Thursday, 27 October 2016

ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!


ಭರತ್ ರಾಜ್
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು

ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು ಕೊಟ್ಟವನಲ್ಲ. ಸುದ್ದಿ ಮಾಡಲು ಹೋದಾಗ ಮತ್ತು ಸುದ್ದಿ ಮಾಡಿದ ನಂತರ ಅಷ್ಟೂ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದೆ. ಆದರೆ ಇವತ್ತು ಮಾತ್ರ ಅಂತಿಮವಾಗಿ `ಅವರ’ ವಿರುದ್ದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಕೊನೆಗೂ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಮುಂದಿನದ್ದು ಕಾನೂನು ಹೋರಾಟವಷ್ಟೇ. ಹೌದು, ನಿನ್ನೆ ಸೂರಲ್ಪಾಡಿ ಮಸೀದಿಯಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನನಗೆ ಮತ್ತು ನನ್ನ ಮಿತ್ರರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು. ಈ ಹಿಂದೆ ಎಲ್ಲಾ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದ ನನ್ನನ್ನು ಸೂರಲ್ಪಾಡಿ ಘಟನೆ ಮಾತ್ರ ಕೊನೆಗೂ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ.

ಅಷ್ಟರ ಮಟ್ಟಿಗೆ ಘಟನೆಯ ಗಂಭೀರತೆ ನನ್ನನ್ನು ತಟ್ಟಿದೆ ಅಂದುಕೊಳ್ಳುತ್ತೇನೆ. ಅಷ್ಟಕ್ಕೂ ಆ ದಿನ ನಡೆದದ್ದು ಏನು ಅನ್ನೋದನ್ನು ಕೂಡ ವಿವರಿಸೋದು ಈಗ ಅನಿವಾರ್ಯ. ಯಾಕೆಂದರೆ ಈ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಒಂದಷ್ಟು ಜನ ಕೇಸು ಕೊಡೋ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಅದೆಲ್ಲಾ ಸಹಜ ಅನ್ನುವಂತೆಯೂ ಮಾತನಾಡಿದ್ದಾರೆ. ಆದರೆ ಈ ಹಿಂದೆ ಅದೆಷ್ಟೂ ಸಹಜತೆಗಳನ್ನ ಕಂಡಿದ್ದ ನನಗೆ ಸೂರಲ್ಪಾಡಿಯ ದಾಳಿ ಮಾತ್ರ ಸಹಜತೆಗಳನ್ನು ಮೀರಿ ಆತಂಕವನ್ನು ಹುಟ್ಟುಹಾಕಿದೆ. ಹೀಗಾಗಿ ನನಗೆ ಆ ಘಟನೆ ಅಷ್ಟು ಅಪಾಯಕಾರಿ ಅನಿಸಿದ್ದು ಯಾಕೆ ಅನ್ನೋದನ್ನು ವಿವರಿಸುತ್ತೇನೆ…

ಪತ್ರಕರ್ತ ಅಂದ ಮೇಲೆ ಸುದ್ದಿಗಳು ಹರಸಿ ಬರೋದು ಸಾಮಾನ್ಯ. ಹೀಗೆ ಘಟನೆ ನಡೆದ ಮುನ್ನ ದಿನ ನಮ್ಮ ತಂಡಕ್ಕೂ ಸೂರಲ್ಪಾಡಿಯ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದ ಸುದ್ದಿ ಬಂದಿತ್ತು. ಸ್ವತಃ ಸಂತ್ರಸ್ಥರೇ ಮಾಧ್ಯಮ ಮಿತ್ರರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆದ ನಾವು ಘಟನೆಯ ಗಂಭೀರತೆಯ ಬಗ್ಗೆ ವಿವರಗಳನ್ನು ಪಡೆದುಕೊಂಡೆವು. ಈ ವೇಳೆ ಮೇಲ್ನೋಟಕ್ಕೆ ಅವರಿಗೆ ಅನ್ಯಾಯವಾಗಿರೋದು ಒಂದು ಹಂತಕ್ಕೆ ಸ್ಪಷ್ಟವಾಗಿ ಕಂಡಿತ್ತು. ಹೀಗಾಗಿ ನೊಂದವರ ಪರವಾಗಿ ಸುದ್ದಿ ಮಾಡೋದು ಪತ್ರಕರ್ತರಾಗಿ ನಮ್ಮ ಧರ್ಮ. ಹಾಗಂತ ನೊಂದವರ ಪರವಾಗಿ ನಿಲ್ಲೋ ಭರದಲ್ಲಿ ವಿರೋಧಿ ಬಣವನ್ನು ಆರೋಪಿಗಳೇ ಅಂತ ಪಕ್ಕಾ ಜಡ್ಜ್ ಮೆಂಟ್ ಕೊಡೋ ಪತ್ರಕರ್ತರಂತು ನಾವಲ್ಲ. ಹೀಗಾಗಿ ಸಂತ್ರಸ್ಥರು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸೋ ಎದುರು ಬಣದವರನ್ನು ಕೂಡ ಮಾತನಾಡಿಸಿ ಸುದ್ದಿಗೊಂದು ಸ್ಪಷ್ಟತೆ ಕೊಡೋದು ನಮ್ಮ ಉದ್ದೇಶ. ಈ ಹಿಂದೆಯೂ ನಾನು ಸೇರಿದಂತೆ ನನ್ನ ಜೊತೆಗಿರುವ ಅಷ್ಟೂ ಜನ ಮಾಧ್ಯಮ ಮಿತ್ರರು ಪತ್ರಕರ್ತರಾಗಿ ಒನ್ ಸೈಡ್ ಸುದ್ದಿ ಮಾಡಿಲ್ಲ. ಯಾವುದೇ ಸುದ್ದಿಯಿರಲಿ ಎರಡೂ ಕಡೆಯ ವಿಚಾರಗಳನ್ನು ಆಲಿಸಿ ಅಂತಿಮ ವಿಮರ್ಶೆಯ ನಂತರವೇ ಅಲ್ಲೊಂದು ಸಾಮಾಜಿಕ ಜವಾಬ್ದಾರಿಯ ವರದಿ ತಯಾರಾಗುತ್ತಿತ್ತು.



ಈ ಪ್ರಕರಣದಲ್ಲೂ ನಾವು ಯಥಾವತ್ ವಿರೋಧಿ ಬಣ ಅಂತ ಕರೆಸಿಕೊಳ್ಳೋ ಸೂರಲ್ಪಾಡಿ ಮಸೀದಿ ಆಡಳಿತದ ಸ್ಪಷ್ಟನೆ ಕೇಳಲು ಮುಂದಾದೆವು. ಹೀಗಾಗಿ ನಿನ್ನೆ ಬೆಳಿಗ್ಗೆ ಸರಿಯಾಗಿ 7.55ಕ್ಕೆ ಬಿಟಿವಿ ವರದಿಗಾರನಾದ ನಾನು, ನನ್ನ ಕ್ಯಾಮರಾಮ್ಯಾನ್ ನಾಗೇಶ್ ಪಡು, ಟಿವಿ9 ಕ್ಯಾಮಾರಮ್ಯಾನ್ ವಿಲ್ಫ್ರೆಡ್ ಡಿಸೋಜಾ ಮತ್ತು ಸುದ್ದಿ ಟಿವಿ ಪ್ರತಿನಿಧಿ ಇರ್ಷಾದ್ ಉಪ್ಪಿನಂಗಡಿ ಜೊತೆಗೆ ಸೂರಲ್ಪಾಡಿ ಮಸೀದಿಗೆ ತೆರಳಿದೆವು. ಬೆಳಿಗ್ಗೆ ಎಂಟು ಘಂಟೆಗೆ ಮದರಸ ಬಿಡುವ ಕಾರಣ ಅಷ್ಟು ಬೇಗನೇ ಅಲ್ಲಿಗೆ ತೆರಳೋದು ನಮಗೆ ಅನಿವಾರ್ಯವಾಗಿತ್ತು. ಅದರಲ್ಲೂ ಮದರಸದಲ್ಲಿ ಸಂತ್ರಸ್ಥರ ಮಕ್ಕಳಿಗೆ ಬಹಿಷ್ಕಾರ ಹಾಕಿರೋ ಕಾರಣದಿಂದ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಸುದ್ದಿ ಪ್ರಾಮುಖ್ಯತೆ ಪಡೆದಿತ್ತು. ಹೀಗಾಗಿ ಎಂಟು ಘಂಟೆಗೆ ಮದರಸ ಬಿಡುವ ದೃಶ್ಯಗಳನ್ನು ರಸ್ತೆಯಲ್ಲಿ ನಿಂತೇ ಚಿತ್ರೀಕರಿಸಿಕೊಂಡೆವು. ನಂತರ ಅಲ್ಲಿಂದ ನೇರವಾಗಿ ಮಸೀದಿ ಆವರಣಕ್ಕೆ ಹೋಗಿ ಅಲ್ಲೇ ಇದ್ದ ಮದರಸದ ಗುರುಗಳಲ್ಲಿ ನಮಗೆ ಬಂದ ಆರೋಪಗಳ ಬಗ್ಗೆ ವಿಚಾರಿಸಿದ್ದೇವೆ. ಈ ವೇಳೆ ಅವರು ಕೂಡ ನಮಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ತಾತ್ಕಾಲಿಕವಾಗಿ ದೂರುದಾರರ ಮಕ್ಕಳು ಮದರಸ ಮತ್ತು ಮಸೀದಿಗೆ ಬಾರದಂತೆ ಬಹಿಷ್ಕಾರ ಹಾಕಿರೋದರ ಬಗ್ಗೆ ತಿಳಿಸಿದರು. ಅಲ್ಲದೇ ಈ ಬಗ್ಗೆ ಇರೋ ವಿವಾದಗಳ ಬಗ್ಗೆಯೂ ಬೆಳಕು ಒಂದಷ್ಟು ಬೆಳಕು ಚೆಲ್ಲಿದರು. ಆದರೆ ಅಷ್ಟರಲ್ಲಾಗಲೇ ಸುಮಾರು ಹತ್ತು ಮಂದಿಯ ತಂಡವೊಂದು ಮಸೀದಿ ಆವರಣಕ್ಕೆ ನುಗ್ಗಿ ನಮ್ಮನ್ನ ಮಾತನಾಡೋಕು ಬಿಡದೇ ತೀರಾ ಕೆಳಮಟ್ಟದ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸೋಕೆ ಆರಂಭಿಸಿದ್ದಾರೆ. ಅಲ್ಲದೇ ನಮ್ಮ ಕೈಯ್ಯಲ್ಲಿದ್ದ ಚಾನೆಲ್ ಮೈಕ್ ಕಿತ್ತುಕೊಂಡು ಕ್ಯಾಮಾರದಲ್ಲಿದ್ದ ದೃಶ್ಯಗಳನ್ನು ಡಿಲೀಟ್ ಮಾಡೋದಕ್ಕೆ ಹೇಳಿ ಬೆದರಿಕೆ ಹಾಕಿದ್ದಾರೆ. ನಾವು ಪತ್ರಕರ್ತರು ಅಂತ ಗೊತ್ತಿದ್ದರೂ ನಮ್ಮಲ್ಲಿ ಮಾತನಾಡಲೂ ಬಿಡದೇ ಮಸೀದಿ ಆವರಣದಿಂದ ನಮ್ಮನ್ನು ಹೊರಗೆಳೆದುಕೊಂಡು ಬಂದಿದ್ದಾರೆ.

ನಂತರ ನಮ್ಮ ಬಿಟಿವಿ ಕ್ಯಾಮಾರಮ್ಯಾನ್ ನಾಗೇಶ್ ಮತ್ತು ಸುದ್ದಿ ಟಿವಿಯ ಇರ್ಷಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸುಮಾರು ಐವತ್ತು ಮಂದಿ ನಮ್ಮನ್ನು ಸುತ್ತುವರಿದ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ನಿಂದಿಸಿದ್ದಲ್ಲೇ ಕ್ಯಾಮಾರ ಕಿತ್ತುಕೊಂಡು ಕ್ಯಾಸೆಟ್ ಮತ್ತು ಮೆಮೋರಿ ಕಾರ್ಡ್‍ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ವಿರೋಧಿಸಿದರೂ ಬಿಡದೇ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿದ ಆರೋಪಿಗಳು ನಾವು ಬಂದಿದ್ದ ಕಾರಿನ ಕೀಯನ್ನ ಕೂಡ ಕಿತ್ತುಕೊಂಡು ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ನಮ್ಮ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಅದ್ಯಾಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಂತರ ಪಕ್ಕದ ರಸ್ತೆಗೆ ಬಂದು ಬೆಳಿಗ್ಗೆ ಸುಮಾರು 8.20ಕ್ಕೆ ಡಿಸಿಪಿ ಶಾಂತರಾಜು ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಘಟನೆಯ ಗಂಭೀರತೆ ಅರಿತ ಅವರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸುಮಾರು 8.30ರ ವೇಳೆಗೆ ಬಜಪೆ ಠಾಣಾಧಿಕಾರಿ ನಾಗರಾಜ್ ಅವರು ನನ್ನನ್ನು ಸಂಪರ್ಕಿಸಿ ಪೊಲೀಸ್ ಕಳಿಸಿರೋದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ದೂರದಲ್ಲೇ ನಿಂತು ಘಟನೆಯನ್ನು ಗಮನಿಸುತ್ತಿದ್ದ ನಾನು ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದೆ. ಉಗ್ರರ ಕೈಯ್ಯಲ್ಲಿ ಸಿಲುಕಿದ ಸಂತ್ರಸ್ಥರಂತೆ ನಮ್ಮ ತಂಡದ ಮೂವರು ಪತ್ರಕರ್ತರು ಅವರ ಕೈಯ್ಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು. ಇಷ್ಟಾಗಿದ್ದೇ ತಡ ಯಾರೋ ಮಸೀದಿಯ ಮೈಕ್ ನಲ್ಲಿ ಜಮಾತಿಗೆ ಸೇರಿದ ಎಲ್ಲರೂ ತಕ್ಷಣ ಮಸೀದಿ ಆವರಣಕ್ಕೆ ಬರುವಂತೆ ಘೋಷಣೆ ಮಾಡಿದ್ಧಾರೆ. ದುರಂತ ಅಂದ್ರೆ ಕೇವಲ ಧಾರ್ಮಿಕಪ್ರವಚನ ಮತ್ತು ಬಾಂಗ್ ನೀಡೋಕೆ ಬಳಕೆಯಾಗೋ ಮಸೀದಿಯ ಮೈಕ್ ನಿನ್ನೆಯ ಘಟನೆಯಲ್ಲಿ ನಮ್ಮ ವಿರುದ್ದ ಜನ ಸೇರಿಸಿ ದೌರ್ಜನ್ಯ ಎಸಗೋ ಅಸ್ತ್ರವಾಗಿದ್ದು ಮಾತ್ರ ನಿಜಕ್ಕೂ ದುರಂತ. ಹೀಗಾಗಿ ದೂರದಿಂದಲೇ ಎಲ್ಲವನ್ನು ಗಮನಿಸ್ತಾ ಇದ್ದ ನಾನು ಮಸೀದಿಯ ಮೈಕ್ ನಲ್ಲಿ ಮಾಡಿದ ಘೋಷಣೆಯನ್ನ ಕೇಳಿ ಇನ್ನಷ್ಟು ಆತಂಕಕ್ಕೊಳಗಾದೆ. ಹೀಗಿರೋವಾಗಲೇ ಮಸೀದಿ ಆವರಣಕ್ಕೆ ಜನರ ದಂಡೇ ಆಗಮಿಸ್ತಾ ಇತ್ತು. ನೋಡನೋಡುತ್ತಿದ್ದಂತೆ ನಮ್ಮ ಮೂವರು ಮಾಧ್ಯಮ ಮಿತ್ರರನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಸುತ್ತುವರಿದು ದೌರ್ಜನ್ಯ ಆರಂಭಿಸಿದ್ದರು. ಆದರೆ ಅಷ್ಟು ಜನರ ಮುಂದೆ ನಮ್ಮವರನ್ನ ಉಳಿಸುವಲ್ಲಿ ಅಸಹಾಯಕನಾಗಿದ್ದ ನನಗೆ ಪೊಲೀಸರು ಅಲ್ಲಿಗೆ ಬರುವವರೆಗೆ ಬೇರೆ ದಾರಿ ಕಾಣಲೇ ಇಲ್ಲ. ಹೀಗೆ ಸಮಯ 9 ಕಳೆದರೂ ಪೊಲೀಸರು ಬರಲೇ ಇಲ್ಲ. ಕೊನೆಗೆ ನಮ್ಮವರನ್ನು ಕಾರಿನೊಳಗೆ ನೂಕಿದ ರಾಕ್ಷಸರು ಕಾರಿಗೆ ಗುದ್ದಿ, ನಮ್ಮವರ ಮೇಲೆ ಹಲ್ಲೆ ನಡೆಸುತ್ತಾ, ಕ್ಯಾಮಾರದ ಮೆಮೋರಿ ಕಿತ್ತುಕೊಂಡು ಪುಡಿಗಟ್ಟಿದ್ರು. ಅಲ್ಲದೇ ಕ್ಯಾಮಾರಕ್ಕೂ ಹಾನಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಬರಲೇ ಇಲ್ಲ.

ಕೊನೆಗೆ 9.20ರ ವೇಳೆಗೆ ಪಿಸಿಆರ್ ವಾಹನದಲ್ಲಿ ಇಬ್ಬರು ಪೊಲೀಸರು ಆಗಮಿಸಿದ್ರು. ಆದ್ರೆ ಈ ಇಬ್ಬರು ಪೊಲೀಸರ ಮಾತನ್ನೂ ಕೇಳದ ಜನ ಪೊಲೀಸರ ಎದುರೇ ನಮ್ಮವರನ್ನು ಬೆಂಕಿ ಹಾಕಿ ಸುಡೋದಾಗಿ ಬೊಬ್ಬಿಡುತ್ತಿದ್ದರು. ಅಲ್ಲದೇ ಕಟ್ಟಿ ಹಾಕಿ ಥಳಿಸೋದಾಗಿಯೂ ಏರು ಧ್ವನಿಯಲ್ಲೇ ಪೊಲೀಸರ ಎದುರೇ ಗುಡುಗಿದ್ದು ದುರಂತ. ಆದ್ರೆ ಇಷ್ಟಾದ್ರೂ ಪೊಲೀಸರಿಗೆ ಮಾತ್ರ ಅವ್ರನ್ನ ನಿಯಂತ್ರಿಸಿ ನಮ್ಮವರನ್ನು ಬಿಡಿಸೋದಕ್ಕೆ ಸಾಧ್ಯವಾಗಲೇ ಇಲ್ಲ. ಇಷ್ಟಾಗಿ 9.45ರ ವೇಳೆಗೆ ಬಜಪೆ ಎಸ್ಸೈ ಸತೀಶ್ ಕುಮಾರ್ ಸ್ಥಳಕ್ಕೆ ಬಂದ್ರು. ಈ ವೇಳೆ ನಾನು ಕೂಡ ಪೊಲೀಸ್ ಅಧಿಕಾರಿಯ ಆಗಮನದ ನಂತ್ರ ಸ್ಥಳಕ್ಕೆ ಬಂದೆ. ಈ ವೇಳೆ ಕೆಲ ಕಿಡಿಗೇಡಿಗಳು ನನ್ನನ್ನು ಸುತ್ತುವರಿದು ಹಲ್ಲೆಗೆ ಮುಂದಾದ್ರೂ. ಅದಾಗಲೇ ನಮ್ಮವರ ಮೊಬೈಲ್ ಕಿತ್ತುಕೊಂಡಿದ್ದ ರಾಕ್ಷಸರು ನನ್ನ ಮೊಬೈಲ್ ಕೂಡ ಕಿತ್ತುಕೊಳ್ಳೋಕೆ ಆರಂಭಿಸಿದ್ರು. ಆದ್ರೆ ಎಸ್ಸೈ ಸತೀಶ್ ಅವ್ರನ್ನ ತಡೆದು ನಮ್ಮವ್ರನ್ನ ಕೂಡ ಅವ್ರ ಬಂಧನದಿಂದ ಬಿಡಿಸಿದ್ರು. ಹೀಗಾದ್ರೂ ಅಲ್ಲಿದ್ದವ್ರು ಪೊಲೀಸರ ಮುಂದೆಯೇ ನಮ್ಮ ವಿರುದ್ದ ಅಬ್ಬರಿಸಿದ್ರು. ಮಸೀದಿಯ ಒಳಗೆ ಕರೆದುಕೊಂಡು ಹೋಗಿ ಬಹಿರಂಗ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ರು. ದುರಂತ ಅಂದ್ರೆ ಮಸೀದಿಯಲ್ಲಿ ಬಾಂಗ್ ಕೊಡೋ ಮೈಕ್ ನಲ್ಲೇ ಇಡೀ ಊರಿಗೆ ಕೇಳುವಂತೆ ಪತ್ರಕರ್ತನಾದ ನಾನು ಕ್ಷಮೆ ಕೇಳಬೇಕು ಅನ್ನೋದು ಅವ್ರ ಆಗ್ರಹವಾಗಿತ್ತು. ಅಲ್ಲದೇ ನನ್ನ ಅಷ್ಟೂ ಕ್ಷಮಾಪನ ಹೇಳಿಕೆಯನ್ನ ಪತ್ರದಲ್ಲಿ ದಾಖಲಿಸಿ ಸಹಿ ಹಾಕೋದ್ರ ಜೊತೆಗೆ ಮೊಬೈಲ್ ಮುಂದೆಯೂ ಹೇಳಿಕೆ ನೀಡುವಂತೆ ಅಲ್ಲಿದ್ದ ಅಷ್ಟೂ ಜನ ಬೆದರಿಸಿದ್ರು. ಇಲ್ಲದೇ ಇದ್ರೆ ಇಲ್ಲಿಂದ ಹೊರ ಹೋಗೋದಕ್ಕೆ ಬಿಡೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಅವ್ರ ದೌರ್ಜನ್ಯ ಬಂದು ನಿಂತಿತ್ತು. ಆದ್ರೆ ಈ ಎಲ್ಲಾ ಘಟನೆಗೆ ಸ್ವತಃ ಪೊಲೀಸ್ ಅಧಿಕಾರಿ ಕೂಡ ಸಾಕ್ಷಿಯಾಗಿದ್ದು ಮಾತ್ರ ದುರಂತ. ಹೀಗಾಗಿ ತಪ್ಪೇ ಮಾಡದ ನಾನು ಕ್ಷಮೆ ಕೇಳೋದಕ್ಕೆ ಒಪ್ಪಲಿಲ್ಲ. ಬೇಕಾದ್ರೆ ಶೂಟ್ ಮಾಡಿರೋ ಅಷ್ಟು ದೃಶ್ಯಗಳನ್ನ ಡಿಲೀಟ್ ಮಾಡಿ ಜೀವ ಉಳಿಸಿಕೊಳ್ಳೋದಕ್ಕೆ ಸಿದ್ದನಾದೆ. ಕೊನೆಗೆ ಪೊಲೀಸರಿಗೂ ನಮ್ಮನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಹೋಗಲು ಅವ್ರು ಹೇಳೋ ಎಲ್ಲಾ ಮಾತಿಗೂ ತಲೆಯಾಡಿಸೋದು ಅನಿವಾರ್ಯವಾಗಿತ್ತು. ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ಅವರು ಹೇಳಿದ್ದನ್ನು ನಮ್ಮ ಕೈಯ್ಯಲ್ಲಿ ಮಾಡಿಸಿ ನಮ್ಮನ್ನು ಅಲ್ಲಿಂದ ಬಿಟ್ಟು ಕಳಿಸಿದರು. ಆದ್ರೆ ತಪ್ಪೇ ಮಾಡದ ನಾವು ಮಾತ್ರ ಅವ್ರ ಬಳಿ ಕ್ಷಮೆ ಕೇಳದೇ ನಮ್ಮಲ್ಲಿದ್ದ ಶೂಟ್ ಮಾಡಿದ ದೃಶ್ಯಗಳನ್ನು ಡಿಲೀಟ್ ಮಾಡಲು ಒಪ್ಪಿಕೊಂಡೆವು. ಅಲ್ಲದೇ ಮಸೀದಿಯ ಸುದ್ದಿ ಕೂಡ ಟಿವಿಯಲ್ಲಿ ಬರಲೇ ಬಾರದು ಅಂತೆಲ್ಲಾ ಎಚ್ಚರಿಕೆ ನೀಡಿದ ಅವರು ಅದಕ್ಕೆಲ್ಲಾ ಒಪ್ಪಿಗೆ ಸೂಚಿಸಿದ ಮೇಲೆಯೇ ನಮ್ಮನ್ನ ಬಿಟ್ಟು ಕಳುಹಿಸಿದ್ದು…….ನಿಜಕ್ಕೂ ಅಲ್ಲಿ ನಾವು ಕಳೆದ ಆ ಎರಡು ಘಂಟೆಗಳು ಅತ್ಯಂತ ಭಯಾನಕ.

