Friday 20 April 2012

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

 

ಮೊನ್ನೆ ರವಿಬೆಳಗೆರೆಯವರ `ಅಮ್ಮ ಸಿಕ್ಕಿದ್ಲು ಪುಸ್ತಕ ಓದ್ತಾ ಕುಳಿತಿದ್ದೆ. ಬಹುಶಃ ಆ ವ್ಯಕ್ತಿಯ ಬರಹ ನಿಜಕ್ಕೂ ಗ್ರೇಟ್ ಅಂತ ಅನಿಸೋದೇ ಸೈಲಂಟಾಗಿ ಓದಿಸ್ತಾ ಹೋದಾಗ. ಬೆಳಗೆರೆ ಜನ ಸರಿಯಿಲ್ಲ ಅಂತಾರೆ ಕೆಲವರು. ಇದು ಸತ್ಯಾನೂ ಆಗಿರಬಹುದು, ಸುಳ್ಳೂ ಆಗಿರಬಹುದು. ಆದರೆ ಆ ವ್ಯಕ್ತಿಯ ಬರಹಗಳಲ್ಲಿ ಅಂತಹ ಸಣ್ಣದೊಂದು ಸುಳಿವು ಕೂಡ ಸಿಗೋದಿಲ್ಲ. `ಅಮ್ಮ ಸಿಕ್ಕಿದ್ಲು ಇದಕ್ಕೊಂದು ಸಣ್ಣ ಉದಾಹರಣೆ.
ಅವರೇ ಹೇಳಿದಂತೆ ನೀವು ಪ್ರೀತಿಯನ್ನು ಕಳೆದುಕೊಂಡವರಾಗಿದ್ದರೆ ಈ ಪುಸ್ತಕವನ್ನು ಒಮ್ಮೆ ಒದಲೇ ಬೇಕು. ಅದರಲ್ಲೂ ಅಮ್ಮ ಅಥವಾ ಅಮ್ಮ ಅನ್ನುವ ಸಂಬಂಧದ ಪ್ರೀತಿ ಸಿಗಲೇ ಇಲ್ಲ ಅಂದ್ರೆ ಅಥವಾ ಸಿಕ್ಕಿದರೂ ಕಳೆದುಕೊಂಡಿದ್ದರೆ ಖಂಡಿತಾ ಒಮ್ಮೆ ಓದಿ...ಯಾಕೆಂದರೆ ನಿಜಕ್ಕೂ ಈ ಪುಸ್ತಕ ಪಕ್ಕಾ ಸೆಂಟಿಮೆಂಟಲ್.
ಕೆಲ ದಿನಗಳ ಹಿಂದೆ ಇದೇ ಬ್ಲಾಗಿನಲ್ಲಿ ಅಮ್ಮ ಎನ್ನುವ ಸಂಬಂಧದ ಮಧ್ಯೆ ಮತ್ತೊಂದು ಅಮ್ಮ ಅನ್ನುವ ಒಂದು ವಿಚಾರವನ್ನು ಬರೆದಿದ್ದೆ. ಕೆಲವೊಮ್ಮೆ ನಾವು ತುಂಬಾ ಸ್ವಾಥರ್ಿಗಳಾಗ್ತೀವಿ. ಹೆತ್ತ ತಾಯಿ ಹತ್ತಿರ ಇದ್ರೂ ಯಾರ್ಯಾರನ್ನೋ ಇಷ್ಟ ಪಡ್ತೀವಿ. ಅದೆಷ್ಟೋ ಹೆಣ್ಣು ಮಕ್ಕಳು ಹೆತ್ತವರು ಇದ್ದರೂ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗ್ತಾರೆ. ಹುಡುಗ ಒಳ್ಳೆವನಾಗಿದ್ರೆ ಪರ್ವಾಗಿಲ್ಲ. ಇಲ್ಲಾಂದ್ರೆ ಖಂಡಿತಾ ಹುಡುಗಿ ಪಶ್ಚಾತ್ತಾಪ ಪಡೋದಂತೂ ಗ್ಯಾರಂಟಿ..
