಮರ್ಿಕರಲ್ಲ. ಮೊನ್ನೆ ಯಷ್ಟೇ ಫೇಸ್ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಇದೇ  ಕಾಮರ್ಿಕ ದಿನದ ಶುಭಾಶಯದ ಗ್ರೀಟಿಂಗ್ಸ್ ಒಂದು ನನ್ನನ್ನು ಚಿಂತನೆಗೆ ಹಚ್ಚಿತು. ಸೂಟು-ಬೂಟು ಹಾಕಿಕೊಂಡ ವ್ಯಕ್ತಿಯೊಬ್ಬ ಬಡ ಕಾಮರ್ಿಕನೊಬ್ಬನ ಬೆನ್ನ ಮೇಲೆ ನಿಂತು ಕಾಮರ್ಿಕ ದಿನದ ಶುಭಾಶಯ ಕೋರುವ ಬ್ಯಾನರ್ ಹಾಕುವ ಚಿತ್ರವದು. ಈ ಚಿತ್ರವೇ ಸೂಚಿಸುವಂತೆ ಇಂದಿಗೂ ಕಾಮರ್ಿಕ ವರ್ಗವನ್ನು ಎಷ್ಟು ಕೀಳಾಗಿ ಕಾಣಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಆದರೆ ನಮ್ಮ ಕೆಲ ಫೇಸ್ಬುಕ್ ಪ್ರಿಯರಿಗೆ ಇದರ ನೈಜ ಅರ್ಥವನ್ನು ತಿಳಿದುಕೊಳ್ಳುವ ಸಾವಧಾನವಂತು ಇಲ್ಲವೇ ಇಲ್ಲ. ಒಂದೇ ಸಮನೆ ಕಮೆಂಟ್ಸ್ಗಳ ಮೇಲೆ ಕಮೆಂಟ್ಸ್, ಲೈಕ್ಗಳ ಮೇಲೆ ಲೈಕ್! ನಿಜಕ್ಕೂ ವಿಪಯರ್ಾಸ ಅಂದ್ರೆ ಇದೇ ಇರಬೇಕು.
ಲವರ್ಸ್ ಡೇ, ಫ್ರೆಂಡ್ಶಿಪ್ ಡೇ, ಮದರ್ಸ್ ಡೇಗಳಂತೆ ಶ್ರಮಿಕ ವರ್ಗದ ಕಾಮರ್ಿಕ ದಿನವೂ ಐಶಾರಾಮಿ ಜನರ ಮಜಾ ಉಡಾಯಿ ಸುವ, ಶುಭಾಶಯ ಕೋರುವ ದಿನವಾಗಿ ಬದಲಾಗುತ್ತಿದೆ. ಯಾವ ಉದ್ದೇಶಗಳ ಈಡೇರಿಕೆಗಾಗಿ ಈ ದಿನವನ್ನು ಆಚರ ಣೆಗೆ ತರಲಾಯಿತೋ ಅದು ಇಂದು ಈಡೇರುತ್ತಿಲ್ಲ. ಈ ದಿನವಾ ದರೂ ಸ್ವಲ್ಪ ಬಿಡುವು ಮಾಡಿಕೊಳ್ಳಬೇಕಾದ ಬಡ ಶ್ರಮಿಕ ವರ್ಗ ಚಾಚೂ ತಪ್ಪದೇ ಬೆವರಿಳಿಸುತ್ತಿದೆ. ಆದರೆ ತಿಂಗಳಿಗೆ ಸಾವಿರಾರು ರುಪಾಯಿ ಎಣಿಸುವ ಉದ್ಯೋಗಿಗಳು ಮಾತ್ರ ಮೇ ದಿನದ ಹೆಸರಿನಲ್ಲಿ ರಜಾದ ಮಜಾ ಅನುಭವಿಸಿ ಪಾಕರ್್, ಬೀಚ್ ಸುತ್ತುತ್ತಿದ್ದಾರೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಮೇ ದಿನ ಐಶಾರಾಮಿ ಜನರ ಸ್ವತ್ತಾಗಿ ಹೋದರೂ ಪರವಾಗಿಲ್ಲ. ಯಾಕೆಂದರೆ ಅಲ್ಲಿನ ಪ್ರತೀ ಶ್ರಮಿಕ ವರ್ಗವು ಒಂದು ಹಂತಕ್ಕೆ ಐಶಾರಾಮಿಗಳೇ. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿನ ಶ್ರಮಿಕ ವರ್ಗಕ್ಕೆ ಐಶಾರಾಮ ಎನ್ನುವುದು ಕೇವಲ ಕನಸು ಮಾತ್ರ. ಹೀಗಿರುವಾಗ ತಮ್ಮ ಹಕ್ಕುಗಳನ್ನು ಪ್ರತಿಪಾದಿ ಸಲು ಇರುವ ಏಕೈಕ ದಿನವೂ ಕಾಮರ್ಿಕರಿಂದ ಕಳೆದು ಹೋಗು ತ್ತಿರುವುದು ವಿಪಯರ್ಾಸ. ಬಹುಶಃ ಇಂತಹ ವಿದ್ಯಮಾನ ಭಾರ ತದಲ್ಲಿ ಮಾತ್ರ ಘಟಿಸಲು ಸಾಧ್ಯ!
ಕಾಮರ್ಿಕರ ಹೋರಾಟಕ್ಕೆ ಧ್ವನಿಯಾಗಿ ಅದೆಷ್ಟೋ ಸಂಘ ಟನೆಗಳಿದ್ದರೂ ಅದು ತನ್ನ ನೈಜ ಉದ್ದೇಶಕ್ಕಾಗಿ ಹೋರಾಡು ತ್ತಿಲ್ಲ. ಬದಲಾಗಿ ತನ್ನ ಎಡಪಂಥೀಯ ಧೋರಣೆಗಳ ಅನುಷ್ಠಾ ನಕ್ಕಾಗಿಯೇ ಶ್ರಮಿಸುತ್ತಿದೆ. ಈ ಹಿಂದೆ ಕೇರಳ, ಪಶ್ಚಿಮ ಬಂಗಾಳ ದಂತಹ ರಾಜ್ಯಗಳಲ್ಲಿ ಕಾಮರ್ಿಕರ ಹಿತಾಸಕ್ತಿಯ ರಕ್ಷಣೆಗೆ ಹೋರಾಟಗಳು ನಡೆಯುತ್ತಿತ್ತಾದರೂ ಅದು ಸಾಕಾರಗೊಳ್ಳು ತ್ತಿರಲಿಲ್ಲ. ಹೋರಾಟಗಳು ಬಂದ್, ಗಲಾಟೆ, ಪ್ರತಿಭಟನೆಗ ಳಲ್ಲೇ ಕಳೆದು ಹೋಗುತ್ತಿದ್ದವು. ಇಂದಿಗೂ ಕೆಲ ರಾಜ್ಯಗಳಲ್ಲಿ ಈ ಚಿತ್ರಣ ಬದಲಾಗಿಲ್ಲ. ಇನ್ನು ನಮ್ಮ ಸಕರ್ಾರ ಕಾಮರ್ಿಕರಿ ಗಾಗಿ ರೂಪಿಸುವ ಯೋಜನೆಗಳಂತೂ ಹಳ್ಳ ಹಿಡಿಯುತ್ತಿವೆ. ಏನೇ ಮಾಡಿದರೂ ಭಾರತದಂತ ರಾಷ್ಟ್ರದಲ್ಲಿ ಕಾಮರ್ಿಕ ವರ್ಗ ಎನ್ನುವುದು ಮೇಲೆ ಬರುವುದು ಕನಸಿನ ಮಾತೇ ಸರಿ. ತಂತ್ರ ಜ್ಞಾನಗಳು ಕಾಮರ್ಿಕರ ಕೆಲಸವನ್ನು ಕಿತ್ತುಕೊಳ್ಳುವ ಈ ದಿನಗ ಳಲ್ಲಿ ಶ್ರೀಮಂತ ವರ್ಗವೂ ಬಡ ಶ್ರಮಿಕನ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎನ್ನುವುದು ಅಷ್ಟೇ ಸತ್ಯ.
 

Tuesday 1 May 2012

ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ

ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ

ನಾನು ಪತ್ರಿಕೆಯಲ್ಲಿ ಕೆಲಸ ಮಾಡುವವನು. ಅದರಲ್ಲೂ ನಮ್ಮ ಪತ್ರಿಕೆಯಲ್ಲಿ ಕ್ರೈಂ ಸುದ್ದಿಗಳಿಗೆ ಮೊದಲ ಆದ್ಯತೆ. ಹೆಚ್ಚೆಂದರೆ ವಾರಕ್ಕೆ ಎರಡು ಮರ್ಡರ್ ಕಥಾನಕವಾದ್ರೂ ನಮ್ಮ ಪತ್ರಿಕೆಯಲ್ಲಿ ಲೀಡ್ ಆಗುತ್ತೆ. ಪತ್ರಿಕೆಯ ಕೆಲಸಕ್ಕೆ ಸೇರಿದಾಗ ಇಂತಹ ನ್ಯೂಸ್ಗಳನ್ನು ಎಡಿಟ್ ಮಾಡೋಕೆ ಅಂತ ಕುಳಿತರೇನೆ ಒಮ್ಮೆ ಬೆಚ್ಚಿ ಬೀಳ್ತಿದ್ದೆ. ಯಾಕೆಂದರೆ ಕೆಲವೊಂದು ಕೊಲೆಗಳೇ ಅಷ್ಟು ಭಯಾನಕವಾಗಿರುತ್ತೆ. ಆದ್ರೆ ಅನುಭವ ಮನುಷ್ಯನನ್ನೇ ಬದಲಾಯಿಸುತ್ತೆ ಅನ್ನೋ ಹಾಗೆ, ಒಂದೇ ತಿಂಗಳಲ್ಲಿ ನಾನು ಇಂತಹ ಕ್ರೈಂ ಸುದ್ದಿಗಳಿಗೆ ಹೊಂದಿಕೊಂಡು ಬಿಟ್ಟಿದ್ದೆ. ಆದ್ರೂ ಕೊಲೆಗಾರ ಎಷ್ಟು ಕ್ರೂರಿ ಅಲ್ವಾ ಅನ್ನೋದು ನಾನು ಪ್ರತೀ ರಿಪೋಟರ್್ಗಳನ್ನು ತಿರುವಿ ಹಾಕಿದಾಗ ನನಗೆ ಸ್ಪಷ್ಟವಾಗ್ತಾ ಇತ್ತು.
ಸುಮಾರು ವರ್ಷಗಳ ಹಿಂದೆ ಮನೆಯಲ್ಲಿ ಕ್ರೈಂ ಸ್ಟೋರಿ ನೋಡ್ತಾ ಇದ್ದೆ. ಆಗ ಅಲ್ಲೊಂದು ಬೆಚ್ಚಿ ಬೀಳಿಸುವ ಮರ್ಡರ್ ಮಿಸ್ಟರಿ ಪ್ರತ್ಯಕ್ಷವಾಯಿತು. ಚಿಕ್ಕಂದಿನಲ್ಲಿ ಸಹಜವಾಗಿಯೇ ಕುತೂಹಲ ಇದ್ದದ್ದೇ. ಆದರೆ ಅದನ್ನು ನೋಡಿ ಮಲಗಿದ್ದ ನಾನು ಮಧ್ಯರಾತ್ರಿ ಹನ್ನೆರಡು ಘಂಟೆಗೆ ಬೆಚ್ಚಿ ಬಿದ್ದಿದ್ದೆ. ಯಾಕೆಂದರೆ ಹಾಗಿತ್ತು ಆ ಕೊಲೆ! ಆವಾಗಿಂದ ಕೊಲೆಗಾರ ಎಷ್ಟು ಕ್ರೂರಿಯಲ್ವಾ ಅಂತ ನನ್ನಲ್ಲೇ ನಾನು ಪ್ರಶ್ನೆ ಮಾಡ್ತೇನೆ. ಅದೆಷ್ಟೋ ಮಂದಿ ಸಿಗದ ಪ್ರೀತಿಗಾಗಿ, ಮಾನವೀಯ ಸಂಬಂಧಕ್ಕಾಗಿ, ಭಾವನೆಗಳನ್ನು ಹಂಚಿಕೊಳ್ಳುವ ಜೀವಕ್ಕಾಗಿ ಕಾಯ್ತಾ ಇರ್ತಾರೆ. ಆದ್ರೆ ಕೆಲ ಹಂತಕರಿಗೆ ಇದೆಲ್ಲಾ ಬೇಡವಾ? ಅಥವಾ ಇವೆಲ್ಲವನ್ನ ಅನುಭವಿಸಿದ ನಂತರವೇ ಅವರೊಳಗಿನ ಹಂತಕ ಜಾಗೃತನಾಗ್ತಾನಾ? ಕೆಲವೊಂದು ಕೊಲೆಯ ಹಿಂದಿನ ಪುಟಗಳನ್ನು ಬಿಚ್ಚಿಟ್ಟರೆ ಇಂತಹ ಸಾಧ್ಯತೆಗಳು ನಿಚ್ಚಳಲವಾಗಿರುತ್ತೆ.
ನಮ್ಮೂರಲ್ಲಿ ಒಂದು ಪದ್ದತಿಯಿದೆ. ಪತ್ತನಾಜೆ ಎಂಬ ದಿನ ಜಾಗಕ್ಕೆ ರಕ್ತ ಕೊಡುವ ನೆಪದಲ್ಲಿ ಕೋಳಿಗಳನ್ನು ಕೊಯ್ಯಲಾಗುತ್ತೆ. ಇದು ಹಿಂದಿನಿಂದಲೂ ತುಳುನಾಡಿನಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ನಮ್ಮ ಮನೆಯಲ್ಲೂ ಈ ಸಂಪ್ರದಾಯ ಯಥಾವತ್ತಾಗಿ ನಡೀತಾ ಇತ್ತು. ಆಗೆಲ್ಲಾ ನಾವು ಚಿಕ್ಕವರಾಗಿದ್ದ ಕಾರಣ ಪಕ್ಕದ ಮನೆಯವರು ಬಂದು ಕೋಳಿಯ ಕತ್ತು ಕಡಿದು ರಕ್ತ ಅಪರ್ಿಸ್ತಾ ಇದ್ರೂ. ನಾನು ಅದನ್ನು ನೋಡಿ ಬೆಳದಿದ್ದೆನೆ ವಿನಃ ಅದರ ಪ್ರಯೋಗವನ್ನು ನಾನು ಮಾಡಿರಲಿಲ್ಲ. ಆದ್ರೆ ನಾನು ದೊಡ್ಡವನಾದ ಮೇಲೆ ನೆರೆಮನೆಯವರನ್ನು ಕರೆಯೋದು ಬೇಡವೆಂದು ನನ್ನ ಅಜ್ಜಿ ನನ್ನಿಂದಲೇ ಕೋಳಿಯ ಕತ್ತು ಕುಯ್ಯಲು ಹೇಳಿದರು. ಅಂದು ಹೇಗೋ ಕೈ ನಡುಗುತ್ತಾ ಒಲ್ಲದ ಮನಸ್ಸಿನಿಂದ ಕೆಲಸ ಮುಗಿಸಿದೆ. ಆದರೆ ಅದೇ ಕೊನೆ ಅಂದಿನಿಂದ ನಮ್ಮ ಮನೆಯಲ್ಲಿ ಅಂತಹ ಸಂಪ್ರದಾಯಕ್ಕೆ ನಾನಾಗಿಯೇ ತಾತ್ಕಾಲಿಕ ಅನ್ನೋ ಹಾಗೆ ಬ್ರೇಕ್ ಹಾಕಿದ್ದೇನೆ. ಯಾಕೋ ಗೊತ್ತಿಲ್ಲ? ಹಿಂಸೆಗೂ ನನಗೂ ಮಾರುದ್ದ ದೂರ. ಪ್ರೀತಿ ವಿಚಾರದಲ್ಲಿ, ಒಬ್ಬರನ್ನು ತುಂಬಾ ಹಚ್ಚಿಕೊಳ್ಳೋದರಲ್ಲಿ ತುಂಬಾ ಅಂದ್ರೆ ತುಂಬಾ ಹತ್ತಿರ. ಆಗೆಲ್ಲಾ ನಾನು ಒಂದು ವಿಚಾರವನ್ನು ಪದೇ ಪದೇ ಯೋಚನೆ ಮಾಡ್ತೇನೆ. ಮನುಷ್ಯತ್ವದ ಪರಿಚಯವೇ ಇಲ್ಲದ ರೀತಿಯಲ್ಲಿ ಕೊಲೆ ಮಾಡುವ ಹಂತಕನ ಮನಸ್ಥಿತಿ ಹೇಗಿರಬೇಡ ಅಂತ. ಆದ್ರೂ ಹಂತಕ ಗ್ರೇಟ್! ಆತ ಆತನ ಮನಸ್ಥಿತಿಯೇ ಮೇಲೆಯೇ ಸವಾರಿ ಮಾಡ್ತಾನೆ. ಒಂದು ಜೀವವನ್ನು ಅನಾಮತ್ತಾಗಿ ಕೊಂದು ಬಿಡುವ ತಾಕತ್ತು ಹಂತಕನಲ್ಲಿ ಜಾಗೃತವಾಗೋದು ಯಾವಾಗ ಅನ್ನೋದು ಕೂಡ ಅಷ್ಟು ಸುಲಭವಾಗಿ ಹೇಳೋಕೆ ಬರೋದಿಲ್ಲ.
ಮೊನ್ನೆ ಮೊನ್ನೆ ಜೀ ಟಿವಿಯಲ್ಲಿ ಜೋಗಿ ಸಿನಿಮಾ ನೋಡಿದೆ. ಬಹುಶಃ ಈ ಸಿನಿಮಾವನ್ನು ನಾನು ನೋಡ್ತಾ ಇರೋದು ಹತ್ತನೇ ಬಾರಿ ಇರಬಹುದೋ ಏನೋ? ಸೆಂಟಿಮೆಂಟ್ಗಳಿಗೆ ತೀರಾ ಹೆಚ್ಚೇ ಎನ್ನುವಷ್ಟು ಬೆಲೆ ಕೊಡುವ ನನಗೆ ಈ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ಆದರೆ ಇಲ್ಲೂ ಮಚ್ಚು-ಲಾಂಗುಗಳ ಆರ್ಭಟ ನೋಡಿದಾಗ ಪಾತಕ ಲೋಕದ ಭಯಾನಕತೆಯ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸ್ತೇನೆ. ಹಿಂದೊಮ್ಮೆ ನನ್ನ ತೀರಾ ಹತ್ತಿರದ ಹಿತೈಷಿ ಎನ್ನಬಹುದಾದ ವ್ಯಕ್ತಿಯೊಬ್ಬರು ಅಗ್ನಿ ಶ್ರೀಧರ್ ಎಂಬ ಅಂಡರ್ವಲ್ಡರ್್ ಲೇಖಕನ `ಎದೆಗಾರಿಕೆ ಎಂಬ ಪುಸ್ತಕ ಕೊಟ್ಟಿದ್ರೂ. ಕ್ರೈಂ ಅಂದ್ರೇನೆ ಅಷ್ಟಕ್ಕಷ್ಟೇ ಅಂತಿದ್ದ ನಾನು ಅಂದು ಮಾತ್ರ ಒಂದೇ ಉಸಿರಿಗೆ ಆ ಪುಸ್ತಕ ಓದಿ ಮುಗಿಸಿದೆ. ಯಾಕೆಂದರೆ ಎಲ್ಲೂ ನಿಲ್ಲಿಸೋಕೆ ಅವಕಾಶವೇ ಕೊಡದ ಹಾಗೆ ಅಗ್ನಿ ತಮ್ಮ ಕೈ ಚಳಕವನ್ನು ಈ ಪುಸ್ತಕದ ಪ್ರತೀ ಪುಟದಲ್ಲೂ ತೋರಿಸಿದ್ದಾರೆ. ಮುಂದೆ ಈ ಪುಸ್ತಕ ಸಿನಿಮಾ ಆಗುತ್ತೆ ಅನ್ನೋ ಸುದ್ದಿ ಇದೆ. ಅದೇ ಲಾಸ್ಟ್........ಆನಂತರ ನಾನು ಪಾತಕ ಲೋಕದ ಮಿಸ್ಟರಿಯನ್ನು ಓದಲೇ ಇಲ್ಲ.....
ಪಕ್ಕಾ ಸೆಂಟಿಮೆಂಟಲ್ ಆದ ನಾನು ಓದುವ ಪುಸ್ತಕಗಳು ಕೂಡ ಹಾಗೆ ಇರುತ್ತೆ. ಅಷ್ಟೇ ಯಾಕೆ ನನ್ನ ಮೊಬೈಲ್ನಲ್ಲಿರೋ ಸಾಂಗ್, ನಾನಿಷ್ಟ ಪಡೋ ಫಿಲ್ಮ್ ಎಲ್ಲಾನೂ ಪಕ್ಕಾ ಎಮೋಷನಲ್. ಆದ್ರೆ ಕೆಲವೊಮ್ಮೆ ತೀರಾ ಧೀರ್ಘವಾಗಿ ಯೋಚನೆ ಮಾಡೋದು ಮಾತ್ರ ಕ್ರೈಂ ಘಟನೆಗಳ ಬಗ್ಗೆ. ಅದರಲ್ಲೂ ಕೊಲೆಗಾರನ ಮನಸ್ಥಿತಿಯ ಬಗ್ಗೆ........
ಮನುಷ್ಯ ಹುಟ್ಟೋವಾಗ ಅಳ್ತಾನೆ ಹುಟ್ತಾನೆ....ಹೋಗೋವಾಗ ಬೇರೆಯವರನ್ನು ಅಳಿಸ್ತಾ ಹೋಗ್ತಾನೆ. ಅದರ ಮಧ್ಯೆ ತಾನೂ ನಗ್ತಾ...ತನ್ನ ಸುತ್ತಲಿನವರನ್ನೂ ನಗಿಸ್ತಾ ಇದ್ರೆ ಅದೇ ಜೀವನ ಅನ್ನೋದು ನಾನು ಕಂಡು ಕೊಂಡ ಸತ್ಯ. ಆದರೆ ನಿರಂತರ ಕೊಲೆಗಳಲ್ಲೇ ಕಾಲ ಕಳೆಯುವವರಿಗೆ ನಗು ಅನ್ನೋದೆ ಗೊತ್ತಿಲ್ವಾ? ಇವರ ಮನಸ್ಥಿತಿ ಇಷ್ಟು ಕ್ರೂರವಾಗಲು ಕಾರಣವಾದರೂ ಏನಿರಬಹುದು? ಬಹುಶಃ ಇದೊಂದು ಉತ್ತರವಿಲ್ಲದ ಪ್ರಶ್ನೆ ಅನ್ನಬಹುದೇನೋ?
ಫ್ರೆಂಡ್ಸ್, ಇಷ್ಟೆಲ್ಲಾ ಹೇಳೋದಕ್ಕೂ ಕಾರಣ ಇದೆ....
ಒಮ್ಮೆ ಒಂಟಿಯಾಗಿ ಕೂತ್ಕೊಂಡು ಯೋಚಿಸಿ. ಆಗ ನಿಮಗೆ ಯಾರೂ ಕಾಣಿಸೋದಿಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನೀವೊಬ್ಬರೇ ಉತ್ತರ ಆಗ್ತೀರಾ. ಅಲ್ಲದೇ ಜೀವನದ ಪ್ರತೀ ಹೆಜ್ಜೆಯನ್ನು ಟೈಮ್ ಟು ಟೈಮ್ ವಾಚ್ ಮಾಡುವವನು ಆ ದೇವರು ಒಬ್ಬನೇ. ಅದೂ ಕೂಡ ನಮ್ಮ ನಂಬಿಕೆಯಷ್ಟೇ. ಹೀಗಾದ್ರೂ ನಾವು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡ್ತೀವಿ.. ಕ್ಷಮಿಸಿ...ಒಂದಲ್ಲ ನೂರಾರು ತಪ್ಪುಗಳು......ನಾವೆಷ್ಟೇ ತಪ್ಪು ಮಾಡಬಾರದು ಅಂದ್ಕೊಂಡಿದ್ರೂ ತಪ್ಪು ಮಾಡೇ ಮಾಡ್ತೀವಿ...ನಮ್ಮ ಮನಸ್ಸಿಗೆ ವಿರುದ್ದವಾಗಿ ಹೋಗ್ತೀವಿ....ಕೆಲವರನ್ನು ವಿರೋಧಿಸ್ತೀವಿ....ಇನ್ನು ಕೆಲವರನ್ನ ಇಷ್ಟ ಪಡ್ತೀವಿ.......ಬಟ್ ಇದಕ್ಕೆಲ್ಲಾ ಫುಲ್ಸ್ಟಾಪ್ ಅನ್ನೋದು ಇಲ್ಲ ಎನ್ನುವುದು ನೆನಪಿರಲಿ.
ಜಸ್ಟ್ ಯೋಚನೆ ಮಾಡಿ...
 ನಮ್ಮ ಮನಸ್ಥಿತಿಗೆ ವಿರುದ್ದವಾಗಿ ನಾವ್ ಏನೆಲ್ಲಾ ಮಾಡಿಲ್ಲ ಅಂತ....
              ಕೆಲವೊಮ್ಮೆ ಎಲ್ಲವೂ ಅನಿವಾರ್ಯ....ಜಸ್ಟ್ ಯೋಚಿಸಿ
ಧ್ವನಿ