ಉಗ್ರರ ಒತ್ತೆಯಾಳುಗಳಾಗಿ ಸಾವಿನ ಬಾಗಿಲು ತಟ್ಟಿ ಬಂದ ಅನುಭವ ನಮ್ಮದ್ದು. ಯಾಕೆಂದ್ರೆ ಅಲ್ಲಿದ್ದ ಒಬ್ಬೊಬ್ಬರದ್ದು ಒಂದೊಂಥರ ವರ್ತನೆ. ಒಬ್ಬರು ಹಲ್ಲೆ ನಡೆಸೋಕೆ ಬಂದ್ರೆ ಇನ್ನೊಬ್ಬರದ್ದು ಅವಾಚ್ಯ ಶಬ್ದಗಳ ನಿಂದನೆ. ಸುಡ್ತೀವಿ, ಕೊಲ್ತೀವಿ ಅನ್ನೋ ಮೂಲಕವೇ ಅಲ್ಲಿದ್ದ ಅಷ್ಟೂ ಜನ ಮಾನವೀಯತೆಯ ರೇಖೆಯನ್ನೇ ದಾಟಿ ಅತ್ಯುಗ್ರ ರೀತಿಯಲ್ಲಿ ದೌರ್ಜನ್ಯ ಎಸಗಿದ್ರು.

ಹೀಗಾಗಿ ನನ್ನ ಪತ್ರಕರ್ತ ವೃತ್ತಿಯಲ್ಲಿ ನಿನ್ನೆಯ ಘಟನೆ ಅತ್ಯಂತ ಭಯಾನಕ ಅನುಭವ. ಮಾನವೀಯತೆಯ ಅರ್ಥವೇ ಗೊತ್ತಿಲ್ಲದ ಜನರ ನಮ್ಮನ್ನು ತೀರಾ ಕೀಳಾಗಿ ನಡೆಸಿಕೊಂಡರು. ತಮ್ಮ ಅಷ್ಟೂ ಆಗ್ರಹ, ಎಚ್ಚರಿಕೆಗಳನ್ನ ನಮ್ಮ ಮೇಲೇ ಹೇರುವ ಮೂಲಕ ಜೀವ ಭಯವನ್ನ ಒಡ್ಡಿದರು. ಹೀಗಾಗಿ ಇಷ್ಟೆಲ್ಲಾ ಆದ ಮೇಲೆಯೂ ಈ ದಾಳಿಯನ್ನು ಒಬ್ಬ ಪತ್ರಕರ್ತನಾಗಿ ತೀರಾ ಸಹಜ ಅಂತ ಕರೆಸಿಕೊಂಡು ಸುಮ್ಮನಾಗದು ಯಾಕೋ ಸರಿ ಕಾಣಲಿಲ್ಲ. ಅಲ್ಲದೇ ಭವಿಷ್ಯದ ದೃಷ್ಟಿಯಿಂದಲೂ ಅದು ಸರಿಯಲ್ಲ. ಹೀಗಾಗಿ ಪತ್ರಕರ್ತರಾಗಿ ನಾವೆಲ್ಲರೂ ಈ ಘಟನೆಯಲ್ಲಿ ತಪ್ಪಿತಸ್ಥರಲ್ಲ. ಕಾನೂನು ಬದ್ದವಾಗಿಯೇ ಹೇಳಿಕೆ ಪಡೆಯೋ ದೃಷ್ಟಿಯಿಂದ ಮಸೀದಿಗೆ ತೆರಳಿದ್ದೆವಷ್ಟೇ. ಹೀಗಿರುವಾಗ ನಮ್ಮ ಮೇಲೆ ನಡೆದ ದಾಳಿ ಪತ್ರಿಕಾಸ್ವಾತಂತ್ರ್ಯದ ಮೇಲೆ ನಡೆದ ದಾಳಿಯ ಜೊತೆಗೆ ಮಾನವೀಯತೆಯ ರೇಖೆಯನ್ನು ದಾಟಿ ದಾಖಲಾದ ಅಮಾನುಷ ದಾಳಿಯೂ ಹೌದು. ಆದ್ದರಿಂದ ಘಟನೆಯಲ್ಲಿ ಪಾಲುದಾರರು ಅಂತ ಕರೆಸಿಕೊಳ್ಳುವ ಅಷ್ಟೂ ಜನರಿಗೆ ಕಾನೂನಿನ ಪ್ರಕಾರ ಶಿಕ್ಷಯಾಗಲಿ ಅನ್ನೋದಷ್ಟೇ ನನ್ನ ಮತ್ತು ನಮ್ಮ ತಂಡದ ಆಗ್ರಹ. ಸಮಾಜಕ್ಕೆ ಎಲ್ಲವನ್ನ ತಿಳಿಸೋ ನಮ್ಮಂಥ ಪತ್ರಕರ್ತರನ್ನೇ ಈ ರೀತಿಯಾಗಿ ನಡೆಸಿಕೊಳ್ಳೋ ಸೂರಲ್ಪಾಡಿಯ `ಅವರ’ ಈ ಕೃತ್ಯವನ್ನು ನಾನಂತೂ ಒಪ್ಪೋದಕ್ಕೆ ಸಿದ್ದನಿಲ್ಲ. ಹೀಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಅಂಥವರ ವಿರುದ್ದ ನಾನು ಪೊಲೀಸ್ ದೂರು ಕೊಟ್ಟಿರೋದು ಸರಿ ಅಂದುಕೊಳ್ಳುತ್ತೇನೆ. ಹೋಂಸ್ಟೇ ದಾಳಿ, ಪಬ್ ದಾಳಿ ಮತ್ತು ಇನ್ನಿತರ ಅನೇಕ ಅಮಾನವೀಯ ದಾಳಿಗಳನ್ನು ಸುದ್ದಿ ಮಾಡಿದ ಪತ್ರಕರ್ತರಾದ ನಮ್ಮ ಮೇಲೆ ನಡೆದ ಈ ದಾಳಿ ನಿಜಕ್ಕೂ ಕರಾವಳಿಯ ಮತಾಂಧರ ಕ್ರೌರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎನ್ನದೇ ಬೇರೆ ವಿಧಿಯಿಲ್ಲ. ಕೊನೆಯದಾಗಿ ನಾವು ಮಾಡಲು ಹೊರಟ ಸುದ್ದಿ ಪೂರ್ಣಗೊಂಡಿಲ್ಲ. ಅಲ್ಲದೇ ನಾವು ಈ ಸಾಮಾಜಿಕ ಬಹಿಷ್ಕಾರದ ಸುದ್ದಿಯ ವಿಚಾರದಲ್ಲಿ ಯಾರ ಮೇಲೂ ತಪ್ಪಿತಸ್ಥ ಅನ್ನೋ ಜಡ್ಜ್ ಮೆಂಟ್ ಕೂಡ ಕೊಟ್ಟಿಲ್ಲ. ಮಾಧ್ಯಮ ಅಂದ್ರೆ ನ್ಯಾಯಾಲಯ ಅಲ್ಲ ಅನ್ನೋ ಸಿದ್ದಾಂತಕ್ಕೆ ಬದ್ಧನಾದ ನನಗೆ ಸೂರಲ್ಪಾಡಿಯ ವರದಿ ಕೂಡ ಸಮಾಜದ ಮುಂದೆ ತೆರೆದಿಡೋ ವಾಸ್ತವತೆಯಷ್ಟೇ ವಿನಃ ನಾವೇ ಕೊಡೋ ತೀರ್ಪುಗಳಲ್ಲ. ಹೀಗಾಗಿ ಎರಡೂ ಕಡೆಯ ವಾದಗಳನ್ನು ಆಲಿಸಿ ಸುದ್ದಿ ಮಾಡುವ ನಮಗೆ ಎರಡೂ ಕಡೆಯ ಹೇಳಿಕೆಗಳೂ ಅತ್ಯಮೂಲ್ಯ. ಹೀಗಾಗಿ ನಮ್ಮ ಮೇಲೆ ನಡೆದ ದಾಳಿಯ ನಂತರವೂ ಸುದ್ದಿಯನ್ನು ಪೂರ್ಣಗೊಳಿಸುತ್ತೇವೆ. ಅದೂ ಮತ್ತೆ ಸೂರಲ್ಪಾಡಿಯ ಮಸೀದಿ ಆಡಳಿತದ ಹೇಳಿಕೆಯನ್ನು ದಾಖಲಿಸಿಯೇ……!

Tuesday, 14 April 2015

ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅಂದಂಗಾಯ್ತು ತಾಳಿ ಕಿತ್ತು ಹಾಕೋ ಚಳುವಳಿ!


ಭಾರತದ ದೇಶದಲ್ಲಿ ಮೂರ್ಖರ ಸಂಖ್ಯೆ ಹೆಚ್ಚಾಗುತ್ತಿದೆಯೋ ಅಥವಾ ಬುದ್ದಿವಂತರು ಅನಿಸಿಕೊಂಡವರು ದೊಡ್ಡ
ಮಟ್ಟದಲ್ಲಿ ಬೆಳೆಯುತ್ತಿದ್ದಾರೋ ಗೊತ್ತಿಲ್ಲ. ಆದ್ರೆ ಪ್ರಗತಿಪರರು, ಬುದ್ದಿಜೀವಿಗಳು ಅನ್ನೋ ಹೆಸ್ರಿನಲ್ಲಿ ದೇಶದಲ್ಲಿ
ಅರಾಜಕತೆ ಸೃಷ್ಟಿಸೋ ಪ್ರಯತ್ನವಂತೂ ಸದ್ದಿಲ್ಲದೇ ನಡೆಯುತ್ತಿದೆ ಅನ್ನೋದಂತೂ ಸ್ಪಷ್ಟ. ಇದರ ಸ್ಯಾಂಪಲ್ ಎಂಬಂತೆ
ತಮಿಳುನಾಡಿನ ಸಂಘಟನೆಯೊಂದು ನೇರವಾಗಿ ಹೆಣ್ಣಿನ ತಾಳಿಗೆ ಕೈ ಹಾಕಿದೆ. ತಾಳಿ ಅನ್ನೋದು ಹೆಣ್ಮಕ್ಕಳ ದಾಸ್ಯದ
ಸಂಕೇತ, ಇದ್ರಲ್ಲಿ ಹೆಣ್ಣನ್ನ ಗುಲಾಮಳಂತೆ ಕಾಣಲಾಗುತ್ತೆ ಅಂತ ವಾದ ಮಂಡಿಸಿದೆ. ಹೀಗಾಗಿಯೇ ತಾಳಿಯನ್ನ ಕಿತ್ತು
ಹಾಕಿಸೋ ಮೂಲಕ ವಿವಾಹಿತ ಮಹಿಳೆಯನ್ನ ದಾಸ್ಯದಿಂದ ಮುಕ್ತವಾಗಿಸೋ ಪ್ರಯತ್ನ ಮುಕ್ತವಾಗಿ ನಡೀತಾ ಇದೆ!
ಇದ್ರ ಮಧ್ಯೆ ಈ ತಾಳಿ ಸಂಸ್ಕೃತಿಯನ್ನ ಬ್ರಾಹ್ಮಣರು ಹೇರಿದ್ದು ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಇದನ್ನೆಲ್ಲಾ
ನೋಡಿದ್ರೆ ಒಂದಂತೂ ಸತ್ಯ...ತಾಳಿ ಕೀಳೋ ಪ್ರತಿಭಟನೆಯಲ್ಲಿ ಹೆಣ್ಣು ದಾಸ್ಯದಿಂದ ಮುಕ್ತಳಾಗ್ತಾಳೆ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ದೇಶದಲ್ಲಿ ಆಳವಾಗಿ ಬೀಡು ಬಿಟ್ಟಿರೋ ಬ್ರಾಹ್ಮಣ್ಯವನ್ನ ವಿರೋಧಿಸೋ ಹಿಡನ್ ಅಜೆಂಡಾ ಅಡಗಿರೋದು ಸ್ಪಷ್ಟ. ಇದಕ್ಕಾಗಿ ಬ್ರಾಹ್ಮಣರನ್ನ ವಿರೋಧಿಸೋ ನೆಪದಲ್ಲಿ ಹೆಣ್ಣಿನ ತಾಳಿಗೆ ಕೈ ಹಾಕೋ ಕೆಲಸಕ್ಕೆ ಈ ಸಂಘಟನೆಗಳು ಇಳಿದು ಬಿಟ್ಟಿವೆ.


ಇನ್ನು ನಾನು ಈ ಹಿಂದೆ ತಾಳಿಯ ಬಗ್ಗೆ ಪತ್ರಿಕೆಗಳಲ್ಲಿ ಓದಿದಂತೆ ಮತ್ತು ಇತರೆ ಮಾಧ್ಯಮಗಳ ಮೂಲಕ ತಿಳಿದು ಕೊಂಡಂತೆ, ಅಧ್ಯಯನಗಳ ಪ್ರಕಾರ, ಹಿಂದೂ ವಿವಾಹದ ವಿಧಿವಿಧಾನಗಳ ಬಗೆಗೆ ಸ್ಥೂಲವಾಗಿ ತಿಳಿಸುವ ವಾಲ್ಮೀಕಿ ರಾಮಾಯಣ, ವ್ಯಾಸ ಭಾರತದಲ್ಲಾಗಲೀ, ಗೃಹಸೂತ್ರ, ಮನುಸ್ಮೃತಿ, ಯಾಜ್ಞವಲ್ಕ ಮೊದಲಾದ ಗ್ರಂಥಗಳಲ್ಲಿ ತಾಳಿಯ ಬಗ್ಗೆ ಉಲ್ಲೇಖವಿಲ್ಲ. ಅಷ್ಟೇ ಏಕೆ, “ಮಾಂಗಲ್ಯಂ ತಂತು ನಾನೇನ ...”ಎಂದು ಹತ್ತು ಜನರ ಸಮಕ್ಷಮದಲ್ಲಿ ತಾಳಿ ಕಟ್ಟುವಾಗ ಹೇಳಲಾಗುವ ಈ ಮಂತ್ರವು ವೈದಿಕ ಮೂಲದ್ದಲ್ಲ! ತಾಳಿಯ ಪರಿಕಲ್ಪನೆ ಹುಟ್ಟಿದ ನಂತರ ಪುರೋಹಿತರಿಂದ ಸೃಷ್ಟಿಸಲ್ಪಟ್ಟ ಮಂತ್ರ ಎನ್ನುತ್ತಾರೆ ಸಂಶೋಧಕರು. ಮಾಂಗಲ್ಯಕ್ಕೆ ಈಗಿರುವ ಸ್ಥಾನ ಪ್ರಾಚೀನ ಕಾಲದಲ್ಲಿಯೂ ಇದ್ದಿದ್ದರೆ ಅಂದಿನ ಕೃತಿಗಳಲ್ಲಿ ಅದು ಪ್ರಸ್ತಾಪವಾಗಿರಬೇಕಿತ್ತು. ಅಲ್ಲವೇ? ಆದ್ರೆ ಅಲ್ಲೆಲ್ಲೂ ತಾಳಿಯ ಬಗ್ಗೆ ಉಲ್ಲೇಖಿಸಿಲ್ಲ ಅನ್ನೋದು ಈ ದೇಶದ ಮಾಧ್ಯಮಗಳು ಸ್ಪಷ್ಟವಾಗಿ ಈ ಹಿಂದೆಯೇ ಅದೆಷ್ಟೋ ಲೇಖನಗಳಲ್ಲಿ ಉಲ್ಲೇಖಿಸಿದೆ. ಹೀಗಿರೋವಾಗ ತಾಳಿ ಬ್ರಾಹ್ಮಣ್ಯದ ಸಂಕೇತ ಅನ್ನೋದು ಎಷ್ಟು ಸರಿ? ಒಂದು ವೇಳೆ ಬ್ರಾಹ್ಮಣ್ಯದ ಸಂಕೇತ ಅನ್ನೋದಾದ್ರೆ ತಾಳಿ ಕೀಳುವ ಮುನ್ನವೇ ಈ ಬಗ್ಗೆ ದಾಖಲೆಗಳನ್ನ ತೋರಿಸಬಹುದಲ್ಲವೇ? ಇನ್ನು ತಾಳಿ ಕೀಳೋ ಸಂಘಟನೆಗಳು ತಾಳಿಯಿಂದ ಹೆಣ್ಣಿನ ಮೇಲೆ ಆಗೋ ದೌರ್ಜನ್ಯಗಳನ್ನಾದ್ರೂ ತಿಳಿಸೋ ಕೆಲಸ ಮಾಡಿದ್ರೆ ಒಳ್ಳೆಯದು. ತಾಳಿ ಈ ದೇಶದ ಸಂಸ್ಕೃತಿ, ಹಿಂದೂ ಪದ್ದತಿ ಅನ್ನೋದಕ್ಕಿಂತಲೂ ಹೆಚ್ಚಾಗಿ ವಿವಾಹಿತ ಮಹಿಳೆಯನ್ನ ಗುರುತಿಸೋ ಒಂದು ವಿಧಿ ಬದ್ದ ವಿಧಾನ ಅಂತಾನೂ ಹೇಳಬಹುದು. ತಾಳಿ ಧರಿಸಿದ ಹೆಣ್ಮಗಳನ್ನ ಗೌರವದಿಂದ ಕಾಣೋ ವ್ಯಕ್ತಿತ್ವವೂ ಈ ದೇಶದಲ್ಲಿ ಬೆಳೆದು ಬಂದಿದೆ. ಆಕೆ ವಿವಾಹಿತೆ ಅನ್ನೋದನ್ನ ತಿಳಿಸೋ ತಾಳಿ ಹೆಣ್ಣಿಗೆ ಈ ದೇಶದಲ್ಲಿ ಗೌರವಯುತ ಬದುಕು ಕಟ್ಟಿಕೊಟ್ಟಿದೆ ಅನ್ನೋದು ನನ್ನ ಭಾವನೆ. ಆದ್ರೆ ಇದನ್ನ ವಿರೋಧಿಸಿ ಅದಕ್ಕೊಂದು ಕೆಟ್ಟ ಅರ್ಥ ಕಲ್ಪಿಸೋ ಈ ಸಂಘಟನೆಗಳಿಗೆ ತಾಳಿ ಕಿತ್ತು ಹಾಕೋ ಹೋರಾಟ ಮಹಾನ್ ಕಾರ್ಯವಾಗಿ ಕಂಡಿದ್ದು ಮಾತ್ರ ದುರಂತ...! ಈ ಸಂಘಟನೆಗಳು ವಿರೋಧಿಸೋ ಭರದಲ್ಲಿ ಹೆಣ್ಣಿನ ಅಪಮಾನ ಮಾಡುತ್ತಿವೆ ಅನ್ನೋದು ನನ್ನ ಅನಿಸಿಕೆ. ಈ ದೇಶದಲ್ಲಿ ಉದ್ದಾರ ಮಾಡೋದಕ್ಕೆ ಅದೆಷ್ಟೋ ಕೆಲಸಗಳಿವೆ. ಹೀಗಿದ್ರೂ ವೈದಿಕ ಸಂಸ್ಕೃತಿಯನ್ನ ವಿರೋಧಿಸೋ ನೆಪದಲ್ಲಿ ತಾಳಿಯನ್ನ ಕಿತ್ತೆಸೆಯೋ ಈ ಸಂಘಟನೆಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಇನ್ನು ಇವರ ವಿರೋಧಿಯಾಗಿ ಮಾತೆತ್ತಿದರೆ ಬ್ರಾಹ್ಮಣ್ಯದ ಪರ, ಸಂಘದ ಪರ, ಹಿಂದೂ ಪರ ಅನ್ನೋ ಹಣೆಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆದ್ರೆ ಈ ದೇಶದಲ್ಲಿ ಮಾಡಬೇಕಾಗಿರೋದನ್ನ ಬಿಟ್ಟು, ಅಶಾಂತಿ ಸೃಷ್ಟಿಸೋ ಕೆಲಸಕ್ಕೆ ಕೈ ಹಾಕೋ ಇವ್ರುಗಳನ್ನ ದೇಶದೊಳಗಿನ ಭಯೋತ್ಪಾದಕರು ಅಂದ್ರೂ ತಪ್ಪಿಲ್ಲ......ಇನ್ನು ಹಿಂದೂ ಸಂಸ್ಕೃತಿಯ ಬುಡಕ್ಕೆ ದಿನಕ್ಕೊಂದು ಕೊಡಲಿಯೇಟು ಹಾಕೋ ಇಂಥವ್ರು ಮುಸ್ಲಿಮರಲ್ಲಿ ಬೀಡು ಬಿಟ್ಟಿರೋ ಬುರ್ಖಾ ಸಂಸ್ಕೃತಿಯನ್ನೇಕೆ ವಿರೋಧಿಸ್ತಾ ಇಲ್ಲ? ಇದು ಕೂಡ ಹೆಣ್ಣಿನ ದಾಸ್ಯದ ಸಂಕೇತವಲ್ಲವೇ? ಇಲ್ಲಿ ಹೆಣ್ಣನ್ನ ಗುಲಾಮಳನ್ನಾಗಿಸೋ ಕೆಲಸ ನಡೆಯುತ್ತಿಲ್ಲವೇ? ಹಾಗಿದ್ರೆ ತಾಳಿ ಕಿತ್ತು ಹಾಕೋ ಚಳುವಳಿಯ ರೀತಿಯಲ್ಲಿ ಈ ಸಂಘಟನೆಗಳಿಗೆ ಬುರ್ಖಾ ಕಿತ್ತು ಹಾಕಿ ಅನ್ನೋ ಚಳುವಳಿ ಮಾಡೋ ತಾಕತ್ತಿದೆಯೇ?....ಖಂಡಿತಾ ಇಲ್ಲ. ಕಾರಣ ಇಷ್ಟೇ...ಈ ದೇಶದ ಸಂಸ್ಕೃತಿ ಅಂತ ಕರೆಸಿಕೊಳ್ಳೋ ವಿಚಾರಗಳನ್ನ ಬುಡ ಸಮೇತ ಕಿತ್ತು ಹಾಕೋದೊಂದೇ ಇವ್ರ ಉದ್ದೇಶ.

