ಬಜೆಟ್ಗಳಿಂದ ಜನಸಾಮಾನ್ಯ ಗಳಿಸಿಕೊಂಡಿದ್ದು ಏನೂ ಇಲ್ಲ!
ಮೊನ್ನೆಯಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಬಜೆಟ್ ಕೂಡ ಮಂಡ ನೆಯಾಗಲಿದೆ. ಆದರೆ ಮೊನ್ನೆಯ ಬಜೆಟ್ಗಿಂತಲೂ ಹೆಚ್ಚು ಚಚರ್ಿತವಾಗಿದ್ದು ಮಾತ್ರ ಸಚಿನ್ ಶತಕ ಎನ್ನುವುದು ವಿಪ ಯರ್ಾಸ. ದೇಶದ ಅಥರ್ಿಕ ಅಡಿಪಾಯಕ್ಕಿಂತಲೂ ತನ್ನದೇ ಜೋಳಿಗೆ ತುಂಬಿಸುವ ಸಚಿನ್ ಶತಕವೇ ನಮಗೆ ಮೇಲಾ ಯಿತು. ಹೀಗಿದ್ದರೂ ಈ ಬಜೆಟ್ಗಳಿಂದ ಜನತೆ ಗಳಿಸಿಕೊ ಳ್ಳುವುದಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ನಮ್ಮ ಆಥರ್ಿಕ ವ್ಯವಸ್ಥೆಯ ಅಡಿಪಾಯದ ಬಿಸಿ ನಮಗೆ ತಟ್ಟುವ ಮುನ್ನ ಈ ಬಗ್ಗೆ ಚಿಂತಿಸುವ ಅಗತ್ಯವಿದೆ.
ಒಂದು ವರ್ಷದ ಆಥರ್ಿಕ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡು ರಚಿಸುವ ಈ ಬಜೆಟ್ಗಳಿಂದ ಆಗುವ ಪ್ರಯೋಜನ ಮಾತ್ರ ಅಷ್ಟಕ್ಕಷ್ಟೇ. ಒಂದು ಹಂತದಲ್ಲಿ ಈ ಬಜೆಟ್ಗಳು ಸಕರ್ಾರದ ವಿತ್ತ ಖಾತೆಗೆ ಆಥರ್ಿಕ ಲೆಕ್ಕಾಚಾರ ಒದಗಿಸುವ ಕೆಲಸ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾ ಗಿದ್ದ ಯಡಿಯೂರಪ್ಪ ಮಂಡಿಸಿದ ಬಜೆಟ್ನ ಯಾವೆಲ್ಲಾ ಅಂಶಗಳು ಜಾರಿಗೆ ಬಂದಿವೆ? ರಾಜ್ಯ ಸಕರ್ಾರದ ಬೊಕ್ಕಸ ತುಂಬಿಸುವ ಕೆಲವೊಂದು ಬೆಲೆಯೇರಿಕೆಯ ವಿಚಾರಗಳಲ್ಲಿ ಮಾತ್ರ ಈ ಬಜೆಟ್ ಸಹಕಾರಿಯಾಗುತ್ತದೆ. ಅದೂ ನಮ್ಮ ಮಂತ್ರಿ ಮಾಗಧರಿಗಷ್ಟೇ. ಬೆಲೆಯೇರಿಕೆಯಿಂದ ಜನರದ್ದೇ ಹೊರೆ ಹೆಚ್ಚುವುದು ಎಂಬ ವಿಚಾರ ಸ್ಪಷ್ಟ. ಇನ್ನು ಪುಟಗ ಟ್ಟಲೇ ಸಿದ್ದಗೊಳ್ಳುವ ಬಜೆಟ್ನಲ್ಲಿ ಮಂಡಿಸಲಾಗುವ ಅಭಿವೃ ದ್ದಿಯ ಕೆಲಸಗಳು ಸರಿಯಾಗಿ ಅನುಷ್ಠಾನಕ್ಕೆ ಬರುವುದೇ ಇಲ್ಲ. ರಾಜ್ಯದ ಆಥರ್ಿಕ ಲೆಕ್ಕಾಚಾರದ ಅಡಿಪಾಯದ ಮೇಲೆ ಈ ಬಜೆಟ್ ಮಂಡನೆಯಾದರೂ ಜನರ ಆಶೋತ್ತರಗಳತ್ತ ಇಲ್ಲಿಯ ತನಕ ಬಜೆಟ್ ಗಮನ ಹರಿಸಿದ್ದೇ ಇಲ್ಲ. ಕಳೆದ ಬಾರಿ ರೈತಪರ ಸಕರ್ಾರ ಎನ್ನುವ ಬಿಜೆಪಿ ಪ್ರತ್ಯೇಕ ಕೃಷಿ ಬಜೆಟ್ ಕೂಡ ಮಂಡಿಸಿತ್ತು. ಆದರೆ ಅಂದು ಮಂಡನೆಯಾದ ಎಷ್ಟು ವಿಚಾರ ಗಳು ಇಂದು ಅನುಷ್ಠಾನಕ್ಕೆ ಬಂದಿದೆ? ಆ ಅಭಿವೃದ್ದಿ ಕೆಲಸಗಳು ಅನುಷ್ಠಾನಗೊಳ್ಳುವ ಹೊತ್ತಿಗೆ ಸಕರ್ಾರ ತನ್ನ ಆಡಳಿತವನ್ನೇ ಮುಗಿ ಸಿರುತ್ತದೆ. ನಂತರ ಬಂದ ಸಕರ್ಾರ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ಸೆಣೆಸುತ್ತದೆಯೇ ಹೊರತು ಹಿಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಿದ ವಿಚಾರಗಳ ಕಡೆಗೆ ಗಮನ ಕೇಂದ್ರೀಕರಿಸುವುದಿಲ್ಲ.