Tuesday 24 April 2012

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

ಅಲ್ಲಿ ನೆರೆದಿದ್ದ ಯಾರೊಬ್ಬರಿಗೂ ಆತನ ಪರಿಚಯವೇ ಇರಲಿಲ್ಲ. ಆತ ಯಾರು? ಎಲ್ಲಿಂದ ಬಂದವನು? ಅನ್ನೋ ಯಾವ ಪ್ರಶ್ನೆಗೂ ಅಲ್ಲಿದ್ದ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಆದರೂ ಅಲ್ಲಿದ್ದ ಸಾವಿರಾರು ಮಂದಿ ಆತನ ಜೀವ ಉಳಿಸು ಅಂತ ದೇವರಲ್ಲಿ ಬೇಡ್ತಾ ಇದ್ರೂ. ಹೌದು. ಇದು ಮೊನ್ನೆಯಷ್ಟೇ ನನ್ನದೇ ಊರಿನ ಪಕ್ಕದಲ್ಲಿ ನಡೆದ ಒಂದು ಘಟನೆಯ ಥ್ರೀ ಲೈನ್ ಸ್ಟೋರಿ.
ಕೆಲಸ ಮಾಡ್ತಾ ಇದ್ದ ಕೂಲಿ ಕಾಮರ್ಿಕನೊಬ್ಬನ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಆತ ಅದರ ಅಡಿಯಲ್ಲಿ ಸಿಲುಕಿ ಬಿದ್ದಿದ್ದ. ಸರಿಸುಮಾರು ಏಳು ಘಂಟೆ ಪ್ರಯತ್ನ ಪಟ್ಟ ನಂತರ ಆ ಬಡ ಜೀವ ಬದುಕಿತು. ಆ ಏಳು ಘಂಟೆ ಅಲ್ಲಿ ನಡೆದ ಎಲ್ಲಾ ವಿದ್ಯಮಾನಗಳಿಗೂ ನಾನು ಸಾಕ್ಷಿಯಾಗಿದ್ದೆ. ಈ ವೇಳೆ ನನಗೆ ಅದೆಷ್ಟೋ ಮಾನವೀಯ ಸಂಬಂಧಗಳ ಪರಿಚಯವಾಯಿತು, ಕೆಲ ಜವಾಬ್ದಾರಿಗಳ ಪರಿಚಯವಾಯ್ತು ಇನ್ನೂ ಕೆಲ ಧೂರ್ತರ ಪರಿಚಯವಾಯ್ತು. ನಿಜಕ್ಕೂ ಆ ಏಳು ಘಂಟೆ ಮನುಷ್ಯನ ವಿಭಿನ್ನ ವರ್ತನೆಗಳ ನೇರ ದರ್ಶನ ನನಗೆ ಆಯಿತು ಅನ್ನೋದಂತೂ ಗ್ಯಾರಂಟಿ.
ಸಾವಿರಾರು ಜನ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬದುಕಲಿ ಬಡ ಜೀವ ಅಂತ ಪ್ರಾರ್ಥನೆ ಮಾಡ್ತಾ ಇದ್ರೂ. ಆದರೆ ಇವರ್ಯಾರಿಗೂ ಆ ಜೀವದ ಪರಿಚಯಾನೇ ಇಲ್ಲ. ಆದರೆ ಅದೂ ಒಂದು ಜೀವ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಿತ್ತು. ದೂರದ ಊರಿಂದ ಕೂಲಿಗಾಗಿ ಇಲ್ಲಿ ಬರುವ ಈ ಜೀವಗಳಿಗೆ ರಕ್ಷಣೆ ಅನ್ನೋದು ಮರೀಚಿಕೆ. ರಾತ್ರೀ ಹಗಲು ಅನ್ನದೇ ಕೆಲಸ ಮಾಡೋವಾಗ ಪ್ರತೀ ಸಲಾನೂ ಯಮನ ಕುಣಿಕೆ ತನ್ನ ಆಟಕ್ಕೆ ಸಜ್ಜಾಗಿ ಕಾಯ್ತಾ ಇರುತ್ತೆ, ಸ್ವಲ್ಪ ತಪ್ಪಿದರೂ ಅಪಾಯ ಗ್ಯಾರಂಟಿ. ಮೊನ್ನೆ ಇಲ್ಲಾಗಿದ್ದೂ ಅದೇ. ಆದರೆ ಆ ಜೀವ ಭಯ ಪಡಲಿಲ್ಲ. ಈ ಊರಿನ ಭಾಷೆಯೇ ಗೊತ್ತಿಲ್ಲದ ಆ ಅಮಾಯಕನ ಕಣ್ಣುಗಳಲ್ಲಿ ನಾನು ಬದುಕಬಲ್ಲೇ ಎಂಬ ಸಣ್ಣದೊಂದು ಆತ್ಮವಿಶ್ವಾಸ ಇತ್ತು. ಅಲ್ಲಿದ್ದ ಅಷ್ಟೂ ಜನರ ಪ್ರಾರ್ಥನೆಯೂ ಆತನ ಜತೆಗಿತ್ತು. ಅಂತಿಮವಾಗಿ ಆತ ಬದುಕಿಯೂ ಬಿಟ್ಟ. ಆದರೆ ಅಲ್ಲಿ ನಾ ಕಂಡ ಕೆಲ ವಿದ್ಯಮಾನಗಳು ..........ಮಾನವೀಯ ಸಂಬಂಧಗಳು......
ಹಿಂದೆ ಇದೇ ಸ್ಥಳದಲ್ಲಿ ಒಂದು ಚಿತ್ರಮಂದಿರವಿತ್ತು. ಆಗೆಲ್ಲಾ ಸಾವಿರಾರು ಜನರಿಗೆ ಮನೋರಂಜನೆ ಒದಗಿಸಿತ್ತು ಈ ಚಿತ್ರಮಂದಿರ. ದಿನಂಪ್ರತಿ ಮೂರು ಪ್ರದರ್ಶನಕ್ಕಾಗಿ ಹೆಚ್ಚೆಂದರೆ ಜನ ಇಲ್ಲಿ ಸರಿಸುಮಾರು ರಾತ್ರಿ ಹತ್ತರ ತನಕ ಇರ್ತಾ ಇದ್ದರೋ ಏನೋ? ಆದರೆ ಮೊನ್ನೆ ಇದೇ ಜಾಗದಲ್ಲಿ ನಡೆದ ಘಟನೆಗೆ ಸಾವಿರಾರು ಜನ ಬೆಳಗ್ಗಿನ ಜಾವದವರೆಗೂ ಸಾಕ್ಷಿಯಾಗಿದ್ದರು. ಇಲ್ಲಿ ನೆರೆದಿದ್ದ ಕೆಲವರಿಗೆ ಇದೊಂದು ಮಾನವೀಯತೆ, ಇನ್ನು ಕೆಲವರಿಗೆ ಪ್ರತಿಷ್ಟೆ, ಮತ್ತೂ ಕೆಲವರಿಗೆ ಜವಾಬ್ದಾರಿ, ಇನ್ನು ಕೆಲವರಿಗೆ ಕರ್ತವ್ಯ! ಹೌದು ಅಲ್ಲಿದ್ದ ಎಲ್ಲರಲ್ಲೂ ಮಾನವೀಯತೆ ಅನ್ನೋದು ಇತ್ತೇ ಆದ್ರೂ ಒಬ್ಬೊಬ್ಬರಿಗೆ ಅದು ಒಂದೊಂದು ಥರ. ಅಲ್ಲಿ ಬಂದಿದ್ದ ನೂರಾರು ಪೊಲೀಸರಿಗೆ ಅದೊಂದು ಜವಾಬ್ದಾರಿ. ಇನ್ನು ಕೆಲ ಊರಿನ ಗೌರವಾನ್ವಿತ ವ್ಯಕ್ತಿಗಳಿಗೆ ಅದೊಂದು ಪ್ರತಿಷ್ಠೆ, ಎಲ್ಲವನ್ನೂ ಕಣ್ನಲ್ಲಿ ಕಣ್ಣಿಟ್ಟು ಶೂಟ್ ಮಾಡ್ತಾ ಇದ್ದ ಕೆಲ ಮಾಧ್ಯಮದವರಿಗೆ ಅದೊಂದು ಕರ್ತವ್ಯ, ಆದರೆ ಎಲ್ಲರಲ್ಲೂ ಆ ಜೀವ ಬದುಕಲಿ ಅನ್ನೋ ಸಣ್ಣದೊಂದು ಮಾನವೀಯತೆ ಮಾತ್ರ ಖಂಡಿತಾ ಇತ್ತು.
ಈ ದುರಂತ ನಡೆದ ಪಕ್ಕದಲ್ಲೇ ಕುಡುಕರ ಅಡ್ಡೆಯಾದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದಿತ್ತು. ಬಹುಶಃ ಕುಡುಕರಿಗೆ ಇದೊಂದು ಮನೋರಂಜನೆಯಾಗಿ ಕಂಡಿರಲೂ ಬಹುದು. ಯಾಕೆಂದರೆ ಹಾಗಿತ್ತು ಕೆಲವರ ವರ್ತನೆ.
ಆವತ್ತು ಸುಮಾರು ಏಳು ಘಂಟೆ ಎಲ್ಲವನ್ನೂ ಸ್ತಬ್ಧನಾಗಿ ವೀಕ್ಷಿಸಿದ ನಾನು ಮನೆಗೆ ಬಂದ ನಂತರ ಒಂದೆರೆಡು ಘಂಟೆ ಮೌನವಾಗಿ ಯೋಚನೆ ಮಾಡಿದೆ. ಈ ಜಗತ್ತು ಎಷ್ಟೇ ಕ್ರೂರಿ ಆದ್ರೂ ಇಲ್ಲಿ ಜನರಿಗೆ ತಮ್ಮದೇ ಆದ ಭಾವನ ಇದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮಾನವೀಯತೆ ಇದೆ. ಪತ್ರಿಕೆಯಲ್ಲೇ ಕೆಲಸ ಮಾಡುವವನಾದ ಕಾರಣ ವಾರಕ್ಕೆ ಹತ್ತಿಪ್ಪತ್ತು ಕ್ರೈಂ ಘಟನೆಗಳನ್ನು ನೋಡ್ತೇನೆ.  ವಾರಕ್ಕೆರೆಡಾದರೂ ಮರ್ಡರ್ ಇದ್ದೇ ಇರುತ್ತೆ. ಆಗೆಲ್ಲಾ ಯೋಚಿಸ್ತೇನೆ `ಈ ಜಗತ್ತು ಎಷ್ಟು ಕ್ರೂರಿ ಅಲ್ವಾ? ಅಂತ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಇವೆಲ್ಲದಕ್ಕೂ ಕಂಪ್ಲೀಟ್ ವಿರೋಧಿ ಅನ್ನೋ ಹಾಗಿತ್ತು. ಯಾವತ್ತೂ ಕಡು ಕೋಪಿಗಳಾಗಿರುವ ಪೊಲೀಸರು ಕೂಡ ಅಂದು ಮೌನವಾಗಿ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬಹುಶಃ ಇದನ್ನೆಲ್ಲಾ ನೋಡೋವಾಗ ನನಗೆ ಜಗತ್ತೇ ಬೇಡವಾಗಿದೆ, ನನಗೇ ಅಂತ ಯಾರೂ ಇಲ್ಲ. ಅನ್ನೋ ಜೀವ ಕೂಡ ಬದುಕೋಕೆ ಆಸೆ ಪಡುತ್ತೆ. ಹೌದು ಖಂಡಿತವಾಗಲೂ ಆಸೆ ಪಡುತ್ತೆ.
ಫ್ರೆಂಡ್ಸ್, ನಾನು ಇಷ್ಟೆಲ್ಲಾ ಯಾಕ್ ಹೇಳ್ದೇ ಗೊತ್ತಾ? ನಮ್ಮಲ್ಲಿ ಸ್ವಲ್ಪ ನೋವಾದಾಗ, ತೊಂದರೆ ಬಂದಾಗ, ಅವಮಾನ ಆದಾಗ, ಕಷ್ಟ ಅನ್ನೋ ಬಿಸಿ ಸ್ವಲ್ಪ ತಟ್ಟಿದಾಗ ಅಷ್ಟೇ ಯಾಕೆ? ನಾವು ತುಂಬಾ ಇಷ್ಟ ಪಟ್ಟ ಜೀವವೊಂದು ದೂರ ಹೋದಾಗ ಆತ್ಮಹತ್ಯೆ ಎಂಬ ಜೀವನವನ್ನೇ ಅಂತ್ಯವನ್ನಾಗಿಸೋ ಕೆಟ್ಟ ಕೆಲಸಕ್ಕೆ ಕೈ ಹಾಕುವ ಅದೆಷ್ಟೂ ಜನರಿದ್ದಾರೆ. ಬಹುಶಃ ಇವರೆಲ್ಲರಿಗೂ ಈ ಘಟನೆ ಒಂದು ಪಾಠ, ಸಾಂತ್ವಾನ, ಧೈರ್ಯ ಇನ್ನೂ ಹೆಚ್ಚೆಂದರೆ ಜಗತ್ತು ವಿಶಾಲವಾಗಿದೆ, ನಾವಿನ್ನೂ ಬದುಕಬಹುದು ಅನ್ನೋ ಸ್ಪೂತರ್ಿ ಎನ್ನಬಹುದು. ಒಬ್ಬರ ಪ್ರೀತಿ ಸಿಗಲಿಲ್ಲ, ಈ ಜೀವನವೇ ಬೇಡ ಅಂದುಕೊಳ್ಳುವವರು ಒಮ್ಮೆ ರಸ್ತೆಯಲ್ಲಿ ಹೋಗೋ ವ್ಯಕ್ತಿಯನ್ನು, ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ನಿಲ್ಲಿಸಿ ಹೇಳಿ ನಾನ್ ಸಾಯ್ತೇನೆ ಅಂತ. ಆದರೆ ಆತ ಎಷ್ಟೆ ಕ್ರೂರಿ ಆಗಿದ್ರೂ ನಿಮ್ಮನ್ನು ಖಂಡಿತಾ ತಡಿದೇ ತಡೀತಾನೆ...ಯಾಕ್ ಗೊತ್ತಾ? ಅಲ್ಲೊಂದು ಸಣ್ಣ ಮಾನವೀಯತೆ ಕೆಲಸ ಮಾಡ್ತಾ ಇರುತ್ತೆ...ಆತ್ಮಹತ್ಯೆ ಅನ್ನೋದು ಜಸ್ಟ್ ಕೆಲವೇ ಕ್ಷಣಗಳ ಆತುರಾದ ನಿಧರ್ಾರವೇ ಹೊರತು, ಬೇರೇ ಏನೂ ಅಲ್ಲ.
ನೆನಪಿರಲಿ, ನಮಗಾಗಿ ಮಿಡಿಯುವ ಅದೆಷ್ಟೋ ಜೀವಗಳು ಈ ಭೂಮಿ ಮೇಲೆ ಇದ್ದೇ ಇರುತ್ತೆ. ಯಾರೋ ನಮ್ಮನ್ನು ದೂರ ಮಾಡಿದ್ರೂ ಅಂದತ ಎಲ್ಲರನ್ನೂ ದೂರ ಮಾಡೋ ಕೆಟ್ಟ ನಿಧರ್ಾರ ಖಂಡಿತಾ ಬೇಡ. ಎಲ್ಲರಿಗೂ ನಮ್ಮ ಅವಶ್ಯಕತೆ ಇದ್ದೇ ಇರುತ್ತೆ........ಜೀವನ ಅದೆಷ್ಟೋ ಮಾನವೀಯ ಸಂಬಂಧಗಳ ಬೆಸುಗೆ ಅನ್ನೋದು ಒಂದು ನಗ್ನ ಸತ್ಯ......!
ಧ್ವನಿ

Friday 20 April 2012

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

 

ಮೊನ್ನೆ ರವಿಬೆಳಗೆರೆಯವರ `ಅಮ್ಮ ಸಿಕ್ಕಿದ್ಲು ಪುಸ್ತಕ ಓದ್ತಾ ಕುಳಿತಿದ್ದೆ. ಬಹುಶಃ ಆ ವ್ಯಕ್ತಿಯ ಬರಹ ನಿಜಕ್ಕೂ ಗ್ರೇಟ್ ಅಂತ ಅನಿಸೋದೇ ಸೈಲಂಟಾಗಿ ಓದಿಸ್ತಾ ಹೋದಾಗ. ಬೆಳಗೆರೆ ಜನ ಸರಿಯಿಲ್ಲ ಅಂತಾರೆ ಕೆಲವರು. ಇದು ಸತ್ಯಾನೂ ಆಗಿರಬಹುದು, ಸುಳ್ಳೂ ಆಗಿರಬಹುದು. ಆದರೆ ಆ ವ್ಯಕ್ತಿಯ ಬರಹಗಳಲ್ಲಿ ಅಂತಹ ಸಣ್ಣದೊಂದು ಸುಳಿವು ಕೂಡ ಸಿಗೋದಿಲ್ಲ. `ಅಮ್ಮ ಸಿಕ್ಕಿದ್ಲು ಇದಕ್ಕೊಂದು ಸಣ್ಣ ಉದಾಹರಣೆ.
ಅವರೇ ಹೇಳಿದಂತೆ ನೀವು ಪ್ರೀತಿಯನ್ನು ಕಳೆದುಕೊಂಡವರಾಗಿದ್ದರೆ ಈ ಪುಸ್ತಕವನ್ನು ಒಮ್ಮೆ ಒದಲೇ ಬೇಕು. ಅದರಲ್ಲೂ ಅಮ್ಮ ಅಥವಾ ಅಮ್ಮ ಅನ್ನುವ ಸಂಬಂಧದ ಪ್ರೀತಿ ಸಿಗಲೇ ಇಲ್ಲ ಅಂದ್ರೆ ಅಥವಾ ಸಿಕ್ಕಿದರೂ ಕಳೆದುಕೊಂಡಿದ್ದರೆ ಖಂಡಿತಾ ಒಮ್ಮೆ ಓದಿ...ಯಾಕೆಂದರೆ ನಿಜಕ್ಕೂ ಈ ಪುಸ್ತಕ ಪಕ್ಕಾ ಸೆಂಟಿಮೆಂಟಲ್.
ಕೆಲ ದಿನಗಳ ಹಿಂದೆ ಇದೇ ಬ್ಲಾಗಿನಲ್ಲಿ ಅಮ್ಮ ಎನ್ನುವ ಸಂಬಂಧದ ಮಧ್ಯೆ ಮತ್ತೊಂದು ಅಮ್ಮ ಅನ್ನುವ ಒಂದು ವಿಚಾರವನ್ನು ಬರೆದಿದ್ದೆ. ಕೆಲವೊಮ್ಮೆ ನಾವು ತುಂಬಾ ಸ್ವಾಥರ್ಿಗಳಾಗ್ತೀವಿ. ಹೆತ್ತ ತಾಯಿ ಹತ್ತಿರ ಇದ್ರೂ ಯಾರ್ಯಾರನ್ನೋ ಇಷ್ಟ ಪಡ್ತೀವಿ. ಅದೆಷ್ಟೋ ಹೆಣ್ಣು ಮಕ್ಕಳು ಹೆತ್ತವರು ಇದ್ದರೂ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗ್ತಾರೆ. ಹುಡುಗ ಒಳ್ಳೆವನಾಗಿದ್ರೆ ಪರ್ವಾಗಿಲ್ಲ. ಇಲ್ಲಾಂದ್ರೆ ಖಂಡಿತಾ ಹುಡುಗಿ ಪಶ್ಚಾತ್ತಾಪ ಪಡೋದಂತೂ ಗ್ಯಾರಂಟಿ..
ಕೆಲವರಿಗೆ ಪ್ರೀತಿ ಅಂದ್ರೆ ಹದಿ ಹರೆಯದ ವಯಸ್ಸಲ್ಲಿ ಬರುವ ಸಣ್ಣ ಆಕರ್ಷಣೆಯಷ್ಟೇ. ಇನ್ನು ಕೆಲವರಿಗೆ ಪ್ರೀತಿ ಅಂದ್ರೆ ಜೀವ, ಜೀವನ ಇನ್ನೂ ಹೆಚ್ಚು ಅಂದ್ರೆ ಉಸಿರು. ಬಹುಶಃ ಇಂದಿಗೂ ಪ್ರೀತಿಗೋಸ್ಕರ ಈ ಜಗತ್ತನ್ನೇ ಬಿಟ್ಟು ಹೋಗುವವರು ಇದ್ದಾರೆ ಎಂದರೆ ಅದು ಅಂಥವರೇ. ಇವರ ಪ್ರೀತಿ ನೈಜ ಪ್ರೀತಿ. ಎಲ್ಲೂ ಕಲ್ಮಶಗಳೇ ಇರೋದಿಲ್ಲ. ಒಂದು ವೇಳೆ ಈ ಪ್ರೀತೀಲಿ ಅಪ್ಪಿ ತಪ್ಪಿ ಯಾರಾದರೂ ಒಬ್ಬರು ಕೈ ಬಿಟ್ಟರೆ ಅಲ್ಲೊಂದು ದುರಂತ ಖಂಡಿತಾ. ನಿಜವಾಗಲೂ ನಾನಿವತ್ತು ಬರೆಯೋಕೆ ಬಂದಿದ್ದು ಪ್ರೀತಿ ಬಗ್ಗೆ ಅಲ್ವೇ ಅಲ್ಲ. ನನ್ನ ಜೀವನದಲ್ಲಿ ಕಂಡ ತ್ಯಾಗ ಮತ್ತು ನಂಬಿಕೆಗಳ ಬಗ್ಗೆ.........
ತ್ಯಾಗ ಅಂದ್ರೆ ಏನು? ನಂಬಿಕೆ ಅಂದ್ರೆ ಏನು? ಮುಂಗಾರು ಮಳೆಯಲ್ಲಿ ಗಣೇಶ ತನ್ನ ಹುಡುಗಿಯನ್ನು ಇನ್ನೊಬ್ಬನಿಗೆ ಬಿಟ್ಟು ಕೊಟ್ಟಿದ್ದು ತ್ಯಾಗಾನಾ? ಆಕೆಯ ತಂದೆ ತಾಯಿ ಈತನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿದ್ದು ನಿಂಬಿಕೇನಾ? ಹೌದು, ಒಂದರ್ಥದಲ್ಲಿ ಇವೆರಡೇ ನಂಬಿಕೆ, ತ್ಯಾಗ. ಇಲ್ಲೊಂಥರ ಖುಷೀನೂ ಇದೆ. ದುಃಖಾನೂ ಇದೆ. ಬಹುಶಃ ಸಿನಿಮಾದ ಜನಗಳಿಗೂ ಈ ಟ್ರಿಕ್ಸ್ ತುಂಬಾನೇ ಉಪಯೋಗ ಆಗಿದೆ ಅನ್ನಬಹುದು. ಮೊನ್ನೆ ತಾನೆ ನನ್ನೊಬ್ಬ ಗೆಳೆಯ ತನ್ನ ಹುಡುಗೀನಾ ಇನ್ನೊಬ್ಬ ಲವ್ ಮಾಡ್ತಾ ಇದಾನೆ ಅಂದ. ಅದಕ್ಕೋಸ್ಕರ ನಾನವಳನ್ನು ಲವ್ ಮಾಡೋದನ್ನೇ ಬಿಟ್ ಬಿಟ್ಟೆ ಅಂದ. ಆಗ ನನಗೆ ಅವನ ಮೇಲೆ ತುಂಬಾ ಗೌರವ, ಖುಷಿ ಎಲ್ಲಾನೂ ಆಯ್ತು. ಯಾಕ್ ಗೊತ್ತಾ? ತನ್ನ ಪ್ರೀತಿನ ತ್ಯಾಗ ಮಾಡಿದ ಅಂತ. ಆದರೆ ಇಲ್ಲಿರೋ ವಿಷಯಾನೇ ಬೇರೆ. ಅವಳಿಗೂ ಅದು ನಾಲ್ಕನೇ ಲವ್, ಇವನಿಗೆ ಇದು ಆರನೇ ಲವ್. ಹೀಗಿರೋವಾಗ ಇವರಿಬ್ಬರ ಪ್ರೀತಿಗೆ ಹೇಗೆ ತಾನೇ ತ್ಯಾಗ ಅನ್ನೋ ಟ್ಯಾಗ್ಲೈನ್ ಕಟ್ಟೋಕೆ ಆಗುತ್ತೇ. ನೀವೇ ಹೇಳಿ? ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೇನೆ ಇವೆ. ಕೆಲವೊಮ್ಮೆ ಹುಡುಗ ಪಕ್ಕಾ ಸೆಂಟಿಮೆಂಟೋ, ಸೆನ್ಸಿಟಿವೋ ಆಗಿರ್ತಾನೆ. ಆದರೆ ಹುಡುಗಿ ಹಾಗಲ್ಲ. ಅವಳು ಇವನಿಗೆ ಪುಲ್ ಅಪೋಝಿಟ್. ಇವನಿಗೆ ಅವಳೇ ಪ್ರಪಂಚ ಆದ್ರೆ ಅವಳಿಗೆ ಇವನಂಥ ಅದೆಷ್ಟೋ ಪ್ರಪಂಚ! ಅದೆಷ್ಟೋ ಹುಡುಗರು. ತಪ್ಪು ತಿಳ್ಕೋಬೇಡಿ ಇಲ್ಲಿ ಹುಡುಗರು ಏನೂ ಕಮ್ಮಿ ಇಲ್ಲ. ತನ್ನ ಹುಡುಗೀನಾ ಹುಡುಗ ಎಷ್ಟೇ ಪುಟ್ಟ, ಚಿನ್ನ ಅಂತ ಕರೆದರೂ ಅದು ಜಸ್ಟ್ ಒಂದು ತಿಂಗಳು, ಅಬ್ಬಬ್ಬಾ ಅಂದ್ರೆ ಒಂದು ವರ್ಷ ಅಷ್ಟೇ. ಮತ್ತೆ ಎಲ್ಲಾ ಚಿನ್ನಾನೂ ಕಾಗೆ ಬಂಗಾರನೇ ಬಿಡಿ.
ಯಾವತ್ತೂ ಸೆಂಟಿಮೆಂಟ್, ತಾಯಿ, ಅಕ್ಕ ಅನ್ನೋ ಸಂಬಂಧಗಳ ಬಗ್ಗೆ ಬರೆಯೋ ನಾನು ಇವತ್ತು ಜೋಡಿಗಳ ಪ್ರೀತಿಯ ಬಗ್ಗೆ ಬರೆಯೋಕೆ ಕಾರಣ ಇದೆ. ಮೊನ್ನೆಯಷ್ಟೆ ಕುಂದಾಪುರದಲ್ಲಿ ಒಂದು ಘಟನೆ ನಡೀತು. ಮನೆಯವರು ಒಪ್ಪಲಾರರು ಅನ್ನೋ ಕಾರಣಕ್ಕೆ ಎರಡು ಜೋಡಿ ಈ ಜಗತ್ತನ್ನೇ ಬಿಟ್ಟು ದೂರ ಹೊರಟು ಹೋದವು. ಅವರು ಮಾಡಿದ್ದು ತ್ಯಾಗ. ಅವರಲ್ಲಿದ್ದಿದ್ದು ನಂಬಿಕೆ. ಯಾಕಂತ ಹೇಳ್ಬೇಕ? ಅವರಿಗೂ ಜಗತ್ತಲ್ಲಿ ಬದುಕೋಕೆ ಅದೆಷ್ಟೋ ಚಾಯ್ಸ್ಗಳಿದ್ದವು. ಎಲ್ಲರನ್ನೂ ಧಿಕ್ಕರಿಸಿ ಓಡಿ ಹೋಗ್ಬಹುದಿತ್ತು. ಆದರೆ ಅವರು ಹಾಗ್ ಮಾಡಲಿಲ್ಲ. ಜಗತ್ತಿಗೋಸ್ಕರ, ಮಾನವೀಯ ಸಂಬಂಧಕ್ಕೋಸ್ಕರ, ಅಷ್ಟೇ ಯಾಕೆ ಒಂದು ಸಣ್ಣ ಮಯರ್ಾದೆಗೋಸ್ಕರ ಪ್ರೀತೀನೇ ತ್ಯಾಗ ಮಾಡಿದ್ರೂ. ಇನ್ನು ಇವರ ಸಾವಿನಲ್ಲಿ ನಂಬಿಕೆಯ ಪಾಲೂ ಅಷ್ಟೇ ಇದೆ. ಸಾವಲ್ಲೂ ಇಬ್ಬರನ್ನಿಬ್ಬರೂ ನಂಬಿದ್ರೂ. ಸಾವಿನಲ್ಲೂ ಒಂದಾದರೂ. ಪ್ರೇಮಿಗಳು ಸತ್ತರೂ ನಂಬಿಕೆ ಸಾಯಲಿಲ್ಲ. ಎಂಥಾ ಹ್ಯಾಪಿ ಎಂಡಿಂಗ್ ಅಲ್ವಾ? ಹೌದು ಓಡಿ ಹೋಗಿ ಮದುವೆ ಆಗೋದಕ್ಕಿಂತ, ಎಲ್ಲರಿಂದಲೂ ಒಂದು ಪ್ರೀತಿಗೆ ವಿರೋಧ ಕಟ್ಟಿಸಿಕೊಳ್ಳೋದಕ್ಕಿಂತ ಇದು ನಿಜಕ್ಕೂ ಒಂದು ಹ್ಯಾಪಿ ಎಂಡಿಂಗೇ!
ಎಲ್ಲರೂ ಒಂದು ನೆನಪಲ್ಲಿಟ್ಟುಕೊಳ್ಳಬೇಕು. ಪ್ರೀತಿ ವಯಸ್ಸಿನ ಒಂದು ಹಂತದವರೆಗೆ ಜಸ್ಟ್ ಆಕರ್ಷಣೆ, ನಂತರ ಮಾನಸಿಕ ವೇದನೆ, ಅನಂತರ ಕೆಲವೊಂದು ಪ್ರಶ್ನೆ, ಇನ್ನು ಕೆಲವೊಮ್ಮೆ ಪ್ರಶ್ನೆಗಳೇ ಇಲ್ಲದ ಉತ್ತರ. ಅಂತಿಮವಾಗಿ ಅದೊಂದು ಜವಾಬ್ದಾರಿ. ಇವೆಲ್ಲವನ್ನೂ ಮೀರಿ ಬರೋದು ಅಷ್ಟು ಸುಲಭಾನೂ ಅಲ್ಲ. ಇಂದಿಗೂ ತಾಜ್ಮಹಲ್ ಪ್ರೀತಿಯ ಸಂಕೇತ ಆಗಿದ್ರೂ ಅದರ ಹಿಂದಿನ ಸ್ಟೋರಿ ಮಾತ್ರ ಇದು ಹೇಗೆ ಪ್ರೀತಿಗೆ ಸಂಕೇತವಾಯಿತು ಅಂಥ ಪ್ರಶ್ನಿಸುವ ಹಾಗೆ ಮಾಡುತ್ತೆ...ಯಾಕಂದ್ರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ಗಾಗಿ ಕಟ್ಟಿಸಿದ ಈ ಮಹಲ್ ಯಾವತ್ತೂ ಪ್ರೀತಿಗೆ ಸಂಕೇತ ಆಗೋದಕ್ಕೆ ಸಾಧ್ಯಾನೆ ಇಲ್ಲ. ಅಷ್ಟಕ್ಕೂ ಮುಮ್ತಾಜ್ ಈತನ ಮೊದಲನೇ ಪತ್ನಿ ಕೂಡ ಅಲ್ಲ. ಹೀಗಾದರೆ ತಾಜ್ಮಹಲ್ ಹೇಗೆ ತಾನೆ ಪ್ರೇಮದ ಸಂಕೇತ ಆಗುತ್ತೆ? ಆದರೆ ನಮ್ಮಲ್ಲಿ ಇತಿಹಾಸ ನೋಡೋದಕ್ಕಿಂತ ಸೌಂದರ್ಯ ನೋಡುವವರೇ ಹೆಚ್ಚಿದ್ದಾರೆ. ಆಗ ವಿಧಾನ ಸೌಧನೂ ಪ್ರೇಮಕ್ಕೆ ಸಂಕೇತ ಆಗಬಹುದು. ಜಸ್ಟ್ ಲವ್, ಟೈಮ್ ಪಾಸ್ ಲವ್ ಅನ್ನೋದರ ಮಧ್ಯೆ ಎಲ್ಲೋ ಒಂದು ಕಡೆ ರಿಯಲ್ ಲವ್ ಕೂಡ ಇರುತ್ತೆ. ಅಲ್ಲೆಲ್ಲಾ ತ್ಯಾಗ, ನಂಬಿಕೆ, ಪ್ರೀತಿ ಸದ್ದಿಲ್ಲದೇ ಕೆಲಸ ಮಾಡುತ್ತೆ ಕೂಡ....
ನೆನಪಿರಲಿ, ಲವ್ ಫ್ಯಾಶನ್ ಅಲ್ಲ. ಅದೊಂದು ಪವಿತ್ರ ಬಂಧ.......ಜಸ್ಟ್ ಒಂದು ದಿನಾನಾ ದರೂ ನಿಮ್ಮ ಪ್ರೀತಿಯನ್ನು ಪವಿತ್ರವಾಗಿ ಪ್ರೀತಿಸಿ.....ಒನ್ ಟೈಮ್ ನಿಮಗೂ ಗೊತ್ತಾಗಬಹುದು. ನೈಜ ಪ್ರೀತಿಲೀ ಇಷ್ಟೊಂದು ಸುಖ ಇದೆಯಾ ಅಂತ..........! 

Thursday 19 April 2012

ವಿದೇಶಿ ಉದ್ಯೋಗ ಎಷ್ಟು ಸೇಫ್?

ವಿದೇಶಿ ಉದ್ಯೋಗ ಎಷ್ಟು ಸೇಫ್?