ನನ್ನ ಪ್ರಕಾರ ಬ್ರಾಹ್ಮಣತ್ವ ಈ ದೇಶಕ್ಕೆ ಅಪಾಯಕಾರಿ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಹಾಗಂತ ಈ ದೇಶದಲ್ಲಿ ಆಚರಣೆಯಲ್ಲಿರೋ ಎಲ್ಲಾ ಆಚಾರ-ವಿಚಾರಗಳು ಬ್ರಾಹ್ಮಣರ ಸ್ವತ್ತು ಅಂತ ವಾದಿಸೋದು ಸರಿಯಲ್ಲ. ಅಲ್ಲದೇ ಇದೇ ವಾದ ಮುಂದಿಟ್ಟುಕೊಂಡು ವೈವಾಹಿಕ ಜೀವನದ ಅತ್ಯಮೂಲ್ಯ ಸಂಕೇತ ಅನಿಸಿಕೊಂಡಿರೋ ತಾಳಿ ಕೀಳೋ ಇವ್ರದ್ದು ಮೂರ್ಖತನದ ಪರಮಾವಧಿಯಲ್ಲದೇ ಇನ್ನೇನು? ಇನ್ನು ಇಂದಿಗೂ ಈ ದೇಶದ ಅದೆಷ್ಟೋ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿವಾಹಿತ ಹೆಣ್ಮಕ್ಕಳು ತಾಳಿಯನ್ನ ಕಟ್ಟಿಕೊಳ್ತಾರೆ. ಹಾಗಿದ್ರೆ ಇವ್ರೆಲ್ಲರೂ ಬ್ರಾಹ್ಮಣರಿಂದ ಪ್ರೇರೇಪಣೆಗೆ ಒಳಗಾದ್ರೆ ಅನ್ನೋದನ್ನ ಚಳುವಳಿಗಾರರು ತಿಳಿಸಬೇಕು. ಅದಕ್ಕೂ ಮುಖ್ಯವಾಗಿ ತಾಳಿಯಿಂದ ಹೆಣ್ಣು ದಾಸ್ಯಕ್ಕೆ ಒಳಗಾಗ್ತಿದ್ದಾಳೆ ಅನ್ನೋದ್ರ ಬದಲು ಸಮಾಜದಲ್ಲಿ ಬೀಡು ಬಿಟ್ಟಿರೋ ವರದಕ್ಷಿಣೆ ಪಿಡುಗಿನ ವಿರುದ್ದ ಈ ಸಂಘಟನೆಗಳು ಧ್ವನಿಯೆತ್ತೋದು ಒಳಿತು. ವಿವಾಹಿತ ಹೆಣ್ಣಿನ ಮೇಲೆ ಈ ದೇಶದಲ್ಲಿ ಶೋಷಣೆ ಆಗ್ತಿದೆ ಎಂದಾದ್ರೆ ಅದು ಹೆಚ್ಚಾಗಿ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ವಿಚಾರವಾಗಿಯೇ ನಡೀತಾ ಇದೆ. ಅದು ಬಿಟ್ಟು ಎಲ್ಲೂ ತಾಳಿ ಕಟ್ಟಿದ ತಕ್ಷಣ ಹೆಣ್ಣು ಗುಲಾಮಳಾಗಿ ಬದಲಾಗೋದಿಲ್ಲ.

ದುರಂತ ಅಂದ್ರೆ ತಾಳಿ ಕಟ್ಟದೇ, ತಮ್ಮದೇ ಆದ ಶೈಲಿಯಲ್ಲಿ ಮದುವೆಯಾಗೋ ಅದೆಷ್ಟೋ ಸಂಸಾರಗಳು ಹಾದಿ ತಪ್ಪಿದ ಉದಾಹರಣೆಗಳಿವೆ. ಹಾಗಂತ ಇಲ್ಲಿ ತಾಳಿ ಕಟ್ಟಿದ್ದರೆ ಸಂಸಾರ ಸರಿಯಾಗಿರ್ತಿತ್ತು ಅನ್ನೋದು ನನ್ನ ವಾದವಲ್ಲ. ಆದ್ರೆ ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅನ್ನೋ ಎಡಬಿಡಂಗಿಗಳ ವರ್ತನೆ ಬಗ್ಗೆ ಅನಿಸಿಕೆಯಷ್ಟೇ. ಈ ದೇಶದಲ್ಲಿ ಅವ್ರವ್ರ ಆಚಾರ-ವಿಚಾರಗಳು ಅವ್ರವ್ರ ನಂಬಿಕೆಗೆ ಬಿಟ್ಟದ್ದು. ಅದನ್ನ ವಿರೋಧಿಸೋ ನೆಪದಲ್ಲಿ ಭಾವನೆಗಳಿಗೆ ಧಕ್ಕೆ ತರೋದು ಸರಿಯಲ್ಲ. ಬ್ರಾಹ್ಮಣರ ಆಚರಣೆ ಅಂತ ಕರೆಸಿಕೊಳ್ಳೋ ಸಾಕಷ್ಟು ವಿಚಾರಗಳಲ್ಲಿ ಗೊಂದಲಗಳಿವೆ. ಕೆಲವು ವಿಚಾರಗಳಲ್ಲಿ ಮನುಷ್ಯನ ಶೋಷಣೆಯೂ ನಡೀತಾ ಇದೆ. ಇನ್ನು ಕೆಲವು ವಿಚಾರಗಳಲ್ಲಿ ಮೂಢನಂಬಿಕೆಯನ್ನ ತುಂಬಿ ಜನ್ರನ್ನ ಅಜ್ನಾನಿಗಳನ್ನಾಗಿಸೋ ಕೆಲಸವೂ ನಡೀತಾ ಇದೆ. ಆದ್ರೆ ಎಲ್ಲಿ ದೇಶಕ್ಕೆ, ಜನ್ರಿಗೆ ಅಪಾಯ ಇದೆ ಅನ್ನೋದು ಅರಿವಾಗುತ್ತೋ ಅಂಥದ್ದನ್ನ ತಡೆಯೋದ್ರಲ್ಲಿ ಖಂಡಿತಾ ತಪ್ಪಿಲ್ಲ. ಹಾಗಂತ ತಾಳಿ ಕಟ್ಟಿಸಿಕೊಳ್ಳೋದೇ ಅಪಾಯ ಅನ್ನೋದಾದ್ರೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯೇ ಇಂಥದ್ದಕ್ಕೆ ಸೂಕ್ತ ಉತ್ತರ ನೀಡಬೇಕಿದೆ......

Monday, 30 June 2014

ಮನಸ್ಸೆಲ್ಲಾ ಆವರಿಸಿದವನು ಶೂನ್ಯ ಬಿಟ್ಟು ಹೋದಾಗ...!


...............ಕಣ್ಣೀರ ಕೊಳದಲ್ಲಿ
ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು
ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ..................!
..................................ಇದು ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಸಾಹಿತ್ಯದಲ್ಲಿ ಮೂಡಿಬಂದಿರೋ ಸಿ.ಅಶ್ವಥ್ ಕಂಠದಲ್ಲಿ ಹೊರಹೊಮ್ಮಿರೋ ಪ್ರೇಯಸಿ ಪ್ರೀತಿಸಿ ಮರೆತೆಯಾ? ಎಂಬ ಹಾಡಿನ ಸಾಲುಗಳು. ಹಾಡುಗಳು ಅನ್ನೋದೇ ಹಾಗೆ ಬದುಕಿನ ಪ್ರತೀ ಹೆಜ್ಜೆಗಳನ್ನ ಅದ್ಯಾಗೋ ಕಣ್ಣಿಗೆ ಕಟ್ಟೋವಂತೆ ಕಟ್ಟಿ ಕೊಡುತ್ತೆ. ಇನ್ನು ಹಾಡುಗಳನ್ನ ಕೇಳೋವಾಗಲೂ ಅಷ್ಟೇ....ಬೇಜಾರಾಗಿದ್ದಾಗ ಸಾಹಿತ್ಯ ಇಷ್ಟ ಆದ್ರೆ, ಖುಷಿಯಾಗಿದ್ದಾಗ ಸಂಗೀತ ಇಷ್ಟ ಆಗುತ್ತೆ.....ಬದುಕಲ್ಲೂ ಅಷ್ಟೇ ಖುಷಿಯಲ್ಲಿದ್ದಾಗ ಎಲ್ರೂ ಇಷ್ಟ ಆಗ್ತಾರೆ...ಆದ್ರೆ ನೋವಾದಾಗ ಜಸ್ಟ್ ಹತ್ತಿರ ಅಂತ ಅನಿಸಿಕೊಂಡವ್ರು ಮಾತ್ರ ಇಷ್ಟ ಆಗ್ತಾರೆ. ನಾನಿವತ್ತು ಬರೀತಾ ಇರೋ ಲೇಖನ ನನ್ನ ಇಷ್ಟ-ಕಷ್ಟಗಳಿಗೆ ಸಂಬಂಧಪಟ್ಟದ್ದಲ್ಲ. ಬದಲಾಗಿ ನನ್ನನ್ನ ಇಷ್ಟ ಪಟ್ಟವರಿಗೆ ಸಂಬಂಧಿಸಿರೋದು.
ಅವಳ ಹೆಸ್ರು ಕಾವ್ಯ(ಅನಿವಾರ್ಯ ಕಾರಣಗಳಿಂದ ಹೆಸರನ್ನ ಬದಲಿಸಿದ್ದೇನೆ). ಈ ಹುಡುಗಿ ನನ್ನ ಜೊತೆ ಹುಟ್ಟದೇ ಇದ್ರೂ ಬಾಯ್ತುಂಬ ಅಣ್ಣ ಅಂತ ಕರೀತ ತನ್ನ ಜೀವನದ ಬಗ್ಗೆ ಹೇಳ್ತಾ ಇದ್ಳು. ಸಂತೋಷ, ದುಃಖ, ನೋವು-ನಲಿವು ಎಲ್ಲವನ್ನೂ ಇಂಚಿಂಚೂ ನನ್ನ ಜೊತೆ ಅಪ್ಡೇಟ್ ಮಾಡ್ತಿದ್ಳು. ಹೀಗಿರೋವಾಗಲೇ ಮೊನ್ನೆ ಅದ್ಯಾಕೋ ಗೊತ್ತಿಲ್ಲ, ಈ ಪ್ರೀತಿ ಹಿಂಗ್ಯಾಕೆ ಮಾಡುತ್ತೆ? ಅಣ್ಣ ಅಂತ ಸಣ್ಣ ದನಿಯಲ್ಲಿ ಕೇಳಿ ಬಿಟ್ಟಿದ್ದಳು ಕಾವ್ಯ. ದುರಂತ ಅಂದ್ರೆ ಚೆಲ್ಲು ಚೆಲ್ಲು ಸ್ವಭಾವದ ನನ್ನ ತಂಗಿ ಪ್ರೀತಿ ಬಗ್ಗೆ ನನ್ನ ಜೊತೆ ಮಾತನಾಡಿದ್ದು ಆವತ್ತೆ ಮೊದಲು ಅಂದ್ಕೋತಿನಿ. ಹೀಗೆ ತನ್ನ ಪ್ರೀತಿ ಬಗ್ಗೆ, ತನಗೆ ಕೈಕೊಟ್ಟ ಹುಡುಗನ ಬಗ್ಗೆ ಎಲ್ಲವನ್ನೂ ಹೇಳಿಕೊಂಡು ಅತ್ತು ಬಿಟ್ಟಳು ಅವಳು.....! ಹುಡುಗೀರಾ ಕಣ್ಣೀರಿಗೆ ಕರಗಬಾರದು ಅಂತಾರೆ...ಹಾಗಾಗಿ Full alert ಆಗಿದ್ದ ನಾನು ಎಲ್ಲವನ್ನ ಸಾವಕಾಶವಾಗಿ ಕೇಳಿ ಒಂಚೂರು ಸಮಾಧಾನ ಮಾಡಿ ತಂಗಿಯ ಮನಸ್ಸಿನ ನೋವಿಗೆ ಒಂದು ಹಂತದ ಸಾಂತ್ವಾನ ನೀಡಿ ಬಿಟ್ಟೆ. ಆದ್ರೆ ಅದ್ಯಾಕೋ ಅವಳ ನೋವಿಗೆ ಪೂರ್ಣ ಪ್ರಮಾಣದ ಸಂತ್ವಾನ ನೀಡೋಕಂತೂ ನನ್ನಿಂದ ಆಗಲೇ ಇಲ್ಲ. ಹೀಗಾಗಿ ಇವತ್ತು ನಾನು ಒಂದು ಮುಗ್ಧ ಹೆಣ್ಣಿನ(?) ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡ್ತಾ ಇದೀನಿ...ಒಂದು ಮುಗ್ಧ ಪ್ರೀತಿ, ಶುದ್ದ ಪ್ರೀತಿ...ಹೇಗೆಲ್ಲಾ ಕಾಡುತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೀನಿ.