ಕೆಲವರಿಗೆ ಪ್ರೀತಿ ಅಂದ್ರೆ ಹದಿ ಹರೆಯದ ವಯಸ್ಸಲ್ಲಿ ಬರುವ ಸಣ್ಣ ಆಕರ್ಷಣೆಯಷ್ಟೇ. ಇನ್ನು ಕೆಲವರಿಗೆ ಪ್ರೀತಿ ಅಂದ್ರೆ ಜೀವ, ಜೀವನ ಇನ್ನೂ ಹೆಚ್ಚು ಅಂದ್ರೆ ಉಸಿರು. ಬಹುಶಃ ಇಂದಿಗೂ ಪ್ರೀತಿಗೋಸ್ಕರ ಈ ಜಗತ್ತನ್ನೇ ಬಿಟ್ಟು ಹೋಗುವವರು ಇದ್ದಾರೆ ಎಂದರೆ ಅದು ಅಂಥವರೇ. ಇವರ ಪ್ರೀತಿ ನೈಜ ಪ್ರೀತಿ. ಎಲ್ಲೂ ಕಲ್ಮಶಗಳೇ ಇರೋದಿಲ್ಲ. ಒಂದು ವೇಳೆ ಈ ಪ್ರೀತೀಲಿ ಅಪ್ಪಿ ತಪ್ಪಿ ಯಾರಾದರೂ ಒಬ್ಬರು ಕೈ ಬಿಟ್ಟರೆ ಅಲ್ಲೊಂದು ದುರಂತ ಖಂಡಿತಾ. ನಿಜವಾಗಲೂ ನಾನಿವತ್ತು ಬರೆಯೋಕೆ ಬಂದಿದ್ದು ಪ್ರೀತಿ ಬಗ್ಗೆ ಅಲ್ವೇ ಅಲ್ಲ. ನನ್ನ ಜೀವನದಲ್ಲಿ ಕಂಡ ತ್ಯಾಗ ಮತ್ತು ನಂಬಿಕೆಗಳ ಬಗ್ಗೆ.........
ತ್ಯಾಗ ಅಂದ್ರೆ ಏನು? ನಂಬಿಕೆ ಅಂದ್ರೆ ಏನು? ಮುಂಗಾರು ಮಳೆಯಲ್ಲಿ ಗಣೇಶ ತನ್ನ ಹುಡುಗಿಯನ್ನು ಇನ್ನೊಬ್ಬನಿಗೆ ಬಿಟ್ಟು ಕೊಟ್ಟಿದ್ದು ತ್ಯಾಗಾನಾ? ಆಕೆಯ ತಂದೆ ತಾಯಿ ಈತನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿದ್ದು ನಿಂಬಿಕೇನಾ? ಹೌದು, ಒಂದರ್ಥದಲ್ಲಿ ಇವೆರಡೇ ನಂಬಿಕೆ, ತ್ಯಾಗ. ಇಲ್ಲೊಂಥರ ಖುಷೀನೂ ಇದೆ. ದುಃಖಾನೂ ಇದೆ. ಬಹುಶಃ ಸಿನಿಮಾದ ಜನಗಳಿಗೂ ಈ ಟ್ರಿಕ್ಸ್ ತುಂಬಾನೇ ಉಪಯೋಗ ಆಗಿದೆ ಅನ್ನಬಹುದು. ಮೊನ್ನೆ ತಾನೆ ನನ್ನೊಬ್ಬ ಗೆಳೆಯ ತನ್ನ ಹುಡುಗೀನಾ ಇನ್ನೊಬ್ಬ ಲವ್ ಮಾಡ್ತಾ ಇದಾನೆ ಅಂದ. ಅದಕ್ಕೋಸ್ಕರ ನಾನವಳನ್ನು ಲವ್ ಮಾಡೋದನ್ನೇ ಬಿಟ್ ಬಿಟ್ಟೆ ಅಂದ. ಆಗ ನನಗೆ ಅವನ ಮೇಲೆ ತುಂಬಾ ಗೌರವ, ಖುಷಿ ಎಲ್ಲಾನೂ ಆಯ್ತು. ಯಾಕ್ ಗೊತ್ತಾ? ತನ್ನ ಪ್ರೀತಿನ ತ್ಯಾಗ ಮಾಡಿದ ಅಂತ. ಆದರೆ ಇಲ್ಲಿರೋ ವಿಷಯಾನೇ ಬೇರೆ. ಅವಳಿಗೂ ಅದು ನಾಲ್ಕನೇ ಲವ್, ಇವನಿಗೆ ಇದು ಆರನೇ ಲವ್. ಹೀಗಿರೋವಾಗ ಇವರಿಬ್ಬರ ಪ್ರೀತಿಗೆ ಹೇಗೆ ತಾನೇ ತ್ಯಾಗ ಅನ್ನೋ ಟ್ಯಾಗ್ಲೈನ್ ಕಟ್ಟೋಕೆ ಆಗುತ್ತೇ. ನೀವೇ ಹೇಳಿ? ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೇನೆ ಇವೆ. ಕೆಲವೊಮ್ಮೆ ಹುಡುಗ ಪಕ್ಕಾ ಸೆಂಟಿಮೆಂಟೋ, ಸೆನ್ಸಿಟಿವೋ ಆಗಿರ್ತಾನೆ. ಆದರೆ ಹುಡುಗಿ ಹಾಗಲ್ಲ. ಅವಳು ಇವನಿಗೆ ಪುಲ್ ಅಪೋಝಿಟ್. ಇವನಿಗೆ ಅವಳೇ ಪ್ರಪಂಚ ಆದ್ರೆ ಅವಳಿಗೆ ಇವನಂಥ ಅದೆಷ್ಟೋ ಪ್ರಪಂಚ! ಅದೆಷ್ಟೋ ಹುಡುಗರು. ತಪ್ಪು ತಿಳ್ಕೋಬೇಡಿ ಇಲ್ಲಿ ಹುಡುಗರು ಏನೂ ಕಮ್ಮಿ ಇಲ್ಲ. ತನ್ನ ಹುಡುಗೀನಾ ಹುಡುಗ ಎಷ್ಟೇ ಪುಟ್ಟ, ಚಿನ್ನ ಅಂತ ಕರೆದರೂ ಅದು ಜಸ್ಟ್ ಒಂದು ತಿಂಗಳು, ಅಬ್ಬಬ್ಬಾ ಅಂದ್ರೆ ಒಂದು ವರ್ಷ ಅಷ್ಟೇ. ಮತ್ತೆ ಎಲ್ಲಾ ಚಿನ್ನಾನೂ ಕಾಗೆ ಬಂಗಾರನೇ ಬಿಡಿ.
ಯಾವತ್ತೂ ಸೆಂಟಿಮೆಂಟ್, ತಾಯಿ, ಅಕ್ಕ ಅನ್ನೋ ಸಂಬಂಧಗಳ ಬಗ್ಗೆ ಬರೆಯೋ ನಾನು ಇವತ್ತು ಜೋಡಿಗಳ ಪ್ರೀತಿಯ ಬಗ್ಗೆ ಬರೆಯೋಕೆ ಕಾರಣ ಇದೆ. ಮೊನ್ನೆಯಷ್ಟೆ ಕುಂದಾಪುರದಲ್ಲಿ ಒಂದು ಘಟನೆ ನಡೀತು. ಮನೆಯವರು ಒಪ್ಪಲಾರರು ಅನ್ನೋ ಕಾರಣಕ್ಕೆ ಎರಡು ಜೋಡಿ ಈ ಜಗತ್ತನ್ನೇ ಬಿಟ್ಟು ದೂರ ಹೊರಟು ಹೋದವು. ಅವರು ಮಾಡಿದ್ದು ತ್ಯಾಗ. ಅವರಲ್ಲಿದ್ದಿದ್ದು ನಂಬಿಕೆ. ಯಾಕಂತ ಹೇಳ್ಬೇಕ? ಅವರಿಗೂ ಜಗತ್ತಲ್ಲಿ ಬದುಕೋಕೆ ಅದೆಷ್ಟೋ ಚಾಯ್ಸ್ಗಳಿದ್ದವು. ಎಲ್ಲರನ್ನೂ ಧಿಕ್ಕರಿಸಿ ಓಡಿ ಹೋಗ್ಬಹುದಿತ್ತು. ಆದರೆ ಅವರು ಹಾಗ್ ಮಾಡಲಿಲ್ಲ. ಜಗತ್ತಿಗೋಸ್ಕರ, ಮಾನವೀಯ ಸಂಬಂಧಕ್ಕೋಸ್ಕರ, ಅಷ್ಟೇ ಯಾಕೆ ಒಂದು ಸಣ್ಣ ಮಯರ್ಾದೆಗೋಸ್ಕರ ಪ್ರೀತೀನೇ ತ್ಯಾಗ ಮಾಡಿದ್ರೂ. ಇನ್ನು ಇವರ ಸಾವಿನಲ್ಲಿ ನಂಬಿಕೆಯ ಪಾಲೂ ಅಷ್ಟೇ ಇದೆ. ಸಾವಲ್ಲೂ ಇಬ್ಬರನ್ನಿಬ್ಬರೂ ನಂಬಿದ್ರೂ. ಸಾವಿನಲ್ಲೂ ಒಂದಾದರೂ. ಪ್ರೇಮಿಗಳು ಸತ್ತರೂ ನಂಬಿಕೆ ಸಾಯಲಿಲ್ಲ. ಎಂಥಾ ಹ್ಯಾಪಿ ಎಂಡಿಂಗ್ ಅಲ್ವಾ? ಹೌದು ಓಡಿ ಹೋಗಿ ಮದುವೆ ಆಗೋದಕ್ಕಿಂತ, ಎಲ್ಲರಿಂದಲೂ ಒಂದು ಪ್ರೀತಿಗೆ ವಿರೋಧ ಕಟ್ಟಿಸಿಕೊಳ್ಳೋದಕ್ಕಿಂತ ಇದು ನಿಜಕ್ಕೂ ಒಂದು ಹ್ಯಾಪಿ ಎಂಡಿಂಗೇ!