ಹೌದು, ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಪ್ರಶ್ನೆಯನ್ನು ಕೇಳುವ ಸಂದರ್ಭ ಬಂದಿದೆ. ಒಂದು ಕಾಲದಲ್ಲಿ ವಿದೇಶಿ ಉದ್ಯೋಗವೆಂದರೆ ಅದು ಭಾರತೀಯರ ಪಾಲಿಗೆ ಹೂವಿನ ಹಾಸಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗ ಹಾಗಿಲ್ಲ. ವಿದೇಶಕ್ಕೆ ಹೋದವರೆಲ್ಲರೂ ಅಲ್ಲಿ ಒಂದೊಳ್ಳೆ ಕೆಲಸ ಹಿಡಿದು ಬದುಕುತ್ತಿದ್ದಾರೆ, ನೆಮ್ಮದಿಯ ಜೀವನ ನಡೆಸಿ ಇಲ್ಲಿರುವ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದಾರೆ ಎಂದು ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇಂದಿನ ತಾಂತ್ರಿಕ ಯುಗದಲ್ಲಿ ವಿದೇಶಿ ಉದ್ಯೋಗದ ಚಿತ್ರಣವೇ ಬದಲಾಗಿದೆ. ವಿದೇಶದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ, ತಮ್ಮ ಆತಂಕದ ಜೀವನದ ಬಗ್ಗೆ ಈಗಾಗಲೇ ಅನೇಕ ಮಂದಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆದರೂ ಭಾರತೀಯರಿಗೆ ಅದರಲ್ಲೂ ಹೆಚ್ಚಾಗಿ ಮಂಗಳೂರಿಗರಿಗೆ ವಿದೇಶಿ ಉದ್ಯೋಗದ ಮೋಹ ಬಿಟ್ಟು ಹೋಗಿಲ್ಲ. ಬಹಳ ವರ್ಷಗಳ ಹಿಂದೆ ವಿದೇಶಿ ಉದ್ಯೋಗ ಎನ್ನುವ ಕಲ್ಪನೆ ಹಣ ಸಂಪಾದಿಸುವ ದೊಡ್ಡ ಹುದ್ದೆ ಎನ್ನುವಂತಾಗಿತ್ತು. ಆದರೆ ಇತ್ತೀಚೆಗೆ ಈ ಪರಿಕಲ್ಪನೆಯೇ ಬದಲಾಗಿದೆ.
 ಭಾರತದಂತಹ ರಾಷ್ಟದಲ್ಲೇ ತಾಂತ್ರಿಕತೆ ಸಾಕಷ್ಟು ಮುಂದುವರೆದಿದೆ. ಮನುಷ್ಯ ಮಾಡುವ ಹೆಚ್ಚಿನ ಕೆಲಸಗಳನ್ನು ಇಂದು ಯಂತ್ರಗಳು ನಿರ್ವಹಿಸುತ್ತಿವೆ. ಹಾಗಾಗಿಯೇ ಇಲ್ಲಿ ಇಂದು ಕೂಲಿಯಾಳುಗಳಿಗೆ ಅಷ್ಟಾಗಿ ಕೆಲಸವಿಲ್ಲ. ಇದು ಮುಂದುವರೆಯುತ್ತಿರುವ ರಾಷ್ಟ್ರ ಭಾರತದ ಚಿತ್ರಣ. ಹೀಗಿರುವಾಗ ಈಗಾಗಲೇ ಮುಂದುವರೆದ ಸೌದಿ ಅರೇಬಿಯಾ, ಕತಾರ್ ಮುಂತಾದ ರಾಷ್ಟ್ರಗಳಲ್ಲಿ ಮನುಷ್ಯ ತನ್ನ ಕೈಯಿಂದ ಮಾಡಬಹುದಾದ ಕೆಲಸಗಳು ಇರಬಹುದೇ? ಇದ್ದರೂ ಅವು ಯಾವ ರೀತಿಯ ಕೆಲಸಗಳಾಗಿರಬಹುದು? ಎಲ್ಲವನ್ನೂ ಯಂತ್ರದ ಕೈಗೆ ಕೊಟ್ಟು ಅಂದ ನೋಡುವ ವಿದೇಶಿಗರ ಕಣ್ಣಲ್ಲಿ ಭಾರತೀಯರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಇನ್ನು ಸೌದಿಯಂತಹ ಐಶಾರಮಿ ದೇಶದಲ್ಲಿ ಇಲ್ಲಿನ ಜನತೆಗೆ ಮೈಬಗ್ಗಿಸಿ ಕೆಲಸ ಮಾಡುವುದು ಗೊತ್ತಿಲ್ಲ. ಯಂತ್ರಗಳು ಮಾಡುವುದನ್ನು ಯಂತ್ರಗಳಿಂದ ಮಾಡಿಸಿದರೆ, ಅವುಗಳಿಂದ ಆಗದ ಕೆಲಸಗಳನ್ನು ವಿದೇಶಿ ಡಾಲರ್ನ ಆಸೆ ಹೊತ್ತು ಹೋಗುವ ನಮ್ಮವರಿಂದ ಮಾಡಿಸುತ್ತಾರೆ.
 ಇನ್ನು ನಮಗೆ ಬೇಕೇಂದಾಗ ಹೋಗಿ, ಬೇಡವೆಂದಾಗ ಹಿಂದೆ ಬರಲು ಅದು ನಮ್ಮ ದೇಶವೂ ಅಲ್ಲ. ಅಲ್ಲಿನ ನಿಯಮಗಳಿಗೆ ಕಟ್ಟುಬಿದ್ದು ಅನಿವಾರ್ಯವಾಗಿಯಾದರೂ ಇಂತಿಷ್ಟೇ ವರ್ಷ ಎಂದು ನಾವು ಅಲ್ಲಿ ಸೆಣೆಸಾಡಲೇ ಬೇಕು. ನಮ್ಮ ವಿದೇಶಿ ಉದ್ಯೋಗದ ಕಲ್ಪನೆಗೂ ಉತ್ತರಕನರ್ಾಟಕದ ಮಂದಿಯ ಮಂಗಳೂರು ನಂಟಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮಂಗಳೂರಿಗರು ಮಾಡಲಾಗದ ಕೆಲಸಕ್ಕೆ ಅಂದರೆ ಕಟ್ಟಡ ನಿಮರ್ಾಣ ಕೆಲಸಕ್ಕೆ ಇಲ್ಲಿಗೆ ಬರುವವರೇ ಉತ್ತರ ಕನರ್ಾಟಕದ ಮಂದಿ. ಅವರ ಪಾಲಿಗೆ ನಮ್ಮ ಮಂಗಳೂರೇ ವಿದೇಶ ಇದ್ದ ಹಾಗೆ. ಆದರೆ ಮಂಗಳೂರಿನ ಕೆಲವರಿಗೆ ವಿದೇಶಿ ಉದ್ಯೋಗದ ವ್ಯಾಮೋಹ. ಈಗ ಊಹಿಸಿ. ನೈಜ ವಿದೇಶಿ ಉದ್ಯೋಗದ ಕಲ್ಪನೆ ಜೀತ ಪದ್ದತಿಗೆ ಸಮನಾಗಿರಲು ಸಾಧ್ಯವಿಲ್ಲವೇ?
ಹಾಗಂತ ವಿದೇಶದ ವಿಮಾನ ಹತ್ತುವ ಎಲ್ಲರೂ ಅಲ್ಲಿ ಜೀತ ಮಾಡಿಯೇ ಬದುಕುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ನೂರರಲ್ಲಿ ಹತ್ತು ಶೇಖಡಾ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಬಹುಶಃ ಇವರಿಗೆಲ್ಲಾ ಇವರ ಶಿಕ್ಷಣ ಅಲ್ಲಿ ಉತ್ತಮ ಉದ್ಯೋಗ ದೊರಕಿಸಿ ಕೊಟ್ಟ್ಟಿರಬಹುದು. ಆದರೆ ಹೆಚ್ಚಿನವರು ಅಲ್ಲಿ ಬದುಕುತ್ತಿರುವುದು ಜೀತದಾಳುಗಳಾಗಿಯೇ. ನಮ್ಮೂರಿನಲ್ಲಾದರೆ ನಾವು ಮಾಡುವ ಕೆಲಸ ಇತರರಿಗೆ ಗೊತ್ತಾಗಬಹುದು. ಆದರೆ ವಿದೇಶದಲ್ಲಿ ಮಾಡುವ ಕೆಲಸ ಏನು ಎಂಬುದು ನಮಗೆ ಹೇಗೆ ತಾನೇ ತಿಳಿಯಲು ಸಾಧ್ಯ? ಉದಾಹರಣೆಗೆ ಇನ್ಪೋಸಿಸ್ನಂತಹ ಉತ್ತಮ ಸಂಸ್ಥೆಯನ್ನೆ ತೆಗೆದುಕೊಳ್ಳೋಣ. ಇದೊಂದು ಕೋಟೆಯಿದ್ದಂತೆ. ಅಪ್ಪಿ ತಪ್ಪಿಯೂ ಸಂಬಂಧ ಪಡದವರಿಗೆ ಇದರೊಳಗೆ ಪ್ರವೇಶವೇ ಇಲ್ಲ. ಇಲ್ಲಿ ಕೆಲಸ ಮಾಡುವುದೆಂದರೇನೆ ದೊಡ್ಡ ಪ್ರತಿಷ್ಟೆ ಇದ್ದ ಹಾಗೆ. ಮಂಗಳೂರಿನವನೇ ಇಲ್ಲಿ ಕೆಲಸ ಮಾಡಿದರೂ ಆತನ ಹುದ್ದೆ ಯಾವುದಿರಬಹುದೆಂದು ತಿಳಿಯಲು ನಮ್ಮಿಂದ ಸಾಧ್ಯವೇ ಇಲ್ಲ. ಅದೇ ರೀತಿ ವಿದೇಶಿ ಉದ್ಯೋಗ. ಅಲ್ಲಿನ ಕೋಟೆಯಲ್ಲಿ ನಾವೇನೆ ಕೆಲಸ ಮಾಡಿದರೂ ಅದು ಹೊರಜಗತ್ತಿಗೆ ಗೊತ್ತೇ ಆಗುವುದಿಲ್ಲ. ನಮ್ಮವರು ಅಲ್ಲಿ ಕಸ ಗುಡಿಸಿದರೂ ವಿದೇಶಿ ಉದ್ಯೋಗ ಎಂದು ಹೆಮ್ಮೆ ಪಟ್ಟುಕೊಳ್ಳುವವರು ನಾವು. ಅನೇಕ ಕಷ್ಟ, ತೊಡರುಗಳಿದ್ದರೂ ಇಂದಿಗೂ ವಿದೇಶಿ ಉದ್ಯೋಗದ ಮೇಲೆ ಕೆಲವರಿಗೆ ಎಲ್ಲಿಲ್ಲದ ವ್ಯಾಮೋಹ. ಈ ವ್ಯಾಮೋಹಕ್ಕೆ ಕೊನೆಯೆಂದು?
ಧ್ವನಿ

Monday 16 April 2012

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಫ್ರೆಂಡ್ಸ್, ಆವತ್ತೊಮ್ಮೆ ನಾನು ನನಗೊಬ್ಬ ಗುರು ಇದಾರೆ ಅಂತ ಹೇಳಿದ್ದೆ. ಅವರು ಪಕ್ಕಾ ಪ್ರೋಫೆಶನಲ್ ಅಲ್ಲ ಅಂತಾನೂ ಹೇಳಿದ್ದೆ. ಅವರ ಬಗ್ಗೆ ಹೇಳೋಕೆ ಇನ್ನೂ ಇದೆ. ಆ ವ್ಯಕ್ತಿ ನನ್ನ ಪಾಲಿಗೆ ಜೀವನದ ಕೆಲವೊಂದು ಮಹತ್ವದ ಘಟ್ಟಗಳನ್ನು ಪರಿಚಯಿಸಿದ ಮಹಾಶಯ. ಸ್ವಲ್ಪ ಎಡಪಂಥೀಯ ಧೋರಣೆಗಳೇ ಆ ಮನುಷ್ಯನಿಗೆ ಜೀವಾಳ. ಹಾಗಂತ ತೀರಾ ಕಮ್ಯುನಿಷ್ಟ್ ಅಂತಾನೂ ಹೇಳೋಕಾಗಲ್ಲ. ಆದರೆ ಆ ವ್ಯಕ್ತಿಯ ಕೆಲವೊಂದು ಮಾತುಗಳು ಮಾತ್ರ ಯಾವ ಕಮ್ಯುನಿಷ್ಟ್ ಸಿದ್ದಾಂತದ ಪ್ರತಿಪಾದಕನಿಗೂ ಕಮ್ಮಿ ಇಲ್ಲ. ಅಪ್ಪಿ ತಪ್ಪಿ ನಾವೇನಾದ್ರೂ ಅವರ ಜೊತೆ ಮಾನವೀಯ ಸಂಬಂಧದ ಬಗ್ಗೆ ಕೇಳಿದೆವು ಅಂತ ಇಟ್ಕೊಳ್ಳಿ. ಇವರ ಬಾಯಿಯಿಂದ ಬರೋ ಮಾತು ಒಮ್ಮೊಮ್ಮೆ ಇಷ್ಟ ಆದ್ರೂ ಕೆಲವೊಮ್ಮೆ ಕೇಳೋಕೆ ತುಂಬಾ ಕಷ್ಟ ಆಗುತ್ತೆ. ಇನ್ನು ಇವರಿಗೂ ನನಗೂ ಅಷ್ಟಕ್ಕಷ್ಟೇ. ಆದ್ರೂ ನನ್ನ ಪಾಲಿಗೆ ಇವರು ಗುರು!
ಇವರ ಜೊತೆ ತುಂಬಾ ಸಲ ಜಗಳ ಮಾಡಿದೀನಿ, ಇವರ ಮಾತಿಗೆ ಎದುರು ಮಾತಾಡಿದೀನಿ, ಅಷ್ಟೇ ಯಾಕೆ ಒಂದ್ಸಲ ಇವರ ಎಲ್ಲಾ ಸಿದ್ದಾಂತಗಳನ್ನು, ಧೋರಣೆಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದೀನಿ ಕೂಡ. ಆದ್ರೆ ಈ ಮೊದಲೇ ಹೇಳಿದ ಹಾಗೆ ಸ್ವಲ್ಪ ಲೇಟಾಗಿ ಈ ವ್ಯಕ್ತಿಯ ಪ್ರತೀ ಮಾತನ್ನು ಒಬ್ಬನೇ ಕೂತು ಯೋಚನೆ ಮಾಡಿದ್ದೀನಿ. ಆಗೆಲ್ಲಾ ಇವರ ಮಾತು ಒಂದು ಹಂತಕ್ಕೆ ಸರಿ ಅನಿಸೋದು. ದೈನಂದಿನ ಜೀವನದಲ್ಲಿ ನಾನು ಈ ವ್ಯಕ್ತಿಯನ್ನು ತುಂಬಾ ಅಂದ್ರೆ ತುಂಬಾ ದ್ವೇಷಿಸ್ತಾ ಇದ್ದೆ. ಇವರ ಮಾತಿಗೆ ಎಷ್ಟು ಚಚರ್ೆ ಮಾಡೋಕೆ ಆಗುತ್ತೋ ಅಷ್ಟು ಚಚರ್ೆ ಮಾಡ್ತಾ ಇದ್ದೆ. ಆದ್ರೆ ರಾತ್ರಿ ಮಲಗೋವಾಗ ದುಶ್ಮನ್ಗಳೂ ಹತ್ತಿರ ಆಗ್ತಾರೆ ಅನ್ನೋ ಹಾಗೆ ಇವರ ಮಾತು ಮತ್ತೆ ಮತ್ತೆ ಕಾಡ್ತಾ ಇತ್ತು. ನನ್ನ ವಯಸ್ಸಿನ ಎರಡರಷ್ಟು ವಯಸ್ಸು ಈ ವ್ಯಕ್ತಿಗಾಗಿತ್ತು. ಆದರೆ ವೈವಾಹಿಕ ಬಂಧನದ ಹಳ್ಳಕ್ಕೆ ಮಾತ್ರ ಇವರು ಬೀಳಲಿಲ್ಲ. ಈ ಬಗ್ಗೆ ಕೇಳಿದ್ರೆ ಸಂಸಾರಿಕ ಜೀವನದ ನೈಜ ಆಶಯ ಏನೂ ಅನ್ನೋದನ್ನು ಯಾವ ಕಟ್ಟರ್ ಸಂಸಾರಿಯೂ ವಿವರಿಸದಷ್ಟು ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿ ವಿವರಿಸ್ತಾರೆ. ನಮ್ಮಲ್ಲಿ ಸಂಸಾರ ಜೀವನದ ನೈಜ ಆಶಯ ಯಾರಿಗೂ ಗೊತ್ತಿಲ್ಲ, ಹಾಗಾಗಿ ನಾನು ಮದುವೆ ಆಗಿಲ್ಲ ಅಂತ ಹೇಳ್ತಾರೆ. ನಾವೇನಾದ್ರೂ ಮಧ್ಯೆ ಬಾಯಿ ಹಾಕಿದ್ರೆ ಆ ವ್ಯಕ್ತಿಯೊಂದಿಗೆ ಯುದ್ದ ಗೆದ್ದು ಬರೋದು ಅಷ್ಟು ಸಲೀಸಲ್ಲ ಬಿಡಿ.
ಅದೆಷ್ಟೂ ಸಲ ಬೆಳ್ಳಂಬೆಳಿಗ್ಗೆ ಇವರನ್ನು ಮಾತಿನಲ್ಲಿ ಸೋಲಿಸಬೇಕು ಅಂತಾನೆ ಸಿದ್ದವಾಗಿ ಬರ್ತಾ ಇದ್ದೆ. ಆದರೆ ಅದು ಅಷ್ಟು ಸುಲಭ ಅಲ್ಲ ಅನ್ನೋದು ಮತ್ತೆ ಗೊತ್ತಾಗ್ತಾ ಇತ್ತು! ಇಷ್ಟೆಲ್ಲಾ ಮಾತೋಡೋ ಈ ವ್ಯಕ್ತಿ ಡಿಗ್ರಿ ಬಿಡಿ ಪಿಯುಸಿನೂ ಮಾಡಿಲ್ಲ. ಆದ್ರೆ ಯಾವ  ಪ್ರೋಫೇಸರ್ಗೂ ಇರದ ತಲೆ ಈ ವ್ಯಕ್ತಿಗಿತ್ತೂ! ಬೆಳಿಗ್ಗಿನ ಪತ್ರಿಕೆ ಓದ್ತಾ ಇವರು ಕೋಡೋ ಅದೆಷ್ಟೋ ವರ್ಷಗಳ ಹಿಂದಿನ ಉದಾಹರಣೆಗಳನ್ನ ನೋಡ್ತಾ ಇದ್ರೆ ಇಪ್ಪತ್ತು ವರ್ಷಗಳ ಹಿಂದಿನ ಸುದ್ದಿ ಪತ್ರಿಕೆಯೇ ಕಣ್ಣ ಮುಂದೆ ಪ್ರತ್ಯಕ್ಷ ಆದ ಹಾಗೆ ಅನಿಸ್ತ್ತಾ ಇತ್ತು. ಲೆಕ್ಕಾಚಾರದಲ್ಲಿ, ಮೆಮೋರಿ ಪವರ್ನಲ್ಲಿ ಈ ವ್ಯಕ್ತಿ ತುಂಬಾನೇ ಪಕ್ಕಾ. ಒಮ್ಮೊಮ್ಮೆ ಇವರ ಮಾತು ಕೇಳ್ತಾ ಇದ್ರೆ ಇವರ್ ಯಾಕ್ ಇಷ್ಟು ಸಣ್ಣ ವ್ಯಕ್ತಿ ಆದ್ರೂ ಅಂತ ಅನಿಸುತ್ತೆ. ಇಂಥ ಬುಧ್ದಿವಂತಿಕೆ ಯಾಕ್ ಇವರನ್ನು ಎತ್ತರಕ್ಕೆ ಏರಿಸಲಿಲ್ಲ ಅಂತ ಅನಿಸುತ್ತೆ...ಆದರೆ ಅದಕ್ಕೂ ಈ ವ್ಯಕ್ತಿಯಲ್ಲೇ ಉತ್ತರ ಇದೆ...
ತಾನು ಬುದ್ದಿವಂತ, ಸಿದ್ದಾಂತವಾದಿ, ಎಡಪಂಥೀಯ ಅನ್ನೋ ಥರ ಈ ವ್ಯಕ್ತಿಯ ವರ್ತನೆ ಇರಲಿಲ್ಲ. ಆದರೆ ಇವರ ತನ್ನ ಮಾತುಗಳಿಂದಲೇ ಎಲ್ಲರಿಗೂ ದುಶ್ಮನ್ ಆಗ್ತಾ ಇದ್ರೂ! ಇನ್ನೊಬ್ಬರ ತಪ್ಪನ್ನು ಮುಖಕ್ಕೆ `ಪಟಾರ್! ಅಂತ ಒಡೆದ ಹಾಗೆ ಹೆಳ್ತಾ ಇದ್ರೂ...ಇದು ಸಹಜವಾಗಿಯೇ ಎಲ್ಲರಿಗೂ ಕೋಪ ತರಿಸುತ್ತೆ. ಬಹುಶಃ ನನಗೂ ಇವರ ಮೇಲೆ ಹೆಚ್ಚು ಕೋಪ ತರಿಸಿದ್ದು ಇದೇ ಇರಬೇಕು. ಇನ್ನು ಇವರಿಗೆ ಸೆಂಟಿಮೆಂಟ್ ಅಂದ್ರೇನೇ ಆಗೋದಿಲ್ಲ. ಆ ಬಗ್ಗೆ ನಾವೇನಾದ್ರೂ ಮಾತಿಗಿಳಿದರೆ ಪ್ರೀತಿ ಬಗ್ಗೆ ಒಂದ್ ಸಿನಿಮಾನೇ ತೆಗೆದು ಬಿಡಬಹುದು ಅಂತ ಕಥೆ ಹೇಳ್ತಾರೆ! ಈ ವ್ಯಕ್ತಿ ಒಂಥರಾ ವಿಚಿತ್ರ. ಇವರ ಕೌಟುಂಬಿಕ ಹಿನ್ನೆಲೆಯೇ ಒಮ್ಮೆಗೆ ಆಶ್ಚರ್ಯ ಹುಟ್ಟಿಸುತ್ತೆ. ಅವರು ಜೀವನದಲ್ಲಿ ಯಾರನ್ನೂ ಪ್ರೀತಿಸಲಿಲ್ವ್ವಂತೆ, ಪ್ರೀತಿಸಿದ್ದು ಅವರ ತಾಯಿ ಒಬ್ಬರನ್ನೇ, ಇನ್ನು ಕಣ್ಣೀರು ಹಾಕಿದ್ದು ಕೂಡ ಆ ತಾಯಿ ತೀರಿ ಕೊಂಡಗಳೇ ಅನ್ನೋದು ಅವರ ಮಾತು. ಕೆಲವೊಮ್ಮೆ ತೀರಾ ಸೆನ್ಸಿಟಿವ್ ಅನಿಸಿಬಿಡ್ತಾರೆ,...ತುಂಬಾ ಹತ್ತಿರ ಆಗ್ತಾರೆ...ನಮ್ಮ ಎಲ್ಲಾ ನೋವನ್ನೂ ಇವರ ಜೊತೆ ಹೇಳ್ಬೇಕು ಅನಿಸುತ್ತೆ...ಗೊತ್ತಿದ್ದೋ ಗೊತ್ತಿಲ್ದೇನೋ ಕೆಲವೊಮ್ಮೆ ಈ ವ್ಯಕ್ತಿ ಜೊತೆ ತೀರಾ ಪರ್ಸನಲ್ ವಿಚಾರಗಳನ್ನು ಶೇರ್ ಮಾಡಿದ್ದೀನಿ..ಆದ್ರೂ ಅವರು ನನ್ನ ಪಾಲಿಗೆ ದುಶ್ಮನ್!
ಯಾಕೆ ಅವರು ನನ್ನ ಪಾಲಿಗೆ ದುಶ್ಮನ್ ಆದ್ರೂ ಅಂತ ಯೋಚನೆ ಮಾಡಿದ್ರೆ ಉತ್ತರ ಸಿಗೋದೇ ಇಲ್ಲ. ಬಹುಶಃ ಆ ವ್ಯಕ್ತಿ ಯಾರ ಹಿತವನ್ನು ಬಯಸದೇ ಇರೋದೇ ಇದಕ್ಕೆ ಕಾರಣವಾ? ಅಥವಾ ಎಲ್ಲರ ತಪ್ಪನ್ನು ಎತ್ತಿ ಹಿಡಿಯೋದೇ ಇದಕ್ಕೆ ಕಾರಣವಾ? ಇದ್ರೂ ಇರಬಹುದು ಅಲ್ವಾ?
ಆದ್ರೆ ಒಂದಂತೂ ಸತ್ಯ. ನಾವೆಲ್ಲಾ ಇನ್ನೊಬ್ಬರೂ ತಪ್ಪು ಮಾಡಿದ್ರೂ ಅವರ ಎದುರಲ್ಲೇ ಹೇಳೋದಕ್ಕೆ ಹೋಗೋದಿಲ್ಲ. ಕಾರಣ ನಮ್ಮ ಸ್ವಾರ್ಥ ಇರಬಹುದು, ಅಥವಾ ಅವರ ಭಯ ಇರಬಹುದು, ಅಥವಾ ಸಂಬಂಧ ಹಾಳ್ ಮಾಡೋದು ಬೇಡ ಅನ್ನೋ ಮನಸ್ಥಿತಿ ಇರಬಹುದು. ಆದ್ರೆ ಈ ವ್ಯಕ್ತಿ ಅದಕ್ಕೂ ಉತ್ತರ ಆಗ್ತಾರೆ. ಇವರು ಯಾವತ್ತಿದ್ರೂ ಏಕಾಂಗಿ...ತಪ್ಪನ್ನು ಎತ್ತಿ ಹಿಡಿಯೋ ವ್ಯಕ್ತಿ..ಇಲ್ಲಿ ಎಲ್ಲರೊಂದಿಗೂ ದ್ವೇಷ ಕಟ್ಟಿಕೊಳ್ಳುವ ವ್ಯಕ್ತಿತ್ವ...ಕೆಲವೊಮ್ಮೆ ಇವರ ವ್ಯಕ್ತಿತ್ವ ನನಗೆ ತುಂಬಾನೇ ಅಂದ್ರೆ ತುಂಬಾನೇ ಇಷ್ಟ ಆಗಿದೆ....ಕೆಲವೊಮ್ಮೆ ನಾವಿಬ್ಬರೂ ಅಜನ್ಮ ದುಶ್ಮನ್ಗಳಾಗರ್ತೀವಿ...! ಆದ್ರೆ ಒಂದಂತೂ ಸತ್ಯ...ಈ ವ್ಯಕ್ತಿಯಿಂದ ನಾನು ಜೀವನದಲ್ಲಿ ಕಲಿತುಕೊಂಡ ಪಾಠ ಇದೆಯಲ್ಲ...ಬಹುಶಃ ಅದು ಯಾವ ಡಿಗ್ರೀನಲ್ಲೂ ಕಲಿಸೋಕೆ ಸಾಧ್ಯನೇ ಇಲ್ಲ.....
 

Saturday 14 April 2012

ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!

ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!