"Love can't be explained but it can be expressed..!
"ಅನ್ನೋ ಮಾತು ನೂರಕ್ಕೆ ಸತ್ಯ. ಇನ್ನು ಹುಡುಗೀರಾ ವಿಚಾರಕ್ಕೆ ಬಂದ್ರಂತೂ ಅವ್ರಲ್ಲಿ ಮುಗ್ಧತೆ ತುಂಬಿರೋ ಪ್ರೀತಿನೂ ಇರುತ್ತೆ..ಮೋಸ ಮಾಡೋ ನೂರೆಂಟು ಪ್ರೀತಿಗಳೂ ಇರುತ್ತೆ. ಆದ್ರೆ ಮುಗ್ಧತೆಯ ಪ್ರೀತಿ ಅದ್ರಲ್ಲೂ first time love ಅಂತಾರಲ್ಲ..ಅದಂತೂ ಹುಡುಗೀರಾ ಜೀವನದಲ್ಲಿ ಸಖತ್ ನೋವು ಕೊಡುತ್ತೆ.  ಈ ಹುಡುಗೀರಿದಾರಲ್ಲ...ಅವ್ರು ತುಂಬಾನೆ ಪ್ರೀತಿ ಮಾಡೋದು ಅವ್ರ ಫಸ್ಟ್ ಲವ್ವನ್ನ...ಅದೊಂಥರಾ Innocent love ಕಣ್ರೀ...ಆದ್ರೆ ವಿಪರ್ಯಾಸ ಅಂದ್ರೆ ಈ First love ಇದ್ಯಲ್ಲ....ಅದು ಅವರಿಗೆ ಸಿಗೋದೇ ಇಲ್ಲ. ಸಿಕ್ಕೋ ಪ್ರೀತಿ ಮನಸಿನ ಪುಟಗಳಿಗೆ ಭಾರೀ ದೊಡ್ಡ ಗಾಯ ಮಾಡಿ ಹೋಗಿ ಬಿಡುತ್ತೆ. ಆದ್ರೆ ಈ ಪ್ರೀತಿ ಮಾತ್ರ ಜೀವನದ ಕೊನೆ ವರೆಗೆ ಉಳಿಯೋ ಒಂಥರಾ sweet pain...ಅದನ್ನ ಉಳಿಸಿಕೊಂಡು...ನೆನಪಿಸಿಕೊಂಡು ಬದುಕೋದಿದ್ಯಲ್ಲ...really super.....ಇನ್ನು ತನ್ನ first love ಕಳ್ಕೊಂಡ ಹುಡುಗಿ ಮತ್ತೆ ಲವ್ವೇ ಮಾಡೋದಿಲ್ಲ ಅಂತಲ್ಲ. second love ಮಾಡೋದ್ರಲ್ಲಿ ಹುಡುಗ್ರಿಗಿಂತ Fast ಈ ಹುಡುಗೀರು.....ಆದ್ರೂ ತನ್ನ ಫಸ್ಟ್
ಲವರ್ ಅನಿಸಿಕೊಂಡ ಮಹಾನುಭಾವನನ್ನ ಮರೆಯೋದೇ ಇಲ್ಲ. ಅದೊಂಥರ First experience ಅಲ್ವಾ...? ಹಾಗಾಗಿ ಅದನ್ನ ಐತಿಹಾಸಿಕ ಹೆಜ್ಜೆ ಅನ್ನೋ ಥರ ಮನದ ಮರೆಯಲ್ಲಿ ಬಚ್ಚಿಟ್ಟಿರ್ತಾರೆ. ಇದಾಗಿ ಇವ್ರ ಲೈಫಲ್ಲಿ ಎಂಟ್ರಿ ಕೊಡೋ ಮತ್ತೊಬ್ಬ ಕೂಡ ಕೈಕೊಟ್ಟ ಅಂದ್ಕೊಳ್ಳಿ.....ಬೇಜಾರೇ ಇಲ್ಲ...ಅವನಿಲ್ದೇ ಇದ್ರೆ ಮತ್ತೊಬ್ಬ ಅಂತ ಹೋಗೋರೇ ಹೆಚ್ಚು......ಆದ್ರೆ ಫಸ್ಟ್ ಲವ್ ಮಾತ್ರ ಬೆಸ್ಟ್ ಲವ್ ಅಂತಾನೆ ಇರ್ತಾರೆ....
ಅವನ ಜೊತೆ ಆಡಿರೋ ಜಗಳ, ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು, ಒಟ್ಟಿಗೆ ಕೂತು ಕೇಳಿದ ಹಾಡುಗಳು, ನೋಡಿದ ಸಿನೆಮಾಗಳು, ಚೆಂದನೆಯ giftsಗಳು, ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ ಹುಲ್ಲುಹಾಸಿನ ಪಾರ್ಕು..... ಅಥವಾ ಯಾವುದೋ ಒಂದು ಮಾಮೂಲಿ ಜಾಗ.....ಚಾಕೋಲೇಟ್ ತಿನ್ನೋವಾಗ ಮಾಡಿದ ಜಗಳ....ಸಮುದ್ರದ ದಂಡೆಯಲ್ಲಿ ಬೆನ್ನಿಗೆ ಬೆನ್ನಿಟ್ಟು ಕೂತ ಕ್ಷಣಗಳು...ಹೀಗೆ ಇಂಥಹ ಅದ್ಭುತ ಕ್ಷಣಗಳು ಅವ್ರನ್ನ ಕಾಡಿಸದೇ ಇರುತ್ತಾ...? ಎಸ್..... ನಾನು ಮೇಲೆ ಹೇಳಿರೋ ಕಾವ್ಯಾಳಿಗೂ ಆಗಿದ್ದು ಇದೆ...FIRST LOVE....BEST LOVE ಅನ್ನೋ ಹಾಗೆ.....ಅವೆಲ್ಲವನ್ನ ನೆನಪಿಸಿಕೊಂಡು ಕಣ್ಣೀರು ಹಾಕ್ತಾಳೆ.....ಬದುಕೇ ಬೇಡ ಅಂಥ ಸಣ್ಣ ವಯಸ್ಸಲ್ಲೇ ಫಿಲಾಸಫಿಯ ಮಾತುಗಳು....ಸಾಯ್ತೇನೆ ಅನ್ನೋ ಕ್ಷಣಿಕ ಡೈಲಾಗ್ ಗಳು......ಆದ್ರೆ ಏನ್ ಮಾಡೋದು ತಂಗಿ ಅಂತ ಸಾಂತ್ವಾನ ಹೇಳ್ಕೋಬೇಕಷ್ಟೇ.......ಆದ್ರೆ ಹುಡುಗೀರು ಸಖತ್ Fast ಅನ್ನೋದನ್ನ ನನ್ನ ತಂಗಿ ಕಾವ್ಯಾ ಕೂಡ ಸಾಬೀತು ಪಡಿಸಿದ್ದಾಳೆ ಅನ್ನೋದೇ ಖುಷಿ ಕೊಡೋ ವಿಚಾರ.....ಮೊದಲ ಪ್ರೀತಿ ಕೈಕೊಟ್ಟ ನಂತ್ರ ಒದ್ದೆಯಾಗಿದ್ದ ಕಣ್ಣಂಚಿನಲ್ಲಿ ಮತ್ತೊಂದು ಪ್ರೀತಿ ಮೂಡಿದೆ. ಕೈಕೊಟ್ಟವನ ನೆನಪುಗಳನ್ನ ಮೆಲುಕು ಹಾಕುತ್ತಳೇ ಲವ್ ಎಕ್ಸ್ ಪೀರಿಯನ್ಸ್ ಅನ್ನೋ ಅನುಭವದ ಮೇಲೆ ಮತ್ತೊಂದು ಪ್ರೀತಿಯತ್ತ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾವ್ಯ ಹೊರಳಿದ್ದಾಳೆ. ಹಾಗಂತ ಇದು ಕೂಡ ಶಾಶ್ವತ ಅಂತ ಹೇಳೋದಿಲ್ಲ. ಯಾಕೆಂದ್ರೆ ಕಾಲೇಜು ಜೀವನದಲ್ಲಿ ಎಲ್ಲರೂ ಹುಚ್ಚರೇ....ಹತ್ತಾರು ಕನಸಿನ ಹುಚ್ಚು ಹುಡುಗೀರು ಒಂದು ಕಡೆಯಾದ್ರೆ.........ದಿನಕ್ಕೊಂದು ಕನಸು ಕಾಣೋ ತಲೆ ಕೆಟ್ಟ ಹುಡುಗ್ರು ಇನ್ನೊಂದು ಕಡೆ....ಹಾಗಾಗಿ ನನ್ನ ತಂಗಿ ಕಾವ್ಯಾ ಕೂಡ ಮತ್ತೊಮ್ಮೆ ನನ್ನೆದುರಿಗೆ ಕಣ್ಣೀರು ಹಾಕ್ತಾಳೆ ಅನ್ನೋ ದೃಢವಾದ ನಂಬಿಕೆ ನನಗಂತೂ ಇದ್ದೇ ಇದೆ...! ದೇವರಾಣೆ ಹೇಳ್ತೀನಿ ನನ್ನ ನಂಬಿಕೆಯನ್ನ ನನ್ನ ತಂಗಿ ಯಾವತ್ತೂ ಸುಳ್ಳು ಮಾಡೋದೇ ಇಲ್ಲ ಬಿಡಿ......! ಆದ್ರೆ ಮುಂದಿನ ಸಲ ಅವಳ ಮನಸ್ಸು ಪ್ರೀತಿ ಕಳೆದುಕೊಂಡು ಅಳೋದಿಲ್ಲ.....ಅಳು ಏನಿದ್ರೂ ಕಣ್ಣಂಚಿನಲ್ಲಿ ನೀರಾಗಿ ಹರಿದು ಕ್ಷಣಿಕ ಅನಿಸಿ ಬಿಡುತ್ತೆ....ಹೀಗಾಗಿ ಈ ಪ್ರೀತಿ ಹಿಂಗ್ಯಾಕೆ ಅಂತ ಕಾವ್ಯಾ ಕೇಳಿದಾಗ ದೊಡ್ಡ ದೊಡ್ಡ ಫಿಲಾಸಫಿಯ ಮಾತುಗಳು ನನ್ನ ಬಾಯಿಯಿಂದ ಬರಲೇ ಇಲ್ಲ. ಅನುಭವ ಸಾಕಷ್ಟು ಕಲಿಸಿಕೊಟ್ಟಿರೋ ಕಾರಣ ಮೊದಲ ಪ್ರೀತಿ ಕಳೆದುಕೊಂಡ ನನ್ನ ತಂಗಿಯನ್ನ ಅಂದು ಹಾಗೇ ಸುಮ್ಮನೇ ಸಂತೈಸಿದ್ದೆ.............

OK.......ಹುಡುಗೀಯರ ಮನಸ್ಸಿಗೆ ಪರಕಾಯ ಪ್ರವೇಶ ಮಾಡೋದು ನಿಜಕ್ಕೂ ಸಖತ್ ಕಷ್ಟದ ಕೆಲ್ಸ ಕಣ್ರೀ......

ವಿ.ಸೂ: ಇಲ್ಲಿ ಪರಕಾಯ ಪ್ರವೇಶ ಮಾಡಿರೋ ಮನಸುಗಳು ಚೆಲ್ಲು ಚೆಲ್ಲು ಸ್ವಭಾವದ ಹುಡುಗಿಯರದ್ದು ಅನ್ನೋದು ನೆನಪಿರಲಿ....!

ಎಚ್ಚರ: ಸೂಕ್ಷ್ಮ ಸ್ವಭಾವದ ಹುಡುಗೀರು ಮೊದಲ ಪ್ರೀತಿ ಕಳೆದು ಕೊಂಡಾಗ ಸಾಯಲೂ ಬಹುದು....ಸತ್ತವರೂ ಇದ್ದಾರೆ.....!


Sunday, 18 May 2014


ಮೋದಿ ಗೆಲುವು ಬಿಜೆಪಿ ಧ್ವಜದ ಜೊತೆ ಭಗವಾಧ್ವಜವನ್ನೂ ಬಲಗೊಳಿಸಿದೆಯೇ?

ನರೇಂದ್ರ ಮೋದಿಯೆಂಬ ವ್ಯ(ಶ)ಕ್ತಿಯನ್ನು ಬಿಜೆಪಿ ಚೆನ್ನಾಗಿಯೇ ಪ್ರಮೋಟ್ ಮಾಡಿದೆ. ಕಳೆದ ಸಪ್ಟೆಂಬರ್ ನಿಂದ ಚುನಾವಣೆ ಮುಗಿಯೋ ತನಕ ಬರೋಬ್ಬರಿ 250ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮೋದಿಯೆಂಬ ಬಿಜೆಪಿಯ ಅಸ್ತ್ರವನ್ನ ಸಖತ್ತಾಗಿಯೇ ಬಳಸಿಕೊಳ್ಳಲಾಗಿದೆ. ವೇದಿಕೆ ಹತ್ತಿದರೆ ಸಾಕು ಮೇರಾ ಬಾಯಿಯೋ ಆರ್ ಬೆಹನೋ ಅನ್ನೋ ಮೋದಿಯ ಮಾತಿಗೆ ಇಡೀ ದೇಶವೇ ತಲೆ ದೂಗಿದೆ ಅನ್ನೋದನ್ನ ಫಲಿತಾಂಶ ಸಾಬೀತು ಪಡಿಸಿದೆ. ನರೇಂದ್ರ ಮೋದಿಯ ಈ ಗೆಲುವಿನಿಂದ ಈ ದೇಶ ಗುಜರಾತ್ ಆಗುತ್ತದೆ, ವೇಗವಾಗಿ ಅಭಿವೃದ್ದಿ ಹೊಂದುತ್ತೆ ಅನ್ನುವ ಕಲ್ಪನೆಗಿಂತಲೂ ಮಿಗಿಲಾಗಿ ಈ ದೇಶದಲ್ಲಿ ಮತ್ತೊಮ್ಮೆ ಸಂಘಪರಿವಾರ ಗಟ್ಟಿಯಾಗಿ ನೆಲೆ ಕಂಡು ಕೊಳ್ಳಲಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿ ಬಿಡಬಹುದು. ಹಿಂದುತ್ವದ ಪ್ರಯೋಗ ಶಾಲೆ ಅಂತಾನೆ ಕರೆಸಿಕೊಳ್ಳೋ ದಕ್ಷಿಣ ಕನ್ನಡದಲ್ಲಿ ಚುನಾವಣಾ ಮತ ಎಣಿಕೆ ಮುಗಿದ ತಕ್ಷಣ ಕೌಂಟಿಂಗ್ ಸೆಂಟರ್ ನ ಹೊರ ಭಾಗದಲ್ಲಿ ಮೊದಲಾಗಿ ರಾರಾಜಿಸಿದ್ದು ಇದೇ ಸಂಘಪರಿವಾರದ ಭಗವಾಧ್ವಜಗಳು! ಒಂದು ರಾಜಕೀಯ ಪಕ್ಷ ಗೆದ್ದರೆ ಸಾಕು ಅಲ್ಲಿ ರಾಜಕೀಯ ಪಕ್ಷದ ಬಾವುಟಗಳೇ ಕಾಣ ಸಿಗುತ್ತವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೋದಿ ಗೆಲುವಿನ ಖುಷಿಯನ್ನ ಹೆಚ್ಚಾಗಿ ಹಂಚಿಕೊಂಢಿದ್ದು ಇದೇ ಸಂಘಪರಿವಾರದ ಕಾರ್ಯಕರ್ತರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಭಗವಾಧ್ವಜವನ್ನು ಹಿಡಿದು ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಪಟ್ಟದ್ದು ಕೂಡ ಗಮನಾರ್ಹ. ಅದರಲ್ಲೂ ಬಿಜೆಪಿ ನಮಗೆ ಮುಖ್ಯವಲ್ಲ, ಮೋದಿ ಗೆದ್ರೆ ಸಾಕು ಅಂತ ಸ್ವತಃ ಅದೆಷ್ಟೋ ಸಂಘದ ಹುಡುಗರು ಮಂಗಳೂರಿನ ಬೀದಿಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ಆರ್ ಎಸ್ ಎಸ್, ಬಜರಂಗದಳ, ವಿಎಚ್ ಪಿಯಂತಹ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಬಿಜೆಪಿ ಪರವಾಗಿ ಸಾಕಷ್ಟು ಪ್ರಚಾರ ಕೂಡ ನಡಸಿದ್ದವು. ಹಾಗಂತ ಈ ಪ್ರಚಾರದ ಉದ್ದೇಶ  ಬಿಜೆಪಿ ಗೆಲ್ಲಬೇಕು, ನಳಿನ್ ಕುಮಾರ್ ಜಯಭೇರಿ ಬಾರಿಸಬೇಕು ಅನ್ನೋದಲ್ಲ. ಬದಲಾಗಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಅನ್ನೋದಾಗಿತ್ತು. ಅದರಂತೆ ಮೋದಿ ಗೆದ್ದಿದ್ದಾರೆ. ಈ ಗೆಲುವಿನ ಖುಷಿಯನ್ನ ಬಿಜೆಪಿ ಬಾವುಟದ ಜೊತೆಗೆ ಸಂಘದ ಭಗವಾಧ್ವಜವೂ ಹಂಚಿಕೊಂಡಿದೆ ಅಂದ್ರೆ ತಪ್ಪಿಲ್ಲ.

ಭಗವಾಧ್ವಜ ಹಾರಿಸಿ ಬಿಜೆಪಿ ಕಚೇರಿಯಲ್ಲಿ ಗೆಲುವನ್ನ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್


ಅಷ್ಟಕ್ಕೂ ಮೋದಿ ಗೆಲುವಿನಿಂದ ಸಂಘಕ್ಕೇನು ಲಾಭ?

ಹೌದು, ನರೇಂದ್ರ ಮೋದಿ ಪ್ರಧಾನಿಯಾದ್ರೆ ಸಂಘ ಪರಿವಾರಕ್ಕೇನು ಲಾಭ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದ್ರೆ ಮೋದಿ ಬಿಜೆಪಿಯ ಕಾರ್ಯಕರ್ತ ಅಥವಾ ಸದಸ್ಯ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ಹಿಂದೆ ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಒಬ್ಬ ಕಟ್ಟರ್ ಹಿಂದುತ್ವವಾದಿ ಅನ್ನೋದನ್ನ ಒಪ್ಪಲೇ ಬೇಕು. ಇದೇ ಕಾರಣಕ್ಕೆ ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ, ಹಿಂದೂ ಸಂಸ್ಕೃತಿಯ ಬಗ್ಗೆ ಇತರೆ ರಾಜಕಾರಣಿಗಳಿಗಿಂತ ಸ್ವಲ್ಪ ಹೆಚ್ಚೇ ಗೊತ್ತು. ಹಾಗಾಗಿ ಹಿಂದೂ ಸಂಘಟನೆಗಳ, ಸಂಘಪರಿವಾರದ ಯುವಕರ ಉದ್ದೇಶಗಳನ್ನ ಮೋದಿ ಈಡೇರಿಸುತ್ತಾರೆ ಅನ್ನೋದು ಹಿಂದೂ ಸಂಘಟನೆಗಳಲ್ಲಿರೋ ಕಾರ್ಯಕರ್ತರ ಭಾವನೆ. ಇದೇ ಕಾರಣಕ್ಕೆ ಈ ದೇಶಕ್ಕೆ ಸೂಕ್ತವಾದ ಪ್ರಧಾನಿ ಬೇಕು ಅನ್ನೋದಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ರಕ್ಷಣೆಗೆ ಒಬ್ಬ ಕಟ್ಟರ್ ಹಿಂದೂವಾದಿ ಬೇಕಾಗಿದೆ ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆಗಳು ಬೀದಿಗಿಳಿದು ಮೋದಿ ಪರವಾಗಿ ಕೆಲಸ ಮಾಡಿವೆ. ಹಾಗಾಗಿಯೇ ಮೋದಿ ಗೆದ್ದಾಗ ಬಿಜೆಪಿ ಬಾವುಟದ ಜೊತೆಗೆ ಧೈರ್ಯವಾಗಿ ಭಗವಾದ್ವಜವೂ ರಾರಾಜಿಸಿದೆ.
ಬೊಂದೆಲ್ ನ ಕೌಂಟಿಂಗ್ ಸೆಂಟರ್ ಬಳಿ ಬಿಜೆಪಿ ಗೆಲುವಿನ ನಂತರ ಬಿಜೆಪಿ ಧ್ವಜದೊಂದಿಗೆ ರಾರಾಜಿಸಿದ ಭಗವಾಧ್ವಜ

ನಮಕ್ ಮೋದಿ ಬತ್ತ್ಂಡ ಯಾವು ಮಾರ್ರೆ....!(ನಮಗೆ ಮೋದಿ ಬಂದರೆ ಸಾಕು ಮಾರಾಯಾ..!)

ಈ ದೇಶದಲ್ಲಿ ಮೋದಿಯನ್ನ ಬಿಜೆಪಿ ಪ್ರಮೋಟ್ ಮಾಡಿದ ಕೆಲವೇ ತಿಂಗಳಲ್ಲಿ ಇಂಥದ್ದೊಂದು ಮಾತು ಮಂಗಳೂರಿನಲ್ಲಿ ಕೇಳಿ ಬರ ತೊಡಗಿತ್ತು. ನರೇಂದ್ರ ಮೋದಿ ಆರ್ ಎಸ್ ಎಸ್ ನ ಕಟ್ಟರ್ ಹಿಂಬಾಲಕ ಅನ್ನೋದು ಸಂಘದ ತಳಮಟ್ಟದ ಕಾರ್ಯಕರ್ತರಿಗೆ ತಿಳಿದದ್ದೇ ತಡ ಸಂಘದ ಶಾಖೆಗಳಲ್ಲೂ ಮೋದಿ ಪರವಾದ ಮಾತುಗಳು ಆರಂಭಗೊಂಡವು. ಮೋದಿಯನ್ನ ಗೆಲ್ಲಿಸಿದರೆ ಈ ದೇಶದಲ್ಲಿ ಹಿಂದುತ್ವವನ್ನ ಯಾವ ರೀತಿ ಬೆಳೆಸಬಹುದು ಅನ್ನೋ ಚರ್ಚೆಗಳು ಆರಂಭಗೊಂಡವು. ಈ ಎಲ್ಲಾ ಲೆಕ್ಕಾಚಾರಗಳಿಗೆ ಸಾಥ್ ನೀಡುವಂತೆ ನರೇಂದ್ರ ಮೋದಿಯವರ ಪ್ರತೀ ಭಾಷಣದಲ್ಲೂ ಹಿಂದುತ್ವ, ಹಿಂದೂ ಶಕ್ತಿ ಅನ್ನೋ ಮಾತುಗಳು ಕೂಡ ಜೋರಾಗಿಯೇ ಕೇಳಿ ಬಂದವು. ಹೀಗಾಗಿ ನಮ್ಮ ಯುವಕರಿಗೂ ಹಿಂದುತ್ವದ ರಕ್ಷಣೆಗೆ ಮೋದಿಯೇ ಸೂಕ್ತ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿತ್ತು. ಹೀಗಾಗಿಯೇ ನರೇಂದ್ರ ಮೋದಿಯ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಶ್ರಮಿಸಿದೆ ಅನ್ನೋದಕ್ಕಿಂತ ಜಿಲ್ಲೆಯ ಸಂಘದ ಹುಡುಗರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅನ್ನೋದೆ ಮುಖ್ಯ. ಇನ್ನು ಜಿಲ್ಲೆಯ ಮೂಲೆ ಮೂಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ಕೂಡ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಪ್ರಧಾನಿ ಮಾಡಿ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿದ್ದವು. ಈ ದೇಶದಲ್ಲಿ ಈತನಕ ಯಾವ ಬಿಜೆಪಿ ಅಭ್ಯರ್ಥಿಗೂ ನೀಡದ ಭಾರೀ ಬೆಂಬಲವನ್ನ ಸಂಘದ ಹುಡುಗರು ಮೋದಿಗೆ ನೀಡಿದ್ದರು. ಹೋಂಸ್ಟೇ ಮತ್ತು ಪಬ್ ದಾಳಿಯ ವೇಳೆ ದ.ಕ ಜಿಲ್ಲೆಯ ಬಿಜೆಪಿ ಸಂಸದರು ಹಿಂದೂ ಯುವಕರ ಪರವಾಗಿ ನಿಲ್ಲಲಿಲ್ಲ. ಈ ಬಗ್ಗೆ ಸ್ವತಃ ಅದೆಷ್ಟೋ ಸಂಘಟನೆಯ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ಅದೇ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಎಲ್ಲೂ ಕೂಡ ನಳಿನ್ ಗಾಗಲೀ ಬಿಜೆಪಿಗಾಗಲೀ ಮತ ನೀಡಿ ಅನ್ನೋ ಮಾತುಗಳು ಇರಲೇ ಇಲ್ಲ. ಬದಲಾಗಿ ಅಲ್ಲೆಲ್ಲಾ ಗೋಚರಿಸಿದ್ದ ಜಸ್ಟ್ ನರೇಂದ್ರ ಮೋದಿ!

ಮೋದಿ ಗೆಲುವು ಜಿಲ್ಲೆಯಲ್ಲಿ ಶಾಂತಿ ಕದಡಬಹುದೇ?

