ಕಾಣದ ಕಡಲಿಗೆ ಹಂಬಲಿಸಿದೆ ಮನ....
ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!
ನವಿರಾದ ಬದುಕಿನ ಸುಶ್ರಾವ್ಯ ಹೆಜ್ಜೆ ಗುರುತು ಕಳೆದು ಹೋಗಿದೆ. ಆಕಾಶದಲ್ಲಿ ಚಂದ್ರನನ್ನು ಕಂಡು ಕಣ್ಣ ಬಿಂಬಗಳನ್ನು ಒಂದಾಗಿಸಿದ ಕ್ಷಣ ಎದೆಯೊಳಗೆ ಹೊತ್ತು ಗೊತ್ತಿಲ್ಲದೇ ಕಾಡುತ್ತಿದೆ. ದೇವಸ್ಥಾನದ ಮೆಟ್ಟಿಲ ತುದಿಯಲ್ಲಿ ಒಟ್ಟಾಗಿ ಇಟ್ಟ ಹೆಜ್ಜೆಗಳನ್ನು ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಹಸಿರು ಪರಿಸರದ ಮಧ್ಯೆ ಗರಿ ಬಿಚ್ಚಿ ಕಳೆದ ಪ್ರತೀ ಕ್ಷಣದ ನೆನಪುಗಳೂ ಒತ್ತರಿಸಿ ಬರುತ್ತಿವೆ. ಆದರೇನೂ ಮಾಡುವುದು ...ದೂರವಾಗಿದ್ದಾಳೆ ಅವಳು....!
ವರ್ಷಗಳಿಂದ ಸುರಿಯದ ಕಣ್ಣೀರು ಇಂದು ಪ್ರತೀ ಕ್ಷಣವೂ ಕಟ್ಟೆಯೊಡೆದು ಧುಮ್ಮಿಕ್ಕುತ್ತಿದೆ. ಎಲ್ಲವೂ ನೆನಪುಗಳ ಮೆರವಣಿಗೆಯಲ್ಲಿ ಕಳೆದುಕೊಂಡ ಆ ದಿನಗಳ ಸಣ್ಣದೊಂದು ಕುರುಹುಗಳಷ್ಟೇ....
ಒಂಟಿ ಜೀವದ ಒಬ್ಬಂಟಿ ಪಯಣದಲ್ಲಿ ಜಂಟಿಯಾದವಳು ಕಳೆದು ಹೋಗಿದ್ದಾಳೆ. ಆದರೆ ಅವಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲಾಗುತ್ತಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕಣ್ಣಿಗೆ ಕಾಣದ ಮನಸ್ಸು ಕೂಡ ಕಣ್ಣೀರು ಸುರಿಸಿದ ಅನುಭವ. ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಯೋ ಎಂಬಂತೆ ಜೀವ ಕಳೆಯೇ ಇಲ್ಲದ ಬದುಕೊಂಡು ನನ್ನನ್ನು ಅಪ್ಪಿಕೊಂಡಿದೆ. ಏನೇ ಆದರೂ ಈಗಿನ ಪ್ರತೀ ಕ್ಷಣ ನನ್ನ ಜೊತೆಯಾಗುತ್ತಿರುವುದು.....ಅಳು........ಅಳು.....ಅಳು........!
ನನಗ್ಯಾರೂ ಇಷ್ಟವಾಗದ ಎಲ್ಲರಿಗೂ ಇಷ್ಟವಾಗುವ ಒಬ್ಬಂಟಿ ಜೀವನ ನನ್ನದು. ಈ ಮದ್ಯೆ ಹೆತ್ತು-ಹೊತ್ತು ಬದುಕಲು ಕಲಿಸಿದ ತಾಯಿಯೆಂದರೆ ನನಗೆ ಪಂಚಪ್ರಾಣ. ಈ ಮಧ್ಯೆ ಹೆತ್ತಮ್ಮನ ಜೊತೆಗೆ ಜೀವನಕ್ಕೆ ಸ್ಫೂತರ್ಿಯಾದ ನನ್ನ ಪ್ರೀಮಾ ಅಕ್ಕ ಅಂದ್ರೆ ಇಷ್ಟ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ನನಗೆ ಅಷ್ಟು ಹತ್ತಿರವಲ್ಲ. ಆದರೆ ಸ್ವಭಾವತಃ ತೀರಾ ಸೆನ್ಸಿಟಿವ್ ಆದ ನನ್ನನ್ನು ಕಂಡರೆ ಎಲ್ಲರಿಗೂ ಇಷ್ಟ. ನನಗೂ ಇವರೆಲ್ಲರೂ ಇಷ್ಟವಾದರೂ ಅಮ್ಮ-ಅಕ್ಕನಷ್ಟು ಹತ್ತಿರವಲ್ಲ.
