ಬ್ಯಾರಿ ಚಿತ್ರದ ಅಸಲಿಯತ್ತು ನಮಗೇಕೇ ಇಷ್ಟವಾಗಲಿಲ್ಲ?
ಬ್ಯಾರಿ ಭಾಷೆಯ `ಬ್ಯಾರಿ ಚಿತ್ರಕ್ಕೆ ಮೊನ್ನೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಈ ಮೂಲಕ ಬ್ಯಾರಿ ಭಾಷೆಯಲ್ಲಿ ನಿಮರ್ಾಣಗೊಂಡ ಪ್ರಥಮ ಚಿತ್ರವೇ ರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಬ್ಯಾರಿ ಚಿತ್ರದ ಬಗ್ಗೆ ಮತ್ತು ಇಂದಿನ ವೀಕ್ಷಕರ ಮನಸ್ಥಿತಿಯ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಬೇಕೆನಿಸುತ್ತಿದೆ. ಬ್ಯಾರಿ ಎನ್ನುವುದು ಬ್ಯಾರಿ ಭಾಷೆಯಲ್ಲಿ ಬಿಡುಗಡೆಯಾದ ಪ್ರಾದೇಶಿಕ ಚಲನಚಿತ್ರ. ಚಿತ್ರ ಬಿಡುಗಡೆಯಾಗಿ ಹದಿನೈದು ದಿನ ಪ್ರದರ್ಶನ ಕಂಡು ಸಿನಿಮಾ ಮಂದಿರದಿಂದ ಎತ್ತಂಗಡಿಯಾಯಿತು. ಚಿತ್ರಕ್ಕೆ ಜನರ ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಿನಿಮಾವನ್ನು ಪ್ರೇಕ್ಷಕ ಒಪ್ಪಲಿಲ್ಲ! ಚಿತ್ರ ಸದ್ದಿಲ್ಲದೆ ಹೋದ ನಂತರ ಈ ವಿಚಾರದ ಬಗ್ಗೆ ಮತ್ತೆ ಯಾಕೆ ಮಾತನಾಡುತ್ತಿದ್ದೀರಿ ಎಂದು ಕೆಲವರು ಕೇಳಬಹುದು. ಆದರೆ ಪ್ರೇಕ್ಷಕರು ಇಷ್ಟಪಡದ ಚಿತ್ರವೊಂದು ರಾಷ್ಟ್ರೀಯ ಸಾಧನೆ ಮಾಡಿದಾಗ ಸ್ವಲ್ಪವಾದರೂ ಈ ಬಗ್ಗೆ ಹೇಳಬೇಕೆನಿಸಿತಷ್ಟೇ. ಹಾಗಂತ ರಾಷ್ಟ್ರ ಪ್ರಶಸ್ತಿ ಗೆದ್ದ ಮಾತ್ರಕ್ಕೆ ಈ ಚಿತ್ರವನ್ನು ಹೊಗಳುತ್ತಿಲ್ಲ. ಬದಲಾಗಿ ಇಂದಿನ ಪ್ರೇಕ್ಷಕರ ವಿಭಿನ್ನ ಅಭಿರುಚಿಯ ಮಧ್ಯೆ ಮರೆಯಾದ ಬ್ಯಾರಿ ಚಿತ್ರದ ಬಗ್ಗೆ ಹೇಳಬೇಕಾದ ಅನಿವಾರ್ಯತೆಯಿದೆ.