ಇನ್ನು ನಮ್ಮ ಜನತೆಗೂ ಬಜೆಟ್ ಎನ್ನುವುದು ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಟಿವಿ ಮಾಧ್ಯಮಗಳಲ್ಲಿ ಬಜೆಟ್ ವಿಚಾರಗಳು ಬಂದರೆ ಚಾನೆಲ್ ತಿರುಗಿಸುವವರೇ ಹೆಚ್ಚು. ಮರುದಿನ ಪತ್ರಿಕೆ ಗಳು ಬಜೆಟ್ ಸಂಬಂಧಿ ವಿಚಾರಗಳ ಬಗ್ಗೆ ಪುಟಗಟ್ಟಲೇ ಬರೆ ದರೂ ಆದನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನ, ತಾಳ್ಮೆ ನಮ್ಮ ಜನರಿಗಿಲ್ಲ. ಹೀಗಾಗಿ ಸಕರ್ಾರ ಎನ್ನುವ ಸ್ವಹಿತಾಸಕ್ತಿಯ ರಾಜ ಕೀಯ ನಾಯಕರು ಮಂಡಿಸುವ ಬಜೆಟ್ನಲ್ಲಿನ ಅಂಶಗಳನ್ನು ನಾವು ಅರ್ಥವಾಗದೇ ವಿರೋಧಿಸಿದರೂ ನಂತರ ಒಪ್ಪಿಕೊಂಡು ಬಿಡುತ್ತೇವೆ. ನಾವು ಒಪ್ಪಿಕೊಳ್ಳಲಿ ಬಿಡಲಿ, ಅದನ್ನು ವಿರೋಧಿಸಿ ಬಜೆಟ್ನ್ನು ಮತ್ತೆ ಮಂಡಿಸುವಂತೆ ಮಾಡುವ ಕೆಲಸ ಮಾತ್ರ ನಮ್ಮಿಂದ ಸಾಧ್ಯವಿಲ್ಲ. ಬಂಗಾರದ ಮೇಲಿನ ತೆರಿಗೆ ಹೆಚ್ಚಳಕ್ಕೆ ಚಿನ್ನದ ವ್ಯಾಪಾರಿಗಳು ಪ್ರತಿಭಟಿಸಬಹುದು, ಕೆಲವೊಂದು ವ್ಯಾಪಾರಿಗಳು ತಮಗೆ ಸಂಬಂಧಿಸಿದ ವಹಿವಾಟಿನ ಸುಂಕ ಹೆಚ್ಚ ಳಕ್ಕೆ ಒಂದೆರೆಡು ದಿನ ಹರತಾಳ ಮಾಡಬಹುದು. ಆದರೆ ಇದು ಕೇವಲ ಒಂದೆರೆಡು ದಿನವಷ್ಟೇ. ಮುಂದಿನದ್ದು ನಮ್ಮ(?) ಸಕರ್ಾ ರಕ್ಕೆ ಬಿಟ್ಟಿದ್ದು. ಜನರು ಸಕರ್ಾರದ ನೀತಿಯನ್ನು ವಿರೋಧಿಸಿ ದಾಗ ಎಷ್ಟು ಬಾರಿ ಸಕರ್ಾರ ತನ್ನ ನಿಲುವನ್ನು ಬದಲಿಸಿದೆ?
ಇನ್ನು ನಮ್ಮ ಜನರನ್ನೇ ತೆಗೆದುಕೊಳ್ಳಿ. ಕೇಂದ್ರ ಬಜೆಟ್ ಗಿಂತಲೂ ನಮಗೆ ಸಚಿನ್ ತೆಂಡೂಲ್ಕರ್ ಶತಕವೇ ಮೇಲೂ! ನಮ್ಮ ಸಮಾಜವೇ ದೇಶದ ಅಥರ್ಿಕತೆಯ ಬಗ್ಗೆ ಚಿಂತಿಸುವು ದಿಲ್ಲ ಎನ್ನುವಾಗ ನಾವೇ ಆರಿಸಿ ಕಳುಹಿಸಿದ ಜನನಾಯಕರ ಸ್ವಹಿತಾಸಕ್ತಿಯ ಬಜೆಟ್ನ್ನು ನಾವು ಒಪ್ಪಲೇ ಬೇಕಾಲ್ಲವೇ? ಬೆಲೆ ಯೇರಿಕೆಯಾಯಿತು, ಬಜೆಟ್ ಜನವಿರೋಧಿ ಎಂದು ಬೀದಿಗಿ ಳಿಯುವ ಎಡಪಂಥಿಯರದ್ದೂ ಸ್ವಹಿತಾಸಕ್ತಿ ಎನ್ನುವುದು ನೆನ ಪಿರಲಿ. ನಮಗೆಲ್ಲಾ ಗೊತ್ತಿರುವುದು ಬೆಲೆಯೇರಿಕೆಯ ಬಿಸಿ ಮುಟ್ಟಿ ಸುವ ಸಣ್ಣ ಅಂಗಡಿಯವನಲ್ಲಿ ಕಿತ್ತಾಡುವುದೇ ಹೊರತು ಇದ ಕ್ಕೆಲ್ಲಾ ಕಾರಣವಾಗುವ ನಮ್ಮ ಸಕರ್ಾರದ ಪ್ರತಿನಿಧಿಗಳಲ್ಲಲ್ಲ. ಹೀಗಾಗಿಯೋ ಏನೋ ನಾವು ಸಚಿನ್ ಶತಕದ ಬಗ್ಗೆಯೇ ಹೆಚ್ಚು ಚಿಂತಿತರಾಗಿದ್ದು.
No comments:
Post a Comment