ಹೇಳಿ ಕೇಳಿ ಈಗ ಎಲ್ಲರ ಬಾಯಲ್ಲೂ ನಮೋ ನಮೋ. ಅದರಲ್ಲೂ ಮೊದಲೇ ಹೇಳಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಮೋದಿ ಗೆದ್ದಿದ್ದೇ ನಮ್ಮಿಂದ ಅನ್ನೋ ಅತ್ಯುತ್ಸಾಹದಲ್ಲಿದ್ದಾರೆ. ಆದ್ರೆ ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಏಟು ಕೊಟ್ಟರೂ ಅಚ್ಚರಿಯಿಲ್ಲ. ಹಾಗಂತ ಇಲ್ಲಿ ಸಂಘದ ಹುಡುಗರೇ ಆಶಾಂತಿಯನ್ನ ಸೃಷ್ಟಿಸುತ್ತಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿ ಸಂಘಟನೆಯ ಯುವಕರನ್ನ ಕೆಣಕಲು ಕಿಡಿಗೇಡಿಗಳು ಕೂಡ ಜಿಲ್ಲೆಯ ಶಾಂತಿಯನ್ನ ಕದಡಬಹುದು. ಇನ್ನು ಕೆಲ ಬಿಸಿ ರಕ್ತದ ಹಿಂದೂ ಸಂಘಟನೆಯ ಯುವಕರು ಕೂಡ ಮೋದಿ ಬೆನ್ನಿಗಿದ್ದಾರೆ ಎಂಬ ಹುಂಬ ಧೈರ್ಯದಲ್ಲಿ ಸುಖಾಸುಮ್ಮನೆ ತಗಾದೆ ತೆಗೆದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಜೊತೆಗೆ ಸಂಘಪರಿವಾರವೂ ಇನ್ನಷ್ಟು ಗಟ್ಟಿಗೊಂಡಿದೆ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಈ ಮಧ್ಯೆ ನರೇಂದ್ರ ಮೋದಿಗೂ ಕೂಡ ತನ್ನ ಆಡಳಿತದ ಮಧ್ಯೆ ಸಂಘಪರಿವಾರವನ್ನ ಎದುರು ಹಾಕಿಕೊಳ್ಳೋದಕ್ಕೆ ಆಗೋಲ್ಲ. ಇದಕ್ಕೆ ಕಾರಣ ಆರ್ ಎಸ್ ಎಸ್ ಮೋದಿಯ ಮಾತೃ ಸಂಘಟನೆ. ಅಷ್ಟೇ ಅಲ್ಲದೇ ಈ ಮೊದಲೇ ಹೇಳಿದಂತೆ ನರೇಂದ್ರ ಮೋದಿಯ ಗೆಲುವಿನಲ್ಲಿ ಹೆಚ್ಚಿನ ಪಾತ್ರವನ್ನ ಸಂಘದ ಹುಡುಗರು ವಹಿಸಿಕೊಂಡಿದ್ದಾರೆ. ಹೀಗಿರೋವಾಗ ಹಿಂದೂಗಳಿಗಾಗಿ ನರೇಂದ್ರ ಮೋದಿ ಕೊಟ್ಟಿರೋ ಆಶ್ವಾಸನೆಗಳನ್ನ ಈಡೇರಿಸಲೇ ಬೇಕಿದೆ. ಅದರಲ್ಲೂ ಮುಖ್ಯವಾಗಿ ರಾಮ ಮಂದಿರ ಕಟ್ಟಿಯೇ ಸಿದ್ದ ಅಂದಿದ್ದ ಮೋದಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ, ಅಸಲಿಗೆ ರಾಮ ಮಂದಿರ ವಿವಾದ ನ್ಯಾಯಾಲಯದ ಮೆಟ್ಟಿಲೇರಿರೋದ್ರಿಂದ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ನರೇಂದ್ರ ಮೋದಿಯಾಗಲೀ ಕೈ ಯಾಡಿಸೋದು ಸಾಧ್ಯವಿಲ್ಲ. ಹೀಗಿದ್ದರೂ ಓಟ್ ಬ್ಯಾಂಕ್ ಗಾಗಿ ಮತ್ತದೇ ವಾಜಪೇಯಿ ಶೈಲಿಯನ್ನ ಯಥಾವತ್ ಅನುಕರಣೆ ಮಾಡಿರೋ ನರೇಂದ್ರ ಮೋದಿಯವರು ಈ ಭರವಸೆಯಲ್ಲಿ ಎಡವೋದು ಖಂಡಿತಾ. ಹೀಗಾಗಿ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ನಡೆ ಸಂಘದ ಹುಡುಗರ ಅಸಮಾಧಾನಕ್ಕೆ ಕಾರಣವಾದರೂ ಆಚ್ಚರಿಯಿಲ್ಲ. ಯಾಕೆಂದರೆ ಆಡಳಿತ ವ್ಯವಸ್ಥೆಯಲ್ಲಿ ಧರ್ಮವನ್ನ ತಂದರೆ ಈ ದೇಶದ ಕಾನೂನು ಸುವ್ಯವಸ್ಥೆಯೇ ಬುಡಮೇಲಾಗಬಹುದು. ಹಾಗಾಗಿ ಎಲ್ಲವನ್ನೂ ಬಲ್ಲವರಾಗಿರೋ ಮೋದಿ ಈ ವಿಚಾರದಲ್ಲಿ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಇದು ಸಂಘದ ಹುಡುಗರಲ್ಲಿ ಮೋದಿ ಬಗ್ಗೆ ಆಕ್ರೋಶ ಹೆಚ್ಚಿಸಬಹುದು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದ ಅಲೆ ಸೃಷ್ಟಿಸಿ ಮೋದಿ ಗೆದ್ದಿದ್ದರೂ ಎಲ್ಲರನ್ನೂ ಸಂತೃಪ್ತ ಪಡಿಸಿ ಆಡಳಿತ ನಡೆಸೋದು ನರೇಂದ್ರ ಮೋದಿಯವರಿಗೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.

ಧ್ವನಿ......


Thursday, 24 October 2013


ಸೌಜನ್ಯ ಪ್ರಕರಣದಲ್ಲಿ ಮಾಧ್ಯಮಗಳ ನಡೆ ಸ್ಪಷ್ಟಗೊಳ್ಳಬೇಕಿದೆ...!

ಸೌಜನ್ಯ


ಸೌಜನ್ಯ.....ಈಗ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡೀ ಕನರ್ಾಟಕದಲ್ಲಿ ಈ ಹುಡುಗಿ ಮನೆ ಮಾತಾಗಿ ಹೋಗಿದ್ದಾಳೆ. ಸತ್ತ ನಂತರ ಅದರಲ್ಲೂ ಮಣ್ಣು ಸೇರಿ ಒಂದು ವರ್ಷವಾದ ನಂತರ ಈಕೆ ಈ ಮಟ್ಟಿನ ಕ್ರಾಂತಿಗೆ ಕಾರಣಕತರ್ೆಯಾಗುತ್ತಾಳೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಇದೀಗ ಎಲ್ಲವೂ ಅಂದುಕೊಂಡದ್ದನ್ನು ಮೀರಿ ನಡೆಯುತ್ತಿದೆ. ಒಂದು ವಾರದ ಹಿಂದೆ ಅಂದರೆ ಅಕ್ಟೋಬರ್ 11, 2013ರ ಶುಕ್ರವಾರ ಸಂಜೆ 4.45ರವರೆಗೆ ಸೌಜನ್ಯ ಬಗ್ಗೆ ಯೋಚಿಸುವುದು ಬಿಡಿ, ರಾಜ್ಯದ ಮುಕ್ಕಾಲು ಪಾಲು ಜನತೆಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಆದರೆ ನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಆಕೆಯ ಸಾವಿನ ಹಿಂದೆ ತಳುಕು ಹಾಕಿಕೊಂಡ ಘಟಾನುಘಟಿಗಳ ಹೆಸರು ಕೇಳಿ ಇಡೀ ರಾಜ್ಯವೇ ನಡುಗಿ ಹೋಯಿತು. ಯಾರಪ್ಪ ಈ ಹುಡುಗಿ ಆಂತ ಎಲ್ಲರೂ ವಿಚಾರಿಸ ತೊಡಗಿದರು. ಒಂದು ವರ್ಷದ ಹಿಂದೆ ನಡೆದ ಪ್ರಕರಣ ಈಗ್ಯಾಕೆ ಸದ್ದು ಮಾಡುತ್ತಿದೆ ಅಂತ ಅಶ್ಚರ್ಯಪಟ್ಟರು. ಈ ಮೂಲಕ ಸೌಜನ್ಯ ಮತ್ತೆ ಬಂದಿದ್ದಾಳೆ....ತನ್ನ ಸಾವಿನ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಯತ್ನಿಸುತ್ತಿದ್ದಾಳೆ...........................!

ಆಕೆಯ ಸಾವಿಗೆ ನ್ಯಾಯ ಸಿಗಬೇಕೆಂದು ಒಂದಷ್ಟು ಸಂಘಟನೆಗಳು ಬೀದಿಗಿಳಿದಿವೆ. ರಾಜ್ಯದ ಒಂದೇ ಒಂದು ಖಾಸಗಿ ವಾಹಿನಿ ಸೌಜನ್ಯ ಪರವಾಗಿ ಧ್ವನಿಯೆತ್ತಿದೆ. (ಈ ವಿಚಾರದಲ್ಲಿ ಉಳಿದೆಲ್ಲಾ ಮಾಧ್ಯಮಗಳು ಸತ್ತು ಮಲಗಿರಬೇಕು). ಈ ಒಂದು ಪ್ರಕರಣ ಸಾಕು, ರಾಜ್ಯದ ಸುದ್ದಿ ವಾಹಿನಿಗಳ ನಿಷ್ಪಕ್ಷಪಾತ ನಡೆಯನ್ನು ಜಗಜ್ಜಾಹಿರುಗೊಳಿಸಲು.....!
ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ...!

ಯಾರದ್ದೋ ಮನೆಯಲ್ಲಿ ಗಂಡ-ಹೆಂಡತಿ ಜಗಳವಾಡಿದರೆ ಮರುದಿನವೇ ಸ್ಟುಡಿಯೋಗೆ ತಂದು ಕೂರಿಸಿ ಜಗಳವನ್ನು ಇನ್ನಷ್ಟು ದೊಡ್ಡದು ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳಿಗೆ ಸೌಜನ್ಯ ಪ್ರಕರಣ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಘಟಾನುಘಟಿಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆಯೇ? ಬಹುಶಃ ದುರಂತ ಅಂದರೆ ಇದೇ ಇರಬೇಕು. ಅದರಲ್ಲೂ ಸೌಜನ್ಯ ಪರವಾಗಿ ಒಂದೇ ಒಂದು ಸುದ್ದಿಪ್ರಸಾರ ಮಾಡದ ಈ ವಾಹಿನಿಗಳು ಅದ್ಯಾರೋ ಈ ಬಗ್ಗೆ `ನಾವು ತಪ್ಪೇ ಮಾಡಿಲ್ಲ' ಅಂದ ತಕ್ಷಣ ಲೈವ್ ಕೊಟ್ಟು ಘಂಟೆಘಟ್ಟಲೇ ಕಿರುಚಾಡಿದ್ದು ಯಾಕೆ ಎನ್ನುವುದೇ ತಿಳಿಯುತ್ತಿಲ್ಲ. ಈ ಪ್ರಕರಣದಲ್ಲಿ ಆರೋಪ ಕೇಳಿ ಬರುತ್ತಿರುವ ವ್ಯಕ್ತಿಗಳ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ ನಿಜ. ಇಂದಿಗೂ ಅದೆಷ್ಟೋ ಮನೆಯ ದೇವರ ಫೋಟೋ ಇಡುವ ಜಾಗದಲ್ಲಿ `ಅವರ' ಫೋಟೋ ಇಟ್ಟು ಪೂಜಿಸುವವರಿದ್ದಾರೆ. ಅಷ್ಟೇ ಯಾಕೆ? ಸತ್ತು ಮಣ್ಣು ಸೇರಿದ ಸೌಜನ್ಯಳ ಮನೆಯಲ್ಲೂ ಆ ವ್ಯಕ್ತಿಯನ್ನು ಆರಾಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಬಂದು ಅಂಥವರ ಮೇಲೆ ಆರೋಪ ಹೊರಿಸುವ ಹಕೀಕತ್ತು ಯಾರಿಗೂ ಇರೋದಿಲ್ಲ ಎನ್ನುವುದನ್ನು ಪೇಯ್ಡ್ ಮೀಡಿಯಾಗಲು ಅರಿತುಕೊಳ್ಳಲಿ. ಸೌಜನ್ಯಳ ಕುಟುಂಬಿಕರು ಮಾಡುವ ಆರೋಪಗಳನ್ನು ಇಲ್ಲವೇ ಆರೋಪಿಗಳು ಎನ್ನುವ ವ್ಯಕ್ತಿಗಳನ್ನು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾದ್ಯವಿಲ್ಲ ಅಂದುಕೊಳ್ಳೋಣ. ಆದರೆ ಆ ಮನೆಯವರ ನೈಜ ಯಾತನೆಗೆ ಸ್ಪಂದಿಸುವ ಮನಸ್ಸು ಕೂಡ ನಿಮ್ಮಲ್ಲಿಲ್ಲವೇ? ಈ ಮಧ್ಯೆ ನೇರ, ದಿಟ್ಟ, ನಿರಂತರ ಎನ್ನುವ ವಾಹಿನಿಯೊಂದು ಧರ್ಮಸ್ಥಳಕ್ಕೆ ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ. ಈ ವರದಿ ಗಮನಿಸಿದರೆ ಈ ವಾಹಿನಿಯನ್ನು ಧರ್ಮಸ್ಥಳದ ಘಟಾನುಘಟಿಗಳು ಕೊಂಡುಕೊಂಡಿದ್ದಾರೆಯೇ ಎಂಬ ಅನುಮಾನ ಕೂಡ ಕಾಡುತ್ತದೆ. ಉಪಕಾರ ಮಾಡಲು ಸಾದ್ಯವಾಗದಿದ್ದರೂ ಒಂಚೂರು ಅಪಕಾರವಾದರೂ ಮಾಡಿ ಬಿಡೋಣ ಅನ್ನೋದು ಇವರ ಉದ್ದೇಶವಿರಬೇಕು, ಪ್ರಸ್ತುತ ಕೇಳಿ ಬರುತ್ತಿರುವ ಸುದ್ದಿಯ ವಿಚಾರದಲ್ಲಿ ಎಲ್ಲಾ ವಾಹಿನಿಗಳ ವಾದ ಒಂದೇ `ಸೌಜನ್ಯ ಮನೆಯವರದ್ದು ಕೇವಲ ಆರೋಪ ಮಾತ್ರ' ಎನ್ನುವುದು. ಹಾಗಾದರೆ ನೊಂದವರ ಆರೋಪಗಳನ್ನು ಇಟ್ಟುಕೊಂಡು ಈ ವಾಹಿನಿಗಳು ಸುದ್ದಿ ಪ್ರಕಟಿಸಲೇ ಇಲ್ಲವೇ? ಸ್ಟುಡಿಯೋದಲ್ಲಿ ಕೂರಿಸಿ ಇನ್ನೊಬ್ಬರ ಮಾನ ಹಾನಿ ಮಾಡಿದ ಉದಾಹರಣೆಗಳೇ ಇಲ್ಲವೇ? ಖಂಡಿತಾ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಇವರುಗಳಿಗೆ ಸೌಜನ್ಯ ಮನೆಯವರ ಆರೋಪಗಳನ್ನು ಕೇಳುವಷ್ಟು ತಾಳ್ಮೆಯಿಲ್ಲ. ಇದ್ದರೂ ಒತ್ತಡ ಎಂಬ ಅಸ್ತ್ರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ ಅನ್ನಬಹುದು. ಸುದ್ದಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು. ಇದೇ ಕಾರಣಕ್ಕೆ ಚಾನೆಲ್ಗಳನ್ನು ಸ್ಥಾಪಿಸುವ ಅದರ ಹೆಸರಿನ ಅಡಿಗೆ ಒಂದಷ್ಟು  ಘೋಷ ವಾಕ್ಯಗಳನ್ನು ಕೂಡ ಇಟ್ಟುಕೊಂಡು ತಮ್ಮ ಸ್ವಾಮಿನಿಷ್ಟೆ ಪ್ರದಶರ್ಿಸುತ್ತಾರೆ. ಆದರೆ ಈ ರೀತಿಯ ವಿಚಾರಗಳಲ್ಲಿ ಇವರುಗಳ ಘೋಷವಾಕ್ಯಗಳು ಗಾಳಿಯಲ್ಲಿ ತೂರಿ ಹೋಗಿದ್ದೇ ಹೆಚ್ಚು. ಅಸಲಿಗೆ ಸೌಜನ್ಯ ಪ್ರಕರಣದಲ್ಲಿ ಸುದ್ದಿ ವಾಹಿನಿಗಳಷ್ಟೇ ಸುದ್ದಿ ಪತ್ರಿಕೆಗಳು ಕೂಡ ಸಮಾನ ತಪ್ಪಿತಸ್ಥರು. ಅದರಲ್ಲೂ ಮಂಗಳೂರಿನಲ್ಲಿ ಅತೀ ಹೆಚ್ಚು ಸಕ್ಯರ್ೂಲೇಶನ್ ಹೊಂದಿರುವ ಪತ್ರಿಕೆಯೊಂದು ಸೌಜನ್ಯ ಮನೆಯವರು ನಡೆಸಿದ ಪತ್ರಿಕಾಗೋಷ್ಠಿಯನ್ನೂ ಪ್ರಕಟಿಸದೆ ಅದ್ಯಾರದ್ದೋ ಕೈಯಲ್ಲಿ `ಭೇಷ್' ಅನಿಸಿಕೊಂಡಿದೆಯಂತೆ...! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಪತ್ರಿಕೆಗಳದ್ದು.

ಇನ್ನು ಈ ಎಲ್ಲಾ ಆರೋಪಗಳನ್ನು ಯಥಾವಥ್ ಸುದ್ದಿ ಮಾಡಿದ ಟಿವಿ9 ವಾಹಿನಿಗೆ ಕೋಟರ್್ನಿಂದ ತಡೆಯಾಜ್ಷೆ ಬೇರೆ ತಂದಿದ್ದಾರೆ. ಈ ಮೂಲಕ ನಾವು ಕೂಡ ನಿತ್ಯಾನಂದ ಸ್ವಾಮಿಯ ಪಾಟರ್ಿ ಅನ್ನೋದನ್ನು ನಿರೂಪಿಸಿದ್ದಾರೆ(ಕಾಮಿ ಸ್ವಾಮಿ ನಿತ್ಯಾನಂದ ಕೂಡ ತನ್ನ ವಿರುದ್ದ ವರದಿ ಮಾಡದಂತೆ ತಡೆಯಾಜ್ಷೆ ತಂದಿದ್ದ). ಇನ್ನು ಟಿವಿ9 ಈ ಬಗ್ಗೆ ವರದಿ ಮಾಡಿದರೆ ಜಿಲ್ಲೆಯ ಮೂಲೆಮೂಲೆಯಲ್ಲಿ ಕರೆಂಟ್ ಕಟ್. ಬಹುಶಃ ದುರಂತ ಅಂದ್ರೆ ಇದೇ ಇರಬೇಕು. ಈಗೀಗ ಟಿವಿ ನೋಡದಂತೆ ಕರೆಂಟ್ ಕಟ್, ಕೇಬಲ್ ಕಟ್ ಎಂಬ ಕಸರತ್ತಿನ ಕೆಲಸಗಳು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಜನಾರ್ದನ ರೆಡ್ಡಿಯ ವಿಚಾರದಲ್ಲಿ ಹೀಗಾಗಿದ್ದನ್ನು ನೋಡಿದ್ದೆ. ಆದರೆ ನಮ್ಮ ಸೌಜನ್ಯ ವಿಚಾರದಲ್ಲೂ ಹೀಗಾಗ್ತಿರೋದು.......ಒಟ್ಟಿನಲ್ಲಿ ಎಲ್ಲರೂ ಅವರಿಗೆ `ಅಡ್ಡ' ಬೀಳುವವರೇ...! ಈ ಮಧ್ಯೆ ನಾವು-ನೀವು ಏನ್ ತಾನೇ ಮಾಡೋದಕ್ಕೆ ಸಾಧ್ಯ...? ಏನೇ ಆಗಲಿ...ಟಿವಿ9 ನವರ ಕೆಲಸಕ್ಕೆ ಶಹಭಾಸ್ ಗಿರಿ ಹೇಳಲೇ ಬೇಕು..ಬಿಡಿ....

ಅಪ್ಪಟ ಹಳ್ಳಿ ಸೊಗಡಿನ ಕುಟುಂಬ!
ಸೌಜನ್ಯ ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆ

ಪ್ರಕರಣ ಗಂಭೀರ ಸ್ವರೂಪಕ್ಕೆ ಹೋದ ನಂತರ ಅಂದರೆ ಮೊನ್ನೆ ಮೊನ್ನೆ ಆಕೆಯ ಮನೆಗೆ ಹೋಗಿದ್ದೆ. ಹಳ್ಳಿಗಾಡಿನ ಸೊಗಡನ್ನು ಉಳಿಸಿಕೊಂಡು ಬಾಳುತ್ತಿರುವ ಅಪ್ಪಟ ಗೌಡ ಮನೆತನ ಅವರದ್ದು. ಇಂದಿಗೂ ಅವರ ಮಗಳ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿಟ್ಟಿದ್ದಾರೆ. ಅವಳು ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆಗಳು....ಹೀಗೆ ಎಲ್ಲವೂ ಸೌಜನ್ಯಳನ್ನು ಮತ್ತೆ ನೆನಪಿಸುವ ಹಾಗಿದೆ. ಈ ಮಧ್ಯೆ  ಮಗಳು ಮನೆಯವರಿಗೆ ಕೊನೆಯದಾಗಿ ಕೊಟ್ಟು ಹೋದ ಕಣ್ಣೀರು ಕೂಡ ಒಂಚೂರು ಬತ್ತಿಲ್ಲ....! ಬಿಟ್ಟು ಹೋದ ಮನೆ ಮಗಳ ಬಗ್ಗೆ ಮನೆಯ ಪ್ರತಿಯೊಬ್ಬರು ಹೇಳುವುದು ಒಂದೇ......ಚಿನ್ನದಂಥ ಹುಡುಗಿ ಕಣ್ರೀ ಆಕೆ. ಹೌದು, ಮನೆಯ ಪ್ರತಿಯೊಬ್ಬರೂ ಆಕೆಯ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕಣ್ಣಾಲಿಗಳು ಒದ್ದೆಯಾದವು. ಮಾಡದ ತಪ್ಪಿಗೆ ಬಲಿಯಾದ ಆ ಹೆಣ್ಣುಮಗಳ ಸಾವಿನಲ್ಲಿ ಕೇಕೆ ಹಾಕಿದ ವಿಧಿಯಾಟದ ಬಗ್ಗೆಯೇ ಇನ್ನಿಲ್ಲದ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮನೆಯವರ ದುಃಖದ ಮಧ್ಯೆ ನನ್ನದು ಕ್ಷಣಿಕ ಎಂದು ಸುಮ್ಮನಾದೆ.
ಅಪ್ಪಟ ಹಳ್ಳಿ ಸೊಗಡಿನ ಸೌಜನ್ಯ ಕುಟುಂಬ

ಸರಿ ಸುಮಾರು ಒಂದು ವರ್ಷದ ಹಿಂದೆ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಒಂದೆರೆಡು ದಿನ ಸದ್ದು ಮಾಡಿ ಮಾನಸಿಕ ಅಸ್ವಸ್ಥನೊಬ್ಬ ಜೈಲು ಸೇರುವುದರೊಂದಿಗೆ ಪ್ರಕರಣ ಮುಚ್ಚಿ ಹೋಗಿತ್ತು.