ನಮ್ಮಲ್ಲಿ ಪ್ರೀತಿ, ಕಾಮಿಡಿ, ಟ್ರಾಜಿಡಿಗಳ ಮಧ್ಯೆ ಚಿತ್ರದ ಕಥೆ ತಳುಕು ಹಾಕಿಕೊಂಡಿದ್ದರೆ ಮಾತ್ರ ಜನರ ಮನಸ್ಸು ಗೆಲ್ಲುವುದು. ಇದು ಈಗಾಗಲೇ ಸಾಬೀತಾಗಿದೆ ಕೂಡ. ಅದೇ ರೀತಿ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು ನೆಲಕಚ್ಚಿದ ಇತಿಹಾಸ ಒಂದೇ ಎರಡೇ. ಪ್ರಶಸ್ತಿಗಾಗಿ ಚಿತ್ರ ಮಾಡುತ್ತಾರೆ ಎಂದು ದೂರುವವರು ಇದ್ದಾರೆಯೇ ವಿನಃ ಟೀಕಿಸುವ ಮುನ್ನ ಚಿತ್ರ ಮಂದಿರದ ಮೆಟ್ಟಿಲು ಹತ್ತಿ ಚಿತ್ರ ವೀಕ್ಷಿಸುವ ಮಹಾನುಭಾವಾರು ಯಾರು ಇಲ್ಲ. ಕಲರ್ಫುಲ್ ನಾಯಕಿ, ಅಶ್ಲೀಲ ಡೈಲಾಗ್ಗಳು, ಅತಿಯಾಯಿತು ಎನಿಸುವ ದೃಶ್ಯಗಳ ಮಧ್ಯೆ ಹಿಂದಿನ ಕಾಲದ ಕಾದಂಬರಿ ಆಧಾರಿತ ಚಿತ್ರಗಳು ಹೇಗೆ ತಾನೆ ಮೇಲೆ ಬರಲು ಸಾಧ್ಯ. ನಮ್ಮ ಯುವ ಹೃದಯಗಳಿಗಂತೂ ಸಿನಿಮಾಗಳಲ್ಲಿ ಅಶ್ಲೀಲತೆ ಇಲ್ಲವಾದರೆ ಸಿನಿಮಾ ನೋಡುವುದೇ ಬೋರ್! ಪ್ರಾದೇಶಿಕ ಭಾಷಾ ಚಲನಚಿತ್ರ ರಂಗದ ಇತಿಹಾಸದಲ್ಲಿ ಕಾದಂಬರಿ ಆಧಾರಿತ ಚಿತ್ರಗಳೇ ಬಿಡುಗಡೆ ಕಾಣುತ್ತಿದ್ದವು. ಆದರೆ ತುಳು ರಂಗಭೂಮಿಯ ದಾಖಲೆಯ ನಾಟಕವೊಂದು ಸಿನಿಮಾವಾಗಿ ಮೂಡಿ ಬರುವ ಮೂಲಕ ಚಿತ್ರರಂಗದ ಇತಿಹಾಸಕ್ಕೆ ಅದ್ಭುತ ಎನಿಸುವಂಥ ಕಲಶವಿಟ್ಟಿತು. ಇನ್ನು ಇಲ್ಲಿ ಉಲ್ಲೇಖಿಸಿರುವ ಬ್ಯಾರಿ ಚಿತ್ರವನ್ನೇ ತೆಗೆದುಕೊಳ್ಳಿ. ಇಲ್ಲಿ ಅಶ್ಲೀಲತೆಯಿರಲಿಲ್ಲ, ಹಾಸ್ಯದ ರಸದೂಟವೂ ಇಲ್ಲ, ಅಂತಿಮವಾಗಿ ಇಂದಿನ ಯುವ ಜನತೆ ಬಯಸುವ ವಿಚಿತ್ರ ಪ್ರೀತಿಯ ಕಲ್ಪನೆಯಂತೂ ಇಲ್ಲವೇ ಇಲ್ಲ. ಈ ಎಲ್ಲಾ ಕಾರಣದಿಂದಲೋ ಏನೋ ಬ್ಯಾರಿ ಚಿತ್ರ ಮೂಲೆಗುಂಪಾದದ್ದು. ಇನ್ನು ತುಳು ಚಿತ್ರರಂಗದಲ್ಲಿ ದಾಖಲೆ ಬರೆದ `ಅಸಲ್ ನಲ್ಲಿ ಇವೆಲ್ಲವೂ ಇತ್ತು. ಈ ಕಾರಣದಿಂದ ಅಸಲ್ ಗೆದ್ದಿತು. ಆದರೆ ಬ್ಯಾರಿ ಮಾತ್ರ ಜನರ ಮನ ಗೆಲ್ಲುವಲ್ಲಿ ವಿಫಲವಾಯಿತು. ಬ್ಯಾರಿ ಸದ್ದಿಲ್ಲದೆ ಚಿತ್ರ ಮಂದಿರದಿಂದ ಹೋದಾಗ ಚಿತ್ರವನ್ನು ನೋಡದೆಯೇ ಕೆಟ್ಟದಾಗಿ ವಿಮಶರ್ಿಸಿದವರು ಎಷ್ಟೋ ಮಂದಿ. ಬ್ಯಾರಿ ಭಾಷೆಯ ಚಿತ್ರವನ್ನು ತುಳುನಾಡಿನಲ್ಲಿ ನೋಡುವುದಿಲ್ಲ ಎಂದವರೂ ಇದ್ದಾರೆ. ಆದರೆ ಚಿತ್ರವನ್ನು ವೀಕ್ಷಿಸುವ ಕೆಲಸವನ್ನು ಮಾತ್ರ ಇಂಥವರು ಮಾಡಲಿಲ್ಲ. ಇನ್ನು ಬ್ಯಾರಿ ಚಿತ್ರ ಅಸಲ್ನಷ್ಟು ಪ್ರಚಾರ ಗಿಟ್ಟಿಸುವುದರಲ್ಲೂ ವಿಫಲವಾಗಿತ್ತು. ಈ ಎಲ್ಲಾ ಕಾರಣಗಳಿಂದ ಬ್ಯಾರಿ ಜನರ ಬಳಿ ಸುಳಿಯುವ ಪ್ರಯತ್ನದಲ್ಲಿ ವಿಫಲವಾಯಿತು ಎಂದರೆ ಖಂಡಿತಾ ತಪ್ಪಿಲ್ಲ. ಆದರೆ ಇಂದು ಅದೇ ಚಿತ್ರ ರಾಷ್ಟ್ರೀಯ ಮನ್ನಣೆ ಗಳಿಸಿದೆ. ಪತ್ರಿಕೆಗಳು ಕೂಡ ಬ್ಯಾರಿಯ ಯಶಸ್ಸನ್ನು ಹಾಡಿ ಹೊಗಳುತ್ತಿವೆ. ಒಂದು ಹಂತದಲ್ಲಿ ಸೋತ ಚಿತ್ರ ಈಗ ಗೆದ್ದಿದೆ. ರಾಷ್ಟ್ರ ಮಟ್ಟದ ಸಾಧನೆ ಮಾಡಿದೆ. ಬಹುಶಃ ಈ ರೀತಿಯ ಕಾರಣಗಳಿಂದಲೋ ಏನೋ ಐಶ್ವರ್ಯ ರೈ, ಸುನೀಲ್ ಶೆಟ್ಟಿ, ಮುಂತಾದ ಕರಾವಳಿಯ ಪ್ರತಿಭೆಗಳು ನಮ್ಮ ಕೈ ಜಾರಿದ್ದು. ಇನ್ನಾದರೂ ಪ್ರಾದೇಶಿಕ ಭಾಷೆಯ ಚಿತ್ರಗಳು ಎಂಬ ಅಸಡ್ಡೆ ಬೇಡ. ರಾಷ್ಟ್ರ ಪ್ರಶಸ್ತಿ ಎನ್ನುವುದು ಫೈನಲ್ ಸಟರ್ಿಫಿಕೇಟ್ ಎಂದು ಭಾವಿಸಿ ಬ್ಯಾರಿ ಚಿತ್ರವನ್ನು ವೀಕ್ಷಿಸಬಹುದಾಗಿತ್ತು ಎನ್ನುವುದು ನನ್ನ ವಾದವಲ್ಲ. ಬದಲಾಗಿ ಅರ್ಥವಾಗದ ಭಾಷೆಯ ಚಿತ್ರಗಳಿಗೆ ವ್ಯಯಿಸುವ ಹಣ, ಸಮಯವನ್ನು ನಮ್ಮದೇ ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸುವುದರಲ್ಲೂ ವ್ಯಯಿಸಬಹುದಲ್ಲವೇ?

No comments:
Post a Comment