ಫ್ರೆಂಡ್ಸ್ ನಿಜಕ್ಕೂ ನಾನು ಈ ಬ್ಲಾಗ್ ಆರಂಭಿಸಿದ್ದು ಹವ್ಯಾಸಕ್ಕಾಗಿಯಲ್ಲ, ಬದಲಾಗಿ ನನ್ನ ಮನಸ್ಸು ಯಾರ ಜೊತೇನೂ ಹೇಳಿಕೊಳ್ಳಲಾಗದ ವಿಚಾರಗಳನ್ನು ಈ ಮೂಲಕವಾದರೂ ವ್ಯಕ್ತಪಡಿಸೋಣ ಅಂತ. ಈಗಾಗಲೇ ಒಂದು ಹಂತಕ್ಕೆ ಕೆಲವೊಂದು ವಿಚಾರಗಳನ್ನು ಗೊತ್ತಿದ್ದೋ ಗೊತ್ತಿಲ್ಲದೇನೋ ಈ ಬ್ಲಾಗ್ನಲ್ಲಿ ದಾಖಲಿಸಿದ್ದೇನೆ. ಕೆಲವೊಮ್ಮೆ ಬರೀತಾ ಹೋದಂತೆ ನಾನ್ ಏನ್ ಬರೀತಾ ಇದೀನಿ ಅನ್ನೋದು ಕೂಡ ನನಗೆ ಗೊತ್ತಾಗೋದಿಲ್ಲ. ಎಲ್ಲಾ ಬರೆದು ಮುಗಿಸಿದ ಮೇಲೆ ಸುಮ್ನೆ ಒಮ್ಮೆ ಓದಿದರೆ ಇಷ್ಟೆಲ್ಲಾ ಬರೆದ್ನಾ ಅನಿಸಿ ಬಿಡುತ್ತೆ. ಕೆಲವೊಮ್ಮೆ ತೀರಾ ಖಾಸಗಿ ವಿಚಾರಗಳನ್ನು, ಯಾವುದನ್ನು ಬರೆಯ ಬಾರದು ಅಂದ್ಕೊಂಡಿರ್ತೀನೋ ಅದನ್ನು....ಒಟ್ಟಾರೆ ಎಲ್ಲನೂ ಈ ಬ್ಲಾಗ್ನಲ್ಲಿ ಗೀಚಿದ್ದೀನಿ..
ಈ ಜೀವನ ಅಂದ್ರೇನೆ ಹಾಗೆ..ಉತ್ತರವೇ ಇಲ್ಲದ ಪ್ರಶ್ನೆ..ಹಿಂದೆ ನನಗೂ ತುಂಬಾ ಆಸೆಗಳಿತ್ತು..ಆಕಾಂಕ್ಷೆಗಳಿತ್ತು, ಏನಾದರೂ ಸಾಧಿಸಬೇಕು ಅನ್ನೋ ಛಲ ಇತ್ತು..ಈಗಲೂ ಇದೆ. ಆದರೆ ಎಲ್ಲೋ ಒಂದು ಸಣ್ಣ ನೋವು ಆಗಾಗ ಬಿಡದೇ ಕಾಡುತ್ತೆ. ಬಹುಶಃ ಜೀವನ ಅಂದ್ರೆ ಇದೇ ಇರಬೇಕು. ಸಮಸ್ಯೆ ಮನುಷ್ಯನಿಗೆ ಸಾಮಾನ್ಯ ಅಂತಾರೆ, ಆದರೆ ನನ್ನ ವಿಚಾರದಲ್ಲಿ ನನ್ನ ನೋವು ಸಮಸ್ಯೇನೇ ಅಲ್ಲ...ಜಸ್ಟ್ ಒನ್ ಫೀಲ್ ಅಷ್ಟೇ...
ಆದರೆ ಆ ಫೀಲ್ ಅಂತಾರಲ್ಲ..ಅದೇ ಕಣ್ರೀ ತುಂಬಾ ಅಂದ್ರೆ ತುಂಬಾ ನೋವ್ ಕೊಡ್ತಾ ಇರೋದು. ಒಂದ್ ವರ್ಷ ಪ್ರೀತಿಯಿಂದ ನನ್ನ ಮೊಬೈಲ್ನ ಕದ ತಟ್ಟುತ್ತಿದ್ದ ಎಸ್ಎಮ್ಎಸ್ ಅಕಸ್ಮತ್ತಾಗಿ ನಿಂತ್ ಹೋದರೆ ಏನಾಗ್ಬೇಡ? ಏನಿಲ್ಲ...ಜಸ್ಟ್ ನೋವಷ್ಟೇ..!
ಕೆಲವೊಬ್ಬರ ಜೀವನ ನಮಗೆ ಮಾದರಿ, ಇನ್ನು ಕೆಲವರದ್ದು ವ್ಯಕ್ತಿತ್ವ...ನನಗೂ ಕೆಲವರು ಮಾದರಿ..ಯಾವ ರೀತಿ ಅಂತ ಮಾತ್ರ ಗೊತ್ತಾಗ್ತಾ ಇಲ್ಲ. ಒಂದು ತುಂಬು ಕುಟುಂಬದಲ್ಲಿ ದಿನಪೂತರ್ಿ ನಗು, ತಮಾಷೆ, ಒಟ್ಟಿಗೆ ಕೆಲಸ, ಹರಟೆ ಎಲ್ಲಾ ಇರುತ್ತೆ. ಇದೆಲ್ಲದರ ಪರಿಚಯಾನೇ ಇಲ್ದೇ ಇರೋವನಿಗೆ ಇವೆಲ್ಲಾನೂ ಸಿಕ್ಕಿ ಬಿಡುತ್ತೆ.. ಆದ್ರೆ ಎಷ್ಟು ದಿನ? ಜಸ್ಟ್ ಒಂದು ವರ್ಷ..ಮತ್ತೆ ಅದೇ ಏಕಾಂಗಿತನ..ಒಬ್ಬಂಟಿತನ...ಒಬ್ಬನೇ ಕೂತಾಗ ಕಣ್ಣಲ್ಲಿ ಒಂದ್ ಹನಿ ನೀರು...ಇನ್ನರ್ ಫೀಲಿಂಗ್ ಅಂದ್ರೆ ಇದೇನಾ? ಇದ್ರೂ ಇರಬಹುದು.
ನಿಮ್ಮನ್ನು ಒಬ್ಬರು ತುಂಬಾ ಇಷ್ಟ ಪಡ್ತಾರೆ. ಅವರ ಎಲ್ಲಾ ವಿಚಾರಗಳನ್ನೂ ನಿಮ್ ಜೊತೆ ಶೇರ್ ಮಾಡ್ತಾರೆ. ಅವರ ಬತರ್್ ಡೇಗೆ ಏನಿಲ್ಲಾ ಅಂದರೂ ಒಂದ್ ವಾರ ಮೊದಲೇ ನೀವು ಗಿಫ್ಟ್ ಕೊಡೋಕೆ ಪ್ಲಾನ್ ಮಾಡ್ತೀರಾ. ನೀವ್ ಮಾಡಿದ್ದೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾನಂತೂ ಮಾಡಿದ್ದೀನಿ....
ಫಸ್ಟ್ ವಿಶಸ್, ಬೆಸ್ಟ್ ವಿಶಸ್ ಅನ್ನೋ ಹಾಗೆ ಬೆಳಿಗ್ಗೆ ಏಳು ಘಂಟೇಗೇನೆ ವಿಶ್ ಮಾಡಿದ್ದೀನಿ...ಆದ್ರೆ ಎಷ್ಟು ವರ್ಷ? ಜಸ್ಟ್ ಒನ್.........! ಇನ್ನೊಂದು ವರ್ಷ ಅದೇ ದಿನ, ಅದೇ ಸಮಯ....ಈ ಮನಸ್ಸಿಗೆ ಆ ಅವಕಾಶನೇ ಸಿಗೋದಿಲ್ಲ ಅಂದ್ರೆ....ಜಸ್ಟ್ ಫೀಲ್ ಇಟ್...ಆದರೆ ತುಂಬಾ ಸೆನ್ಸಿಟಿವ್ ಮನಸ್ಸುಗಳಿಗೆ ಮಾತ್ರ ಅನ್ನೋದು ನೆನಪಿರಲಿ. ಯಾಕೆಂದರೆ ಇಷ್ಟ ಪಟ್ಟವರನ್ನು ಮರೆತು ಹೋಗುವ ಜೀವಗಳಿಗೆ ಈ ತರ ಫೀಲ್ ಆಗೋದಿಲ್ಲ. ಆ ಜೀವವೇ ನಮ್ಮ ಜೀವನ ಅಂದುಕೊಳ್ಳುವ ಜೀವಕ್ಕೆ ಮಾತ್ರ ಈ ಥರ ಫೀಲ್ ಆಗೋದು. ಒನ್ ಟೈಮ್ ನನಗೆ ನನ್ನದೇ ಪ್ರಪಂಚ. ಶಾಲೆ ಬಿಟ್ಟರೆ ಮನೆ...ಮನೆ ಬಿಟ್ಟರೆ ಶಾಲೆ..ಈ ಮಧ್ಯೆ ಸಿಗ್ತಾ ಇದ್ದ ಒಂದೆರೆಡು ಫ್ರೆಂಡ್ಸ್. ಫ್ರೆಂಡ್ಸ್ ಜೊತೆ ಸೇರಿ ಒಂದರ್ಧ ಘಂಟೆ ಖುಷಿಯಾಗಿ ನಗೋದನ್ನು ಬಿಟ್ಟರೆ ಬೇರೆ ಎಲ್ಲೂ ನನಗೆ ನಗೋ ಅವಕಾಶಗಳೇ ಸಿಗ್ತಾ ಇರಲಿಲ್ಲ. ಚೆನ್ನಾಗಿ ಓದ್ತಾ ಇದ್ದೆ. ಇಡೀ ಕ್ಲಾಸ್ಗೇ ನಾನೇ ಫಸ್ಟ್....ಆದರೆ ಖುಷಿಯಾಗಿರೋದ್ರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್....
ಸಂಬಂಧಗಳು ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಒಂದು ರೀತಿ ಬಾವಿಯೊಳಗಿರೋ ಕಪ್ಪೆ ಥರ ನನ್ನ ಜೀವನ. ಯಾರ್ ಜೊತೇಲೂ ಬೆರೀತಾ ಇರಲಿಲ್ಲ. ಯಾರ್ ಜೊತೇನೂ ಹೆಚ್ಚು ಮಾತಿಲ್ಲ. ನನ್ನಷ್ಟಕ್ಕೆ ನಾನು. ಇನ್ನೊಬ್ಬರ ಸಮಸ್ಯೆನಲ್ಲೂ ಪಾಲು ತೆಗೆದುಕೊಳ್ಳದಷ್ಟು ಸ್ವಾಥರ್ಿ ನಾನು! ಒಂದು ದೊಡ್ಡ ಗುಂಪು ಕಟ್ಟಿಕೊಂಡು ಇದ್ರೆ ಎಲ್ಲಿ ನನ್ನ ಶಿಕ್ಷಣಕ್ಕೆ ತೊಂದರೆ ಆಗುತ್ತೋ ಅನ್ನೋ ಜಾಯಮಾನ ನನ್ನದು. ಇನ್ನು ಶಾಲೆಯಲ್ಲೂ ಅಷ್ಟೇ. ಎಲ್ಲರ ಥರ ಡ್ಯಾನ್ಸ್, ಸ್ಪೋಟ್ಸರ್್ ನನಗೆ ಆಗಿ ಬರೋದೇ ಇಲ್ಲ. ನಂದೇನಿದ್ದರೂ ಕ್ವಿಜ್, ಪ್ರಬಂಧ....ಅಷ್ಟೇ..ಇಲ್ಲೂ ಅಷ್ಟೇ...ಗೆದ್ದಾಗ  ಒಬ್ಬನೇ ಖುಷಿ ಪಡ್ತಾ ಇದ್ದೆ..ಸೋತಾಗಲೂ ಒಬ್ಬನೇ ಫೀಲ್ ಆಗ್ತಾ ಇದ್ದೆ...ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳೋದು ಹೇಗೆ ಅಂತಾನೆ ಗೊತ್ತಿಲ್ಲ. ಒಂಥರಾ ವಿಚಿತ್ರ ಕ್ಯಾರೆಕ್ಟರ್ ನನ್ನದು. ಸರಿಯಾಗಿ ನಮ್ಮ ಶಾಲೆಯ ಹತ್ತಿರ ಫೋಸ್ಟ್ ಡಬ್ಬ ಎಲ್ಲಿದೆ ಅನ್ನೋದು ಕೂಡ ನನಗೆ ಗೊತ್ತೇ ಇರಲಿಲ್ಲ. ನನ್ನ ಜೀವನದ ಬಗ್ಗೆ ಇನ್ನೂ ಹೇಳ್ತೀನಿ....ಆದ್ರೆ ಒಂದೇ ಸಲ ಬೇಡ....ನಿಮಗೂ ಕೇಳಿಸಿಕೊಳ್ಳೋಕೆ ಕಷ್ಟ ಆಗಬಹುದು....
ಧ್ವನಿ

Sunday 8 April 2012

ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!


ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!


ನನ್ನನ್ನು ಹೆತ್ತವಳು, ಸಾಕಿದವಳು, ಬಿದ್ದಾಗ ಎತ್ತಿದವಳು, ನನ್ನನ್ನು ಸಮಾಜದಲ್ಲಿ ಒಂದು ಹಂತಕ್ಕೆ ತಂದು ನಿಲ್ಲಿಸಿದವಳು....ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಎಲ್ಲರಿಂದಲೂ ಬರುವ ಉತ್ತರ ಅಮ್ಮ.. ಆ ಸಂಬಂಧವೇ ಹಾಗೆ. ತನ್ನ ಕರುಳ ಕುಡಿಗಾಗಿ ಮಿಡಿಯುತ್ತೆ...ಹಾತೊರೆಯುತ್ತೆ.. ಜೀವನದ ಪ್ರತೀ ಕ್ಷಣದಲ್ಲೂ ತನ್ನ ಜೀವದ ಬಗ್ಗೆಯೇ ಚಿಂತಿಸುತ್ತೆ. ನನ್ನ ಅಮ್ಮನೂ ಹಾಗೆ. ಯಾರಿಗೂ ಸಿಗದ ಅಮ್ಮ..ನನಗೆ ಮಾತ್ರ ಸಿಕ್ಕ ಅಮ್ಮ. ಆಕೆ ಬಂಗಾರ ತೊಟ್ಟವಳಲ್ಲ. ಆದರೂ ಆಕೆ ಬಂಗಾರ. ಆಕೆ ಎಂದೂ ಸುಖವನ್ನು ಬಯಸಿದವಲಲ್ಲ. ಆದರೂ ಆಕೆ ಕಷ್ಟವನ್ನು ತೋರ್ಪಡಿಸಲಿಲ್ಲ. ಣಠಣಣಚಿಟಟಥಿ ಅವಳೇ ಬೇರೆ ಅವಳ  ಸ್ಟೈಲೇ ಬೇರೆ..
ಇದು ತನ್ನನ್ನು ಹೆತ್ತ ಅಮ್ಮನ ಬಗ್ಗೆ ಎಲ್ಲರೂ ಮನಸ್ಸಲ್ಲಿ ಅಂದುಕೊಳ್ಳುವ ಮಾತು. ಯಾಕೆಂದರೆ ತಾಯಿಯ ಮಹತ್ವವೇ ಅಂತದ್ದು. ಆಕೆಯನ್ನು ಮೀರಿಸುವವಳು ಇನ್ನೊಬ್ಬರು ಸಿಗಲಾರರು. ಆಕೆಯಷ್ಟು ಪ್ರೀತಿ ಅದು ಮರೀಚಿಕೆಯೇ ಸರಿ. ಒಂದು ಹಂತದವರೆಗೆ ಈ ಮೇಲಿನ ಪ್ರತೀ ವಿಚಾರದಲ್ಲಿ ನನ್ನ ಜೀವನ ಸ್ವಲ್ಪವೂ ವ್ಯತ್ಯಾಸ ಕಾಣಲಿಲ್ಲ. ಎಲ್ಲರಂತೆ ನನ್ನ ಅಮ್ಮ....ಆದರೆ
ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!
ಆಶ್ಚರ್ಯವಾಯಿತಾ? ಹೌದು...ನನ್ನ ಅಮ್ಮನ ಮಧ್ಯೆ ಮತ್ತೊಂದು ಅಮ್ಮ..ಇನ್ನೊಂದು ಪ್ರೀತಿ...ಒಂದಷ್ಟು ಕಾಳಜಿ...ಜಸ್ಟ್ ಇಷ್ಟ-ಕಷ್ಟ, ಅಲ್ಪ-ಸ್ವಲ್ಪ ಭಾವನೆಗಳ ವಿನಿಮಯ....ಇದೆಲ್ಲಾ ಅಮ್ಮನನ್ನು ಬಿಟ್ಟರೆ ಯಾರ ಜೊತೆ ತಾನೇ ಮಾಡೋಕೆ ಸಾಧ್ಯ? ನೀವೇ ಹೇಳಿ. ಹೌದು, ಅಮ್ಮ ಬಿಟ್ಟರೆ ಬೇರೆ ಯಾರ ಜೊತೇಲೂ ಇದು ಸಾಧ್ಯಾನೇ ಇಲ್ಲ...ಹಾಗಾದರೆ ಅಮ್ಮನ ಬದಲು ಸಿಕ್ಕ ಇಂತಹ ಮತ್ತೊಂದು ಸಂಬಂಧ ಅಮ್ಮ ಆಗೋಕಾಗಲ್ವ? ಇನ್ನೊಂದು ಅಮ್ಮ ಜೀವನದಲ್ಲಿ ಇಲ್ವಾ? ಇಂತಹ ಪ್ರಶ್ನೆ ನನ್ನ ಮನಸ್ಸಿನ ಆಳಕ್ಕೆ ಇಳಿದು ಅಂತಿಮವಾಗಿ ಕಣ್ನೀರಿನ ಸಮುದ್ರವಾಗಿ ಹರಿದು ಹೋಯ್ತು....ಆದರೂ ಇಲ್ಲೀ ತನಕ ಇನ್ನೊಂದು ಸಂಬಂಧ ಅಮ್ಮ ಆಗಲೇ ಇಲ್ಲ...ಯಾಕೆ ಹೀಗೆ? ಯೋಚನೆ ಮಾಡ್ತಾನೇ ಇದೀನಿ...
ಕೆಲವೊಮ್ಮೆ ಈ ಸಂಬಂಧ ನನ್ನ ಹೆತ್ತ ಅಮ್ಮನಿಗಿಂತಲೂ ಹೆಚ್ಚಾ ಅಂತ ಅನಿಸಿದ್ದೂ ಇದೆ..,ಇನ್ನು ಕೆಲವೊಮ್ಮೆ ನನ್ನ ಹೆತ್ತಮ್ಮನ ಮುಂದೆ ಈ ಮತ್ತೊಂದು ಅಮ್ಮ ಯಾವತ್ತೂ ಅಮ್ಮ ಆಗೋಕೇ ಸಾಧ್ಯಾನೇ ಇಲ್ಲ ಅಂತ ಅನಿಸಿದ್ದೂ ಇದೆ....ಆದರೆ ಭಾವನೆಗಳು ಬಿಡೋದಿಲ್ಲ....ಮನಸ್ಸಿನ ಆಳಕ್ಕೆ ಜಿಗಿದು ಕೊರೆಯೋಕೆ ಫ್ರಾರಂಭಿಸಿದೆ...ಮತ್ತೊಂದು ಅಮ್ಮ ಪ್ರತೀ ಸಲಾನೂ ನೆನಪಾಗ್ತಾಳೆ. ಹತ್ತಿರ ಇಲ್ಲ ಅಂತ ಯೋಚನೆ ಮಾಡೋಕು ಸಾಧ್ಯ ಆಗ್ತಾ ಇಲ್ಲ. ಈ ಜೀವ ಒಂಟಿ ಆದ್ರೆ ಒಂದು ಹತ್ತೇ ನಿಮಿಷದಲ್ಲಿ ಈ ಕಣ್ಣು ಒದ್ದೆ ಆಗುತ್ತೆ...ಆ ಅಮ್ಮನ ನೆನಪಾಗುತ್ತೆ...ಇದು ಜಸ್ಟ್ ಸೆಂಟಿಮೆಂಟಾ ಅಂತ ನನ್ನನ್ನು ನಾನೇ ಕೇಳಿದ್ದೂ ಇದೆ...
ಇದೇ ಬ್ಲಾಗ್ನಲ್ಲಿ ಹಿಂದೊಮ್ಮೆ ಮಾನವೀಯ ಸಂಬಂಧಗಳ ಬಗ್ಗೆ ಬರೆದಿದ್ದೆ. ಒಂಟಿಯಾದಾಗ ಆ ಮತ್ತೊಂದು ಅಮ್ಮ ಮಾನವೀಯ ಸಂಬಂಧಾನಾ? ಅಂತ ಪ್ರಶ್ನೆ ಮಾಡಿಕೊಂಡಿದ್ದೆ. ಆದರೆ ಆ ಮತ್ತೊಂದು ಅಮ್ಮ ಈ ಪ್ರಶ್ನೆಗೆ ಉತ್ತರವಾಗಲೇ ಇಲ್ಲ. ಒಮ್ಮೊಮ್ಮೆ ತೀರಾ ನೆನಪಾಗ್ತಾಳೆ ಆ ಮತ್ತೊಂದು ಅಮ್ಮ...ಕೆಲವೊಮ್ಮೆ ಹತ್ತಿರ ಇರೋ ಅಮ್ಮಾನೇ ತುಂಬಾ ಹತ್ತಿರ ಆಗ್ತಾಳೆ....ಒಂಟಿಯಾದಾಗ ಮಾತ್ರ ಆ ಮತ್ತೊಂದು ಅಮ್ಮ ಬಿಡದೇ ಕಾಡ್ತಾಳೆ...ಯಾಕ್ ಹೀಗೆ...ಉತ್ತರ ಸಿಗ್ತಾ ಇಲ್ಲ.
ಸೆನ್ಸಿಟಿವ್, ಸೆಂಟಿಮೆಂಟ್, ತುಂಬಾ ಹಚ್ಕೋಳ್ಳೋದು ಅಂದ್ರೆ ಇದೇನಾ? ಒಂದು ವೇಳೆ ಇದೇ ಹಾಗಿದ್ರೆ ಆ ಮತ್ತೊಂದು ಅಮ್ಮ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯವಾ? ಇಲ್ಲ...ಖಂಡಿತಾ ಇಲ್ಲ...ಆಕೆ ಯಾವತ್ತೂ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯಾನೆ ಇಲ್ಲ. ಆದರೂ...................
ಧ್ವನಿ

Friday 6 April 2012

ನಮಗೆ ಗೊತ್ತಿರುವುದು ದೂಷಿಸುವುದು ಮಾತ್ರ, ಚಿಂತಿಸುವುದಲ್ಲ!

ನಮಗೆ ಗೊತ್ತಿರುವುದು ದೂಷಿಸುವುದು ಮಾತ್ರ, ಚಿಂತಿಸುವುದಲ್ಲ!

ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದರ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಭದ್ರತೆಗೆ ಸಂಬಂಧಿಸಿ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಭಾರತದ ರಕ್ಷಣಾ ವಿಭಾಗವನ್ನು ಇತರೆ ದೇಶಗಳ ರಕ್ಷಣಾ ವಿಭಾಗಗಳಿಗೆ ಹೋಲಿಸಿ ಈ ವಾಹಿನಿ ಉತ್ತಮವಾಗಿಯೇ ಕಾರ್ಯಕ್ರಮ ನೀಡಿತ್ತು. ಆದರೆ ಮರುದಿನ ಫೇಸ್ಬುಕ್ನಲ್ಲಿ ಈ ವಾಹಿನಿಯ ವಿರುದ್ದವೇ ಕೆಲವರು ಕಿಡಿಕಾರಿದ್ದರು. ಇದನ್ನು ಗಮನಿಸಿದಾಗ ನನಗೆ ಒಂದಂತೂ ಸ್ಪಷ್ಟವಾಯಿತು. ವೈಫಲ್ಯಗಳನ್ನು ಬಿಚ್ಚಿಟ್ಟರೆ ಸಾಮಾನ್ಯ ನಾಗರಿಕನಿಗೂ ಕೋಪ ಬರುತ್ತದೆ ಎನ್ನುವುದು. ಈ ವಾಹಿನಿಯ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದ್ದೇನೆ. ಇಲ್ಲಿ ಪ್ರಸಾರಗೊಂಡಿರುವ ಇಂಚಿಂಚು ವಿಚಾರವು ನಮ್ಮ ದೇಶವನ್ನು ಬೆಚ್ಚಿ ಬೀಳಿಸುವಂಥದ್ದು. ಈ ಬಗ್ಗೆ ಫೇಸ್ಬುಕ್ನಂತಹ ಸಾಮಾಜಿಕ ತಾಣದಲ್ಲಿ ಜಾಗೃತಿ ಮೂಡಿಸುವ ಬದಲು ಕೆಲ ವಿಕೃತ ಮನಸ್ಕರು ಅಲ್ಲೂ ಮಾಧ್ಯಮದ ದೂಷಣೆಗಿಳಿದಿದ್ದಾರೆ. ಬಹುಶಃ ಇದರಿಂದಲೋ ಏನೋ ನಮ್ಮ ದೇಶದಲ್ಲಿ ರಾಜಕಾರಣಿಗಳ `ಕೈ ಮೇಲಾಗಿರುವುದು.
ಮಾಧ್ಯಮವೊಂದು ಎಚ್ಚರಿಸುವ ಕೆಲಸ ಮಾಡಿದಾಗ ಈ ಬಗ್ಗೆ ದೇಶದ ನಾಗರಿ ಕರಾಗಿ ನಾವು ಯೋಚಿಸಬೇಕು. ಪ್ರತೀ ವರ್ಷ ಕೋಟ್ಯಂತರ ರುಪಾಯಿ ದೇಶದ ರಕ್ಷಣೆಗೆಂದೇ ಎತ್ತಿಡುವ ಸಕರ್ಾರ ಈ ಹಣವನ್ನು ಏನು ಮಾಡುತ್ತಿದೆ ಎಂದು ಪ್ರಶ್ನಿಸುವ ಬದಲು ಮಾಧ್ಯಮದ ಕಾರ್ಯಕ್ರಮಗಳನ್ನೇ ನಾವಿಂದು ಪ್ರಶ್ನಿಸುತ್ತಿದ್ದೇವೆ. ಹಾಗಂತ ಮಾಧ್ಯಮಗಳು ತಪ್ಪು ಮಾಡುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮೊನ್ನೆಯ ಕಾರ್ಯಕ್ರಮ ದೇಶದ ಜನತೆಯನ್ನು ಎಚ್ಚರಿಸುವ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮವೆನ್ನಬಹುದು. ಒಂದೆರೆಡು ಕಡೆಗಳಲ್ಲಿ ವಾಹಿನಿ  ಸ್ವಲ್ಪ ಅತಿರೇಖ ಎನ್ನುವಂತಹ ಪದಗಳನ್ನು ಬಳಸಿದ್ದನ್ನು ಬಿಟ್ಟರೆ ಭಾರತಕ್ಕೆ ಅವಮಾನವಾಗುವಂತಹ ವಿಚಾರಗಳು ಅಲ್ಲಿರಲಿಲ್ಲ. ಅಲ್ಲದೇ ಕೆಲವರು ಈ ಬಗ್ಗೆ ಚಚರ್ಿಸುವ ಬದಲು ನಮ್ಮಿಂದ ಮಾಧ್ಯಮವನ್ನೇ `ಚಿತ್ರಾನ್ನ ಮಾಡಲು ಸಾಧ್ಯವಿದೆ ಎನ್ನುವ ಮಾತನ್ನು ಈ ತಾಣದಲ್ಲಿ ದಾಖಲಿಸಿದ್ದರು. ನಮಗೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷವನ್ನೇ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದ ಮೇಲೆ ಮುಂದೆ ವಿದೇಶಿಯರು ದಾಳಿ ನಡೆಸಿದರೆ ನಮ್ಮಿಂದ ತಡೆಯಲು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಗಳ ಕೆಲ ಕಾರ್ಯಕ್ರಮಗಳು ಅತಿಯಾಗುತ್ತಿದೆ ಎನ್ನುವುದೇನೋ ಸತ್ಯ. ಆದರೆ ಎಲ್ಲವನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡುವುದನ್ನು ಬಿಡಬೇಕಷ್ಟೇ. ಅಷ್ಟಕ್ಕೂ ಮೊನ್ನೆ ಸುದ್ದಿವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮ ಅವರ ಖಾಸಗಿ ಮೂಲಗಳಿಂದ ಬಹಿರಂಗಗೊಂಡದ್ದಲ್ಲ. ಬದಲಾಗಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಮೂಲವೊಂದು ಬಿಚ್ಚಿಟ್ಟ ಸತ್ಯ! 
ಇಂದಿಗೂ ಚೀನ ನಮ್ಮ ದೇಶದ ಮೇಲೆ ಒಂದು ರೀತಿಯಲ್ಲಿ ಯುದ್ದ ನಡೆಸುತ್ತಿದೆ. ಚೀನಾದ ಎಲ್ಲಾ ವಸ್ತುಗಳು ಸದ್ದಿಲ್ಲದೆ ನಮ್ಮ ಕೈಗಳಲ್ಲಿ ರಾರಾಜಿಸುತ್ತಿದೆ. ವಿದೇಶಿಗರ ವಸ್ತುಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಅಷ್ಟೇ ಯಾಕೆ ಈ ಚೀನಾ ನಿಮರ್ಿತ ಮೊಬೈಲ್ ಬ್ಯಾಟರಿ ಸ್ಪೋಟಿಸಿ ಎಷ್ಟು ಜನ ಸತ್ತಿಲ್ಲ? ಇದೂ ಒಂದು ರೀತಿಯಲ್ಲಿ ಭಾರತದ ಮೇಲೆ ಚೀನಾ ಸಾರಿದ ಯುದ್ದವೇ ಅಲ್ಲವೇ?! ಚೀನಾ ಈ ವಸ್ತುಗಳನ್ನು ತನ್ನ ದೇಶದಲ್ಲಿ ಅಧಿಕೃತವಾಗಿ ಮಾರಾಟ ಮಾಡುವುದಿಲ್ಲ ಎನ್ನುವುದು ನೆನಪಿರಲಿ! ಆದರೆ ನಮಗೆ ಇದೆಲ್ಲಾ ಅರ್ಥವಾಗಬೇಕಲ್ಲ. ನಮಗೆ ದೂಷಿಸುವುದು ಗೊತ್ತೇ ವಿನಃ ಚಿಂತಿಸುವುದು ಗೊತ್ತಿಲ್ಲ. ಒಂದು ವೇಳೆ ಪ್ರತಿಯೊಬ್ಬ ಭಾರತೀಯನೂ ಚಿಂತಿಸಿದ್ದರೆ 2ಜಿ ಹಗರಣ, ಗಣಿ ಹಗರಣ, ಅಷ್ಟೇ ಯಾಕೆ ಒಂದೇ ಕುಟುಂಬಗಳ ಕೈಯಲ್ಲಿ ಈ ದೇಶದ, ರಾಜ್ಯದ ಆಡಳಿತವನ್ನು ನಾವು ಕೊಡುತ್ತಿರಲಿಲ್ಲ. ಮಾಧ್ಯಮಗಳು ಸತ್ಯ ವಿಚಾರ ಬಿಚ್ಚಿಟ್ಟಾಗ ಅದನ್ನು ವಿರೋಧಿಸಿ ಬುದ್ದಿವಂತರಾಗುವ ಕೆಲವರು ಇದನ್ನೇ ರಾಷ್ಟ್ರ ರಕ್ಷಣೆಯ ಜಾಗೃತಿ ಎಂದು ಯಾಕೆ ಅಂದುಕೊಳ್ಳಬಾರದು?
ಮೊನ್ನೆ ಶಾಸಕರ ಸೆಕ್ಸ್ ವೀಕ್ಷಣೆ ಹಗರಣವನ್ನೂ ಮಾಧ್ಯಮಗಳು ಬಯಲಿಗೆ ತಂದಾಗ ಮಾಧ್ಯಮವನ್ನೇ ದೂಷಿಸಿದವರು ಹೆಚ್ಚಾಗಿದ್ದರು. ಇಲ್ಲಿ ಕೆಲವೊಂದು ಮಾಧ್ಯಮಗಳು ಎಡವಿದೆ ಎನ್ನಬಹುದು. ಆದರೆ ಮೊನ್ನೆಯ ಕಾರ್ಯಕ್ರಮವನ್ನು ದೂಷಿಸಿ ಫೇಸ್ಬುಕ್ ಸಾಮಾಜಿಕ ತಾಣದಲ್ಲಿ (ಕು)ಖ್ಯಾತಿ ಗಳಿಸುವ ಅಗತ್ಯತೆ ಏನಿತ್ತು? ಯಾವುದೇ ಫಲಾಪೇಕ್ಷೆಯಿಲ್ಲದೆ ಅಣ್ಣಾ ಹಜಾರೆ ನಡೆಸಿದ ಸತ್ಯಾಗ್ರಹ ವನ್ನೇ ಟಿವಿಯಲ್ಲಿ ಕಂಡು `ಅಜ್ಜೆರೆಗ್ ಉಂದು ಪೂರಾ ಬೋಡಿತ್ತ್ಂಡಾ?(ಮುದುಕ ನಿಗೆ ಇದೆಲ್ಲಾ ಬೇಕಿತ್ತಾ?) ಎಂದು ಉದ್ಘರಿಸಿದ ನಮ್ಮ ಸಮಾಜ ಮಾಧ್ಯಮ ವರದಿಗೆ ಇನ್ನು ಹೇಗೆ ತಾನೇ ಸ್ಪಂದಿಸಲು ಸಾಧ್ಯ? ಸಕರ್ಾರಿ ಶಾಲೆ ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ರವಿಶಂಕರ್ ಗುರೂಜಿಯವರ ಮಾತು ಫೇಸ್ಬುಕ್ನಲ್ಲಿ ಟೀಕೆಗೆ ಒಳಪಡಲಿಲ್ಲ. ಅಷ್ಟೇ ಯಾಕೆ ಈ ಬಗ್ಗೆ ಚಚರ್ೆಯೂ ನಡೆಯಲಿಲ್ಲ. ಕಾರಣ ಇವರೊಬ್ಬ ಧಾಮರ್ಿಕ ನಾಯಕ ಎಂಬ ಹಣೆಪಟ್ಟಿ ಕಟ್ಟಿಕೊಂಡವರಲ್ಲವೇ? ಈ ಕಾರಣದಿಂದ ಇವರ ಉಸಾಬರಿಗೆ ಯಾರೊಬ್ಬರೂ ಕೈ ಹಾಕಿಲ್ಲ. ಬಹುಶಃ ಇದೇ ಇರಬೇಕು ವಿಪಯರ್ಾಸ.
ನಿತ್ಯಾನಂದರಂತಹ ಸ್ವಾಮೀಜಿಗಳು ಏನೇ ತಪ್ಪು ಮಾಡಿ ಸಿಕ್ಕಿ ಬಿದ್ದರೂ ಮತ್ತೆ ಅವರ ಪಾದಕ್ಕೆರಗುವ ಈ ಸಮಾಜದಲ್ಲಿ ಬಿಚ್ಚಿಡುವ ಸತ್ಯಕ್ಕೆ, ಪತ್ತೆ ಹಚ್ಚುವ ವೈಫಲ್ಯಗಳಿಗೆ ಬೆಲೆ ಎಲ್ಲಿರುತ್ತದೆ? ನಮ್ಮನ್ನು ನಾವು ತಿದ್ದಿಕೊಳ್ಳುವ ಬದಲು ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಇದು ಹೀಗೆಯೇ ಮುಂದುವರೆಯಲಿ!

                                            ಧ್ವನಿ

Tuesday 3 April 2012

ನಿಜಕ್ಕೂ ಜೀವನ ಅಂದ್ರೆ ಏನು?


ನಿಜಕ್ಕೂ ಜೀವನ ಅಂದ್ರೆ ಏನು?


`ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ.....ನಡುವೆಲ್ಲೊ ಮೆಲ್ಲಗೆ ಮಾಯವಾದೆಯಾ....  ಈ ಹಾಡಿನ ಟ್ರ್ಯಾಕ್ನ ನೀವೂ ಕೇಳಿರಬಹುದು. ಹುಡುಗರು ಚಿತ್ರದ ಈ ಹಾಡನ್ನು ಹಾಡಿದ್ದು ಸೋನು ನಿಗಮ್. ಆ ಕಂಠಸಿರಿಯೇ ಹಾಗೆ. ಒಮ್ಮೆಗೆ ಎಂಥವರನ್ನು ಆಳವಾದ ಚಿಂತನೆಗೆ ಹಚ್ಚುವಂಥದ್ದು. ಇನ್ನು ಈ ಮೇಲಿನ ಸಾಲು ಒಂದರ್ಥದಲ್ಲಿ ನಮ್ಮ ಜೀವನಕ್ಕೆ ತುಂಬಾ ಅಂದ್ರೆ ತುಂಬಾ ಹತ್ತಿರವಾಗುತ್ತೆ. ಬೇಕಾದ್ರೆ ಒನ್ ಸೆಕೆಂಡ್ ಈ ಹಾಡನ್ನು ಮತ್ತೆ ಕೇಳಿ....
ನಮ್ಮ ಜೀವನದಲ್ಲೂ ಹಾಗೇನೆ ಯಾರೂ ನಮ್ಮ ಜೊತೆ ಬರಲ್ಲ. ಎಲ್ಲೋ ಕೆಲವೊಬ್ಬರೂ ಒಂದೆರೆಡು ಹೆಜ್ಜೆ ಬರ್ತಾರೆ ಅಷ್ಟೇ. ನಮಗೆ ಇಷ್ಟಾನೂ ಆಗ್ತಾರೆ. ಆದರೆ ನಡುವಲ್ಲೆಲ್ಲೋ ಮೆಲ್ಲಗೆ ಮಾಯಾವಾಗ್ತಾರೆ.....
ಆಗೆಲ್ಲಾ ನಾನು ಒಬ್ಬನೇ ಕೂತ್ಕೊಂಡು ಯೋಚನೆ ಮಾಡ್ತೀನಿ.. ನಿಜಕ್ಕೂ ಜೀವನ ಅಂದ್ರೆ ಏನೂ ಅಂತ. ಆದರೆ ಇಲ್ಲೀ ತನಕ ನನ್ನ ಈ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕೇ ಇಲ್ಲ. ಆವಾಗೆಲ್ಲಾ ನಾನು ರವಿಬೆಳೆಗೆರೆಯವರ ಮನಸೇ ಸಿಡಿ ಹಿಡ್ಕೊಂಡು ಒಂದರ್ಧ ಘಂಟೆ ಕೇಳ್ತೀನಿ. ಒನ್ಟೈಮ್ ರಿಲ್ಯಾಕ್ಸ್ ಕೊಡೋಕೆ ಬೆಳಗೆರೆಯವರ ಆ ಸಣ್ಣದೊಂದು ವಾಯ್ಸ್ ಸಾಕು. ಆದ್ರೆ ಎಷ್ಟು ಹೊತ್ತು....ಜಸ್ಟ್ ಒನ್ ಅವರ್..ಟೂ ಅವರ್....ಅಬ್ಬಬ್ಬಾ ಅಂದ್ರೆ ಒಂದು ದಿನ ಅಷ್ಟೇ. ಮತ್ತೆ ದಿನನಿತ್ಯದ ಜಂಜಾಟ ಕಳೆದ ಮೇಲೆ ಮೂಡುವ ಪ್ರಶ್ನೆ ನಿಜಕ್ಕೂ ಜೀವನ ಅಂದ್ರೆ ಏನು?
ನನ್ನ ಜೀವನದಲ್ಲೂ ತುಂಬಾ ಜನ ಕೇರ್ಟೇಕರ್ಗಳು, ಜೀವನವನ್ನು ಅಥೈಸಿದವರು ಬಂದು ಹೋಗಿದ್ದಾರೆ. ಅದರಲ್ಲಿ ನನಗೂ ಒಬ್ಬರು ಗುರು ಅಂತ ಇದ್ದಾರೆ. ಅವರು ಪಕ್ಕಾ ಪ್ರೋಫೆಶನಲ್ ಅಂತ ನಾನ್ ಹೇಳೋದಿಲ್ಲ...ಆ ಥರಾನೂ ಅವ್ರಿಲ್ಲ...ಬಟ್ ಆ ಮನುಷ್ಯನ ಕೆಲವೊಂದು ಮಾತುಗಳು ಮಾತ್ರ ಜೀವನಕ್ಕೆ ತುಂಬಾ ಅಗತ್ಯ ಇದೆ ಅಂತ ಅನಿಸುತ್ತೆ...ಆದ್ರೆ ಅನಿಸೋವಾಗ ಮಾತ್ರ ತುಂಬಾ ಲೇಟಾಗುತ್ತೆ...ಸಮಯ ಬಂದಾಗ ಅವರು ಯಾರೂ ಅಂತ ಹೇಳ್ತೀನಿ....
ಹಾಗಂತ ಅವರ ಮಾತುಗಳನ್ನು ಕೇಳಿದ್ರೂ ಜೀವನ ಅಂದ್ರೆ ಏನೂ ಅನ್ನೋ ಪ್ರಶ್ನೆಗೆ ಕ್ಲೀನ್ ಆ್ಯ
ಂಡ್ ಕ್ಲಿಯರ್ ಉತ್ತರ ಸಿಗೋಲ್ಲ. ನಮ್ಮಲ್ಲೇ ನೋಡಿ.....ಜೀವನ ಅಂದ್ರೆ ಏನೂ ಅಂತ ತಿಳಿಕೊಡೋಕೆ ಅದೆಷ್ಟೂ ಪುಸ್ತಕಗಳಿವೆ, ಆಧ್ಯಾತ್ಮಿಕ ಕೇಂದ್ರಗಳಿವೆ, ಮಹಾನ್ ಮೇಧಾವಿಗಳಿದ್ದಾರೆ ಅಷ್ಟೇ ಯಾಕೆ ಜೀವನವನ್ನು ಅಥೈಸುವುದನ್ನೇ ವೃತ್ತಿಯಾಗಿಸಿದ ಆಪ್ತಸಮಾಲೋಚಕರಿದ್ದಾರೆ! ಇವರೆಲ್ಲಾ ಏನೇ ಹೇಳಿದರೂ ಜೀವನ ಅಂದ್ರೆ ಏನೂ ಅನ್ನೋ ಪ್ರಶ್ನೆಗೆ ಪರಿಪೂರ್ಣ ಉತ್ತರ ಮಾತ್ರ ಸಿಗೋದೇ ಇಲ್ಲ.....!
ಜೀವನದ ಬಗ್ಗೆ ತಿಳಿಸೋ ಪುಸ್ತಕ, ಸಿಡಿ ಏನಾದ್ರೂ ಮಾಕರ್ೆಟ್ಗೆ ಬಂದರೆ ಖರೀದಿಸೋದು ನನ್ನ ಹವ್ಯಾಸ. ಹಾಗಂತ ನಾನೊಬ್ಬನೇ ಓದೋದಿಲ್ಲ. ನನ್ನ ಫ್ರೆಂಡ್ಸ್ಗೂ ಈ ಬಗ್ಗೆ ಹೇಳ್ತೀನಿ. ಒಂದ್ ಸಲ ಬೆಳಗೆರೆಯವರ ಪುಸ್ತಕದ ಬಗ್ಗೆ ಹೇಳ್ತಾ ಹೋದಾಗ ನನ್ನೊಬ್ಬ ಗೆಳೆಯ ಏನಂದ ಗೊತ್ತಾ? ಅವರಿಗೇನೂ ಟೈಮ್ ಇದೆ, ಬೇಕಾದಷ್ಟು ದುಡ್ಡಿದೆ...ಏನ್ ಬೇಕಾದ್ರೂ ಬರೀಬಹುದು ಅಂತ ಕೇರ್ಲೆಸ್ ಆಗಿ ಮಾತನಾಡಿದ. ಒಂದೆರೆಡು ವಾರ ಬಿಟ್ಟು ಅದೇ ಬೆಳಗೆರೆಯವರದ್ದು `ಮನಸೇ ಸಿಡಿ ಹಾಕಿದಾಗ...ಅದೇ ನನ್ನ ಫ್ರೆಂಡ್ ತುಂಬಾ ಸೀರಿಯಸ್ಸಾಗಿ, ಸೈಲೆಂಟಾಗಿ ಕೇಳ್ದಾ ಇದ್ದ..ಈಗ ಪ್ರಶ್ನಿಸುವ ಸರದಿ ನನ್ನದು. ಈಗೇನ್ ಹೇಳ್ತೀಯಾ ಅಂದ್ರೆ.  ಅವನಿಂದ ಬಂದ ಉತ್ತರ `ಸುಮ್ಮನೆ ಕೂತ್ಕೊಂದು ಕೇಳೋದು ಕೆಲವೊಮ್ಮೆ ಅನಿವಾರ್ಯ..! ಆದ್ರೆ ಆತ ಕೊಟ್ಟ ಉತ್ತರವೇ ನನ್ನಲ್ಲಿ ಪ್ರಶ್ನೆ ಹುಟ್ಟಿಹಾಕಿತು. ಹಾಗಂತ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳೋಕೆ ಹೋಗ್ಲಿಲ್ಲ. ಅವರವರ ಅಭಿರುಚಿಗೆ ಬಿಟ್ಟಿದ್ದು ಅಂತ ಸುಮ್ಮನಾದೆ.....
ಆದ್ರೂ ಜೀನ ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಸಿಗಲೇ ಇಲ್ಲ.......!

Thursday 29 March 2012

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಇತ್ತೀಚೆಗಷ್ಟೇ ಧಾಮರ್ಿಕ ಗುರು ರವಿಶಂಕರ್ ಗುರೂಜಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ವಿವಾದಾದ್ಮಕ ಹೇಳಿಕೆ ನೀಡಿದ್ದರು. ಒಂದು ಹಂತಕ್ಕೆ ಈ ಹೇಳಿಕೆ ಕೆಲ ಸಕರ್ಾರಿ ಅಭಿಯೋಜಕರ ಟೀಕೆಗೂ ಗುರಿಯಾಗಿತ್ತು. ಈ ರೀತಿಯ ಹೇಳಿಕೆ ನೀಡಿದ ರವಿಶಂಕರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಕೊಂಡ ಸಾಚಾತನವಾದರೂ ಏನು ಎನ್ನುವುದನ್ನು ಅರಿಯಬೇಕಿದೆ. ತಾನು ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದೇ ಇವರ ಈ ಹೇಳಿಕೆಗೆ ಕಾರಣವಾಗಿರಬಹುದು. ಸಕರ್ಾರಿ ಶಾಲೆಗಳು ಹಳ್ಳ ಹಿಡಿಯುತ್ತಿರುವ ಈ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಸರನ್ನು ರಾರಾಜಿಸುವಂತೆ ಮಾಡುವುದೇ ಇವರ ಉದ್ದೇಶವಾಗಿರಲೂ ಬಹುದು.
ಸಕರ್ಾರಿ ಶಾಲೆಗಳನ್ನು ದೂರುವ ಬದಲು ಖಾಸಗಿ ಮತ್ತು ಸಕರ್ಾರಿ ಶಿಕ್ಷಣ  ಸಂಸ್ಥೆಗಳ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಿ. ಸಕರ್ಾರಿ ಶಾಲೆಗಳಲ್ಲಿ ಕಲಿತು ಎಷ್ಟು ಮಂದಿ ನಕ್ಸಲರಾಗಿದ್ದಾರೋ ಗೊತ್ತಿಲ್ಲ. ಆದರೆ ಸಕರ್ಾರಿ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ದೇಶದ ಮೂಲೆಮೂಲೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದು ಸತ್ಯ. ಅಷ್ಟೇ ಯಾಕೆ? 1999ರಲ್ಲಿ ಇದೇ ರವಿಶಂಕರ್ ಗುರೂಜಿಯಿಂದ ಸ್ಥಾಪನೆಯಾದ ಶ್ರೀರವಿಶಂಕರ ವಿದ್ಯಾಮಂದಿರದಲ್ಲಿ ವಿದ್ಯಾಥರ್ಿಗಳಿಗೆ ಕಲಿಸುತ್ತಿರುವ ಎಲ್ಲಾ ಶಿಕ್ಷಕರು ಖಾಸಗಿ ಶಾಲೆಗಳಲ್ಲಿಯೇ ಕಲಿತವರೇ? ಇವರಲ್ಲಿ ಯಾರೊಬ್ಬರೂ ಸಕರ್ಾರಿ ಶಾಲೆಗಳಲ್ಲಿ ಕಲಿತಿಲ್ಲವೇ? ನೆನಪಿರಲಿ. ಹಿಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಸಕರ್ಾರಿ ಅಧೀನದಲ್ಲೇ ಇದ್ದವು. ಅಷ್ಟೇ ಯಾಕೆ? ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಪದ್ದತಿಗೆ ಮೂಲ ಸಕರ್ಾರಿ ಶಿಕ್ಷಣವೇ. ಈಗಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಬಸ್ ಒದಗಿಸಬಹುದು, ಆಧುನಿಕ ಶಿಕ್ಷಣ ಪದ್ದತಿ ಕಾರ್ಯಕತಗೊಳಿಸಬಹುದು, ಇಲ್ಲವೇ ಪ್ರಯೋಗಗಳ ಮೂಲಕ ಮಕ್ಕಳ ಬುದ್ದಿಮತ್ತೆ ಹೆಚ್ಚಿಸುವ ಕೆಲಸ ಮಾಡಬಹುದು. ಇವುಗಳಲ್ಲಿ ಮಾತ್ರ ಸಕರ್ಾರಿ ಮತ್ತು ಖಾಸಗಿ ಶಾಲೆಗಳಿಗೆ ವ್ಯತ್ಯಾಸ ಇರುವುದನ್ನು ಬಿಟ್ಟರೆ, ಬೇರ್ಯಾವ ವಿಧದಲ್ಲೂ ಇವುಗಳನ್ನು ವಿಭಜಿಸಿ ನೋಡುವಂತಿಲ್ಲ. ಒಂದು ವಿಧದಲ್ಲಿ ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಂದ ನಮ್ಮ ದೇಶಕ್ಕೆ ಎಳ್ಳಷ್ಟೂ ಲಾಭವಿಲ್ಲ. ಡಾಕ್ಟರ್, ಎಂಜಿನಿಯರ್ ಮಾಡಿಕೊಂಡು ವಿದೇಶದ ವಿಮಾನ ಹತ್ತುವವರೇ ನಮ್ಮಲ್ಲಿ ಹೆಚ್ಚಿದ್ದಾರೆ. ಆದರೆ ಸಕರ್ಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರು ಐಎಎಸ್, ಐಪಿಎಸ್ ಮಾಡಿಕೊಂಡೋ ಅಥವಾ ಇಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡೋ ದೇಶದಲ್ಲೇ ಉಳಿದು ದೇಶ ಸೇವೆ ಮಾಡುತ್ತಾರೆ. ಇದನ್ನು ಮೊದಲು ನಮ್ಮ ಧಾಮರ್ಿಕ ನಾಯಕರು ಅರಿತು ಕೊಳ್ಳಲಿ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾಥರ್ಿಗಳು ಬಾವಿಯೊಳಗಿನ ಕಪ್ಪೆ ಎನ್ನುವುದು ನೆನಪಿರಲಿ. ಇವರಿಗೆ ಅತಿಯಾಗಿ ವಿಧಿಸುವ ಇತಿಮಿತಿಗಳೇ ಇದಕ್ಕೆ ಕಾರಣ. ಆದರೆ ಸಕರ್ಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಒಂದು ರೀತಿ ಸ್ವಚ್ಚಂದ ಹಕ್ಕಿಗಳಿದ್ದಂತೆ. ಪುಸ್ತಕದ ವಿಚಾರಕ್ಕಿಂತ ಸಾಮಾನ್ಯ ಜ್ಞಾನವೇ ಇವರಲ್ಲಿ ಹೆಚ್ಚಿರುತ್ತದೆ. ಹಾಗಾಗಿಯೇ ಇಂದು ಬಹುತೇಕ ಆಡಳಿತಾತ್ಮಕ ಹುದ್ದೆಗಳಲ್ಲಿ ಸಕರ್ಾರಿ ಶಾಲೆಯಲ್ಲಿ ಕಲಿತವರೇ ಇರುವುದು. ಎಲ್ಲವನ್ನೂ ಶ್ರೀಮಂತಿಕೆಯ ಮೇಲೆ ಅಳೆಯುವ ಕೆಲವರಿಗೆ ಇದೆಲ್ಲಾ ಹೇಗೆ ತಾನೇ ಅರ್ಥವಾಗಬೇಕು.
ಇವರುಗಳ ದೃಷ್ಟಿಯಲ್ಲಿ ದೇಶದ ವಿಚಾರದಲ್ಲಿ ಮೂಗು ತೂರಿಸುವವರು ನಕ್ಸಲರು, ಉಗ್ರಗಾಮಿಗಳು! ಅದೇ ತಮ್ಮ ಸ್ವಹಿತಾಸಕ್ತಿಗಾಗಿ ಡಾಕ್ಟರ್, ಎಂಜಿನಿಯರ್ ಆಗುವವರು ಮಹಾ ಮೇಧಾವಿಗಳು. ಒಂದು ನೆನಪಿಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವವರು ತಮ್ಮ ಸ್ವಹಿತಾಸಕ್ತಿಯನ್ನೇ ಯೋಚಿಸುತ್ತಾರೆಯೇ ವಿನಃ ಅವರಿಗೆ ದೇಶದ ಬಗ್ಗೆಯಾಗಲೀ ಸಮಾಜದ ಬಗ್ಗೆಯಾಗಲೀ ಚಿಂತನೆಗಳಿರುವುದಿಲ್ಲ. ಎಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿರುವುದರ ಪರಿಣಾಮ ಇಂದು ನಿಧಾನವಾಗಿ ನಮಗೆ ಗೋಚರವಾಗುತ್ತಿದೆ. ಇದರ ಪರಿಣಾಮವಾಗಿಯೇ ಇಂದು ದೇಶ ಕಾಯಲು ಸೈನಿಕರಿಲ್ಲ, ಪೊಲೀಸ್ ಆಧಿಕಾರಿಯಾಗಲೂ ನಿಷ್ಠಾವಂತರಿಲ್ಲ. ಎಲ್ಲರಿಗೂ ಡಾಕ್ಟರ್, ಎಂಜಿಯರ್ಗಳೇ ಆಗಬೇಕು. ಈಗ ಹೇಳಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆಯೇ ಅಥವಾ ದೇಶದ ಉತ್ತಮ ಪ್ರಜೆಯನ್ನು ಸೃಷ್ಟಿಸುತ್ತಿದೆಯೇ

Tuesday 27 March 2012

ರಾತ್ರೀ ದುಶ್ಮನ್ಗಳೂ ನೆನಪಾಗ್ತಾರೆ!

ರಾತ್ರೀ ದುಶ್ಮನ್ಗಳೂ ನೆನಪಾಗ್ತಾರೆ! 
ಒಬ್ಬ ವ್ಯಕ್ತಿ ಎಷ್ಟೇ ಪವರ್ಫುಲ್ ಇರಲಿ, ಕೋಪಿಷ್ಟ ಆಗಿರಲಿ, ಪಕ್ಕಾ 420 ಆಗಿರಲಿ. ಒಮ್ಮೆ ಒಂದು ಫೀಲಿಂಗ್ ಸಾಂಗ್ ಹಾಕೊಂಡು ಒಬ್ಬನೇ ಬೆಟ್ಟದ ತುದೀಲೋ, ಮರದ ಬುಡದಲ್ಲೋ ಅಥವಾ ಯಾರೂ ಇಲ್ಲದೇ ಇರೋ ಸೈಲೆಂಟ್ ಜಾಗದಲ್ಲೋ ಕೂತರೆ ಆತ ತನ್ನನ್ನೇ ತಾನು ಮರೆತು ಬಿಡ್ತಾನೆ. ಸ್ವಲ್ಪ ಸೆನ್ಸಿಟಿವ್ ಅಂತ ಇಟ್ಕೊಳ್ಳಿ, ಆತನ ಕಣ್ಣಿಂದ ಒಂದು ಹನಿ ನೀರು ಜಾರಿದರೂ ಆಶ್ಚರ್ಯ ಇಲ್ಲ ಬಿಡಿ. ಮನುಷ್ಯನ ಜೀವನವೇ ಹಾಗೆ ಕಣ್ರೀ. ನಾವು ಒಬ್ಬರನ್ನು ತುಂಬಾ ಹೊಗಳ್ತೀವಿ, ಇನ್ನು ಕೆಲವರನ್ನು ನಮ್ಮ ದ್ವೇಷಿ ಅಲ್ಲದೇ ಇದ್ದರೂ ಸುಮ್ ಸುಮ್ಮನೆ ತೆಗಳ್ತೀವಿ. ಅದೇ ರಾತ್ರಿ ಮಲಗೋವಾಗ ಒಮ್ಮೆ ನಮ್ಮ ಸೋಕಾಲ್ಡ್ ದ್ವೇಷಿಗಳನ್ನು ನೆನಪು ಮಾಡಿಕೊಳ್ಳಿ. ಒನ್ಟೈಮ್ ಅವರೂ ಕೂಡ ನಮಗೆ ತುಂಬಾ ಹತ್ತಿರ ಆಗ್ತಾರೆ. ಬೇಕಾದ್ರೆ ರಾತ್ರೀ ಮಲಗೋ ಮುಂಚೆ ಟ್ರೈ ಮಾಡಿ.
ನಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಸಿಗೋರೆಲ್ಲಾ ನಮಗೆ ದುಷ್ಮನ್ಗಳೇ. ಆದ್ರೆ ರಾತ್ರೀ ಮಲಗೋವಾಗ ಜಸ್ಟ್ ರಿಲ್ಯಾಕ್ಸ್ ಆಗ್ತೀವಲ್ಲ. ಆವಾಗ ನಾವ್ ಯಾರನ್ನಾ ದುಶ್ಮನ್ ಅಂದುಕೊಳ್ತೀವೋ, ಅವರೂ ಕೂಡ ತುಂಬಾ ಹತ್ತಿರ ಆಗ್ತಾರೆ..........ಜಸ್ಟ್ ಫೀಲ್ ಇಟ್....
ಮತ್ತೆ ಕೆಲವೊಮ್ಮೆ, ನಾವು ತುಂಬಾ ಇಷ್ಟ ಪಟ್ಟವರು  ನಾವು ಮಲಗೋವಾಗ ನಮಗೆ ದುಶ್ಮನ್ ಥರ ಕಾಣ್ತಾರೆ...ಯಾಕ್ ಗೊತ್ತಾ? ಹಗಲೊತ್ತಲ್ಲಿ ಅವರು ನಮ್ ಜೊತೆ ಮಾತಾಡ್ಲಿಲ್ಲ ಅಂದ್ರೆ ಮಾತ್ರ! ಬಹುಶಃ ಇದೇ ಇರಬೇಕು ಮನುಷ್ಯ ಪ್ರೀತೀಲಿ ಅನುಭವಿಸೋ ಗೊಂದಲಗಳು.....!
ಮತ್ತೆ ಕೆಲವೊಂದು ವಿಚಾರಗಳೇ ಹಾಗೆ. ಯಾರಲ್ಲಿ ಹೇಳಬೇಕು ಅನಿಸುತ್ತೋ ಅವರಲ್ಲೇ ಹೇಳಬೇಕು. ಅಪ್ಪಿ ತಪ್ಪೀನೂ ಇನ್ನೊಬ್ಬರ ಹತ್ತಿರ ಹೇಳೋದಕ್ಕೆ ಸಾಧ್ಯನೇ ಇಲ್ಲ. ನಾವು ಯಾರನ್ನೂ ಹೆಚ್ಚು ಇಷ್ಟ ಪಡ್ತೀವೋ ಅವರ ಹತ್ತಿರ ಮಾತ್ರ ನಮ್ಮ ಮನದ ಭಾವನೆಗಳು ಪ್ರಕಟವಾಗೋದು. ಆದ್ರೆ ಒಮ್ಮೊಮ್ಮೆ ಅವರತ್ರಾನೂ ಸುಳ್ಳು ಹೇಳ್ತೀವಿ. ಯಾಕೆ ಅಂತೀರಾ? ಅದೇ ಕಣ್ರೀ, ಬಡ್ಡಿ ಮಗಂದೂ ಸ್ವಾಭಿಮಾನ....! ಇಷ್ಟ ಪಟ್ಟವರತ್ರ ಒಳ್ಳೆದನ್ನು...ಅವರು ನಮ್ಮ ಬಗ್ಗೆ ತಪ್ಪು ತಿಳ್ಕೋಳ್ಳದೇ ಇರೋ ವಿಚಾರಗಳನ್ನು ಮಾತ್ರ ಹೇಳ್ತೀವಿ. ಎಲ್ಲಾನೂ ಹೇಳ್ ಬಿಟ್ರೆ ಮನುಷ್ಯನಿಗೆ ಎಲ್ರೀ ಇರುತ್ತೆ ಸಮಸ್ಯೆ....ಹೌದಲ್ವಾ?
ನಾನ್ ಹೇಳಿದ್ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.....ಜಸ್ಟ್ ಫೀಲ್ ಇಟ್....ನಿಮಗೆ ಈ ಅನುಭವ ಆಗಿದ್ರೆ.....ಮನಸ್ಸಲ್ಲೇ ಒಂದ್ ಸ್ಮೈಲ್ ಕೊಟ್ ಬಿಡಿ ಸಾಕು....ಓಕೇನಾ...?
 

Monday 26 March 2012

ಬೆಳಗುತ್ತಿದೆ ಮಾಧ್ಯಮ ಲೋಕ ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!


ಬೆಳಗುತ್ತಿದೆ ಮಾಧ್ಯಮ ಲೋಕ
ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!
ಹೌದು, ಮಾಧ್ಯಮ ಲೋಕ ಬೆಳಗುತ್ತಿದೆ. ಒಂದು ಕಾಲದಲ್ಲಿ ಪತ್ರಿಕೆಗಳನ್ನು ಬಿಟ್ಟರೆ ಜನರಿಗೆ ಸುದ್ದಿ ತಿಳಿದುಕೊಳ್ಳುವ ಸಾಧನ ಇನ್ನೊಂದಿರಲಿಲ್ಲ. ಅದರಲ್ಲೂ ಕನ್ನಡ ಮಾಧ್ಯಮ ವಲಯದಲ್ಲಿ ಸುದ್ದಿ ವಾಹಿನಿಗಳಿಗೆ ಬರವಿತ್ತು ಎಂದರೆ ಖಂಡಿತಾ ತಪ್ಪಿಲ್ಲ. ಸಕರ್ಾರಿ ಸ್ವಾಮ್ಯದ ದೂರದರ್ಶನವನ್ನು ಬಿಟ್ಟರೆ ಜನರ ಮನೋರಂಜನೆಗೆ ಆ ಕಾಲದಲ್ಲಿ ತುಂಬಾನೆ ಕೊರತೆಯಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಗಲ್ಲಿಗೊಂದರಂತೆ ಚಾನೆಲ್ಗಳು ಹುಟ್ಟಿಕೊಳ್ಳುತ್ತಿವೆ. ವಿನೂತನ ಪ್ರಯೋಗಗಳು ನಡೆಯುತ್ತಿವೆ. ಟಿಆರ್ಪಿಯ ಬಾಲ ಹಿಡಿದು `ನಾವೇನ್ ಬೇಕಾದ್ರೂ ಮಾಡ್ತೀವಿ ಅನ್ನೋ ಚಾನೆಲ್ಗಳೂ ಇವೆ.
ಕನ್ನಡ ಟೆಲಿವಿಷನ್ ಲೋಕದಲ್ಲಿ ಮೊಟ್ಟ ಮೊದಲನೆಯದಾಗಿ ಪ್ರಸಾರಗೊಂಡ ಧಾರವಾಹಿ `ಸಿಹಿಕಹಿ. ಎಚ್.ಎನ್.ಕೆ ಮೂತರ್ಿಯವರ ಸಾರಥ್ಯದಲ್ಲಿ ಬೆಂಗಳೂರು ದೂರದರ್ಶನ 1983ರಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಅಲ್ಲಿಂದ ಧಾರವಾಹಿಗಳ ಸಣ್ಣದೊಂದು ಪರ್ವ ಆರಂಭವಾಯಿತೇ ವಿನಃ, ಸುದ್ದಿ ಚಾನೆಲ್ಗಳನ್ನು ಸ್ಥಾಪಿಸುವ ಮನಸ್ಸನ್ನು ಯಾರೊಬ್ಬರೂ ಮಾಡಲಿಲ್ಲ. ತದನಂತರ ಹುಟ್ಟಿಕೊಂಡದ್ದೇ ತಮಿಳು ನಾಡಿನ ಕಲಾನಿಧಿ ಮಾರನ್ ಮಾಲಕತ್ವದ ಉದಯ ಟಿವಿ. ಈ ವಾಹಿನಿ ಕನ್ನಡ ಟೆಲಿವಿಷನ್ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿತ್ತು. ವಿನೂತನ ಪ್ರಯೋಗಗಳ ಮೂಲಕ ಟೆಲಿವಿಷನ್ ಲೋಕದಲ್ಲಿ ಖ್ಯಾತಿ ಗಳಿಸಿತ್ತು. ಮುಂದೆ ಇದೇ ವಾಹಿನಿ ಪ್ರಥಮ ಕನ್ನಡ ಸುದ್ದಿ ವಾಹಿನಿಯನ್ನೂ ತೆರೆಗೆ ತರುವ ಮೂಲಕ ಮಾಧ್ಯಮ ಲೋಕದಲ್ಲಿ ಹೊಸ ಭಾಷ್ಯ ಬರೆಯಿತು. ಆದರೆ ಈ ವಾಹಿನಿ ಸುದ್ದಿ ಜಗತ್ತಿನಲ್ಲಿ ತನ್ನದೇ ಆದ ಧ್ಯೇಯಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಅಷ್ಟಾಗಿ ಜನತೆ ಇದರತ್ತ ಆಕಷರ್ಿತರಾಗಲಿಲ್ಲ. ನಂತರ ವರ್ಷಗಳೇ ಕಳೆದರೂ ಟಿವಿ ಮಾದ್ಯಮ ಲೋಕ ಬೆಳಗುವ ಯಾವುದೇ ಸುಳಿವುಗಳು ಲಭ್ಯವಾಗಲಿಲ್ಲ. ಕೆಲ ವರ್ಷಗಳ ನಂತರ ತನ್ನದೇ ಆದ ಪತ್ರಕೋದ್ಯಮದ ಧ್ಯೇಯಗಳೊಂದಿಗೆ ಆರಂಭವಾದದ್ದು ಟಿವಿ9 ಎಂಬ ಕನ್ನಡ ಸುದ್ದಿವಾಹಿನಿ. ತನ್ನದೇ ಆದ ಸ್ಪಷ್ಟ ನಿಲುವಿನೊಂದಿಗೆ ಅನ್ಯರಾಜ್ಯದ ಒಡೆತನದಲ್ಲಿದ್ದರೂ ಕನ್ನಡ ಮಾದ್ಯಮ ಲೋಕದಲ್ಲಿ ಈ ವಾಹಿನಿ ಸಾಕಷ್ಟು ಸದ್ದು ಮಾಡಿತು. ಒಂದು ಹಂತಕ್ಕೆ ಇಡೀ ಭಾರತ ದೇಶದಲ್ಲೇ ಟಿಆರ್ಪಿ ಟಾಪರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಯಾವುದೇ ರಾಜಕೀಯ ವ್ಯಕ್ತಿಗಳ ಒಡೆತನದಲ್ಲಿ ಈ ವಾಹಿನಿ ಇಲ್ಲ ಎನ್ನುವುದೇ ಇದರ ಪ್ರಖ್ಯಾತಿಗೆ ಕಾರಣ ಎಂದರೂ ತಪ್ಪಿಲ್ಲ.
ಟಿವಿ9 ಕನ್ನಡ ವಾಹಿನಿ ಕನ್ನಡ ಸುದ್ದಿ ಲೋಕದಲ್ಲಿ ಮಾಡಿದ ಕ್ರಾಂತಿ, ಅಳವಡಿಸಿಕೊಂಡ ಅತ್ಯಧ್ಬುತ ತಂತ್ರಜ್ಞಾನಗಳು ದೇಶದ ಬಹುತೇಕ ಮಾದ್ಯಮ ದಿಗ್ಗಜರನ್ನು ಬೆರಗುಗೊಳಿಸಿತು. ಒಂದು ಕಾಲದಲ್ಲಿ ಕೇವಲ ಮನೋರಂಜನಾ ವಾಹಿನಿಗಳಿಗೆ ಮಾತ್ರ ಸೀಮಿತವಾಗಿದ್ದ ಕೆಲವೊಂದು ಕಂಪೆನಿಗಳು ಕನರ್ಾಟಕದಲ್ಲಿ ತನ್ನ ಸುದ್ದಿ ವಾಹಿನಿಗಳ ಸ್ಥಾಪನೆಗೆ ಇಳಿದವು. ಪರಿಣಾಮ ಸುವರ್ಣ ನ್ಯೂಸ್,   ಈ ಹಿಂದೆ ಶ್ರೀರಾಮುಲು ಒಡೆತನದಲ್ಲಿದ್ದ ಜನಶ್ರೀ, ಸಮಯ, ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್, ಇತ್ತೀಚೆಗಷ್ಟೇ ಹಿರಿಯ ಪತ್ರಕರ್ತ ರಂಗನಾಥ್ರವರ ಪಬ್ಲಿಕ್ ಟಿವಿಯೂ ಕೂಡ ಕನರ್ಾಟಕದಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದಿದೆ. ದಿನಕ್ಕೊಂದು ವಿಶೇಷತೆಗಳ ಜೊತೆಗೆ ಜನರ ಮುಂದೆ ಬರುವುದು ಈ ವಾಹಿನಿಗಳ ಉದ್ದೇಶವೇ ಆದರೂ ಜನರಿಗೆ 24*7 ಸುದ್ದಿ ನೀಡುವುದು ಇವುಗಳ ಕರ್ತವ್ಯ. ಒಂದು ಕಾಲದಲ್ಲಿ ದಿನದ ಹೆಚ್ಚಿನ ಸಮಯವನ್ನು ಟಿವಿ ಸೀರಿಯಲ್ಗಳನ್ನು ನೋಡಿಕೊಂಡು ಕಳೆಯುತ್ತಿದ್ದ ವೀಕ್ಷಕರ ಅಭಿರುಚಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಸುದ್ದಿವಾಹಿನಿಗಳು ಭಿತ್ತರಿಸುವ ಅರ್ಧಘಂಟೆಯ ಕಾರ್ಯಕ್ರಮಗಳೇ ಜನರ ಪಾಲಿನ ಟಿವಿ ಸೀರಿಯಲ್ಗಳಾಗಿದೆ. ಇಲ್ಲಿ ಟೀಕೆಯೂ ಇದೆ, ಬೆನ್ನು ತಟ್ಟುವ ಪ್ರೋತ್ಸಾಹವೂ ಇದೆ. ಇದಕ್ಕೇ ಹೇಳಿದ್ದು, ಮಾಧ್ಯಮ ಲೋಕ ಬೆಳಗುತ್ತಿದೆಯೆಂದು!

ಮಾರುಕಟ್ಟೆಗೆ ಬರುತ್ತಿದೆ ಎರಡು ರುಪಾಯಿ ಪತ್ರಿಕೆ!
ಸುದ್ದಿ ವಾಹಿನಿಗಳ ಟಿಆರ್ಪಿ ಸಮರದ ಮಧ್ಯೆ ಓದುಗರೇ ಜೀವಾಳವಾದ ಪತ್ರಿಕೆಗಳು ತನ್ನ ಪ್ರಸರಣ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಪತ್ರಿಕೆಗಳು ಅನಿವಾರ್ಯವಾಗಿ ದರ ಹೆಚ್ಚಳಕ್ಕೆ ಇಳಿದದ್ದೂ ಆಗಿದೆ. ಆದರೆ ಪತ್ರಿಕಾ ರಂಗದ ದರ ಸಮರದ ಮಧ್ಯೆಯೇ ಎರಡು ರುಪಾಯಿಗೆ ಕನ್ನಡದಲ್ಲೊಂದು ಪತ್ರಿಕೆ ಮಾರುಕಟ್ಟೆಗೆ ಬರಲು ಸಿದ್ದತೆ ನಡೆಸಿದೆ. ಈ ಪತ್ರಿಕೆಯ ಮುಂದೆ ತಮ್ಮ ಪತ್ರಿಕೆಗಳನ್ನು ಉಳಿಸುವುದಾದರೂ ಹೇಗೆ ಎಂಬ ಭಯ ಕೆಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಆರಂಭವಾಗಿದ್ದು, ಇದು ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಲಿದೆಯೇ ಎಂಬ ಮಾತು ಪತ್ರಿಕಾ ವಲಯದಲ್ಲಿ ಕೇಳಿ ಬಂದಿದೆ.
ಸುದ್ದಿ ಚಾನೆಲ್ಗಳು ವೈಭವೋಪೇತವಾಗಿ ಕಂಡರೂ ಪತ್ರಿಕೆಗಳ ಮುಂದೆ ಅದರ ಸಾಧನೆ ನಗಣ್ಯವೇ. ಸುದ್ದಿ ಚಾನೆಲ್ಗಳ ನಿರ್ವಹಣಾ ವೆಚ್ಚಕ್ಕಿಂತಲೂ ಹೆಚ್ಚಿನ ಖಚರ್ು ಪತ್ರಿಕೆಗಳನ್ನು ಉಳಿಸಿ ಬೆಳೆಸಲು ಬೇಕು ಎಂದರೆ ನಂಬಲೇ ಬೇಕು. ಇದರ ಮಧ್ಯೆ ಪತ್ರಿಕೆಗಳ ದರ ಸಮರ ಪತ್ರಿಕಾ ರಂಗದ ದೊಡ್ಡ ಸಮಸ್ಯೆಗಳಲ್ಲೊಂದು. ಒಂದು ಕಾಲದಲ್ಲಿ ಬೆರಳಣೆಕೆಯಷ್ಟಿದ್ದ ಪತ್ರಿಕೆಗಳ ಸಂಖ್ಯೆ ಇಂದು ಒಂದೇ ಸಮನೆ ಏರ ತೊಡಗಿದೆ. ಈ ಮಧ್ಯೆ ಕನ್ನಡದಲ್ಲೊಂದು ಪತ್ರಿಕೆ ನೂತನ ದರ ಸಮರಕ್ಕೆ ಸಜ್ಜಾಗಿದೆ. ಈ ಮೂಲಕ ದೊಡ್ಡ ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ಬರಲಿದೆಯೇ ಎಂಬ ಬಗ್ಗೆ ಪತ್ರಿಕಾ ವಲಯದಲ್ಲಿ ಬಿಸಿಬಿಸಿ ಚಚರ್ೆಗಳು ನಡೆಯುತ್ತಿವೆ. ಹದಿನಾರು ಪುಟಗಳನ್ನು ಕಲರ್ಫುಲ್ ಆಗಿ ಹೊರತರುವ ಯೋಜನೆಯೊಂದಿಗೆ ವಿಆರ್ಎಲ್ ಸಮೂಹದ ವಿಜಯ್ಸಂಕೇಶ್ವರ ಸಂಪೂರ್ಭ ಸಿದ್ದತೆ ನಡೆಸಿದ್ದಾರೆ. ಮುಂದಿನ ಎಪ್ರಿಲ್ಗೆ ಈ ಪತ್ರಿಕೆ ಕೈ ಸೇರುವುದು ನಿಶ್ಚಿತ!

ಎಲ್ಲರೂ ಇಂಗ್ಲೀಷ್ ಮೀಡಿಯಮ್! ಮುಂದಾ?
ಪ್ರತೀ ನಿಮಿಷಕ್ಕೂ ಬದಲಾವಣೆ ಕಂಡುಕೊಳ್ಳುವ ಈ ಸಮಾಜದಲ್ಲಿ ಶೈಕ್ಷಣಿಕವಾಗಿಯೂ ಬದಲಾವಣೆಗಳಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದರಿಂದ ನಮ್ಮ ಕನ್ನಡ ಪತ್ರಿಕೆಗಳಿಗೆ ಏಟು ಬೀಳುವುದಂತೂ ಗ್ಯಾರಂಟಿ! ಮುಂದೆ ಹತ್ತು ವರ್ಷ ಕಳೆದರೆ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಒಂದೇ ಸಮನೆ ಇಳಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಇಂದಿನ ಕನ್ನಡ ಪತ್ರಿಕೆಗಳ ಸಕ್ಯರ್ೂಲೇಶನ್ ಜಾಗವನ್ನು ಮುಂದೆ ಇಂಗ್ಲೀಷ್ ಪತ್ರಿಕೆಗಳು ಆಕ್ರಮಿಸಿದರೆ ಅಚ್ಚರಿ ಪಡಬೇಕಿಲ್ಲ. ಇಂಗ್ಲೀಷ್ ಮಾಧ್ಯಮದ ಅಬ್ಬರಕ್ಕೆ ಕನ್ನಡ ಮಾಧ್ಯಮ ಶಾಲೆಗಳೇ ಬಾಗಿಲು ಮುಚ್ಚುತ್ತಿದೆ. ಹೀಗಿರುವಾಗ ಮಂದಿನ ಪೀಳಿಗೆ ಕನ್ನಡ ಪತ್ರಿಕೆಗಳನ್ನು ಓದುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ. ಈಗಿನ ಎಲ್ಕೆಜಿ ಮಕ್ಕಳ ಕೈಯಲ್ಲೇ ಹಿಂದು, ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ರಾರಾಜಿಸುತ್ತಿರುವಾಗ ಮುಂದೆ ಕನ್ನಡ ಪತ್ರಿಕೆಗಳ ಉಳಿವು ಸಾಧ್ಯಾನಾ? ನೆನಪಿರಲಿ, ಇದು ಕನ್ನಡ ಪತ್ರಿಕೆಗಳಿಗೆ ಮಾತ್ರವಲ್ಲ. ಕನ್ನಡದ ಇಲೆಕ್ಟ್ರಾನಿಕ್ ಮೀಡಿಯಾಗಳಿಗೂ...!


ಪತ್ರಿಕೋದ್ಯಮಕ್ಕೆ ವಿಪುಲ ಅವಕಾಶ
ಇಂದು ಪತ್ರಕೋದ್ಯಮ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿಯೇ ಪತ್ರಿಕೋದ್ಯಮ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚಿದೆ. ಇವರ ಮುಖ್ಯ ಉದ್ದೇಶ ಪತ್ರಿಕೆಗಳನ್ನು ಸೇರುವುದು ಎನ್ನುವುದಕ್ಕಿಂತ ಸುದ್ದಿ ವಾಹಿನಿಗಳು ಎನ್ನುವುದು ಅಷ್ಟೇ ಸತ್ಯ. ಕೈಯಲ್ಲೊಂದು ಮೈಕ್ ಹಿಡಿದು ಬೀದಿಗಿಳಿದರೆ ನಮ್ಮ ಘನತೆ ಹೆಚ್ಚುತ್ತದೆ ಅಂದುಕೊಳ್ಳುವವರ ಸಂಖ್ಯೆ ಇದರಲ್ಲಿ ಸ್ವಲ್ಪ ಹೆಚ್ಚೇ ಇದೆ. ಇಂದು ಸಿನಿಮಾ ನಟರಷ್ಟೇ ಖ್ಯಾತಿ, ಹೆಸರನ್ನು ಸುದ್ದಿ ವಾಹಿನಿಗಳ ಆ್ಯಂಕರ್ಗಳು ಪಡೆದುಕೊಂಡಿರುತ್ತಾರೆ. ಹಾಗಾಗಿ ನೈಜ ಪತ್ರಿಕೋದ್ಯಮದ ಉದ್ದೇಶಗಳೇ ಇಲ್ಲದೆ ಕೆಲಸ ಗಿಟ್ಟಿಸಿಕೊಳ್ಳಲು ಈ ವಿಭಾಗವನ್ನು ಆರಿಸಿಕೊಳ್ಳುವವರೂ ಇದ್ದಾರೆ. ಏನೇ ಆದರೂ ಇಂದು ಮಾದ್ಯಮ ರಂಗ ಬೆಳೆಯುತ್ತಿದೆ ಎನ್ನುವುದು ಅಷ್ಟೇ ಸತ್ಯ.

Sunday 25 March 2012

ಇಷ್ಟ ಪಟ್ಟವರನ್ನು ಯಾವತ್ತೂ ಕಳೆದುಕೊಳ್ಳಬೇಡಿ!


ಇಷ್ಟ ಪಟ್ಟವರನ್ನು ಯಾವತ್ತೂ ಕಳೆದುಕೊಳ್ಳಬೇಡಿ!
ಕೆಲವೊಂದು ವಿಚಾರಗಳೇ ಹಾಗೆ. ಬೇಡ ಅಂದರೂ ಮತ್ತೆ ಮತ್ತೆ ನೆನಪಾಗುತ್ತದೆ.  ಅದೇ ರೀತಿ ಕೆಲವೊಂದು ನೆನಪುಗಳು ಕೂಡ... ಇಷ್ಟ ಪಟ್ಟವರು ದೂರ ಆದ ನಂತರ ಕೂಡ ಮತ್ತೆ ನೆನಪಾಗ್ತಾರೆ. ಅವರು ಹತ್ತಿರ ಇಲ್ಲ ಅಂತ ಯೋಚನೆ ಮಾಡಿಕೊಳ್ಳೋಕು ಸಾಧ್ಯ ಇಲ್ಲ ಅಂತ ಅನಿಸಿ ಬಿಡುತ್ತೆ. ಫ್ರೆಂಡ್ಸ್, ಇವತ್ತು ನಿಮಗೆಲ್ಲಾ ಒಂದು ಸಣ್ಣ ಕಥೆ ಹೇಳ್ತೀನಿ. ನಿಮಗೆ ಸಮಯ ಇದ್ದರೆ ಓದಿ.. ಇಲ್ಲಾಂದ್ರೆ ನಿಮ್ಮಷ್ಟ.....
LIFE IS SHORT.....................BUT MEMORIES  ARE.....................!?
ನನಗೆ ತುಂಬಾ ಹತ್ತಿರವಾದ ಜೀವದ ಕಥೆ ಇದು. ಆ ಜೀವ ಇನ್ನೊಂದು ಜೀವವನ್ನು ಇಷ್ಟ ಪಟ್ಟ ಕಥೆ ಇದು. ಆ ಪುಟ್ಟ ಜೀವ ಹುಟ್ಟಿದ್ದು ಒಂದು ಸಣ್ಣ ಬಡ ಕುಟುಂಬದಲ್ಲಿ. ಭೂಮಿಗೆ ಇಳಿದಿದ್ದೇ ತಡ, ಆ ಜೀವಕ್ಕೆ ಹತ್ತಿರವಾಗಬೇಕಿದ್ದ ಸಂಬಂಧಗಳು ದೂರ ಆದವು. ತಾಯಿ ಒಬ್ಬರನ್ನು ಬಿಟ್ಟರೆ ಜೀವಕ್ಕೆ ಇನ್ಯಾರು ಸಿಗಲೇ ಇಲ್ಲ. ಮಾನವೀಯ ಸಂಬಂಧಗಳು ಅಂದ್ರೆ ಏನು ಅಂತಾನೆ ತಿಳಿದುಕೊಳ್ಳುವ ಅವಕಾಶನೇ ಆ ದೇವರು ನೀಡಲಿಲ್ಲ. ಹುಟ್ಟು ಅನಿವಾರ್ಯ ಅನ್ನೋ ಹಾಗೆ ಹುಟ್ಟಿಬಿಡ್ತು ಆ ಜೀವ...ಮುಂದೆ... ಎಲ್ಲರ ಹಾಗೆ ಶಾಲೆ..ಕಾಲೇಜು...ಸಣ್ಣ ಆಸೆಗಳ ಮಧ್ಯೆ ಒಂದು ಜೀವನ... ಇವುಗಳ ಮಧ್ಯೆ ಕೊರತೆ ಇದ್ದದ್ದು ಮಾತ್ರ ಕೆಲವೊಂದು ಮಾನವೀಯ ಸಂಬಂಧಗಳಿಗೆ ಮಾತ್ರ....
ಹುಟ್ಟಿದ ಮೇಲೆ ಹೊಟ್ಟೆ ಪಾಡಿಗೆ ಕೆಲಸಾನೂ ಅನಿವಾರ್ಯ. ಈ ಜೀವಕ್ಕೂ ಒಂದೆರೆಡು ಕಡೆ ಕೆಲಸ ಸಿಕ್ತು. ಆದರೆ ಏನ್ ದುರಾದೃಷ್ಟಾನೋ ಎಲ್ಲಾ ಕಡೆಗಳಲ್ಲೂ ಮಾನವೀಯ ಸಂಬಂಧಗಳಿಗೆ ಬೆಲೇನೆ ಸಿಗಲಿಲ್ಲ. ಅಂತೂ ಇಂತೂ ದೇವರಿಗೆ ಈ ಜೀವದ ನೋವು ಅರ್ಥ ಆಯ್ತು. ಒಂದ್ ಕಡೇಲಿ ಮನಸ್ಸಿಗೆ ತುಂಬಾ ಹತ್ತಿರವಾಗೋ ಮಾನವೀಯ ಸಂಬಂಧದ ಪರಿಚಯ ಮಾಡಿಸಿದ. ಈ ಜೀವಾನೂ ಅಷ್ಟೇ, ಅವರನ್ನು ತುಂಬಾನೇ ಇಷ್ಟ ಪಟ್ಟಿತು. ಭಾವನೆಗಳ ಮಧ್ಯೆ `ಅಕ್ಕ ಅನ್ನೋ ಸಣ್ಣ ಪ್ರೀತಿ ಬೆಳೀತು. ಮುಂದೆ ನನಗೂ ಒಬ್ಬರೂ `ಅಕ್ಕ ಇದಾರೆ ಅನ್ನೋವಷ್ಟರ ಮಟ್ಟಿಗೆ ಈ ಸಂಬಂಧ ಬೆಳೀತಾ ಹೋಯ್ತು. ಆದರೆ ಎಷ್ಟು ದಿನ? ಜಸ್ಟ್ ಒಂದು ವರ್ಷ ಅಷ್ಟೇ. ಆ ದೇವರಿಗೂ ಇವೆಲ್ಲವುಗಳನ್ನು ಸಹಿಸೋಕೇ ಸಾಧ್ಯ ಆಗಲಿಲ್ಲವೋ ಏನೋ? ಸಂಬಂಧಗಳನ್ನು ಕಡಿದು ಬಿಟ್ಟ. ಅವರಿಗೆ ಇಂಥ ಅದೆಷ್ಟೂ ಜೀವಗಳು ಸಿಕ್ಕಿರಬಹುದು. ಹಾಗಾಗಿ ಅವರು ಈ ಬಗ್ಗೆ ಅಷ್ಟು ಯೋಚನೆ ಮಾಡಲಿಲ್ಲ. ಆದರೆ ಈ ಜೀವಕ್ಕೆ ಸಿಕ್ಕಿದ್ದು ಅದೊಂದೇ ಮಾನವೀಯ ಸಂಬಂಧ! ಪ್ರತೀ ದಿನ ಕೊರಗು, ಕಾರಣ ಇಷ್ಟೇ. ಹುಟ್ಟಿದಾಗಿನಿಂದ ಯಾರನ್ನೋ ದೂರ ಮಾಡ್ಕೋಳ್ಳೋಕೆ ಆ ಜೀವ ಇಷ್ಟ ಪಟ್ಟಿಲ್ಲ. ಹೀಗಿರೋವಾಗ ತುಂಬಾ ಪ್ರೀತಿ ಇಟ್ಟುಕೊಂಡ ಒಂದು ಮಾನವೀಯ ಸಂಬಂಧ ದೂರ ಆದಾಗ ನೋವು ಆಗದೇ ಇರುತ್ತಾ?........
ಇದಕ್ಕೆ ಕಾರಣನೂ ಇದೆ. ಈ ಜೀವಕ್ಕೆ ಸಿಕ್ಕಿದ ಮಾನವೀಯ ಸಂಬಂಧ ಕೊಡ್ತಾ ಇದ್ದ ಪ್ರೀತಿ ಅಲ್ಲಿ ತನಕ ಯಾರಿಂದಲೂ ಸಿಕ್ಕಿರಲಿಲ್ಲ. ಇನ್ನೊಬ್ಬರಿಂದ ಪ್ರೀತಿಯ ಮಾತು, ಬತರ್್ ಡೇ ವಿಶಶ್, ಹುಟ್ಟಿದ ಹಬ್ಬಕ್ಕೊಂದು ಗಿಫ್ಟ್, ನಾಲ್ಕು ಪ್ರೀತಿಯ ಎಸ್ಎಮ್ಎಸ್ಗಳು ಅಲ್ಲೀ ತನಕ ಸಿಕ್ಕಿರಲಿಲ್ಲ. ಆ ಜೀವ ಹಣ, ಆಸ್ತಿಗಿಂತಲೂ ಹೆಚ್ಚಾಗಿ ಮಾನವೀಯ ಸಂಬಂಧಗಳನ್ನು ಗೌರವಿಸುತ್ತಿತ್ತು. ಆದರೆ ಸಿಕ್ಕಿದ ಮಾನವೀಯ ಪ್ರೀತಿ ಅದರಿಂದ ತುಂಬಾ..ತುಂಬಾ ಅಂದ್ರೆ ತುಂಬಾನೇ ದೂರ ಆಯ್ತು......
ಆದ್ರೆ ಆ ಜೀವದ ಭಾವನೆಗಳು ಮಾತ್ರ ಯಾರಿಗೂ ಅರ್ಥ ಆಗಲೇ ಇಲ್ಲ. ಕೆಲವರಿಗೆ ಸಂಬಂಧಗಳೇ ಅನುಮಾನಗಳಾದವು.... ಇನ್ನು ಕೆಲವರಿಗೆ ಆ ಜೀವದ ನೋವು ಕೇಳೋದೇ ಒಂದು ದೊಡ್ಡ ಟಾರ್ಚರ್ ಆಗಿ ಹೋದವು... ಇನ್ನೂ ಕೆಲವರಿಗೆ ಆ ಜೀವದ ಮಾತುಗಳೇ `ಹುಚ್ಚು ಅಂತ ಅನಿಸಿ ಬಿಡ್ತು. ಆದರೆ ಏನ್ ಮಾಡೋದು? ಇವೆಲ್ಲದರ ಪರಿಚಯ ಅಲ್ಲಿ ತನಕ ಈ ಜೀವಕ್ಕೂ ಆಗಿರಲಿಲ್ಲ. ನಗು ಅಂದ್ರೇನೇ ಏನೂ ಅಂತ ಗೊತ್ತಾಗಿದ್ದು, ಪ್ರೀತಿ, ಸ್ನೇಹ, ಬಾಂಧವ್ಯಗಳ ಪರಿಚಯ ಆಗಿದ್ದು ಅವತ್ತಿಂದಲೇ....
ಇವೆಲ್ಲಾ ನಿಜಕ್ಕೂ ಸಮಸ್ಯೆಗಳೇ ಅಲ್ಲ....ಆದ್ರೂ ಆ ಜೀವಕ್ಕೆ ಇದೇ ದೊಡ್ಡ ಸಮಸ್ಯೆ....ಕೆಲವರಿಗೆ ಕೈಯಲ್ಲಿ ಹಣ ಇಲ್ದೆ ಇದ್ರೆ ಸಮಸ್ಯೆ..ಇನ್ನು ಕೆಲವರಿಗೆ ಮನೆಯಲ್ಲಿ ಫ್ರಾಬ್ಲಂ ಅನ್ನೋ ಸಮಸ್ಯೆ...ಆದ್ರೆ ಈ ಜೀವಕ್ಕೆ ಮಾತ್ರ ಇದೆಲ್ಲಾ ಸಮಸ್ಯೆಗಳೇ ಅಲ್ಲ. ಇಂತಹ ನೂರು ಸಮಸ್ಯೆ ಬಂದ್ರೂ ನಿಭಾಯಿಸೋ ತಾಕತ್ತು ಈ ಜೀವಕ್ಕಿದೆ......
ಇರೋದು ಒಂದೇ ಒಂದು ಸಮಸ್ಯೆ.....
       `ಮಾನವೀಯ ಸಂಬಂಧ.......!
ಫ್ರೆಂಡ್ಸ್, ಈ ಸಣ್ಣ ಕಥೆ ಕೆಲವರಿಗೆ ಅರ್ಥ ಆಗಿರಬಹುದು, ಇನ್ನು ಕೆಲವರಿಗೆ ಅರ್ಥ ಆಗ್ದೇನೂ ಇರಬಹುದು. ಆದರೆ ಇದು ಸತ್ಯ. ನಾನು ಹತ್ತಿರದಿಂದ ಕಂಡ ಜೀವವೊಂದರ ನೈಜ ಯಾತನೆ........ಸಮಸ್ಯೆ ಚಿಕ್ಕದೇ, ಆದರೆ ಒಬ್ಬೊಬ್ಬರ ಮನಸ್ಥಿತಿಗೆ ಇದೂ ದೊಡ್ಡದೇ ಅಲ್ವೇ? ನೆನಪಿರಲಿ....
ಒಬ್ಬರ ಪ್ರೀತಿ, ವಿಶ್ವಾಸ, ಸ್ನೇಹ, ಮಾನವೀಯ ಸಂಬಂಧ ಗಳಿಸಿಕೊಳ್ಳೋದು ಕಷ್ಟ......ಅದಕ್ಕಿಂತಲೂ ತುಂಬಾ ಕಷ್ಟ ಇದನ್ನು ಉಳಿಸಿಕೊಳ್ಳೋದು.....
ಅಕಸ್ಮಾತ್ ಅರ್ಥ ಆದ್ರೆ, ಯಾವತ್ತೂ ಯಾರನ್ನೂ ಹೆಚ್ಚು ಇಷ್ಟ ಪಡಬೇಡಿ....ಇಷ್ಟ ಪಟ್ಟರೂ ನಿಮ್ಮದೇ ತಪ್ಪುಗಳಿಂದ ಅವರನ್ನು ಕಳೆದುಕೊಳ್ಳಬೇಡಿ.....
ಯಾಕೆಂದರೆ ಮತ್ತೆ ಇದೇ ವಿಚಾರದಲ್ಲಿ ತುಂಬಾನೇ ಫೀಲ್ ಆಗೋರು ನೀವೇ......

Monday 19 March 2012

ಬಜೆಟ್ಗಳಿಂದ ಜನಸಾಮಾನ್ಯ ಗಳಿಸಿಕೊಂಡಿದ್ದು ಏನೂ ಇಲ್ಲ!