ಈ ಮಧ್ಯೆ ಒಂದೆರೆಡು ಸಂಘಟನೆಗಳ ಹೋರಾಟಕ್ಕೆ ಮಣಿದು ಸಕರ್ಾರ ಯಾವುದಕ್ಕೂ ಇರಲಿ ಅಂತ ಸಿಐಡಿಗೂ ಒಪ್ಪಿಸಿತ್ತು. ಆದರೆ ನಮ್ಮದೇ ರಾಜ್ಯದ ಸಿಐಡಿಯಿಂದ ಯಾವ ಮಟ್ಟದ ನ್ಯಾಯ ನಿರೀಕ್ಷಿಸಲು ಸಾಧ್ಯ? ಒಟ್ಟಿನಲ್ಲಿ ಸೌಜನ್ಯ ಸಾವಿನ ಹಿಂದೆಯೇ ಪ್ರಕರಣ ಮುಚ್ಚಿ ಹೋದಾಗ, ಧರ್ಮಸ್ಥಳ-ಉಜಿರೆಯಲ್ಲಿ ನೆಲಕ್ಕುರುಳಿದ ಅಷ್ಟೋ ಹೆಣಗಳಲ್ಲಿ ಈಕೆಯದ್ದು ಕೂಡ ಒಂದು ಅಂತ ಒಂದಷ್ಟು ಪ್ರಜ್ಞಾವಂತರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಧರ್ಮಸ್ಥಳದ ಘಟಾನುಘಟಿಗಳ ಬಗ್ಗೆಯೇ ಆರೋಪಗಳು ಕೇಳಿ ಬಂದಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಅವರಿಂದ ಬಯಸಲು ಸಾದ್ಯವೇ?


Tuesday, 6 August 2013


ಗೋಸಾಗಾಟ ಮತ್ತೆ ಗಲಭೆಗೆ ಹೇತುವಾಗಬೇಕೇ?
ಹಿಂದೂ-ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ!


ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷಕ್ಕೆ ಕುಖ್ಯಾತಿ ಪಡೆದ ಪ್ರದೇಶ. ಇಲ್ಲಿ ನೀರಿಗಾಗಿ, ಭಾಷೆಗಾಗಿ ಹೋರಾಟ ಮಾಡುವವರಿಗಿಂತ ಧರ್ಮದ ವಿಚಾರದಲ್ಲಿ ಬೀದಿಗಿಳಿಯುವ ಬಹುದೊಡ್ಡ ವರ್ಗವೇ ಇದೆ. ಇಲ್ಲಿನ ಜನರು ತಮ್ಮ ತಮ್ಮ ಧರ್ಮಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡುವ ಕಾರಣ ಧರ್ಮ ನಿಂದನೆಯಂತಹ ವಿಚಾರಗಳು ಕೋಮು ಸಂಘರ್ಷಗಳಾಗಿ ಬದಲಾಗುತ್ತಿವೆ. ಈ ಹಿಂದೆ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಸುವ ಮೂಲಕ ಇತಿಹಾಸದ ಪುಟ ಸೇರಿರುವ ಪ್ರತೀ ಗಲಭೆಯಲ್ಲೂ ಇಲ್ಲಿನ ಜನರ ಜಾತಿ ಪ್ರೀತಿಯ ಛಾಯೆ ಎದ್ದು ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳ ಪಾಲಿಗೆ ಪವಿತ್ರವೆನಿಸಿರುವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದೇ ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷಗಳಿಗೆ ಹೇತುವಾಗುತ್ತಿದೆ ಎನ್ನುವುದು ದುರಂತ.
ಅದರಲ್ಲೋ ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಮಿತಿಮೀರಿದೆ. ತಲವಾರು ತೋರಿಸಿ ದನ ಕಳವು ಮಾಡುವ ಹಂತಕ್ಕೆ ದುಷ್ಕಮರ್ಿಗಳು ಇಳಿದಿರುವುದು ನಿಜಕ್ಕೂ ದುರಂತ. ಮುಂದೊಂದು ದಿನ ಇಂತದ್ದೇ ಘಟನೆ ಮತ್ತೊಂದು ಗಲಭೆಗೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ ಬಿಡಿ.

ಹಿಂದೂಗಳ ಪಾಲಿಗೆ ಅತೀ ಪವಿತ್ರವೆನಿಸಿರುವ ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಟೊಂಕಕಟ್ಟಿ ನಿಲ್ಲುತ್ತವೆ. ಧಾಮರ್ಿಕ ನಂಬಿಕೆಯ ಪ್ರತೀಕವೆನಿಸಿದ ಗೋವುಗಳ ರಕ್ಷಣೆಗೆ ನಿಲ್ಲುವುದು ಸಹಜವೇ ಅನ್ನೋಣ. ಆದರೆ ಮುಂದಾಗುವ ಅನಾಹುತಗಳು ಮಾತ್ರ ಅಸಹಜ ಎನ್ನುವುದು ಅರಿಯಬೇಕಾದ ವಿಚಾರ. ಒಂದು ಧರ್ಮಕ್ಕೆ ಪವಿತ್ರವೆನಿಸಿರುವ ಗೋವು ಇನ್ನೊಂದು ಧರ್ಮದ ಕೆಲವರಿಗೆ ಆಹಾರ ಪದ್ದತಿ ಎನಿಸಿಕೊಂಡಿದೆ. ಪರ-ವಿರೋಧಗಳ ನಡುವೆಯೂ ತಿಂಗಳಿಗೆ ಹೆಚ್ಚೆಂದರೂ ಆರೇಳು ಗೋಸಾಗಾಟದ ವಿದ್ಯಮಾನಗಳು ಬೆಳಕಿಗೆ ಬರುತ್ತಲೇ ಇವೆ. ಇಷ್ಟೆಲ್ಲಾ ಆದರೂ ನಮ್ಮ ಪೊಲೀಸ್ ಇಲಾಖೆ ಮಾತ್ರ ಬೆಚ್ಚಗೆ ಕೂತು ಚೆಂದ ನೋಡುತ್ತಿರುವುದು ವಿಪಯರ್ಾಸ. ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಇದರ ವಿರುದ್ದ ಮೊದಲಾಗಿಯೇ ಕ್ರಮ ಕೈಗೊಂಡು ಗಲಭೆಗೆ ಆಸ್ಪದ ನೀಡುವುದನ್ನು ತಪ್ಪಿಸಬಹುದು ಎಂಬ ಮಾತು ಶಾಂತಿಪ್ರಿಯರದ್ದು.
ಗೋವು ಹಿಂದೂಗಳ ಧಾಮರ್ಿಕ ನಂಬಿಕೆ, ಮುಸ್ಲಿಮರ ಆಹಾರ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಕಳೆದ ಕೆಲ ದಿನಗಳಿಂದ ಕೋಮು ದಳ್ಳುರಿಗೆ ಕಾರಣವಾಗಬಹುದಾದ ಒಂದು ವಿಚಾರವಾಗಿ ಹೋಗಿದೆ. ಸಾಗಾಟಗಾರರ ಮತ್ತು ಹಿಂದೂ ಸಂಘಟನೆಗಳ ಮಧ್ಯೆ ನಡೆಯುವ ಸಣ್ಣಪುಟ್ಟ ಗಲಾಟೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪ್ರಕರಣದ ಫೈಲ್ ಕ್ಲೋಸ್ ಆಗುವಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಕಡೆ ಎರಡು ಧರ್ಮಗಳ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಇಷ್ಟೆಲ್ಲಾ ಆದರೂ ಕರಾವಳಿಯ ಎರಡು ಧರ್ಮಗಳು ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿ ಚಿಂತಿಸಿದಂತೆ ತೋರುತ್ತಿಲ್ಲ. ಇಲ್ಲಿ ಧಾಮರ್ಿಕ ನಂಬಿಕೆ, ಆಹಾರ ವಸ್ತು ಎನ್ನುವುದಕ್ಕಿಂತಲೂ ಕಲಹಕ್ಕೆ ಕಾರಣವಗುವ ವಿಚಾರ ಎನ್ನುವುದನ್ನಾದರೂ ಜಿಲ್ಲೆಯ ಜನತೆ ಗ್ರ್ಪ್ರಹಿಸಿಕೊಳ್ಳುವ ಅಗತ್ಯತೆ ಇದೆ.

ಎಲ್ಲಾ ಧರ್ಮದಲ್ಲೂ ದುರುಳರು ಇದ್ದೇ ಇರುತ್ತಾರೆ. ಅದರಲ್ಲೂ ಕೋಮು ದಳ್ಳುರಿಯ ಕಿಡಿ ಹಚ್ಚಿ ವಿಕೃತ ಆನಂದ ಪಡೆಯುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಆದರೆ ಇಂಥವರ ಮಧ್ಯೆ ಶಾಂತಿಪ್ರಿಯ ಹಿಂದೂ-ಮುಸ್ಲಿಮರ ಮನಸ್ಥಿತಿಯಲ್ಲಿ ಕೊಂಚ ಬದಲಾವಣೆ ಬೇಕಿದೆ. ಗೋಸಾಗಾಟದ ವಿಚಾರ ಬಂದಾಗ ಅದನ್ನು ತಡೆಯುವ ಸಣ್ಣ ಪ್ರಯತ್ನವನ್ನು ಜಿಲ್ಲೆಯ ಸಹೃದಯಿ ಮುಸಲ್ಮಾನ ಬಾಂಧವರು ಮಾಡಬೇಕಿದೆ. ಗೋವು ಆಹಾರ ವಸ್ತು ಎನ್ನುವುದಕ್ಕಿಂತಲೂ ಗಲಭೆಯ ವಸ್ತುವಾಗಿ ಹೋಗುತ್ತಿರುವಾಗ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅಗತ್ಯತೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಪ್ರತಿಷ್ಟೆಯ ವಿಚಾರಕ್ಕಿಂತ, ಆಹಾರ ಪದ್ದತಿಯ ವಿವಾದಕ್ಕಿಂತ ಮುಖ್ಯವಾಗಿ ಶಾಂತಿ-ಸುವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ನಮ್ಮಿಂದಲೇ ಇದನ್ನೆಲ್ಲಾ ತಡೆಯಲು ಸಾಕಷ್ಟು ಅವಕಾಶಗಳಿರುವಾಗ ಪೊಲೀಸರ ತಲೆಗೆ ಕಟ್ಟಿ ಕೂರುವುದು ಅಷ್ಟು ಸಮಂಜಸವಲ್ಲ.

ಉಳಿದಂತೆ ಈ ವಿಚಾರದಲ್ಲಿ ಹಿಂದೂಗಳ ಮನಸ್ಥಿತಿಯಲ್ಲೂ ಕೊಂಚ ಬದಲಾವಣೆಯಾಗಬೇಕು. ಗೋಸಾಗಾಟ ನಡೆಯುತ್ತಿದೆ ಎಂದ ತಕ್ಷಣ ಮುಗಿಬಿದ್ದು ವಾಹನಗಳ ಬೆನ್ನುಬೀಳುವ ಬದಲು ಇಲಾಖೆಯ ಸಹಕಾರ ಪಡೆಯುವುದು ಉತ್ತಮ. ಕೆಲದಿನಗಳಲ್ಲಿ ಸಂಘಟನೆಯವರು ಇಲಾಖೆಗೆ ಸುದ್ದಿ ಮುಟ್ಟಿಸಿಯೇ ಮುಂದಡಿಯಿಡುತ್ತಿರುವುದು ಶ್ಲಾಘನೀಯವಾದರೂ ಒಂದೆರೆಡು ಕಡೆ ಆಕ್ರೋಶದ ಹಲ್ಲೆಗಳು ನಡೆದಿದೆ. ಪ್ರತೀ ಬಾರಿ ದಾಳಿಯೊಂದೇ ಪರಿಹಾರವಲ್ಲ. ದಾಳಿಗಳೇ ಮುಂದೆ ಗಲಭೆಗೆ ಕಾರಣವಾದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಬೆನ್ನಟ್ಟಿ ದಾಳಿ ನಡೆಸಿ ಹಲ್ಲೆ ನಡೆಸುವುದು ಸಮಂಜಸವಲ್ಲ. ಅಲ್ಲದೇ ಶಾಂತಿಪ್ರಿಯ ಹಿಂದೂ ಧರ್ಮಕ್ಕೆ ಇಂತಹ ಘಟನೆಗಳು ತಕ್ಕುದಲ್ಲ ಎನ್ನುವುದು ನನ್ನ ಅಭಿಪ್ರಾಯ.
ನೆನಪಿರಲಿ, ಜಿಲ್ಲೆ ಕಂಡ ಪ್ರತೀ ಕೋಮುಗಲಭೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಒಂದಷ್ಟೂ ಹಾನಿಯೂ ಆಗಿದೆ. ಇವೆಲ್ಲವಕ್ಕೂ ಸಾಕ್ಷಿಯಾಗಿದ್ದ ಕಡಲತಡಿ ಇಂದು ಒಂದು ಹಂತಕ್ಕೆ ಶಾಂತವಾಗಿದೆ ಎನ್ನುವುದೇ ನಿಟ್ಟುಸಿರು ಬಿಡುವ ವಿಚಾರ. ಇದೀಗ ಮತ್ತೆ ಗೋಸಾಗಾಟ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡ ಎನ್ನುವುದೇ ಎಲ್ಲರ ಆಶಯ.

Tuesday, 30 July 2013

ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? 

ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!