ನಿಧಾನಗತಿಯ ಬದುಕು, ಸಣ್ಣದೊಂದು ಆಸೆ, ಬಹುದೊಡ್ಡ ಉದ್ದೇಶ, ತೀರಾ ಸೆನ್ಸಿಟಿವ್ ಮನಸ್ಸು, ಈ ಮಧ್ಯೆ ಅರ್ಥ ಮಾಡಿಕೊಳ್ಳುವ ನನ್ನದೇ ಆದ ಜೀವಕ್ಕೆ ಮಾತ್ರ ಕೊರತೆ.. ಹೀಗೆ ಸಾಗುತ್ತಿದ್ದ ಜೀವನದ ಮಧ್ಯೆ ಸಿಕ್ಕವಳೇ ಪ್ರಮೀ. ನಗುವಿನಲ್ಲೇ ಇಷ್ಟವಾದವಳು, ಕಣ್ಣ ನೋಟಕ್ಕೆ ಮನಸ್ಸಿಗೆ ಹತ್ತಿರವಾಗಿದ್ದಳು, ತಡಮಾಡದೇ ಬದುಕು ಕಟ್ಟಿಕೊಳ್ಳುವ ನನ್ನದೊಂದು ಪುಟ್ಟ ಹಾದಿಯಲ್ಲಿ ಅವಳನ್ನು ಜೊತೆಯಾಗಿಸಿದೆ. ಸಿಕ್ಕ ಮೊದಲ ಕ್ಷಣದಲ್ಲೇ ತೀರಾ ಹೆಚ್ಚೇ ಎನಿಸುವಷ್ಟು ಇಷ್ಟವಾಗಿದ್ದಳು. ಬದುಕಿನ ಹಾದಿಯಲ್ಲಿ ಜೀವನದ ಕೊನೆಯವರೆಗೂ ಉಸಿರಾಗಿ ನಿಲ್ಲಲು ಇವಳೇ ಸೂಕ್ತ ಅಂದುಕೊಂಡು ಜೊತೆಯಾಗಿದ್ದೆ. ನನ್ನಷ್ಟೇ ಸೂಕ್ಷ್ಮ, ತೂಕ=ಎತ್ತರ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್..! ಸಿಕ್ಕಾಗಲೆಲ್ಲಾ ಇವಳಿಂದ ಬಯಸಬಹುದಾದ ಇಷ್ಟವಾದ ಗಿಫ್ಟ್ ಮುಖದಲ್ಲಿ ಬೀಳುವ ಗುಳಿ ಕೆನ್ನೆಯ ನಗು ಮಾತ್ರ. ಯಾಕೋ ಗೊತ್ತಿಲ್ಲ ಹುಟ್ಟಿದ 22 ವರ್ಷದಲ್ಲಿ ಅಮ್ಮ- ಅಕ್ಕನ ನಂತರ ಪ್ರಮೀ ತುಂಬಾ ಇಷ್ಟವಾಗಿದ್ದಳು. ಪ್ರೀತಿ ಹೇಳಿಕೊಳ್ಳುವ ಸಣ್ಣದೊಂದು `ಪದ್ದತಿ' ಮುಗಿಸಿ ಒಂದೆರೆಡು ತಿಂಗಳಲ್ಲಿ ನಾವಿಬ್ಬರು ತುಂಬಾನೇ ಹತ್ತಿರವಾಗಿದ್ದೆವು. ಎಲ್ಲಾ ಪ್ರೇಮಿಗಳಂತೆ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ, ವಾರಕ್ಕೆರೆಡು ಬಾರಿ ದೇವಸ್ಥಾನ.... ಹೀಗೆ ತಿರುಗಾಟ ನಮ್ಮಲ್ಲೂ ಇತ್ತು. ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಇಬ್ಬರ ಹೆಸರಿನಲ್ಲೂ ಒಂದು ಕುಂಕುಮಾರ್ಚನೆ ಪರ್ಮನೆಂಟ್ ಎಂಬಂತಾಗಿತ್ತು. ಹೀಗಾಗಿಯೋ ಏನೋ ನಮ್ಮಿಬ್ಬರ ಹೆಸರು, ರಾಶಿ-ನಕ್ಷತ್ರ ಇಲ್ಲಿನ ಅರ್ಚಕರಿಗೆ ಅಪ್ಡೇಟ್ ಆಗಿತ್ತು. ಒಟ್ಟಿನಲ್ಲಿ ನಾವಿಬ್ಬರೂ ಈ ದೇವಸ್ಥಾನದ ಖಾಯಂ ಭಕ್ತರು ಎಂದರೆ ತಪ್ಪಿಲ್ಲ...!
ಪ್ರಮಿಯದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಕೆಲವೊಮ್ಮೆ ಮಕ್ಕಳಂತ ಸ್ವಭಾವ. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಪ್ರಮಿ. ಆದರೆ ಈಗ ಪ್ರಮಿ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲ್ಲಿ ಪ್ರಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......ಎಲ್ಲವೂ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ...
ದೂರವಾಗುವ ಮುನ್ನ ಕೊನೆಯದಾಗಿ ಮಾತಿಗೆ ಸಿಕ್ಕವಳು ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡದಂತೆ ನನ್ನ ಎದುರಿಗೆ ನಿಂತಿದ್ದಳು. ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ..
ಪ್ರಮೀ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪ್ರಮಿಯನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ನಂತರ ಪ್ರಮಿ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಧ್ವನಿ