ಬಜೆಟ್ಗಳಿಂದ ಜನಸಾಮಾನ್ಯ ಗಳಿಸಿಕೊಂಡಿದ್ದು ಏನೂ ಇಲ್ಲ!
ಮೊನ್ನೆಯಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಬಜೆಟ್ ಕೂಡ ಮಂಡ ನೆಯಾಗಲಿದೆ. ಆದರೆ ಮೊನ್ನೆಯ ಬಜೆಟ್ಗಿಂತಲೂ ಹೆಚ್ಚು ಚಚರ್ಿತವಾಗಿದ್ದು ಮಾತ್ರ ಸಚಿನ್ ಶತಕ ಎನ್ನುವುದು ವಿಪ ಯರ್ಾಸ. ದೇಶದ ಅಥರ್ಿಕ ಅಡಿಪಾಯಕ್ಕಿಂತಲೂ ತನ್ನದೇ ಜೋಳಿಗೆ ತುಂಬಿಸುವ ಸಚಿನ್ ಶತಕವೇ ನಮಗೆ ಮೇಲಾ ಯಿತು. ಹೀಗಿದ್ದರೂ ಈ ಬಜೆಟ್ಗಳಿಂದ ಜನತೆ ಗಳಿಸಿಕೊ ಳ್ಳುವುದಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ನಮ್ಮ ಆಥರ್ಿಕ ವ್ಯವಸ್ಥೆಯ ಅಡಿಪಾಯದ ಬಿಸಿ ನಮಗೆ ತಟ್ಟುವ ಮುನ್ನ ಈ ಬಗ್ಗೆ ಚಿಂತಿಸುವ ಅಗತ್ಯವಿದೆ.
ಒಂದು ವರ್ಷದ ಆಥರ್ಿಕ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡು ರಚಿಸುವ ಈ ಬಜೆಟ್ಗಳಿಂದ ಆಗುವ ಪ್ರಯೋಜನ ಮಾತ್ರ ಅಷ್ಟಕ್ಕಷ್ಟೇ. ಒಂದು ಹಂತದಲ್ಲಿ ಈ ಬಜೆಟ್ಗಳು ಸಕರ್ಾರದ ವಿತ್ತ ಖಾತೆಗೆ ಆಥರ್ಿಕ ಲೆಕ್ಕಾಚಾರ ಒದಗಿಸುವ ಕೆಲಸ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾ ಗಿದ್ದ ಯಡಿಯೂರಪ್ಪ ಮಂಡಿಸಿದ ಬಜೆಟ್ನ ಯಾವೆಲ್ಲಾ ಅಂಶಗಳು ಜಾರಿಗೆ ಬಂದಿವೆ? ರಾಜ್ಯ ಸಕರ್ಾರದ ಬೊಕ್ಕಸ ತುಂಬಿಸುವ ಕೆಲವೊಂದು ಬೆಲೆಯೇರಿಕೆಯ ವಿಚಾರಗಳಲ್ಲಿ ಮಾತ್ರ ಈ ಬಜೆಟ್ ಸಹಕಾರಿಯಾಗುತ್ತದೆ. ಅದೂ ನಮ್ಮ ಮಂತ್ರಿ ಮಾಗಧರಿಗಷ್ಟೇ. ಬೆಲೆಯೇರಿಕೆಯಿಂದ ಜನರದ್ದೇ ಹೊರೆ ಹೆಚ್ಚುವುದು ಎಂಬ ವಿಚಾರ ಸ್ಪಷ್ಟ. ಇನ್ನು ಪುಟಗ ಟ್ಟಲೇ ಸಿದ್ದಗೊಳ್ಳುವ ಬಜೆಟ್ನಲ್ಲಿ ಮಂಡಿಸಲಾಗುವ ಅಭಿವೃ ದ್ದಿಯ ಕೆಲಸಗಳು ಸರಿಯಾಗಿ ಅನುಷ್ಠಾನಕ್ಕೆ ಬರುವುದೇ ಇಲ್ಲ. ರಾಜ್ಯದ ಆಥರ್ಿಕ ಲೆಕ್ಕಾಚಾರದ ಅಡಿಪಾಯದ ಮೇಲೆ ಈ ಬಜೆಟ್ ಮಂಡನೆಯಾದರೂ ಜನರ ಆಶೋತ್ತರಗಳತ್ತ ಇಲ್ಲಿಯ ತನಕ ಬಜೆಟ್ ಗಮನ ಹರಿಸಿದ್ದೇ ಇಲ್ಲ. ಕಳೆದ ಬಾರಿ ರೈತಪರ ಸಕರ್ಾರ ಎನ್ನುವ ಬಿಜೆಪಿ ಪ್ರತ್ಯೇಕ ಕೃಷಿ ಬಜೆಟ್ ಕೂಡ ಮಂಡಿಸಿತ್ತು. ಆದರೆ ಅಂದು ಮಂಡನೆಯಾದ ಎಷ್ಟು ವಿಚಾರ ಗಳು ಇಂದು ಅನುಷ್ಠಾನಕ್ಕೆ ಬಂದಿದೆ? ಆ ಅಭಿವೃದ್ದಿ ಕೆಲಸಗಳು ಅನುಷ್ಠಾನಗೊಳ್ಳುವ ಹೊತ್ತಿಗೆ ಸಕರ್ಾರ ತನ್ನ ಆಡಳಿತವನ್ನೇ ಮುಗಿ ಸಿರುತ್ತದೆ. ನಂತರ ಬಂದ ಸಕರ್ಾರ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ಸೆಣೆಸುತ್ತದೆಯೇ ಹೊರತು ಹಿಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಿದ ವಿಚಾರಗಳ ಕಡೆಗೆ ಗಮನ ಕೇಂದ್ರೀಕರಿಸುವುದಿಲ್ಲ.
ಇನ್ನು ನಮ್ಮ ಜನತೆಗೂ ಬಜೆಟ್ ಎನ್ನುವುದು ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಟಿವಿ ಮಾಧ್ಯಮಗಳಲ್ಲಿ ಬಜೆಟ್ ವಿಚಾರಗಳು ಬಂದರೆ ಚಾನೆಲ್ ತಿರುಗಿಸುವವರೇ ಹೆಚ್ಚು. ಮರುದಿನ ಪತ್ರಿಕೆ ಗಳು ಬಜೆಟ್ ಸಂಬಂಧಿ ವಿಚಾರಗಳ ಬಗ್ಗೆ ಪುಟಗಟ್ಟಲೇ ಬರೆ ದರೂ ಆದನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನ, ತಾಳ್ಮೆ ನಮ್ಮ ಜನರಿಗಿಲ್ಲ. ಹೀಗಾಗಿ ಸಕರ್ಾರ ಎನ್ನುವ ಸ್ವಹಿತಾಸಕ್ತಿಯ ರಾಜ ಕೀಯ ನಾಯಕರು ಮಂಡಿಸುವ ಬಜೆಟ್ನಲ್ಲಿನ ಅಂಶಗಳನ್ನು ನಾವು ಅರ್ಥವಾಗದೇ ವಿರೋಧಿಸಿದರೂ ನಂತರ ಒಪ್ಪಿಕೊಂಡು ಬಿಡುತ್ತೇವೆ. ನಾವು ಒಪ್ಪಿಕೊಳ್ಳಲಿ ಬಿಡಲಿ, ಅದನ್ನು ವಿರೋಧಿಸಿ ಬಜೆಟ್ನ್ನು ಮತ್ತೆ ಮಂಡಿಸುವಂತೆ ಮಾಡುವ ಕೆಲಸ ಮಾತ್ರ ನಮ್ಮಿಂದ ಸಾಧ್ಯವಿಲ್ಲ. ಬಂಗಾರದ ಮೇಲಿನ ತೆರಿಗೆ ಹೆಚ್ಚಳಕ್ಕೆ ಚಿನ್ನದ ವ್ಯಾಪಾರಿಗಳು ಪ್ರತಿಭಟಿಸಬಹುದು, ಕೆಲವೊಂದು    ವ್ಯಾಪಾರಿಗಳು ತಮಗೆ ಸಂಬಂಧಿಸಿದ ವಹಿವಾಟಿನ ಸುಂಕ ಹೆಚ್ಚ ಳಕ್ಕೆ ಒಂದೆರೆಡು ದಿನ ಹರತಾಳ ಮಾಡಬಹುದು. ಆದರೆ ಇದು ಕೇವಲ ಒಂದೆರೆಡು ದಿನವಷ್ಟೇ. ಮುಂದಿನದ್ದು ನಮ್ಮ(?) ಸಕರ್ಾ ರಕ್ಕೆ ಬಿಟ್ಟಿದ್ದು. ಜನರು ಸಕರ್ಾರದ ನೀತಿಯನ್ನು ವಿರೋಧಿಸಿ ದಾಗ ಎಷ್ಟು ಬಾರಿ ಸಕರ್ಾರ ತನ್ನ ನಿಲುವನ್ನು ಬದಲಿಸಿದೆ?
ಇನ್ನು ನಮ್ಮ ಜನರನ್ನೇ ತೆಗೆದುಕೊಳ್ಳಿ. ಕೇಂದ್ರ ಬಜೆಟ್ ಗಿಂತಲೂ ನಮಗೆ ಸಚಿನ್ ತೆಂಡೂಲ್ಕರ್ ಶತಕವೇ ಮೇಲೂ! ನಮ್ಮ ಸಮಾಜವೇ ದೇಶದ ಅಥರ್ಿಕತೆಯ ಬಗ್ಗೆ ಚಿಂತಿಸುವು ದಿಲ್ಲ ಎನ್ನುವಾಗ ನಾವೇ ಆರಿಸಿ ಕಳುಹಿಸಿದ ಜನನಾಯಕರ ಸ್ವಹಿತಾಸಕ್ತಿಯ ಬಜೆಟ್ನ್ನು ನಾವು ಒಪ್ಪಲೇ ಬೇಕಾಲ್ಲವೇ? ಬೆಲೆ ಯೇರಿಕೆಯಾಯಿತು, ಬಜೆಟ್ ಜನವಿರೋಧಿ ಎಂದು ಬೀದಿಗಿ ಳಿಯುವ ಎಡಪಂಥಿಯರದ್ದೂ ಸ್ವಹಿತಾಸಕ್ತಿ ಎನ್ನುವುದು ನೆನ ಪಿರಲಿ. ನಮಗೆಲ್ಲಾ ಗೊತ್ತಿರುವುದು ಬೆಲೆಯೇರಿಕೆಯ ಬಿಸಿ ಮುಟ್ಟಿ ಸುವ ಸಣ್ಣ ಅಂಗಡಿಯವನಲ್ಲಿ ಕಿತ್ತಾಡುವುದೇ ಹೊರತು ಇದ ಕ್ಕೆಲ್ಲಾ ಕಾರಣವಾಗುವ ನಮ್ಮ ಸಕರ್ಾರದ ಪ್ರತಿನಿಧಿಗಳಲ್ಲಲ್ಲ.    ಹೀಗಾಗಿಯೋ ಏನೋ ನಾವು ಸಚಿನ್ ಶತಕದ ಬಗ್ಗೆಯೇ ಹೆಚ್ಚು ಚಿಂತಿತರಾಗಿದ್ದು.  

Saturday 17 March 2012

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?
ಹೌದು, ಮನುಷ್ಯ ತುಂಬಾನೇ ಭಾವನಾತ್ಮಕ ಜೀವಿ ಅನ್ನುತ್ತಾರೆ ಕೆಲವರು. ಹೀಗೆನ್ನುವವರು ಕೂಡ ಮನುಷ್ಯರೇ. ಆದರೂ ಎಲ್ಲೋ ಕೆಲವೊಮ್ಮೆ ಮನುಷ್ಯನ ಭಾವನೆಗಳ ಸಂಬಂಧ ಹಳಿ ತಪ್ಪಿ ಬಿಡುತ್ತದೆ. ಸಂಬಂಧಗಳು ಇಷ್ಟ, ಕಷ್ಟಗಳ ಮಧ್ಯೆ ಸಿಲುಕಿ ಪುಟ್ಟ ಮನಸ್ಸಿಗೆ ನೋವು ಕೊಡುತ್ತದೆ. ಎಲ್ಲೋ ಒಂದೆರೆಡು ಜೀವಗಳು ಭಾವನೆಗಳನ್ನೇ ಜೀವನವನ್ನಾಗಿಸಲು ಹೋದರೆ ಸಮಾಜದ ಕೆಟ್ಟ ದೃಷ್ಟಿ ಕೋನ ಇಡೀ ಜೀವನವನ್ನೇ ಹಾಳು ಮಾಡಿದ್ದೂ ಇದೆ. ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟಿಗ ಶತಕಗಳ ಶತಕ ಹೊಡೆದಾಗ ಇಡೀ ದೇಶವೇ ಆತನ ಸಾಧನೆಗೆ ಸ್ಪಂದಿಸಿತು. ಕ್ರಿಕೆಟ್ ದೇವರಿಗೆ ಇನ್ನಿಲ್ಲದಂತೆ ಶುಭ ಕೋರಿತು. ಆದರೆ ನಮ್ಮಲ್ಲೇ ಇರುವ ಕೆಲ ಸಣ್ಣ ಪುಟ್ಟ ಸಾಧಕರುಗಳಿಗೆ ಇಂತಹ ಸ್ಪಂದನೆಗಳೇ ಸಿಗುತ್ತಿಲ್ಲ. ಭಾವನಾತ್ಮಕ ಜೀವಿ, ತೀರಾ ಸೆನ್ಸಿಟಿವ್ ಎನ್ನಬಹುದಾದ ಹೃದಯಗಳು ಪ್ರೀತಿ, ವಿಶ್ವಾಸ, ಮಾನವೀಯ ಸಂಬಂಧಗಳನ್ನು ಗಳಿಸಿಕೊಳ್ಳಲು ಹಾತೊರೆಯುತ್ತಿರುತ್ತವೆ. ಆದರೆ ತನ್ನದೇ ಕೆಲವೊಂದು ತಪ್ಪುಗಳು ಕೈ ಸೇರಿದ ಮಾನವೀಯ ಸಂಬಂಧಗಳನ್ನು ಕೂಡ ಬ್ರೇಕ್ ಮಾಡುತ್ತದೆ.  ಕೆಲವೊಂದು ಸಂಬಂಧಗಳೇ ಹಾಗೆ, ಅವುಗಳಿಗೆ ಜಾತಿ ಧರ್ಮದ ಹಂಗಿರುವುದಿಲ್ಲ.  ಕಟ್ಟರ್ ಸ್ವಧರ್ಮ ಹಿಂಬಾಲಕರೇ ಆಗಿದ್ದರೂ ನಮ್ಮ ಪಕ್ಕದ ಮನೆಯ ಪರಧಮರ್ೀಯರನ್ನು ಪ್ರೀತಿಯಿಂದ ಕಾಣುತ್ತೇವೆ, ಅವರೊಂದಿಗೆ ಬಿಡಿಸಲಾರದ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತೇವೆ. ಅಷ್ಟೇ ಯಾಕೆ ನಮ್ಮ ಜೊತೆ ಕೆಲಸ ಮಾಡುವ, ಕಲಿಯುವ ಯಾರೇ ಆಗಲಿ ನಮಗೆ ತುಂಬಾ ಹತ್ತಿರವಾದವರು ಯಾವ ಧರ್ಮದವರೇ ಆದರೂ ನಮ್ಮ ಸ್ವಧರ್ಮ ಸಂಬಂಧಕ್ಕೆ ಅಡ್ಡಿ ಬರುವುದಿಲ್ಲ. ನಮಗೆ ಸಿಗದ ವಸ್ತುಗಳನ್ನು ಯಾರು ಕೊಡುತ್ತಾರೋ ಅವರು ಮನುಷ್ಯನಿಗೆ ತುಂಬಾ ಹತ್ತಿರವಾಗುತ್ತಾರೆ. ಅದಕ್ಕೆ ಹೇಳಿದ್ದು, ಮನುಷ್ಯ ತುಂಬಾ ಭಾವನಾತ್ಮಕ ಜೀವಿ ಅಂತ. ಎಲ್ಲೋ ಒಂದೆರೆಡು ಸಲ ಆತ ಕೋಪಿಷ್ಟನಾಗಿ ವತರ್ಿಸಬಹುದು. ಆದರೆ ವರ್ತನೆಯನ್ನು ಕ್ಷಣಾರ್ಧದಲ್ಲೇ ತಿದ್ದುವವನು ಇದೇ ಭಾವ ಜೀವಿ! ನೆನಪಿರಲಿ ಪ್ರತೀ ವ್ಯಕ್ತಿಯ ವರ್ತನೆ ವಿಭಿನ್ನವಾಗಿರಬಹುದು. ಆದರೆ ಪ್ರೀತಿ, ವಿಶ್ವಾಸ, ಸಂಬಂಧ, ಮಾನವೀಯ ಮೌಲ್ಯಗಳ ಸರದಿ ಬಂದಾಗ ಎಂಥವರೂ ಒಂದು ಕ್ಷಣ ಯೋಚಿಸುತ್ತಾರೆ. ಇಷ್ಟೆಲ್ಲಾ ಹೇಳಿದ್ದು ಜಾತಿ ಸಂಘರ್ಷದ `ಮಯರ್ಾದ ಹತ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು.......!
ನಾಳೆ ಭಾನುವಾರ,
ವಾರದ ಬಿಡುವಿನ ದಿನದಲ್ಲಾದರೂ ಕಳೆದುಕೊಂಡ ಮಾನವೀಯ ಸಂಬಂಧಕ್ಕೆ ಒಂದು ಸಣ್ಣ ಫೋನಾಯಿಸಿ ಮಾತನಾಡಿ..... ಜಸ್ಟ್ ಮನಸ್ಸು ರಿಲೀಫ್ ಆದರೂ ಆಗಬಹುದು.
 