ನಿನ್ನೆ ಅದ್ಯಾವುದೋ ಕೆಲಸದ ನಿಮಿತ್ತ ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ. ಈ ವೇಳೆ ಕೇಸರಿ ಪಂಚೆಯುಟ್ಟ, ಬಿಳಿ ಬಣ್ಣದ ಶರ್ಟ್ ತೊಟ್ಟ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಕಂಡು ಮಾತಿಗಿಳಿದರು. `ನನ್ನ ಪರಿಚಯ ಇದಿಯಾ ಸಾರ್? ಅಂತ ಆ ವ್ಯಕ್ತಿ ಕೇಳಿದಾಗ `ಯಾರಪ್ಪ ಇದು? ಅಂದುಕೊಂಡು ಅವರನ್ನು ತಿರಸ್ಕರಿಸಿ ಮುಂದೆ ಹೋಗಲು ಯತ್ನಿಸಿದೆ. ಆದರೆ ಆ ಆಸಾಮಿ ನನ್ನನ್ನು ಅಲ್ಲಿಂದ ಕಾಲ್ಕೀಲಲು ಬಿಡಲೇ ಇಲ್ಲ. ಮತ್ತದೇ ಪ್ರಶ್ನೆ `ನನ್ನ ಪರಿಚಯ ಇದೆಯಾ ಸಾರ್? ಎನ್ನುವುದು. ಈ ವೇಳೆ ಯಾರಪ್ಪ ಇವರು ಆಂತ ಸ್ವಲ್ಪ ಯೋಚನೆ ಮಾಡಲು ಆರಂಭಿಸಿದೆ. ಆದರೆ ಆ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಆದರೂ ಆ ವ್ಯಕ್ತಿಯನ್ನು ಎಲ್ಲೋ ನೋಡಿದ, ಒಂದಷ್ಟು ಹೊತ್ತು ಮಾತನಾಡಿದ ನೆನಪುಗಳು ಮಾತ್ರ ಒಂದು ಹಂತಕ್ಕೆ ನನ್ನಲ್ಲಿತ್ತು....
ನಾನು ತಡವರಿಸಿದ್ದನ್ನು ಕಂಡ ಅವರು `ನಾನು ಸಾರ್ ಲಕ್ಷ್ಮಣ್...ಆವತ್ತು ನಿಮ್ಮ ಭವಿಷ್ಯ ಹೇಳಿದ್ನಲ್ಲಾ...! ಅಂತ ತನ್ನ ಪರಿಚಯ ಮಾಡಿಕೊಂಡರು. ಆಗಲೇ ಗೊತ್ತಾಗಿದ್ದು ನೋಡಿ....ಸರಿಸುಮಾರು ಒಂದು ವರ್ಷದ ಹಿಂದೆ ಈ ವ್ಯಕ್ತಿ ನನ್ನ ಒಂದಷ್ಟು ಭವಿಷ್ಯ ಹೇಳಿದ್ರು ಅನ್ನೋದು. ಇವರದ್ದು ಬೀದಿ ಸುತ್ತಿ ಮನೆ-ಮನೆಗೆ ಹೋಗಿ ಭವಿಷ್ಯ ಹೇಳುವ ಕಾಯಕ. ಹೀಗೇ ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಂದು ಹಣ ಕೊಡದಿದ್ರೂ ಪರವಾಗಿಲ್ಲ, ನಿಮ್ಮ ಭವಿಷ್ಯ ಹೇಳ್ತೀನಿ ಅಂದಿದ್ದ ಈ ಆಸಾಮಿ. ಕೊನೆಗೆ ಕಾಟ ತಡೆಯಲಾಗದೆ `ಆಯ್ತಪ್ಪ ಹೇಳು' ಅಂತ ಒಂದತ್ತು ನಿಮಿಷ ಅವರ ಜೊತೆ ಮಾತನಾಡಿದ್ದೆ (ಭವಿಷ್ಯ ಕೇಳಿದ್ದೆ)...!
ವರ್ತಮಾನದ ಮೇಲೆ ಮಾತ್ರ ಒಂದಷ್ಟು ನಂಬಿಕೆಯಿಟ್ಟ ನನಗೆ ಭವಿಷ್ಯದ ಬಗ್ಗೆಯಾಗಲೀ ಜ್ಯೋತಿಷ್ಯದ ಬಗ್ಗೆಯಾಗಲೀ ಅಷ್ಟಾಗಿ ನಂಬಿಕೆಯಿಲ್ಲ. ಆದರೂ ಆ ವ್ಯಕ್ತಿಯ ಕಿರಿಕಿರಿ ತಾಳದೆ ಅಂದು ಭವಿಷ್ಯ ಕೇಳಿದೆ. ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದ ಅವರು, ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿದೆ. ನಿಮಗೆ ರಾಜಯೋಗ ಇದೆ. ನೀವು ಕೈಯಿಟ್ಟ ಎಲ್ಲಾ ಕೆಲಸಗಳೂ ಥಟ್ ಅಂತ ಮುಗಿದು ಹೋಗುತ್ತೆ....ಅಂತ ಹೇಳಿ ಐದೇ ನಿಮಿಷದಲ್ಲಿ ನನ್ನನ್ನು ರೈಲು ಹತ್ತಿಸಿಬಿಟ್ಟಿದ್ದ. ಆದರೆ ನನ್ನದು ಮಾತ್ರ ಒಮ್ಮೊಮ್ಮೆ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುವ ಜಾಯಮಾನ. ಹಾಗಾಗಿ ಆ ಕೂಡಲೇ ಆತನ ಮಾತಿಗೆಲ್ಲಾ ಒಂದಷ್ಟು ಖಡಕ್ ಉತ್ತರ ಕೊಟ್ಟಿದ್ದೆ....ಸುಮ್ಮನೆ ರೈಲು ಹತ್ತಿಸುವ ಕೆಲಸ ಬೇಡ ಅಂತ ಒಂದು ರೇಂಜಿಗೆ ಆ ಜ್ಯೋತಿಷಿಗೆ ಬೈದು ಬಿಟ್ಟಿದ್ದೆ. ಸಾಕಪ್ಪ ನಿನ್ನ ಜ್ಯೋತಿಷ್ಯ ಇಲ್ಲಿಂದ ಜಾಗ ಖಾಲಿ ಮಾಡು ಅಂತಾನೂ ಹೇಳಿದ್ದೆ. ಆದರೆ ಅವರು ಮಾತ್ರ ಜಾಗ ಖಾಲಿ ಮಾಡುವ ಹಾಗೆ ಕಾಣಲಿಲ್ಲ. `ಸಾರ್, ಇಲ್ಲಿಯ ತನಕ ನಾನು ಹೇಳಿದ್ದು ನಿಮ್ಮ ಅದೃಷ್ಟದ ಬಗ್ಗೆ...ಮುಂದೆ ನಿಮ್ಮ ಜೀವನದಲ್ಲಿ ಆಗಬಹುದಾದ ದುರಾದೃಷ್ಟದ ಬಗ್ಗೆಯೂ ಹೇಳ್ತೀನಿ ಅಂದ......ಮಾತು ಮುಂದುವರೆಸಿದವನೇ.....ಮುಂದೆ ನಿಮ್ಮ ಜೀವನದಲ್ಲಿ ದೊಡ್ಡದೊಂದು ಅನಾಹುತ ಕಾದಿದೆ ಅಂದು ಬಿಟ್ಟ...ಮೊದಲನೆಯದು ಅಪಘಾತವಾದರೆ, ಎರಡನೆಯದು ನೀವು ಮಾಡುವ ವೃತ್ತಿಯದ್ದು ಎಂದು ಹೇಳಿದೆ..ಮೂರನೆಯದ್ದು ಏನಪ್ಪ? ಎಂದು ನಾನು ಕೂಡ ಕೇಳಿಯೇ ಬಿಟ್ಟೆ..ಆಗ ಆತ `ನಿಮ್ಮ ಜೀವನದಲ್ಲಿ ಪ್ರೀತಿಯ ವಿಚಾರದಲ್ಲಿ ಒಂದು ಸೋಲು ನಿಮ್ಮ ಬೆನ್ನು ಬೀಳಿಲಿದೆ. ಬದುಕಿನಲ್ಲಿ ನಿಮ್ಮ ಮೇಲೊಂದು ಬಹುದೊಡ್ಡ ಏಟು ಬೀಳಲಿದೆ. ಹಣ್ಣು ಮಗಳೊಬ್ಬಳ ವಿಚಾರದಲ್ಲಿ ಒಂದಷ್ಟು ದಿನ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ' ಅಂದು ಬಿಟ್ಟ. ಒಂದು ಮತ್ತು ಎರಡನೆಯದು ಓಕೆ....ಆದರೆ ಮೂರನೆಯದು ನನ್ನ ಜೀವನದಲ್ಲಿ ಸಾದ್ಯವೇ ಇಲ್ಲ ಅಂತ ಹೇಳಿಬಿಟ್ಟೆ. ಯಾಕೆಂದರೆ ಅಲ್ಲಿಯತನಕ ಪ್ರೀತಿ-ಪ್ರೇಮ, ಲವ್-ಗಿವ್ ಅಂತ ನನಗೆ ಏನೂ ಇರಲಿಲ್ಲ. ನನ್ನದೇನಿದ್ದರೂ ಒಬ್ಬಂಟಿ ಜೀವನ...ಹಾಗಾಗಿ ಈ ಬೀದಿ ಜ್ಯೋತಿಷಿಯ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೋ ಏನೋ ನಿನ್ನೆ ಮಂಗಳೂರಿನ ರಸ್ತೆಯಲ್ಲಿ ಮುಗಿಬಿದ್ದು ಆತನೇ ಮಾತಿಗಿಳಿದರೂ `ಅವನ್ಯಾರು? ಎನ್ನುವುದು ನನ್ನ ಅರಿವಿಗೆ ಬರಲು ಒಂದಷ್ಟು ಹೊತ್ತು ಬೇಕಾದದ್ದು...!
ಹೀಗೆ ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಜ್ಯೋತಿಷಿ ಲಕ್ಷಣನ ಬಗ್ಗೆ ಅಷ್ಟೊತ್ತಿಗಾಗಲೇ ಎಲ್ಲವೂ ನೆನಪಾಗಿತ್ತು. ಆತ ಒಂದು ವರ್ಷದ ಹಿಂದೆ ಹೇಳಿದ್ದು, ಆನಂತರ ನನ್ನ ಜೀವನದಲ್ಲಿ ನಡೆದದ್ದು ಎಲ್ಲವೂ ಕಣ್ಣ ಮುಂದಿತ್ತು. ಹಾಗಾಗಿ ಇನ್ನು ಭವಿಷ್ಯದ ಪ್ರಶ್ನೆ ಬೇಡ ಅಂದುಕೊಂಡು ಜ್ಯೋತಿಷಿಯನ್ನೇ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಕೇಳಿದೆ. ಈಗ ಆತನ ಜೊತೆ ಮಾತನಾಡುವ ಸರದಿ ನನ್ನದು ಅಂದು ಕೊಂಡು `ಈಗ ನೀವು ನನ್ನ ಭವಿಷ್ಯ ಹೇಳುವುದು ಬೇಡ...ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ಜೀವನದಲ್ಲಿ ಏನಾಯಿತು? ಅಂತ ಹೇಳಿ ಅಂದು ಬಿಟ್ಟೆ. ಆಗ ತನ್ನ ಇನ್ನಿಲ್ಲದ ಕವಡೆ, ಜ್ಯೋತಿಷ್ಯದ ಒಂದಷ್ಟು ಪುಸ್ತಕ, ಅಸ್ತ್ರ ಎಲ್ಲವನ್ನೂ ನನ್ನೆದುರಿಗಿಟ್ಟವನೇ ಭೂತಕಾಲದ ವಿವರ ಬಹಿರಂಗಕ್ಕೆ ಇಳಿದುಬಿಟ್ಟ. `ಏನ್ ಸಾರ್, ನಿಮ್ಮ ಜೀವನದಲ್ಲಿ ಹೀಗೆಲ್ಲಾ ಆಗಿ ಹೋಯ್ತು! ನಾನವತ್ತು ಹೇಳಿದ ಹಾಗೆಯೇ ಆಯ್ತಲ್ಲ. ಹೆಣ್ಣು ಮಗಳ ವಿಚಾರದಲ್ಲಿ ನೀವು ಸುಖಾಸುಮ್ಮನೆ ತೊಂದರೆ ಅನುಭವಿಸುತ್ತೀರಿ ಅಂದಿದ್ದೆ. ಅದು ಸರಿಯಾಗಿಯೇ ಆಗಿದೆ ಅಲ್ವಾ ಸಾರ್. ಮೊದಲು ಎಲ್ಲರೂ ನಿಮ್ಮದೇ ತಪ್ಪು ಅಂದುಕೊಂಡಿದ್ರೂ ಆದ್ರೆ ಈಗ ಎಲ್ಲರಿಗೂ ನಿಮ್ಮ ಬಗ್ಗೆ ಗೊತ್ತಾಗಿದೆ ಅಲ್ವಾ? ಮೊದಲ ಪ್ರೀತಿ ನಿಮ್ಮ ವಿಚಾರದಲ್ಲಿ ಸೋತು ಹೋಯ್ತಲ್ಲ ಸಾರ್...! ಅಂದು ಬಿಟ್ಟ.....ಈ ಮಧ್ಯೆ ನಿಮಗೆ ಒಂದು ವಾಹನಪಘಾತವಾಗಿದೆ...ಮೊದಲು ಮಾಡ್ತಾ ಇದ್ದ ಕೆಲಸ ಕೂಡ ಈಗ ಇಲ್ವಲ್ಲಾ? ಬೇರೆ ಕಲಸದಲ್ಲಿದ್ದೀರಲ್ಲಾ.....ಅಂದ ಲಕ್ಷ್ಮಣ ಜ್ಯೋತಿಷಿ....
ಆಗ ನಾನು ನಿಜಕ್ಕೂ ಶಾಕ್ ಆದೆ....!ಜ್ಯೋತಿಷ್ಯ, ಭವಿಷ್ಯ ಯಾವುದನ್ನೂ ನಂಬದ ನಾನು ಕೂಡ ಆತನ ಮಾತಿಗೆ ಸೋತು ಶರಣಾಗಬೇಕಾಯಿತು. ಕಾರಣ ಇಷ್ಟೇ....ಆತ ತನ್ನ ಭೂತಕಾಲದ ಬಗ್ಗೆ ಹೇಳಿದ ಇಂಚಿಂಚೂ ವಿಷಯಗಳು ಕಳೆದ ಒಂದು ವರ್ಷ ನಡೆದ ಘಟನೆಗಳ ಜೆರಾಕ್ಸ್ ಕಾಪಿಯಂತಿದ್ದವು......! ಅದರಲ್ಲೂ ನಾನು ಯಾರಲ್ಲಿಯೂ ಹೇಳದ ವಿಚಾರಗಳೂ ಲಕ್ಷ್ಮಣದ ಬಾಯಿಯಿಂದ ಹಾಗೇ ಉದುರುತ್ತಿದ್ದವು.
ಆಗ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಹೈ-ಫೈ ಜೀವನ ನಡೆಸುವ ಸೋಕಾಲ್ಡ್ ಜ್ಯೋತಿಷಿಗಳ ಮಧ್ಯೆ ಲಕ್ಷ್ಮಣ್ನಂತಹ ಬೀದಿ ಸುತ್ತುವ ಜ್ಯೋತಿಷಿಗಳ ಭವಿಷ್ಯ ಎಷ್ಟು ಪವರ್ಫುಲ್ ಅನ್ನೋದು. ಕೆಲವೊಮ್ಮೆ ನಾವು ಇಂಥವರ ವೇಷ-ಭೂಷಣ, ಬದುಕುವ ರೀತಿಯನ್ನು ಕಂಡು ತಾತ್ಸರದಿಂದ ಕಾಣುತ್ತೇವೆ. ಆದರೆ ಬೀದಿ ಸುತ್ತಿ ಇವರು ಗಳಿಸಿಕೊಂಡ ಅತ್ಯಮೂಲ್ಯ ಜ್ಞಾಪಕಶಕ್ತಿ, ಇದ್ದಬದ್ದ ಪುಸ್ತಕ ಓದದೇ ಪಡೆದ ಒಂದಷ್ಟು ಭವಿಷ್ಯ ಹೇಳುವ ಗುಣ ನಿಜಕ್ಕೂ ಗ್ರೇಟ್ ಅನಿಸದೇ ಇರದು. ಅದರಲ್ಲೂ ಜ್ಯೋತಿಷ್ಯ ಬೇಕಾದ್ರೆ ಹೇಳ್ತೀನಿ...ಆದ್ರೆ ನಿಮ್ಮತ್ರ ಹಣ ಇಲ್ದೇ ಇದ್ರೆ ಪರ್ವಾಗಿಲ್ಲ ಎನ್ನುವ ಇವರ ಸ್ವಾಭಾವ....ಒಂದು ಹಂತಕ್ಕೆ ಅದಾಗಲೇ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು. ನನ್ನ ಜೀವನವನ್ನು ಇದ್ದಿದ್ದನ್ನು ಇದ್ದ ಹಾಗೆ ಕಟ್ಟಿಕೊಟ್ಟ ಲಕ್ಷ್ಮಣ್ರಂತಹ ಜ್ಯೋತಿಷಿಗಳ ಬಗ್ಗೆ ಅದ್ಯಾಕೋ ಒಂದಷ್ಟು ಗೌರವ ನನ್ನಲ್ಲೂ ಮೂಡಿದೆ. ಏನೇ ಆಗಲಿ ಭೂತ-ವರ್ತಮಾನ-ಭವಿಷ್ಯದ ನಡುವಿನ ಹಾದಿಯಲ್ಲಿ ಜ್ಯೋತಿಷ್ಯ ಎನ್ನುವುದು ಹೆಸರಿಗಷ್ಟೇ....ಬದುಕಿನಲ್ಲಿ ಇಂತದ್ದೇ ಆಗಬೇಕು ಅನ್ನುವುದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ...ಅದಕ್ಕೆ ಇರಬೇಕು ಯೋಗರಾಜ್ ಭಟ್ಟರು `ಡ್ರಾಮಾ' ಚಿತ್ರದಲ್ಲಿ ಹೀಗೆ ಹೇಳಿದ್ದು......
ಪರ್ಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ...ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ....
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!
ಕೊನೆಗೆ ಲಕ್ಷ್ಮಣ್ ಜ್ಯೋತಿಷಿಯ ಮೊಬೈಲ್ ನಂಬರ್ ಪಡೆದು ಹೊರಟು ಬಿಟ್ಟೆ......ಆಗಲೂ ಅಷ್ಟೇ ಯಾವುದೇ ಪ್ರತಿಫಲ ಬಯಸದೇ `ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ, ಬದುಕಲ್ಲಿ ನೀವು ಗೆಲ್ತೀರಾ..! ಅಂದು ಬಿಟ್ಟ.......


Tuesday, 23 April 2013

ಮನಸಿನಲ್ಲಿದ್ದ ಮೌನ ಮಾತಾದಾಗ.........!

 

