ರಾತ್ರೀ ದುಶ್ಮನ್ಗಳೂ ನೆನಪಾಗ್ತಾರೆ!
ಒಬ್ಬ ವ್ಯಕ್ತಿ ಎಷ್ಟೇ ಪವರ್ಫುಲ್ ಇರಲಿ, ಕೋಪಿಷ್ಟ ಆಗಿರಲಿ, ಪಕ್ಕಾ 420 ಆಗಿರಲಿ. ಒಮ್ಮೆ ಒಂದು ಫೀಲಿಂಗ್ ಸಾಂಗ್ ಹಾಕೊಂಡು ಒಬ್ಬನೇ ಬೆಟ್ಟದ ತುದೀಲೋ, ಮರದ ಬುಡದಲ್ಲೋ ಅಥವಾ ಯಾರೂ ಇಲ್ಲದೇ ಇರೋ ಸೈಲೆಂಟ್ ಜಾಗದಲ್ಲೋ ಕೂತರೆ ಆತ ತನ್ನನ್ನೇ ತಾನು ಮರೆತು ಬಿಡ್ತಾನೆ. ಸ್ವಲ್ಪ ಸೆನ್ಸಿಟಿವ್ ಅಂತ ಇಟ್ಕೊಳ್ಳಿ, ಆತನ ಕಣ್ಣಿಂದ ಒಂದು ಹನಿ ನೀರು ಜಾರಿದರೂ ಆಶ್ಚರ್ಯ ಇಲ್ಲ ಬಿಡಿ. ಮನುಷ್ಯನ ಜೀವನವೇ ಹಾಗೆ ಕಣ್ರೀ. ನಾವು ಒಬ್ಬರನ್ನು ತುಂಬಾ ಹೊಗಳ್ತೀವಿ, ಇನ್ನು ಕೆಲವರನ್ನು ನಮ್ಮ ದ್ವೇಷಿ ಅಲ್ಲದೇ ಇದ್ದರೂ ಸುಮ್ ಸುಮ್ಮನೆ ತೆಗಳ್ತೀವಿ. ಅದೇ ರಾತ್ರಿ ಮಲಗೋವಾಗ ಒಮ್ಮೆ ನಮ್ಮ ಸೋಕಾಲ್ಡ್ ದ್ವೇಷಿಗಳನ್ನು ನೆನಪು ಮಾಡಿಕೊಳ್ಳಿ. ಒನ್ಟೈಮ್ ಅವರೂ ಕೂಡ ನಮಗೆ ತುಂಬಾ ಹತ್ತಿರ ಆಗ್ತಾರೆ. ಬೇಕಾದ್ರೆ ರಾತ್ರೀ ಮಲಗೋ ಮುಂಚೆ ಟ್ರೈ ಮಾಡಿ. ನಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಸಿಗೋರೆಲ್ಲಾ ನಮಗೆ ದುಷ್ಮನ್ಗಳೇ. ಆದ್ರೆ ರಾತ್ರೀ ಮಲಗೋವಾಗ ಜಸ್ಟ್ ರಿಲ್ಯಾಕ್ಸ್ ಆಗ್ತೀವಲ್ಲ. ಆವಾಗ ನಾವ್ ಯಾರನ್ನಾ ದುಶ್ಮನ್ ಅಂದುಕೊಳ್ತೀವೋ, ಅವರೂ ಕೂಡ ತುಂಬಾ ಹತ್ತಿರ ಆಗ್ತಾರೆ..........ಜಸ್ಟ್ ಫೀಲ್ ಇಟ್....
ಮತ್ತೆ ಕೆಲವೊಮ್ಮೆ, ನಾವು ತುಂಬಾ ಇಷ್ಟ ಪಟ್ಟವರು ನಾವು ಮಲಗೋವಾಗ ನಮಗೆ ದುಶ್ಮನ್ ಥರ ಕಾಣ್ತಾರೆ...ಯಾಕ್ ಗೊತ್ತಾ? ಹಗಲೊತ್ತಲ್ಲಿ ಅವರು ನಮ್ ಜೊತೆ ಮಾತಾಡ್ಲಿಲ್ಲ ಅಂದ್ರೆ ಮಾತ್ರ! ಬಹುಶಃ ಇದೇ ಇರಬೇಕು ಮನುಷ್ಯ ಪ್ರೀತೀಲಿ ಅನುಭವಿಸೋ ಗೊಂದಲಗಳು.....!
ಮತ್ತೆ ಕೆಲವೊಂದು ವಿಚಾರಗಳೇ ಹಾಗೆ. ಯಾರಲ್ಲಿ ಹೇಳಬೇಕು ಅನಿಸುತ್ತೋ ಅವರಲ್ಲೇ ಹೇಳಬೇಕು. ಅಪ್ಪಿ ತಪ್ಪೀನೂ ಇನ್ನೊಬ್ಬರ ಹತ್ತಿರ ಹೇಳೋದಕ್ಕೆ ಸಾಧ್ಯನೇ ಇಲ್ಲ. ನಾವು ಯಾರನ್ನೂ ಹೆಚ್ಚು ಇಷ್ಟ ಪಡ್ತೀವೋ ಅವರ ಹತ್ತಿರ ಮಾತ್ರ ನಮ್ಮ ಮನದ ಭಾವನೆಗಳು ಪ್ರಕಟವಾಗೋದು. ಆದ್ರೆ ಒಮ್ಮೊಮ್ಮೆ ಅವರತ್ರಾನೂ ಸುಳ್ಳು ಹೇಳ್ತೀವಿ. ಯಾಕೆ ಅಂತೀರಾ? ಅದೇ ಕಣ್ರೀ, ಬಡ್ಡಿ ಮಗಂದೂ ಸ್ವಾಭಿಮಾನ....! ಇಷ್ಟ ಪಟ್ಟವರತ್ರ ಒಳ್ಳೆದನ್ನು...ಅವರು ನಮ್ಮ ಬಗ್ಗೆ ತಪ್ಪು ತಿಳ್ಕೋಳ್ಳದೇ ಇರೋ ವಿಚಾರಗಳನ್ನು ಮಾತ್ರ ಹೇಳ್ತೀವಿ. ಎಲ್ಲಾನೂ ಹೇಳ್ ಬಿಟ್ರೆ ಮನುಷ್ಯನಿಗೆ ಎಲ್ರೀ ಇರುತ್ತೆ ಸಮಸ್ಯೆ....ಹೌದಲ್ವಾ?
ನಾನ್ ಹೇಳಿದ್ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.....ಜಸ್ಟ್ ಫೀಲ್ ಇಟ್....ನಿಮಗೆ ಈ ಅನುಭವ ಆಗಿದ್ರೆ.....ಮನಸ್ಸಲ್ಲೇ ಒಂದ್ ಸ್ಮೈಲ್ ಕೊಟ್ ಬಿಡಿ ಸಾಕು....ಓಕೇನಾ...?
No comments:
Post a Comment