ಎಲ್ಲರೂ ಒಂದು ನೆನಪಲ್ಲಿಟ್ಟುಕೊಳ್ಳಬೇಕು. ಪ್ರೀತಿ ವಯಸ್ಸಿನ ಒಂದು ಹಂತದವರೆಗೆ ಜಸ್ಟ್ ಆಕರ್ಷಣೆ, ನಂತರ ಮಾನಸಿಕ ವೇದನೆ, ಅನಂತರ ಕೆಲವೊಂದು ಪ್ರಶ್ನೆ, ಇನ್ನು ಕೆಲವೊಮ್ಮೆ ಪ್ರಶ್ನೆಗಳೇ ಇಲ್ಲದ ಉತ್ತರ. ಅಂತಿಮವಾಗಿ ಅದೊಂದು ಜವಾಬ್ದಾರಿ. ಇವೆಲ್ಲವನ್ನೂ ಮೀರಿ ಬರೋದು ಅಷ್ಟು ಸುಲಭಾನೂ ಅಲ್ಲ. ಇಂದಿಗೂ ತಾಜ್ಮಹಲ್ ಪ್ರೀತಿಯ ಸಂಕೇತ ಆಗಿದ್ರೂ ಅದರ ಹಿಂದಿನ ಸ್ಟೋರಿ ಮಾತ್ರ ಇದು ಹೇಗೆ ಪ್ರೀತಿಗೆ ಸಂಕೇತವಾಯಿತು ಅಂಥ ಪ್ರಶ್ನಿಸುವ ಹಾಗೆ ಮಾಡುತ್ತೆ...ಯಾಕಂದ್ರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ಗಾಗಿ ಕಟ್ಟಿಸಿದ ಈ ಮಹಲ್ ಯಾವತ್ತೂ ಪ್ರೀತಿಗೆ ಸಂಕೇತ ಆಗೋದಕ್ಕೆ ಸಾಧ್ಯಾನೆ ಇಲ್ಲ. ಅಷ್ಟಕ್ಕೂ ಮುಮ್ತಾಜ್ ಈತನ ಮೊದಲನೇ ಪತ್ನಿ ಕೂಡ ಅಲ್ಲ. ಹೀಗಾದರೆ ತಾಜ್ಮಹಲ್ ಹೇಗೆ ತಾನೆ ಪ್ರೇಮದ ಸಂಕೇತ ಆಗುತ್ತೆ? ಆದರೆ ನಮ್ಮಲ್ಲಿ ಇತಿಹಾಸ ನೋಡೋದಕ್ಕಿಂತ ಸೌಂದರ್ಯ ನೋಡುವವರೇ ಹೆಚ್ಚಿದ್ದಾರೆ. ಆಗ ವಿಧಾನ ಸೌಧನೂ ಪ್ರೇಮಕ್ಕೆ ಸಂಕೇತ ಆಗಬಹುದು. ಜಸ್ಟ್ ಲವ್, ಟೈಮ್ ಪಾಸ್ ಲವ್ ಅನ್ನೋದರ ಮಧ್ಯೆ ಎಲ್ಲೋ ಒಂದು ಕಡೆ ರಿಯಲ್ ಲವ್ ಕೂಡ ಇರುತ್ತೆ. ಅಲ್ಲೆಲ್ಲಾ ತ್ಯಾಗ, ನಂಬಿಕೆ, ಪ್ರೀತಿ ಸದ್ದಿಲ್ಲದೇ ಕೆಲಸ ಮಾಡುತ್ತೆ ಕೂಡ....
ನೆನಪಿರಲಿ, ಲವ್ ಫ್ಯಾಶನ್ ಅಲ್ಲ. ಅದೊಂದು ಪವಿತ್ರ ಬಂಧ.......ಜಸ್ಟ್ ಒಂದು ದಿನಾನಾ ದರೂ ನಿಮ್ಮ ಪ್ರೀತಿಯನ್ನು ಪವಿತ್ರವಾಗಿ ಪ್ರೀತಿಸಿ.....ಒನ್ ಟೈಮ್ ನಿಮಗೂ ಗೊತ್ತಾಗಬಹುದು. ನೈಜ ಪ್ರೀತಿಲೀ ಇಷ್ಟೊಂದು ಸುಖ ಇದೆಯಾ ಅಂತ..........! 