Thursday 15 March 2012

ಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ `ಆನ್ಲೈನ್ ಶಾಪಿಂಗ್



ಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ
`ಆನ್ಲೈನ್ ಶಾಪಿಂಗ್
ಇದು ಕಂಪ್ಯೂಟರ್ ಯುಗ. ಇಲ್ಲಿ ಎಲ್ಲವೂ ಅಂತಜರ್ಾಲದ ಬಳಕೆಯ ಮೇಲೆ ನಿಂತಿದೆ. ಸಾವಿರಾರು ಮೈಲಿ ಪ್ರಯಾಣಿಸಿಕೊಂಡು ಮಾಡುತ್ತಿದ್ದ ಕೆಲಸ ಇಂದು ಕೆಲವೇ ಸೆಕೆಂಡ್ಗಳಲ್ಲಿ ಮುಗಿಯುತ್ತದೆ. ಮನುಷ್ಯ ಬದುಕನ್ನು ಮತ್ತಷ್ಟು ಸುಲಭವಾಗಿಸುವಲ್ಲಿ ತಾಂತ್ರಿಕತೆಯ ಸಾಧನೆ ನಿಜಕ್ಕೂ ಅಧ್ಬುತ. ಮನುಷ್ಯನ ಬುದ್ದಿಮತ್ತೆ ಬೆಳೆಯುತ್ತಾ ಹೋದಂತೆ ತಾಂತ್ರಿಕತೆಗೆ ಸವಾಲು ಎಸೆಯಲು ಆತ ಸನ್ನದ್ದನಾದ. ಮನುಷ್ಯ ಮಾಡುವ ಪ್ರತೀ ಕೆಲಸವನ್ನು ತಂತ್ರಜ್ಞಾನದ ಕೈಗೆ ಕೊಟ್ಟು ಥಟ್ ಅಂತ ಮುಗಿಸಿ ಬಿಟ್ಟ. ಎಲ್ಲೆಲ್ಲಾ ತಾಂತಿಕತೆಯ ಸ್ಪರ್ಶ ನೀಡಲು ಸಾಧ್ಯವೋ ಅಲ್ಲೆಲ್ಲಾ ಟೆಕ್ನೋಲಜಿಯೆಂಬ ಧೈತ್ಯ ಭೂತ ಕಾಲಿಟ್ಟಿತು. ಒಬ್ಬರೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುವುದರಿಂದ ಹಿಡಿದು, ಜಗತ್ತಿನ ಮೂಲೆ ಮೂಲೆಯ ವಿಚಾರಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ತಿಳಿಯುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದು ನಿಂತಿತು. ಇದೇ ತಾಂತ್ರಿಕತೆಯ ಬುನಾದಿಯ ಮೇಲೆ ವ್ಯಾವಹಾರಿಕ ಕ್ಷೇತ್ರದ ಲ್ಲೊಂದು ಅಧ್ಬುತ ಎನಿಸುವಂತಹ ವ್ಯವಹಾರವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವ್ಯವಹಾರವನ್ನು ಆಂಗ್ಲ ಭಾಷೆಯಲ್ಲಿ `ಆನ್ಲೈನ್ ಶಾಪಿಂಗ್ ಎನ್ನುತ್ತಾರೆ. ಬಹುಶಃ ಈ ಬಗ್ಗೆ ಅಷ್ಟಾಗಿ ಸಾಮಾನ್ಯ ಜನರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದಲ್ಲಿ ಈ ವಿನೂತನ ಶಾಪಿಂಗ್ ಪದ್ದತಿ ಇನ್ನೂ ಅಷ್ಟಾಗಿ ಕ್ರಾಂತಿ ಮಾಡಿಲ್ಲ. ಆದರೆ ಮುಂದಿನ ಎರಡು ವರ್ಷಗಳಲ್ಲಿ ದೇಶದ ಶಾಪಿಂಗ್ ಕ್ಷೇತ್ರವನ್ನೇ ಹುಟ್ಟಡಗಿಸುವ ಸಾಮಥ್ರ್ಯ ಇದಕ್ಕಿದೆ ಎಂದರೆ ನೀವು ನಂಬಲೇ ಬೇಕು!
ಸರಿ ಸುಮಾರು ವರ್ಷಗಳ ಹಿಂದೆ ಅಗತ್ಯ ವಸ್ತುಗಳಿಗಾಗಿ ಮನೆಯ ಪಕ್ಕದ ಸಣ್ಣ ಸಣ್ಣ ಅಂಗಡಿಗಳನ್ನು ಅವಲಂಭಿಸುತ್ತಿದ್ದೆವು. ಒಂದು ಸಣ್ಣ ಟೇಪ್ ರೆಕಾರ್ಡರ್ ಖರೀದಿಸಲು ನಗರವನ್ನೆಲ್ಲಾ ರೌಂಡ್ ಹೊಡೆಯಬೇಕಾದ ಕಾಲವದು. ನಂತರ ಸ್ವಲ್ಪ ಪ್ರಗತಿ ಹೊಂದುತ್ತಾ ಹೋದಂತೆ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಆ ಕಾಲದಲ್ಲಿ ಮೊಬೈಲ್ ಇದ್ದವನು ಬಾಸ್ ಎನ್ನುವಷ್ಟರ ಮಟ್ಟಿಗೆ ಇದರ ಕ್ರೇಜ್ ಆರಂಭವಾ ಯಿತು. ತಾಂತ್ರಿಕತೆ ಬೆಳೆಯಿತು. ತಂತ್ರಜ್ಞಾನದ ಹಲವಾರು ಆವಿಷ್ಕಾರಗಳು ವ್ಯಾವಹಾರಿಕ ಮಾರುಕಟ್ಟೆಯನ್ನು ಪ್ರವೇಶಿಸಿದವು. ಜನರೂ ಈ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು! ಪರಿಣಾಮ ಜಗತ್ತಿನಾದ್ಯಂತ ತಾಂತ್ರಿಕ ಸಲಕರಣೆಗಳ ಬೃಹತ್ ಮಾರಾಟ ಮಳಿಗೆಗಳು ತಲೆಯೆತ್ತಿದವು. ತಾಂತ್ರಿಕತೆಯ ಪ್ರಯೋಗಳಿಗೆ ಜನ ಮುಗಿಬಿದ್ದ ಪರಿಣಾಮ ದಿನನಿತ್ಯ ಮಿಲಿಯನ್ ಗಟ್ಟಲೇ ವಹಿವಾಟು ಜಾಗತಿಕ ಮಾರುಕಟ್ಟೆಯಲ್ಲಿ ದಾಖಲಾಯಿತು. ಈ ಮೂಲಕ ತಾಂತ್ರಿಕತೆಯೇ ಜಗತ್ತನ್ನು ಆವರಿಸಿತು. ಜನಸಾಮಾನ್ಯರು ಇದರಿಂದ ಸಂತೃಪ್ತರಾದರು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಬೃಹತ್ ಮಳಿಗೆಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ಖರೀದಿಸುವುದರಲ್ಲೂ ಮನುಷ್ಯ ಉದಾಸೀನ ತೋರಿದ. ಹಾಗಾಗಿ ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತು. ಈ ವೇಳೆ ಜನರ ಉದಾಸೀನತೆಯ ಲಾಭ ಪಡೆದ ಅತೀ ಬುದ್ದಿವಂತರಿಂದ ಆರಂಭವಾದ ಶಾಪಿಂಗ್ ಕ್ರಾಂತಿಯೇ `ಆನ್ಲೈನ್ ಶಾಪಿಂಗ್. 90ರ ದಶಕದಲ್ಲೇ ಈ ಅನ್ಲೈನ್ ಶಾಪಿಂಗ್ನ ಆಲೋಚನೆಗಳು ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಹುಟ್ಟತೊಡಗಿದ್ದವು. ಆದರೆ ಈ ವಿಧಾನ ಆ ಕಾಲದಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನಾದ್ಯಂತ ಈ ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಪ್ರಗತಿಯತ್ತ ದಾಪುಗಾಲಿಡುತ್ತಿದೆ.
ಆನ್ಲೈನ್ ಶಾಪಿಂಗ್ ಹುಟ್ಟಿಕೊಂಡದ್ದು ಹೇಗೆ?
1995ರ ವೇಳೆಗೆ ತಾಂತ್ರಿಕತೆ ತಕ್ಕಮಟ್ಟಿಗೆ ಬೆಳೆದಿದ್ದ ಕಾರಣ ಇದೇ ವರ್ಷ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಆದರೆ ಇದು ಆನ್ಲೈನ್ ವ್ಯವಹಾರ ಆರಂಭಿಸಿದ್ದು ಮಾತ್ರ 1996ರ ವೇಳೆಗೆ. ಮೊಟ್ಟ ಮೊದಲನೆಯದಾಗಿ ಪುಸ್ತಕ ಮಾರಾಟವನ್ನು ಆನ್ಲೈನ್ ಶಾಪಿಂಗ್ನಲ್ಲಿ ಆರಂಭಿಸಿದ ಅಮೆಜಾನ್ ಕಂಪೆನಿ ತದನಂತರ ತಾಂತ್ರಿಕತೆಯ ಎಲ್ಲಾ ಸಲಕರಣೆಗಳನ್ನು ಅಂತಜರ್ಾಲದ ಮೂಲಕ ಮಾರಾಟಕ್ಕಿಟ್ಟಿತು. ಅಮೇರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರೆದ ರಾಷ್ಟ್ರಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. 2010ರ ವೇಳೆಗೆ 1.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್ಲೈನ್ ವ್ಯವಹಾರ ಸಂಸ್ಥೆಯಾಗಿ ಅಮೆಜಾನ್ ಗುರುತಿಸಿಕೊಂಡಿದೆ. ನಂತರ ಇದರ ಯಶಸ್ಸನ್ನು ಗಮನಿಸಿದ ಅನೇಕ ಕಂಪೆನಿಗಳು ಈ ಕೆಲಸಕ್ಕೆ ಕೈಹಾಕಿದವು. ಪರಿಣಾಮವಾಗಿ ಅಮೆಜಾನ್ ಸ್ಥಾಪನೆಯಾದ ಎರಡು ವರ್ಷಗಳ ನಂತರ ಇಬೇ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಧರ್ೆಗಿಳಿಯಿತು. ಆದರೆ ಅಮೆಜಾನ್ ಹುಟ್ಟುಹಾಕಿದ್ದ ಕ್ರಾಂತಿಯ ಮುಂದೆ ಇಬೇ ಅಷ್ಟಾಗಿ ಸದ್ದು ಮಾಡುವಲ್ಲಿ ವಿಫಲವಾಯಿತು. ಮುಂದೆ ಅನೇಕ ಅನ್ಲೈನ್ ಶಾಪಿಂಗ್ ಕಂಪೆನಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಇ-ಶಾಪಿಂಗ್ ನೂತನ ಅದ್ಯಾಯ ಬರೆಯಿತು. ಜಾಗತಿಕವಾಗಿ ಇಷ್ಟೆಲ್ಲಾ ಸಂಚಲನವಾಗಿದ್ದರೂ ಭಾರತದಲ್ಲಿ ಮಾತ್ರ ಈ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈ ವೇಳೆ ಅಮೆಜಾನ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಎಂಬ ಇಬ್ಬರು ಗೆಳೆಯರು ಫ್ಲಿಪ್ಕಾಟರ್್ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಗೆ 2007ರಲ್ಲಿ ಮುನ್ನುಡಿ ಬರೆದರು. ಮೊದಲಾಗಿ ಪುಸ್ತಕ ಮಾರಾಟಕ್ಕಿಳಿದ ಈ ಸಂಸ್ಥೆಯ ಆದಾಯ 2010-11ರ ಸಾಲಿಗೆ 75ಕೋಟಿ ರುಪಾಯಿಗೇರಿತು. ನಂತರ ಮೊಬೈಲ್, ಕಂಪ್ಯೂಟರ್, ಸೇರಿದಂತೆ ಅನೇಕ ವಸ್ತುಗಳ ಮಾರಾಟವನ್ನು ಆರಂಭಿಸಿತು. ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಅತೀ ದೊಡ್ಡ ಅನ್ಲೈನ್ ಶಾಪಿಂಗ್ ತಾಣವಾಗಿದೆ. ಈ ಮೂಲಕ ಭಾರತದಲ್ಲಿ ಈ ಸಂಸ್ಥೆ ನೂತನ ಶಾಪಿಂಗ್ ಶಕೆ ಆರಂಭಿಸುವತ್ತ ಹೆಜ್ಜೆ ಇಟ್ಟಿದೆ.
ಏನಿದು ಆನ್ಲೈನ್ ಶಾಪಿಂಗ್?
ಈ ಆನ್ಲೈನ್ ಶಾಪಿಂಗ್ ನಡೆಸಲು ತಕ್ಕ ಮಟ್ಟಿನ ಕಂಪ್ಯೂಟರ್ ಜ್ಞಾನವಿರಬೇಕು. ಅಂತಜರ್ಾಲದ ನೆರವಿನಿಂದ ದೇಶಾದ್ಯಂತ ಇರುವ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ವಿಳಾಸವನ್ನು ಕ್ಲಿಕ್ಕಿಸಿದರೆ ಕೂತಲ್ಲಿಯೇ ಅಧ್ಬುತ ವ್ಯವಹಾರ ಜಗತ್ತೊಂದು ತೆರೆದುಕೊಳ್ಳು ತ್ತದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿ ನಾವು ವಸ್ತುಗಳನ್ನು ಆಯ್ದುಕೊಳ್ಳಬಹುದು. ಪ್ರತಿಯೊಂದು ವಸ್ತುಗಳ ಮೌಲ್ಯವೂ ಆ ವಸ್ತುಗಳ ಸಂಪೂರ್ಣ ಮಾಹಿತಿಯೊಂದಿಗೆ ನಮಗೆ ಸಿಗುತ್ತದೆ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಇಡೀ ಮಾಲ್ ಸುತ್ತು ಹಾಕಿ ಖರೀದಿಸುವ ಬದಲು ಇಲ್ಲಿ ಕೂತಲ್ಲಿಯೇ ನಮಗೆ ಬೇಕಾದಷ್ಟು ಶಾಪಿಂಗ್ ನಡೆಸಬಹುದು. ನಮ್ಮ ಶಾಪಿಂಗ್ ಮುಗಿದ ಮೇಲೆ ಅಂತಿಮವಾಗಿ ನಾವು ಖರೀದಿಸಿ ವಸ್ತುಗಳ ಒಟ್ಟು ಮೊತ್ತವನ್ನು ತಿಳಿಸಲಾಗುತ್ತದೆ. ಈ ವೇಳೆ ಆ ಮೊತ್ತವನ್ನು ಪಾವತಿಸಲು ಕೂಡ ಅನೇಕ ವಿಧದ ಸೌಲಭ್ಯಗಳಿವೆ. ಇದರಲ್ಲಿ ಡೆಬಿಟ್ಕಾಡರ್್ಗಳ ಮೂಲಕ ಹಣ ಪಾವತಿ ವ್ಯವಸ್ಥೆಯು ಮೊದಲಿಗೆ ಚಾಲ್ತಿಗೆ ಬಂತು. ಇಲ್ಲಿ ಕಾಡರ್್ ಬಳಸಿ ಕೂತಲ್ಲಿಂದಲೇ ಹಣ ಪಾವತಿ ಮಾಡಬಹುದು. ಇದನ್ನು ಪ್ರೀಪೇಯ್ಡ್ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆಗೆ ಜನರು ಹೆಚ್ಚು ಸ್ಪಂದಿಸದ ಕಾರಣ ಕ್ಯಾಶ್ ಆನ್ ಡೆಲಿವರಿ ಎಂಬ ವಿನೂತನ ವಿಧಾನವನ್ನು ಪರಿಚಯಿಸಲಾಯಿತು. ಈ ವ್ಯವಸ್ಥೆಯು ಜನಸ್ನೇಹಿಯಾಗಿದ್ದು, ಖರೀದಿಸಿದ ವಸ್ತುಗಳು ನಮ್ಮ ಕೈಸೇರಿದ ಮೇಲೆಯೇ ಹಣ ಪಾವತಿ ಮಾಡಬಹುದಾಗಿದೆ. ಇಂದು ಹೆಚ್ಚಿನ ಆನ್ಲೈನ್ ಶಾಪಿಂಗ್ ಪಾವತಿ ವಿಧಾನವು ಈ ಮೂಲಕವೇ ನಡೆಯುತ್ತಿದೆ. ಈ ವಿಧಾನದಿಂದಾಗಿ ಆನ್ಲೈನ್ ಶಾಪಿಂಗ್ ವ್ಯವಸ್ಥೆ ಇನ್ನಷ್ಟು ಅಭಿವೃದ್ದಿಯಾಯಿತು. ಉಳಿದಂತೆ ಕಾಡರ್್ ಸ್ವೈಪ್, ಮನಿ ಆರ್ಡರ್ ಮುಂತಾದ ಪಾವತಿ ವಿಧಾನಗಳು ಚಾಲ್ತಿಯಲ್ಲಿವೆ.
ಆನ್ಲೈನ್ ಶಾಪಿಂಗ್ನ ಅನುಕೂಲತೆಗಳು
ಈ ವಿಧಾನ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದಾಗ ಜನರಿಗೆ ಇದರ ಕಾರ್ಯವಿಧಾನದ ಬಗ್ಗೆ ಅಷ್ಟಾಗಿ ನಂಬಿಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ
`ಆನ್ಲೈನ್ ಶಾಪಿಂಗ್
ಇದು ಕಂಪ್ಯೂಟರ್ ಯುಗ. ಇಲ್ಲಿ ಎಲ್ಲವೂ ಅಂತಜರ್ಾಲದ ಬಳಕೆಯ ಮೇಲೆ ನಿಂತಿದೆ. ಸಾವಿರಾರು ಮೈಲಿ ಪ್ರಯಾಣಿಸಿಕೊಂಡು ಮಾಡುತ್ತಿದ್ದ ಕೆಲಸ ಇಂದು ಕೆಲವೇ ಸೆಕೆಂಡ್ಗಳಲ್ಲಿ ಮುಗಿಯುತ್ತದೆ. ಮನುಷ್ಯ ಬದುಕನ್ನು ಮತ್ತಷ್ಟು ಸುಲಭವಾಗಿಸುವಲ್ಲಿ ತಾಂತ್ರಿಕತೆಯ ಸಾಧನೆ ನಿಜಕ್ಕೂ ಅಧ್ಬುತ. ಮನುಷ್ಯನ ಬುದ್ದಿಮತ್ತೆ ಬೆಳೆಯುತ್ತಾ ಹೋದಂತೆ ತಾಂತ್ರಿಕತೆಗೆ ಸವಾಲು ಎಸೆಯಲು ಆತ ಸನ್ನದ್ದನಾದ. ಮನುಷ್ಯ ಮಾಡುವ ಪ್ರತೀ ಕೆಲಸವನ್ನು ತಂತ್ರಜ್ಞಾನದ ಕೈಗೆ ಕೊಟ್ಟು ಥಟ್ ಅಂತ ಮುಗಿಸಿ ಬಿಟ್ಟ. ಎಲ್ಲೆಲ್ಲಾ ತಾಂತಿಕತೆಯ ಸ್ಪರ್ಶ ನೀಡಲು ಸಾಧ್ಯವೋ ಅಲ್ಲೆಲ್ಲಾ ಟೆಕ್ನೋಲಜಿಯೆಂಬ ಧೈತ್ಯ ಭೂತ ಕಾಲಿಟ್ಟಿತು. ಒಬ್ಬರೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುವುದರಿಂದ ಹಿಡಿದು, ಜಗತ್ತಿನ ಮೂಲೆ ಮೂಲೆಯ ವಿಚಾರಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ತಿಳಿಯುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದು ನಿಂತಿತು. ಇದೇ ತಾಂತ್ರಿಕತೆಯ ಬುನಾದಿಯ ಮೇಲೆ ವ್ಯಾವಹಾರಿಕ ಕ್ಷೇತ್ರದ ಲ್ಲೊಂದು ಅಧ್ಬುತ ಎನಿಸುವಂತಹ ವ್ಯವಹಾರವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವ್ಯವಹಾರವನ್ನು ಆಂಗ್ಲ ಭಾಷೆಯಲ್ಲಿ `ಆನ್ಲೈನ್ ಶಾಪಿಂಗ್ ಎನ್ನುತ್ತಾರೆ. ಬಹುಶಃ ಈ ಬಗ್ಗೆ ಅಷ್ಟಾಗಿ ಸಾಮಾನ್ಯ ಜನರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದಲ್ಲಿ ಈ ವಿನೂತನ ಶಾಪಿಂಗ್ ಪದ್ದತಿ ಇನ್ನೂ ಅಷ್ಟಾಗಿ ಕ್ರಾಂತಿ ಮಾಡಿಲ್ಲ. ಆದರೆ ಮುಂದಿನ ಎರಡು ವರ್ಷಗಳಲ್ಲಿ ದೇಶದ ಶಾಪಿಂಗ್ ಕ್ಷೇತ್ರವನ್ನೇ ಹುಟ್ಟಡಗಿಸುವ ಸಾಮಥ್ರ್ಯ ಇದಕ್ಕಿದೆ ಎಂದರೆ ನೀವು ನಂಬಲೇ ಬೇಕು!
ಸರಿ ಸುಮಾರು ವರ್ಷಗಳ ಹಿಂದೆ ಅಗತ್ಯ ವಸ್ತುಗಳಿಗಾಗಿ ಮನೆಯ ಪಕ್ಕದ ಸಣ್ಣ ಸಣ್ಣ ಅಂಗಡಿಗಳನ್ನು ಅವಲಂಭಿಸುತ್ತಿದ್ದೆವು. ಒಂದು ಸಣ್ಣ ಟೇಪ್ ರೆಕಾರ್ಡರ್ ಖರೀದಿಸಲು ನಗರವನ್ನೆಲ್ಲಾ ರೌಂಡ್ ಹೊಡೆಯಬೇಕಾದ ಕಾಲವದು. ನಂತರ ಸ್ವಲ್ಪ ಪ್ರಗತಿ ಹೊಂದುತ್ತಾ ಹೋದಂತೆ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಆ ಕಾಲದಲ್ಲಿ ಮೊಬೈಲ್ ಇದ್ದವನು ಬಾಸ್ ಎನ್ನುವಷ್ಟರ ಮಟ್ಟಿಗೆ ಇದರ ಕ್ರೇಜ್ ಆರಂಭವಾ ಯಿತು. ತಾಂತ್ರಿಕತೆ ಬೆಳೆಯಿತು. ತಂತ್ರಜ್ಞಾನದ ಹಲವಾರು ಆವಿಷ್ಕಾರಗಳು ವ್ಯಾವಹಾರಿಕ ಮಾರುಕಟ್ಟೆಯನ್ನು ಪ್ರವೇಶಿಸಿದವು. ಜನರೂ ಈ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು! ಪರಿಣಾಮ ಜಗತ್ತಿನಾದ್ಯಂತ ತಾಂತ್ರಿಕ ಸಲಕರಣೆಗಳ ಬೃಹತ್ ಮಾರಾಟ ಮಳಿಗೆಗಳು ತಲೆಯೆತ್ತಿದವು. ತಾಂತ್ರಿಕತೆಯ ಪ್ರಯೋಗಳಿಗೆ ಜನ ಮುಗಿಬಿದ್ದ ಪರಿಣಾಮ ದಿನನಿತ್ಯ ಮಿಲಿಯನ್ ಗಟ್ಟಲೇ ವಹಿವಾಟು ಜಾಗತಿಕ ಮಾರುಕಟ್ಟೆಯಲ್ಲಿ ದಾಖಲಾಯಿತು. ಈ ಮೂಲಕ ತಾಂತ್ರಿಕತೆಯೇ ಜಗತ್ತನ್ನು ಆವರಿಸಿತು. ಜನಸಾಮಾನ್ಯರು ಇದರಿಂದ ಸಂತೃಪ್ತರಾದರು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಬೃಹತ್ ಮಳಿಗೆಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ಖರೀದಿಸುವುದರಲ್ಲೂ ಮನುಷ್ಯ ಉದಾಸೀನ ತೋರಿದ. ಹಾಗಾಗಿ  ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತು. ಈ ವೇಳೆ ಜನರ ಉದಾಸೀನತೆಯ ಲಾಭ ಪಡೆದ ಅತೀ ಬುದ್ದಿವಂತರಿಂದ ಆರಂಭವಾದ ಶಾಪಿಂಗ್ ಕ್ರಾಂತಿಯೇ `ಆನ್ಲೈನ್ ಶಾಪಿಂಗ್. 90ರ ದಶಕದಲ್ಲೇ ಈ ಅನ್ಲೈನ್ ಶಾಪಿಂಗ್ನ ಆಲೋಚನೆಗಳು ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಹುಟ್ಟತೊಡಗಿದ್ದವು. ಆದರೆ ಈ ವಿಧಾನ ಆ ಕಾಲದಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನಾದ್ಯಂತ ಈ ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಪ್ರಗತಿಯತ್ತ ದಾಪುಗಾಲಿಡುತ್ತಿದೆ.
ಆನ್ಲೈನ್ ಶಾಪಿಂಗ್ ಹುಟ್ಟಿಕೊಂಡದ್ದು ಹೇಗೆ?
1995ರ ವೇಳೆಗೆ ತಾಂತ್ರಿಕತೆ ತಕ್ಕಮಟ್ಟಿಗೆ ಬೆಳೆದಿದ್ದ ಕಾರಣ ಇದೇ ವರ್ಷ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಆದರೆ ಇದು ಆನ್ಲೈನ್ ವ್ಯವಹಾರ ಆರಂಭಿಸಿದ್ದು ಮಾತ್ರ 1996ರ ವೇಳೆಗೆ. ಮೊಟ್ಟ ಮೊದಲನೆಯದಾಗಿ ಪುಸ್ತಕ ಮಾರಾಟವನ್ನು ಆನ್ಲೈನ್ ಶಾಪಿಂಗ್ನಲ್ಲಿ ಆರಂಭಿಸಿದ ಅಮೆಜಾನ್ ಕಂಪೆನಿ ತದನಂತರ ತಾಂತ್ರಿಕತೆಯ ಎಲ್ಲಾ ಸಲಕರಣೆಗಳನ್ನು ಅಂತಜರ್ಾಲದ ಮೂಲಕ ಮಾರಾಟಕ್ಕಿಟ್ಟಿತು. ಅಮೇರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರೆದ ರಾಷ್ಟ್ರಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. 2010ರ ವೇಳೆಗೆ 1.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ  ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್ಲೈನ್ ವ್ಯವಹಾರ ಸಂಸ್ಥೆಯಾಗಿ ಅಮೆಜಾನ್ ಗುರುತಿಸಿಕೊಂಡಿದೆ. ನಂತರ ಇದರ ಯಶಸ್ಸನ್ನು ಗಮನಿಸಿದ ಅನೇಕ ಕಂಪೆನಿಗಳು ಈ ಕೆಲಸಕ್ಕೆ ಕೈಹಾಕಿದವು. ಪರಿಣಾಮವಾಗಿ ಅಮೆಜಾನ್ ಸ್ಥಾಪನೆಯಾದ ಎರಡು ವರ್ಷಗಳ ನಂತರ ಇಬೇ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಧರ್ೆಗಿಳಿಯಿತು. ಆದರೆ ಅಮೆಜಾನ್ ಹುಟ್ಟುಹಾಕಿದ್ದ ಕ್ರಾಂತಿಯ ಮುಂದೆ ಇಬೇ ಅಷ್ಟಾಗಿ ಸದ್ದು ಮಾಡುವಲ್ಲಿ ವಿಫಲವಾಯಿತು. ಮುಂದೆ ಅನೇಕ ಅನ್ಲೈನ್ ಶಾಪಿಂಗ್ ಕಂಪೆನಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಇ-ಶಾಪಿಂಗ್ ನೂತನ ಅದ್ಯಾಯ ಬರೆಯಿತು. ಜಾಗತಿಕವಾಗಿ ಇಷ್ಟೆಲ್ಲಾ ಸಂಚಲನವಾಗಿದ್ದರೂ ಭಾರತದಲ್ಲಿ ಮಾತ್ರ ಈ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈ ವೇಳೆ ಅಮೆಜಾನ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಎಂಬ ಇಬ್ಬರು ಗೆಳೆಯರು ಫ್ಲಿಪ್ಕಾಟರ್್ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಗೆ 2007ರಲ್ಲಿ ಮುನ್ನುಡಿ ಬರೆದರು. ಮೊದಲಾಗಿ ಪುಸ್ತಕ ಮಾರಾಟಕ್ಕಿಳಿದ ಈ ಸಂಸ್ಥೆಯ ಆದಾಯ 2010-11ರ ಸಾಲಿಗೆ 75ಕೋಟಿ ರುಪಾಯಿಗೇರಿತು. ನಂತರ ಮೊಬೈಲ್, ಕಂಪ್ಯೂಟರ್, ಸೇರಿದಂತೆ ಅನೇಕ ವಸ್ತುಗಳ ಮಾರಾಟವನ್ನು ಆರಂಭಿಸಿತು. ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಅತೀ ದೊಡ್ಡ ಅನ್ಲೈನ್ ಶಾಪಿಂಗ್ ತಾಣವಾಗಿದೆ. ಈ ಮೂಲಕ ಭಾರತದಲ್ಲಿ ಈ ಸಂಸ್ಥೆ ನೂತನ ಶಾಪಿಂಗ್ ಶಕೆ ಆರಂಭಿಸುವತ್ತ ಹೆಜ್ಜೆ ಇಟ್ಟಿದೆ.
ಏನಿದು ಆನ್ಲೈನ್ ಶಾಪಿಂಗ್?
ಈ ಆನ್ಲೈನ್ ಶಾಪಿಂಗ್ ನಡೆಸಲು ತಕ್ಕ ಮಟ್ಟಿನ ಕಂಪ್ಯೂಟರ್ ಜ್ಞಾನವಿರಬೇಕು. ಅಂತಜರ್ಾಲದ ನೆರವಿನಿಂದ ದೇಶಾದ್ಯಂತ ಇರುವ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ವಿಳಾಸವನ್ನು ಕ್ಲಿಕ್ಕಿಸಿದರೆ ಕೂತಲ್ಲಿಯೇ ಅಧ್ಬುತ ವ್ಯವಹಾರ ಜಗತ್ತೊಂದು ತೆರೆದುಕೊಳ್ಳು ತ್ತದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿ ನಾವು ವಸ್ತುಗಳನ್ನು ಆಯ್ದುಕೊಳ್ಳಬಹುದು. ಪ್ರತಿಯೊಂದು ವಸ್ತುಗಳ ಮೌಲ್ಯವೂ ಆ ವಸ್ತುಗಳ ಸಂಪೂರ್ಣ ಮಾಹಿತಿಯೊಂದಿಗೆ ನಮಗೆ ಸಿಗುತ್ತದೆ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಇಡೀ ಮಾಲ್ ಸುತ್ತು ಹಾಕಿ ಖರೀದಿಸುವ ಬದಲು ಇಲ್ಲಿ ಕೂತಲ್ಲಿಯೇ ನಮಗೆ ಬೇಕಾದಷ್ಟು ಶಾಪಿಂಗ್ ನಡೆಸಬಹುದು. ನಮ್ಮ ಶಾಪಿಂಗ್ ಮುಗಿದ ಮೇಲೆ ಅಂತಿಮವಾಗಿ ನಾವು ಖರೀದಿಸಿ ವಸ್ತುಗಳ ಒಟ್ಟು ಮೊತ್ತವನ್ನು ತಿಳಿಸಲಾಗುತ್ತದೆ. ಈ ವೇಳೆ ಆ ಮೊತ್ತವನ್ನು ಪಾವತಿಸಲು ಕೂಡ ಅನೇಕ ವಿಧದ ಸೌಲಭ್ಯಗಳಿವೆ. ಇದರಲ್ಲಿ ಡೆಬಿಟ್ಕಾಡರ್್ಗಳ ಮೂಲಕ ಹಣ ಪಾವತಿ ವ್ಯವಸ್ಥೆಯು ಮೊದಲಿಗೆ ಚಾಲ್ತಿಗೆ ಬಂತು. ಇಲ್ಲಿ ಕಾಡರ್್ ಬಳಸಿ ಕೂತಲ್ಲಿಂದಲೇ ಹಣ ಪಾವತಿ ಮಾಡಬಹುದು. ಇದನ್ನು ಪ್ರೀಪೇಯ್ಡ್ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆಗೆ ಜನರು ಹೆಚ್ಚು ಸ್ಪಂದಿಸದ ಕಾರಣ ಕ್ಯಾಶ್ ಆನ್ ಡೆಲಿವರಿ ಎಂಬ ವಿನೂತನ ವಿಧಾನವನ್ನು ಪರಿಚಯಿಸಲಾಯಿತು. ಈ ವ್ಯವಸ್ಥೆಯು ಜನಸ್ನೇಹಿಯಾಗಿದ್ದು, ಖರೀದಿಸಿದ ವಸ್ತುಗಳು ನಮ್ಮ ಕೈಸೇರಿದ ಮೇಲೆಯೇ ಹಣ ಪಾವತಿ ಮಾಡಬಹುದಾಗಿದೆ. ಇಂದು ಹೆಚ್ಚಿನ ಆನ್ಲೈನ್ ಶಾಪಿಂಗ್ ಪಾವತಿ ವಿಧಾನವು ಈ ಮೂಲಕವೇ ನಡೆಯುತ್ತಿದೆ. ಈ ವಿಧಾನದಿಂದಾಗಿ ಆನ್ಲೈನ್ ಶಾಪಿಂಗ್ ವ್ಯವಸ್ಥೆ ಇನ್ನಷ್ಟು ಅಭಿವೃದ್ದಿಯಾಯಿತು. ಉಳಿದಂತೆ ಕಾಡರ್್ ಸ್ವೈಪ್, ಮನಿ ಆರ್ಡರ್ ಮುಂತಾದ ಪಾವತಿ ವಿಧಾನಗಳು ಚಾಲ್ತಿಯಲ್ಲಿವೆ.
ಆನ್ಲೈನ್ ಶಾಪಿಂಗ್ನ ಅನುಕೂಲತೆಗಳು
ಈ ವಿಧಾನ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದಾಗ ಜನರಿಗೆ ಇದರ ಕಾರ್ಯವಿಧಾನದ ಬಗ್ಗೆ ಅಷ್ಟಾಗಿ ನಂಬಿಕೆ ಬರಲಿಲ್ಲ. ನಾವೇ ಖುದ್ದು ಹೋಗಿ ಖರೀದಿಸುವ ವಸ್ತುಗಳೇ ಗುಣಮಟ್ಟದಲ್ಲಿ ಕಳಪೆಯಾಗಿರುವಾಗ ಇಂಟರ್ನೆಟ್ನಲ್ಲಿ ಗುಣಮಟ್ಟ ಪರೀಕ್ಷಿಸದೆ ಹೇಗೆ ಖರೀದಿಸುವುದು ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿತು. ಆದರೆ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸದ ವಿದ್ಯಾಥರ್ಿ ಸಮೂಹ ಈ ವಿಧಾನವನ್ನು ನೆಚ್ಚಿಕೊಂಡಿತು. ಹಾಗಾಗಿಯೇ ಆನ್ಲೈನ್ ಶಾಪಿಂಗ್ ವ್ಯವಹಾರದಲ್ಲಿ ಶೇ.55ರಷ್ಟು ಪಾಲು ವಿದ್ಯಾಥರ್ಿಗಳದ್ದೇ. ಅಮೆಜಾನ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪುಗೊಂ ಡಿತು. ಇದರ ಮಾರಾಟದ ನಂತರದ ಸೇವೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಅಮೇರಿಕಾದ ಬಹುಪಾಲು ಗ್ರಾಹಕರು ಆನ್ಲೈನ್ ಶಾಪಿಂಗ್ನ ಮೊರೆ ಹೋದರು. ಈ ಮಧ್ಯೆ ಕೆಲವೊಂದು ಕಂಪೆನಿಗಳು ಈ ಜಾಗಕ್ಕೆ ಲಗ್ಗೆಯಿಟ್ಟು ಈ ವಿನೂತನ ಶಾಪಿಂಗ್ ವಿಧಾನದ ಮೌಲ್ಯ ಕುಸಿಯಲು ಪರೋಕ್ಷ ಕಾರಣವಾಯಿತು.
ಆನ್ಲೈನ್ ಶಾಪಿಂಗ್ನ್ನು ಗ್ರಾಹಕ ಹೆಚ್ಚು ಇಷ್ಟ ಪಡಲು ಕಾರಣ ಇದರ 24ಗಂಟೆಗಳ ಖರೀದಿ ವ್ಯವಸ್ಥೆ. ದಿನದ 24 ಗಂಟೆಯೂ ಇಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.  ಮತ್ತು ಅನ್ಲೈನ್ ಶಾಪಿಂಗ್ ನಡೆಸಿದ ಒಂದೆರಡು ದಿನಗಳಲ್ಲಿ ನಮ್ಮ ವಿಳಾಸಕ್ಕೆ ನಾವು ಖರೀದಿಸಿದ ವಸ್ತುಗಳು ಬಂದು ತಲುಪುತ್ತವೆ. ಅಲ್ಲದೇ ಇಲ್ಲಿ ಕೊಂಡುಕೊಳ್ಳುವ ಪ್ರತೀ ವಸ್ತುಗಳ ಗುಣಮಟ್ಟ ಮತ್ತು ಗ್ಯಾರಂಟಿಗೆ ಕಂಪೆನಿಯೇ ಹೊಣೆಯಾಗಿರುತ್ತದೆ(ಇದು ಮಾತ್ರ ಕಂಪೆನಿಗಳನ್ನು ಅವಲಂಭಿಸಿರುತ್ತದೆ. ಫ್ಲಿಫ್ಕಾಟರ್್, ಅಮೆಜಾನ್, ಇಬೇ ಮುಂತಾದ ಕಂಪೆನಿಗಳಲ್ಲಿ ಈ ವ್ಯವಸ್ಥೆ ಇದೆ). ಕೆಲವೊಂದು ಆನ್ಲೈನ್ ಕಂಪೆನಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ ಹಾಗೂ ನೂರು ರುಪಾಯಿ ಮೇಲ್ಪಟ್ಟ ಖರೀದಿಗೆ ಉಚಿತ ಹೋಂ ಡೆಲಿವರಿ ವ್ಯವಸ್ಥೆಯಿದೆ. ಈ ಎಲ್ಲಾ ಅನುಕೂಲತೆಗಳಿಂದಾಗಿ ಈ ಆನ್ಲೈನ್ ಶಾಪಿಂಗ್ ವ್ಯವಸ್ಥೆಯು ಜಾಗತಿಕವಾಗಿ ಪ್ರಗತಿ ಹೊಂದುತ್ತಿದೆ. ಮುಂದೆ ಮನೆಮನೆಗಳನ್ನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆ ಆವರಿಸಿದರೆ ಈ ವಿಧಾನ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಭಾರತದಲ್ಲಿ ಈಗಷ್ಟೇ ಪ್ರಗತಿಯತ್ತ ಸಾಗುತ್ತಿರುವ ಈ ಪದ್ದತಿಯ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಜನರ ಜಂಜಾಟದ ಜೀವನದ ಮಧ್ಯೆ ಈ ವಿಧಾನ ಭಾರತದಲ್ಲಿ ಬಹುಬೇಗನೆ ಖ್ಯಾತಿ ಗಳಿಸುವ ಎಲ್ಲಾ ಸಾಧ್ಯತೆಗಳು ನಿಶ್ಚಲವಾಗಿದೆ. ಸಣ್ಣ ಪುಟ್ಟ ಅಂಗಡಿಗಳ ವ್ಯವಹಾರಕ್ಕೆ ಬೃಹತ್ ಶಾಪಿಂಗ್ ಮಾಲ್ಗಳು ಒಂದು ಹಂತದಲ್ಲಿ ಅಡ್ಡಗಾಲಿಟ್ಟವು. ಮುಂದೊಂದು ದಿನ ಈ ಬೃಹತ್ ಶಾಪಿಂಗ್ ಮಾಲ್ಗಳ ಅಟ್ಟಹಾಸಕ್ಕೆ `ಆನ್ಲೈನ್ ಶಾಪಿಂಗ್ ಎಂಬ ವ್ಯವಹಾರಿಕ ಕ್ರಾಂತಿ ಬ್ರೇಕ್ ಹಾಕಿದರೆ ಅಚ್ಚರಿ ಪಡಬೇಕಿಲ್ಲ. ಕೆ ಬರಲಿಲ್ಲ. ನಾವೇ ಖುದ್ದು ಹೋಗಿ ಖರೀದಿಸುವ ವಸ್ತುಗಳೇ ಗುಣಮಟ್ಟದಲ್ಲಿ ಕಳಪೆಯಾಗಿರುವಾಗ ಇಂಟರ್ನೆಟ್ನಲ್ಲಿ ಗುಣಮಟ್ಟ ಪರೀಕ್ಷಿಸದೆ ಹೇಗೆ ಖರೀದಿಸುವುದು ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿತು. ಆದರೆ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸದ ವಿದ್ಯಾಥರ್ಿ ಸಮೂಹ ಈ ವಿಧಾನವನ್ನು ನೆಚ್ಚಿಕೊಂಡಿತು. ಹಾಗಾಗಿಯೇ ಆನ್ಲೈನ್ ಶಾಪಿಂಗ್ ವ್ಯವಹಾರದಲ್ಲಿ ಶೇ.55ರಷ್ಟು ಪಾಲು ವಿದ್ಯಾಥರ್ಿಗಳದ್ದೇ. ಅಮೆಜಾನ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪುಗೊಂ ಡಿತು. ಇದರ ಮಾರಾಟದ ನಂತರದ ಸೇವೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಅಮೇರಿಕಾದ ಬಹುಪಾಲು ಗ್ರಾಹಕರು ಆನ್ಲೈನ್ ಶಾಪಿಂಗ್ನ ಮೊರೆ ಹೋದರು. ಈ ಮಧ್ಯೆ ಕೆಲವೊಂದು ಕಂಪೆನಿಗಳು ಈ ಜಾಗಕ್ಕೆ ಲಗ್ಗೆಯಿಟ್ಟು ಈ ವಿನೂತನ ಶಾಪಿಂಗ್ ವಿಧಾನದ ಮೌಲ್ಯ ಕುಸಿಯಲು ಪರೋಕ್ಷ ಕಾರಣವಾಯಿತು.
ಆನ್ಲೈನ್ ಶಾಪಿಂಗ್ನ್ನು ಗ್ರಾಹಕ ಹೆಚ್ಚು ಇಷ್ಟ ಪಡಲು ಕಾರಣ ಇದರ 24ಗಂಟೆಗಳ ಖರೀದಿ ವ್ಯವಸ್ಥೆ. ದಿನದ 24 ಗಂಟೆಯೂ ಇಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಮತ್ತು ಅನ್ಲೈನ್ ಶಾಪಿಂಗ್ ನಡೆಸಿದ ಒಂದೆರಡು ದಿನಗಳಲ್ಲಿ ನಮ್ಮ ವಿಳಾಸಕ್ಕೆ ನಾವು ಖರೀದಿಸಿದ ವಸ್ತುಗಳು ಬಂದು ತಲುಪುತ್ತವೆ. ಅಲ್ಲದೇ ಇಲ್ಲಿ ಕೊಂಡುಕೊಳ್ಳುವ ಪ್ರತೀ ವಸ್ತುಗಳ ಗುಣಮಟ್ಟ ಮತ್ತು ಗ್ಯಾರಂಟಿಗೆ ಕಂಪೆನಿಯೇ ಹೊಣೆಯಾಗಿರುತ್ತದೆ(ಇದು ಮಾತ್ರ ಕಂಪೆನಿಗಳನ್ನು ಅವಲಂಭಿಸಿರುತ್ತದೆ. ಫ್ಲಿಫ್ಕಾಟರ್್, ಅಮೆಜಾನ್, ಇಬೇ ಮುಂತಾದ ಕಂಪೆನಿಗಳಲ್ಲಿ ಈ ವ್ಯವಸ್ಥೆ ಇದೆ). ಕೆಲವೊಂದು ಆನ್ಲೈನ್ ಕಂಪೆನಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ ಹಾಗೂ ನೂರು ರುಪಾಯಿ ಮೇಲ್ಪಟ್ಟ ಖರೀದಿಗೆ ಉಚಿತ ಹೋಂ ಡೆಲಿವರಿ ವ್ಯವಸ್ಥೆಯಿದೆ. ಈ ಎಲ್ಲಾ ಅನುಕೂಲತೆಗಳಿಂದಾಗಿ ಈ ಆನ್ಲೈನ್ ಶಾಪಿಂಗ್ ವ್ಯವಸ್ಥೆಯು ಜಾಗತಿಕವಾಗಿ ಪ್ರಗತಿ ಹೊಂದುತ್ತಿದೆ. ಮುಂದೆ ಮನೆಮನೆಗಳನ್ನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆ ಆವರಿಸಿದರೆ ಈ ವಿಧಾನ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಭಾರತದಲ್ಲಿ ಈಗಷ್ಟೇ ಪ್ರಗತಿಯತ್ತ ಸಾಗುತ್ತಿರುವ ಈ ಪದ್ದತಿಯ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಜನರ ಜಂಜಾಟದ ಜೀವನದ ಮಧ್ಯೆ ಈ ವಿಧಾನ ಭಾರತದಲ್ಲಿ ಬಹುಬೇಗನೆ ಖ್ಯಾತಿ ಗಳಿಸುವ ಎಲ್ಲಾ ಸಾಧ್ಯತೆಗಳು ನಿಶ್ಚಲವಾಗಿದೆ. ಸಣ್ಣ ಪುಟ್ಟ ಅಂಗಡಿಗಳ ವ್ಯವಹಾರಕ್ಕೆ ಬೃಹತ್ ಶಾಪಿಂಗ್ ಮಾಲ್ಗಳು ಒಂದು ಹಂತದಲ್ಲಿ ಅಡ್ಡಗಾಲಿಟ್ಟವು. ಮುಂದೊಂದು ದಿನ ಈ ಬೃಹತ್ ಶಾಪಿಂಗ್ ಮಾಲ್ಗಳ ಅಟ್ಟಹಾಸಕ್ಕೆ `ಆನ್ಲೈನ್ ಶಾಪಿಂಗ್ ಎಂಬ ವ್ಯವಹಾರಿಕ ಕ್ರಾಂತಿ ಬ್ರೇಕ್ ಹಾಕಿದರೆ ಅಚ್ಚರಿ ಪಡಬೇಕಿಲ್ಲ.