7 comments:

  1. very nice but i dnt like 1 point(kundapura incident)
    sigodilla antha gottiddu lve madi matte sattu hodre adra novannu sahisodu yaru sathre avra prithinu satta hage alva
    (bejar adre i m very sry helbeku antha annisthu adakke helide )

    ReplyDelete
  2. jagatthinalli yaru kooda ondagthare anno nambikeyinda love madalla. innu illi avara preethi kanditha saayodilla. yakendre aa eradu jeevagalu ottige praana bittavu. ondhu vele avaru odi hogi madve agidru avaru jeevanadalli sukavaagi irthare antha enu guarantee?
    but nimma abhiprayakke swagatha. nimma chinthane uttamavagide. nanage bejarilla.

    ReplyDelete
  3. prithsodu thappalla adre avra prithiyinda yarigu novagada hage nodbekalva jeevanadalli novu idde ide adre adakke save parihara alla................. sathre adrinda yarigu labha anthu khanditha illa (sorry)

    ReplyDelete
  4. ondu vele maneyalli oppadhe iddare aa preethige novogutthalwa. aagenu madodu?

    ReplyDelete
  5. ene adaru maneyavaranna oppisalu try madbeku alva?avru tagandiddu tappu nirdhara....., ega avru sattadru sadisiddenu?

    ReplyDelete
  6. peeethi madodu kooda yaavtthu sadhane alla. alli nijavada nambkike irbekashte. preethiyannu thiraskarisuva janagalige ivr saavu ondu paata. heegirovaaga ivra saavu saadhane allave?

    ReplyDelete
  7. ಅವರಿಬ್ಬರು ಸತ್ತಿದ್ದು ಹ್ಯಾಪಿ ಎಂಡಿಂಗ್‌ ಅಂತ ಹೇಳೋಕೆ ಸಾಧ್ಯವಿಲ್ಲ. ಅವ್ರು ತಾವೂ ಸತ್ತಿದ್ದಲ್ಲದೆ ತಮ್ಮ ಪ್ರೀತಿಯನ್ನೂ ಸಾಯಿಸಿದ್ರುಯ ಪ್ರೀತಿಗೆ ಯಾವತ್ತೂ ಸಾವಿಲ್ಲ. ಇಷ್ಟು ದಿನ ಅವ್ರರನ್ನ ಬೆಳೆಸಿ ಈ ಹಂತಕ್ಕೆ ತಂದವರ ನಂಬಿಕೆ ಪ್ರೀತಿಗೇನು ಬೆಲೆ ಕೊಟ್ರು ಹಾಗಾದ್ರೆ,,? ಪ್ರೀತಿ ಮಾಡಿದಾಕ್ಷಣ ಅದಕ್ಕೆ ಮದುವೆ ಎಂಬ ಮುದ್ರೆ ಬೀಳಲೇಬೇಕು ಅಂತ ನೀವು ಹೇಳ್ತಾ ಇರೋ ಹಾಗಿದೆ. ಪ್ರೀತಿ ಮನಸ್ಸಿಗೆ ಅಂದ್ರೆ ಭಾವನೆಗಳಿಗೆ ಸಂಬಂಧಿಸಿದ್ದು, ಅದನ್ನ ಆರಾಧಿಸಬೇಕೇ ಹೊರತು ಹಾಳು ಮಾಡಬಾರದು. ಇನ್ನೊಂದು ವಿಚಾರ ಶಹಜಹಾನ್‌ಗೆ ಮಮ್ತಾಜ್‌ ಎಷ್ಟನೇ ಹೆಂಡ್ತಿ ಆಗಿರ್ಲಿ. ವಿಚಾರ ಅದಲ್ಲ ಆಕೆಯ ಬಗ್ಗೆ ಆತನಿಗಿದ್ದ ಅದಮ್ಯ ಪ್ರೀತಿಯನ್ನ ತೋರಿಸುತ್ತದೆ.ಒಂದು ತಾಯಿಗೆ ಹತ್ತಾರು ಮಕ್ಕಳಿದ್ರೆ ಆಕೆ ಅವರೆಲ್ಲರಿಗೂ ಸಮಾನ ಪ್ರೀತಿ ತೋರಿಸ್ತಾಳೆ. ಇದು ಹಾಗೆ. ಪ್ರೀತಿ ಒಂದೇ. ಆದ್ರೆ ಬೇರೆ ಬೇರೆ ಸಂಬಂಧಗಳಿಗೆ ಬೇರೆ ಬೇರೆ ಮುಖಗಳಿವೆ.

    ReplyDelete