 ಹೆಸರು ಗಣೇಶ್......ಹಗಲಿನಲ್ಲಿ ಕೊರಿಯರ್ ಕೆಲಸ, ರಾತ್ರಿಯಾದರೆ ಪತ್ರಿಕಾ ಕಛೇರಿ, ಈ ಮಧ್ಯೆ ದೂರ ಶಿಕ್ಷಣದಲ್ಲಿ ಜರ್ನಲಿಸಂ. ಹೀಗೆ ಮೂರು ದೋಣಿಯ ಮೇಲೆ ಕಾಲಿಟ್ಟಿದ್ದ ನಾನು ಹೆಚ್ಚಿನ ಸಮಯ ಜನರೊಂದಿಗೆ ಬೆರೆಯುತ್ತಿದ್ದದ್ದು ಕೊರಿಯರ್ ಸಂಸ್ಥೆಯಲ್ಲಿ. ಇದೇ ಕೊರಿಯರ್ ಸಂಸ್ಥೆಯ ಪಕ್ಕದಲ್ಲೊಂದು ವಾಟರ್ ಫ್ಯೂರಿಫಯರ್ ಶಾಪ್ ಇತ್ತು. ಇಲ್ಲಿ ಮಾಕರ್ೆಟಿಂಗ್ ಕೆಲಸಕ್ಕೆ ಅಂತ ಪ್ರತೀ ದಿನ ಹುಡುಗಿಯರು ಬರ್ತಾ ಇದ್ದರು. ನಮ್ಮಲ್ಲೂ ಎಂಟತ್ತು ಹುಡುಗರಿದ್ದ ಕಾರಣ ಸಹಜವಾಗಿಯೇ ಅಲ್ಲಿನ ಹುಡುಗಿಯರಿಗೂ ಇಲ್ಲಿನ ಹುಡುಗರಿಗೂ ಮಾತು ಮುಂದುವರೆದಿತ್ತು. ಆದರೆ ನಾನು ಮಾತ್ರ ಯಾರಲ್ಲೂ ಅಷ್ಟಾಗಿ ಮಾತಾಡ್ತಾ ಇರಲಿಲ್ಲ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಹತ್ತರ ನಂತರ ನಮ್ಮ ಅಫೀಸ್ನಲ್ಲಿ ನಾನೊಬ್ಬನೇ ಇರುತ್ತಿದ್ದೆ. ತೀರಾ ಸೈಲೆಂಟ್ ಆದ ನನಗೆ ಒಂಟಿಯಾದಾಗ ಜೊತೆಯಾಗುತ್ತಿದ್ದದ್ದು ಪುಸ್ತಕಗಳು ಮಾತ್ರ. ಹೀಗೇ ಪುಸ್ತಕ ಓದ್ತಾ ಇದ್ದಾಗ ಪಕ್ಕದ ಸಂಸ್ಥೆಯ ಐದಾರು ಹುಡುಗಿಯರು ಬಂದು ನಮ್ಮ ಕೆಲಸದ ಬಗ್ಗೆ ಕೇಳಿದ್ರೂ....ಇಲ್ಲೇನ್ ಕೆಲಸ? ಏನ್ ಮಾಡ್ತೀರಾ? ಅಂತ ವಿಚಾರಿಸಿದ್ರೂ. ನಾನೂ ಕೂಡ ಅವರ ಕುತೂಹಲಕ್ಕೆ ನಿರಾಶೆ ಮಾಡದೆ ಎಲ್ಲವನ್ನೂ ಒಪ್ಪಿಸಿದೆ. ಇಷ್ಟೆಲ್ಲಾ ಮುಗಿದ ನಂತರ ಇವರಲ್ಲೊಬ್ಬಳು ನಾನು ಓದುತ್ತಿದ್ದ ಪುಸ್ತಕ ಪಡೆದುಕೊಂಡಳು. ಓದಿ ನಾಳೆ ಕೊಡ್ತೀನಿ ಅಂದಳು. ಪುಸ್ತಕವಾದ ಕಾರಣ ನಾನೂ ಕೊಟ್ಟು ಬಿಟ್ಟೆ. ಮರುದಿನ ನನ್ನ ಪುಸ್ತಕ ಹಿಂದಿರುಗಿಸಲು ಆಕೆ ಬಂದಳು. ಅವಳ ಜೊತೆಗೆ ಉಳಿದ ನಾಲ್ವರೂ ಇದ್ದರು. ಯಾಕೊ ಗೊತ್ತಿಲ್ಲ ಈ ಪುಸ್ತಕ ಪಡೆದ ಹುಡುಗಿಯರ ಮಧ್ಯೆ ನಿಂತಿದ್ದ ಗುಳಿ ಕೆನ್ನೆಯ ಹುಡುಗಿ ಮಾತ್ರ ಒಂದೇ ಸಮನೆ ಇಷ್ಟವಾಗಿದ್ದಳು. ಹಾಗಂತ ಅದು ಪ್ರೀತಿ ಅನ್ನುವ ಹಾಗಿರಲಿಲ್ಲ. ಜಸ್ಟ್ ಇಷ್ಟ ಅಷ್ಟೇ....!
ಹೀಗೆ ಪ್ರತಿ ನಿತ್ಯ ಇವರುಗಳ ಜೊತೆ ನನ್ನ ಮಾತುಕತೆ ಸಾಗುತ್ತಿತ್ತು. ಆದರೆ ಆ ಗುಳಿಕೆನ್ನೆಯ ಹುಡುಗಿಯೊಂದಿಗೆ ಮಾತ್ರ ನನ್ನ ಮಾತುಕತೆ ನಡೆದಿರಲಿಲ್ಲ. ಅವಳೊಂದಿಗೇನಿದ್ದರೂ ಜಸ್ಟ್ ನಗುವಷ್ಟೇ. ಹೀಗೇ ಸಾಗುತ್ತಿದ್ದ ದಿನಗಳ ಮಧ್ಯೆ ನನ್ನ ಜೊತೆ ಮಾತನಾಡುತ್ತಿದ್ದ ಹುಡುಗಿಯರಿಗಿಂತ ಸೈಲೆಂಟ್ ಹುಡುಗಿ ತುಂಬಾ ಇಷ್ಟವಾಗಿದ್ದಳು. ಬಹುಶಃ ಈ ವೇಳೆ ಇಷ್ಟ ಅನ್ನುವುದು ಒಂದು ಹಂತಕ್ಕೆ ಪ್ರೀತಿಯಾಗಿ ಬೆಳೆದಿತ್ತು ಅನ್ನಬಹುದೇನೋ? ಜೀವನದಲ್ಲಿ ಒಂದು ಹುಡುಗಿಯ ಮೇಲೆ ಮೂಡಿದ ಮೊದಲ ಪ್ರೀತಿ ಅದಾಗಿತ್ತು....!
ಇಷ್ಟೆಲ್ಲಾ ಅದ್ಮೇಲೆ ಪ್ರೀತಿ ವಿಚಾರ ಅವಳಿಗೆ ಹೇಳಿಬಿಡಬೇಕು ಅನಿಸ್ತು. ಆದರೆ ಅವಳ ಜೊತೆ ಯಾವಾಗಲೂ ಅವಳ ಗೆಳತಿಯರು ಇರ್ತಾ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಒಂದು ದಿನ ಹೇಗೋ ಅವಳ ಮೊಬೈಲ್ ನಂಬರ್ ಪಡೆದುಕೊಂಡೆ. ನಂಬರ್ ಪಡೆದ ಮೇಲೆ ಫೋನ್ ಮಾಡಿ ಪ್ರೀತಿಯ ಬಗ್ಗೆ ಹೇಳೋಣವೆಂದರೆ ಅದೇನೋ ಭಯ! ಯಾಕೆಂದರೆ ಅದು ನನ್ನ ಮೊದಲ ಪ್ರೀತಿ...ಫಸ್ಟ್ ಪ್ರಫೋಸಲ್ ಆಗಿತ್ತು....! ಅವತ್ತೊಂದಿನ ರಾತ್ರಿ ಗುಂಡಿಗೆ ಗಟ್ಟಿ ಮಾಡಿಕೊಂಡು ಅವಳಿಗೆ ಫೋನ್ ಮಾಡಿದೆ. ಆದರೆ ಭಯದಿಂದ ಬಾಯಲ್ಲಿ ಮಾತೇ ಉದುರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಎಂಬಂತೆ ಫೋನ್ ಎತ್ತಿದ ಕಾವ್ಯ...ಗಣೇಶ್ ಅಲ್ವಾ ಅಂತ ಕೇಳಿದ್ದಳು. ಫೋನ್ನಲ್ಲಿ ಇಂಥದ್ದೊಂದು ಮಾತು ಕೇಳಿ ಸಿಡಿಲು ಬಡಿದ ಅನುಭವ....! ಹೌದು...ಅಂತ ಮಾತು ಮುಂದುವರೆಸಿದ ನಾನು ಒಂದೆರಡು ನಿಮಿಷ ಕ್ಯಾಶುವಲ್ ಆಗಿ ಮಾತಿಗಿಳಿದೆ. ಆದ್ಯಾಕೊ ಸಮಯ ಓಡ್ತಾ ಇತ್ತು ಅನಿಸಿದಾಗ ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದೆ. ಆದರೆ ಆವಾಗಲೇ ಗೊತ್ತಾಗಿದ್ದು, ಅವಳಿಗೂ ನಾನು ಈ ಹಿಂದೆಯೇ ಇಷ್ಟವಾಗಿದ್ದೆ ಅಂತ. ಅಲ್ಲಿಂದ ಮೌನಿ ಹೃದಯಗಳ ಪ್ರೀತಿಯ ಪಯಣ ಆರಂಭವಾಗಿತ್ತು.......
ಕಾವ್ಯ ಜಾತಿ, ಗುಣ, ಶಿಕ್ಷಣ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್. ಹೀಗಾಗಿಯೋ ಏನೋ ಪ್ರಮಿಯೊಂದಿಗೆ ಒಂದು ಬಾರಿಯೂ ನಾನು ಮಾತು ಮುರಿದಿರಲಿಲ್ಲ, ಜಗಳ ಕಾಯ್ದಿರಲಿಲ್ಲ. ಪ್ರಮಿಯದ್ದು ಮಂಗಳೂರಿನಿಂದ 60ಕಿ.ಮೀ ದೂರದ ಊರು. ನನ್ನಂತೆಯೇ ಶಿಕ್ಷಣ ಮತ್ತು ಕೆಲಸ ಅಂತ ಮಾಡಿಕೊಂಡು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಬೆಳಿಗ್ಗೆ 7ರಿಂದ 9 ಕಂಪ್ಯೂಟರ್ ಕ್ಲಾಸ್ಗೆ ಹೋದರೆ ಉಳಿದ ಸಮಯ ಅಂದರೆ ಸಂಜೆ ಐದರವರೆಗೆ ವಾಟರ್ ಫ್ಯೂರಿಫಯರ್ ಸಂಸ್ಥೆಯಲ್ಲಿ ಕೆಲಸ. ಈ ಮಧ್ಯೆ ಸಿಗುವ ಭಾನುವಾರದ ಬಿಡುವಿನಲ್ಲಿ ನಾವಿಬ್ಬರೂ ಮಂಗಳೂರಿನ ಪಾಕರ್್ ಬೀಚ್ಗಳಲ್ಲಿ ಸುತ್ತಾಡುತ್ತಿದ್ದೆವು. ಉಳಿದ ದಿನಗಳಲ್ಲಿ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ ಮುಂದುವರೆದಿತ್ತು. ಹಾಗಂತ ನಮ್ಮ ಸುತ್ತಾಟಗಳು ಪಾಕರ್್-ಬೀಚ್ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಾರದಲ್ಲಿ ಎರಡು ದಿನ ಮಂಗಳೂರಿನ ದೇವಸ್ಥಾನವೊಂದಕ್ಕೆ ಖಾಯಂ ಭಕ್ತರಾಗಿದ್ದೆವು. ಇಲ್ಲಿ ಹೋದಾಗ ಇಬ್ಬರ ಹಸರಿನಲ್ಲೂ ಕುಂಕುಮಾರ್ಚನೆ ಮಾಡಿಸುವುದು ವಾಡಿಕೆ. ಹೀಗಾಗಿ ನಮ್ಮಿಬ್ಬರ ಹೆಸರು ನಕ್ಷತ್ರ ಎಲ್ಲವೂ ಇಲ್ಲಿನ ಅರ್ಚಕರ ಮೆದುಳಿನಲ್ಲಿ ಅಪ್ಡೇಟ್ ಆಗಿತ್ತು. ಹೀಗೆ ನಮ್ಮಿಬ್ಬರ ಪ್ರೀತಿ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಕಾವ್ಯಾಳದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಅವಳದ್ದು ಮಕ್ಕಳಂತ ಸ್ವಭಾವ. ತೀರಾ ಸೆನ್ಸಿಟಿವ್, ಅತೀ ಭಾವುಕ ಜೀವಿ. ತಾನು ಉಡುವ ಉಡುಗೆಯಲ್ಲೂ ಅಷ್ಟೇ, ಫಫರ್ೆಕ್ಟ್ ಮ್ಯಾಚಿಂಗ್ ಆಗಿರಬೇಕು. ನೀಲಿ ಆಕಾಶಕ್ಕೆ ಸಡ್ಡು ಹೊಡೆಯುವ ಬಣ್ಣದ ಚೂಡಿದಾರ ಹಾಕಿ, ತನ್ನ ನೀಲಕಾಯದ ಕೂದಲುಗಳಿಗೆ ಹೂ ಮುಡಿದು ಗುಳಿ ಕೆನ್ನೆಯ ನಗು ನಕ್ಕಳೆಂದರೆ ಸಾಕು ಕಾವ್ಯ ಸಖತ್ ಇಷ್ಟವಾಗುತ್ತಿದ್ದಳು. ಹೊಟೇಲ್ನಲ್ಲಿ ತಿಂಡಿ ತಿನ್ನುವಾಗಲೂ ಅವಳ ಮಕ್ಕಳಾಟಿಕೆಗೆ ಬ್ರೇಕ್ ಬೀಳುವುದಿಲ್ಲ. ಒಟ್ಟಿನಲ್ಲಿ ಸ್ವಭಾವತ ಕಾವ್ಯ ನನಗೆ ತುಂಬಾ ಇಷ್ಟವಾಗಿದ್ದಳು. ಹೀಗಾಗಿ ಜೀವನಕ್ಕೆ ಇವಳೇ ಸೂಕ್ತ ಅಂದುಕೊಂಡು ಆ ಜೀವಕ್ಕೆ ಒಂದಷ್ಟೂ ನೋವು ಕೊಡದೇ ಪ್ರೀತಿಸುತ್ತಿದ್ದೆ.
ಹೀಗೆ ಯಾವುದೆ ಅಡೆತಡೆ ಇಲ್ಲದ ನಮ್ಮ ಪ್ರೀತಿಗೆ ಸಣ್ಣದೊಂದು ಏಟು ಬಿದ್ದಿದ್ದು ಕಾವ್ಯ ಕೆಲಸ ಬಿಟ್ಟಾಗ. ಸರಿಯಾಗಿ ಸಂಬಳ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕಾವ್ಯ ತನ್ನ ಕೆಲಸ ಬಿಟ್ಟಿದ್ದಳು. ಅದೇ ನೋವಿನಲ್ಲಿ ನನ್ನ ಜೊತೆಗಿನ ಮಾತಿಗೂ ಸಣ್ಣ ಮಟ್ಟಿನ ವಿರಾಮ ಕೊಟ್ಟಿದ್ದಳು. ಆದರೆ ಇವಳನ್ನು ತೀರಾ ಹೆಚ್ಚಾಗಿ ಹಚ್ಚಿಕೊಂಡಿದ್ದ ನನಗೆ ಇವಳೊಂದಿಗೆ  ಒಂದು ದಿನ ಮಾತಿಗಿಳಿಯದಿದ್ದರೂ ಆಗುತ್ತಿರಲಿಲ್ಲ. ಹಾಗಾಗಿ ಅಂದು ಅವಳಿಗೆ ಒಂದೇ ಸಮನೆ ಕಾಲ್ ಮಾಡಿದ್ದೆ. ತುಂಬಾ ಹೊತ್ತಿನ ಬಳಿಕ ಫೋನ್ ಎತ್ತಿದ  ಕಾವ್ಯಳನ್ನು ಸಮಾಧಾನಪಡಿಸಿ, ಪಾಕರ್್ಗೆ ಕರೆದುಕೊಂಡು ಹೋದೆ. ಅಂದು ಮಾತ್ರ  ಕಾವ್ಯಳಲ್ಲಿ ಎಂದಿಗಿಂತಲೂ ಹೆಚ್ಚಿನ ಬದಲಾವಣೆ ಕಂಡಿತ್ತು. ಅದೇಗೋ ಅವಳ ಸಮಸ್ಯೆಯನ್ನು ತಿಳಿದುಕೊಂಡೆ. ಆಗಲೇ ಗೊತ್ತಾಗಿದ್ದು, ಕೆಲಸ ಬಿಟ್ಟ ನಂತರ  ಕಾವ್ಯಗೆ ಇಲ್ಲಿ ಹಣದ ಸಮಸ್ಯೆಯಾಗಿದೆ ಅನ್ನೋದು. ಹೀಗಿದ್ದರೂ ನನ್ನ ಬಳಿ ತನ್ನ ಸಮಸ್ಯೆಯನ್ನು ಮಾತ್ರ  ಕಾವ್ಯ ಅಲ್ಲಿಯತನಕ ಹೇಳಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಗೊತ್ತಾದ ನಂತರ ನಾನೇ  ಕಾವ್ಯಾಗೆ ಹಣ ಕೊಟ್ಟು ಬೇಸರ ಕಳೆಯಲಿ ಅಂತ ಒಂದೆರೆಡು ದಿನ ಊರಿಗೆ ಹೋಗಿ ಬಾ ಅಂತ ಕಳಿಸಿದೆ. ಮತ್ತೆ ಬಂದ ನಂತರ ಇಲ್ಲೊಂದು ಕೆಲಸ ಹುಡುಕಿದರಾಯಿತು ಅಂತ ಸಮಾಧಾನಿಸಿದೆ. ಹೀಗೆ ಮನಸ್ಸಿಲ್ಲದ ಮನಸ್ಸಿನಲಿ  ಕಾವ್ಯಳನ್ನು ಬಸ್ ಹತ್ತಿಸಿ ಬಿಟ್ಟೆ. ಊರಿಗೆ ಹೋದ  ಕಾವ್ಯ ಎರಡು ದಿನ ಮನೆಯವರೊಂದಿಗೆ ಕಳೆದು ಮರಳಿ ಮಂಗಳೂರಿಗೆ ಬಂದಿದ್ದಳು. ಆಗ ಅವಳ ಗೆಳತಿಯೊಬ್ಬಳು ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ  ಕಾವ್ಯಗೆ ಕೆಲಸ ಹುಡುಕಿದ್ದಳು. ಊರಿಂದ ಬಂದವಳೇ ನನ್ನ ಬಳಿ ಅನುಮತಿ ಕೇಳಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದಳು. ಬಟ್ಟೆ ಅಂಗಡಿ ಕೆಲಸ ನನಗೆ ಇಷ್ಟವಿಲ್ಲದಿದ್ದರೂ ಮತ್ತೆ  ಕಾವ್ಯ ಕೊರಗುವುದು ಬೇಡ ಎಂದು ಒಪ್ಪಿದ್ದೆ. ಮತ್ತೆ ಬೇಕಾದರೆ ಅವಳಿಗೆ ಹೊಂದಾಣಿಕೆಯಾಗುವ ಕೆಲಸವನ್ನು ನಾನೇ ಹುಡುಕುತ್ತೇನೆ ಅಂದುಕೊಂಡು ಸುಮ್ಮನಾಗಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ  ಕಾವ್ಯಳಲ್ಲಿ ಮತ್ತೆ ಹಿಂದಿನ ಉತ್ಸಾಹ ಮರುಕಳಿಸಿತ್ತು. ನನ್ನ ಪ್ರೀತಿಯ ಕಾವ್ಯ ಈ ಈ ಹಿಂದಿನಂತೆ ಮತ್ತೆ ನನ್ನ ಜೊತೆ ಬೆರೆತಿದ್ದಳು. ಬಟ್ಟೆ ಅಂಗಡಿಯಲ್ಲೂ ಕೆಲಸ ಸಾಗುತ್ತಿತ್ತು. ಹೀಗಿರುವಾಗ ಅದೊಂದು ಭಾನುವಾರ ನಾವಿಬ್ಬರೂ ಪಾಕರ್್ನಲ್ಲಿ ಜೊತೆಯಾಗಿದ್ದೆವು. ಈ ವೇಳೆ ತೀರಾ ಸೈಲೆಂಟಾಗಿದ್ದಳು  ಕಾವ್ಯ. ಮತ್ತೆ ಇವಳಿಗೇನಾಯ್ತಪ್ಪ ಅಂದುಕೊಂಡು ಕೇಳಿಯೇ ಬಿಟ್ಟೆ. ಬಾಯಿ ಬಿಡದ  ಕಾವ್ಯ ನಾನು ಸಾಕಷ್ಟು ಒತ್ತಾಯಪಡಿಸಿದ ನಂತರ ಹೇಳಿದಳು. ಇವಳು ನನಗೆ ಸಿಗುವ ಮುನ್ನ ನಗರದ ಕಾಫಿ ಡೇ ಒಂದರಲ್ಲಿ ಕೆಲಸಕ್ಕಿದ್ದಳು. ಆಗ ಅಲ್ಲಿನ ಸಿಬ್ಬಂದಿಯೋರ್ವ ತಂಗಿ ಮದುವೆಯ ಕಾರಣ ನೀಡಿ ಇವಳ 12 ಸಾವಿರದ ಚಿನ್ನದ ಸರ ಪಡೆದಿದ್ದ. ತೀರಾ ಪಾಪ-ಪುಣ್ಯದ ಲೆಕ್ಕಾಚಾರ ಹಾಕುವ  ಕಾವ್ಯ ಸ್ವಲ್ಪವೂ ಯೋಚಿಸದೆ ಸರವನ್ನು ಆತನ ಕೈಗಿಟ್ಟಿದ್ದಳು. ಆದರೆ ಈಗ ಆತ ನಾಪತ್ತೆಯಾಗಿದ್ದಾನೆ.  ಕಾವ್ಯ ಮನೆಯಲ್ಲಿ ಪ್ರತೀ ಬಾರಿ ಹೋದಾಗಲೂ ಚಿನ್ನದ ಸರ ಕೇಳ್ತಾರೆ. ಹೋದಾಗಲೆಲ್ಲಾ ಸರ ಹಾಸ್ಟೆಲ್ನಲ್ಲಿದೆ ಎಂದು ಹೇಳುತ್ತಿದ್ದ  ಕಾವ್ಯಗೆ ಇನ್ನೊಮ್ಮೆ ಬರುವಾಗ ತರಲೇ ಬೇಕು ಎಂದು ಮನೆಯಲ್ಲಿ ಹೇಳಿದ್ದಾರೆ. ಫೋನ್ ಮಾಡಿದಾಗಲೂ ಮನೆಯಲ್ಲಿ ಸರದ ವಿಚಾರ ತೆಗೆಯುತ್ತಿದ್ದರು. ಹಾಗಾಗಿ ಇನ್ನು ನಾನು ಮನೆಗೆ ಹೋಗುವುದೇ ಇಲ್ಲ ಅಂತ ನನ್ನ ಬಳಿ ನೋವು ತೋಡಿಕೊಂಡಿದ್ದಳು. ಈ ವೇಳೆ ನನಗೆ ಏನು ಮಾಡುವುದೆಂದೇ ತೋಚಲಿಲ್ಲ. ಆದರೂ ಕಾವ್ಯಾಳನ್ನು ಸಮಾಧಾನಿಸಿ, ಸರ ಪಡೆದವನನ್ನು ಹುಡುಕುವ ಭರವಸೆ ನೀಡಿದೆ. ಅವನ ನಂಬರ್ ಪಡೆದು ಹುಡುಕುವ ಪ್ರಯತ್ನವನ್ನೂ ಮಾಡಿದೆ. ಆದರೆ ನಂಬರ್ ಸ್ವಿಚ್ ಆಫ್ ಆಗಿತ್ತು, ವಿಳಾಸ ಹುಡುಕೋಣವೆಂದರೆ ಸಿಮ್ ಕಾಡರ್್ಗೆ ಕೊಟ್ಟ ಅಡ್ರೆಸ್ ಕೂಡ ನಕಲಿಯಾಗಿತ್ತು. ಹಾಗಾಗಿ ನನ್ನ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ನಾನೇ ಒಂದೆರೆಡು ತಿಂಗಳು ಬಿಟ್ಟು ಸರ ತೆಗೆದುಕೊಡುವುದಾಗಿ ಹೇಳಿದೆ. ಆದರೆ  ಕಾವ್ಯ ನನ್ನ ವಿಚಾರದಲ್ಲಿ, ಅದರಲ್ಲೂ ಹಣದ ವಿಚಾರದಲ್ಲಿ ತುಂಬಾ ರಿಸವರ್್ ಆಗಿದ್ದವಳು. ಹಾಗಾಗಿ ನನ್ನ ಬಳಿ ಸರ ಪಡೆಯುವುದು ಅವಳಿಗೆ ಇಷ್ಟವಿರಲಿಲ್ಲ. ಕೊನೆಗೆ ಅವಳೇ, ಪರವಾಗಿಲ್ಲ...ಅವನ ಫೋನ್ ಆನ್ ಆದ ನಂತರ ನೋಡಿದರಾಯಿತು ಅಂದಳು. ಮನೆಗೆ ಹೋಗ್ಬೇಕು ಅಂದಿದ್ದಕ್ಕೆ ಆಯ್ತು ಅಂದವಳೇ,,,,,ತನ್ನ ಗುಳಿ ಕೆನ್ನೆಯ ನಗು ಚೆಲ್ಲಿದಳು. ಆ ನಂತರ ತಿಂಗಳು ಕಳೆದರೂ ಕಾವ್ಯ ನನ್ನ ಬಳಿ ಸರದ ವಿಚಾರ ತೆಗೆಯಲೇ ಇಲ್ಲ. ಹಿಂದಿನಂತೆ ನಮ್ಮಿಬ್ಬರ ಪ್ರೀತಿ ಯಾವುದೆ ಅಡೆತಡೆ ಇಲ್ಲದೇ ಸಾಗಿತ್ತು. ದಿನಕಳೆದಂತೆ ನಾವಿಬ್ಬರೂ ತೀರಾ ಹತ್ತಿರವಾಗಿದ್ದೆವು.  ಕಾವ್ಯ ನನ್ನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಳು.
ಒಂದು ತಿಂಗಳ ನಂತರ ಅದೊಂದು ದಿನ ಶನಿವಾರ. ಎಂದಿನಂತೆ  ಕಾವ್ಯ ರಾತ್ರಿ ಕರೆ ಮಾಡಿದ್ದಳು. ಕರೆ ಮಾಡಿದವಳೇ ನಾಳೆ ಭಾನುವಾರ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ಪ್ರತೀ ಬಾರಿ ನಾನೇ ಕಾವ್ಯಳನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ  ಕಾವ್ಯ ನನ್ನ ಬಳಿ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ನನಗೆ ಆಶ್ಚರ್ಯವಾದರೂ,  ಕಾವ್ಯಳಿಗೆ ನಿರಾಶೆ ಮಾಡದ ನಾನು ಒಪ್ಪಿದ್ದೆ. ಮರುದಿನ ಭಾನುವಾರ ಬೆಳಿಗ್ಗೆ 8.30ಕ್ಕೆ ಅವಳ ಹಾಸ್ಟೆಲ್ ಬಳಿಗೆ ಹೋದೆ. ನಾನು ಕೊಟ್ಟ ನೀಲಿ ಕೆಂಪು ಬಣ್ಣದ ಚೂಡಿದಾರ ತೊಟ್ಟ ಕಾವ್ಯ ನನಗಾಗಿ ಕಾಯುತ್ತಿದ್ದಳು. ಆವತ್ತು ಎಂದಿಗಿಂತಲೂ ನನ್ನ ಕಣ್ಣಿಗೆ ಅಂದವಾಗಿ ಕಂಡಿದ್ದಳು  ಕಾವ್ಯ. ಅಲ್ಲಿಂದ ನನ್ನ ಬೈಕ್ನಲ್ಲಿ ಕೂರಿಸಿ ನಮ್ಮಿಬ್ಬರ ಫೇವರೇಟ್ ದೇವಸ್ಥಾನದತ್ತ ಸಾಗಿದೆವು. ಇಲ್ಲೂ ಯಥಾವತ್ತಾಗಿ ಎಂದಿನಂತೆ ಇಬ್ಬರ ಹೆಸರಿನಲ್ಲೂ ಕುಂಕುಮಾರ್ಚನೆ ಮಾಡಿಕೊಂಡೆವು. ಹೀಗಿರುವಾಗಲೇ ಕಾವ್ಯಾಳ ವರ್ತನೆಯಲ್ಲಾದ ಸಣ್ಣದೊಂದು ಬದಲಾವಣೆ ನನಗೆ ಸಾಕಷ್ಟು ಆಶ್ಚರ್ಯ ತರಿಸಿತ್ತು. ಯಾವತ್ತೂ ನಾನು ಹೇಳಿದಂತೆ ದೇವಸ್ಥಾನದಲ್ಲಿ ವತರ್ಿಸುತ್ತಿದ್ದ ಕಾವ್ಯ ಅಂದು ಮಾತ್ರ ಸಾಕಷ್ಟು ಬದಲಾದಂತೆ ಕಂಡಳು. ದೇವರ ಮುಂದೆ ನಿಂತು ನೀವೇ ನನಗೆ ಕುಂಕುಮ ಇಡಿ ಅಂದಿದ್ದಳು  ಕಾವ್ಯ! ನಿಜಕ್ಕೂ ಅಂದು ಆಶ್ಚರ್ಯ ಪಡುವ ಸರದಿ ನನ್ನದು. ಅಲ್ಲಿಯ ತನಕ ಕಾವ್ಯಾಳಿಂದ ಇಂಥದ್ದೊಂದು ಕೋರಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಕಾವ್ಯಾಳನ್ನು ತುಂಬಾ ಇಷ್ಟ ಪಡುವ ನಾನು, ಬಾಳ ಸಂಗಾತಿ ಎಂದೇ ಅಂದುಕೊಂಡಿದ್ದ ಕಾರಣ ಕುಂಕುಮ ಪಡೆದು ಅವಳ ಹಣೆಗಿಟ್ಟಿದ್ದೆ. ಆಗಲೂ ಅಷ್ಟೇ, ಭಾವುಕತೆ ತುಂಬಿದ ಗುಳಿಕೆನ್ನೆಯ ನಗುವೊಂದು ಅವಳಿಂದ ಹೊರಹೊಮ್ಮಿತ್ತು. ನಂತರ ಅಲ್ಲಿಂದ ಹೊರ ಬಂದವನೇ ಎಂದಿನಂತೆ ಕಾವ್ಯಾಳ ಬಳಿ ಹೊಟೇಲ್ಗೆ ಹೋಗೋಣವಾ ಅಂದೆ. ಪ್ರತೀ ಬಾರಿ ಇವಳಲ್ಲಿ ಈ ರೀತಿ ಕೇಳಿದರೆ ಬರುತ್ತಿದ್ದ ಉತ್ತರ ಬೇಡ ಎನ್ನುವುದು. ತುಂಬಾ ಸ್ವಾಭಿಮಾನಿಯಾದ ಕಾವ್ಯಾ ನನ್ನಲ್ಲಿ ಹಣ ಖಚರ್ು ಮಾಡಿಸುತ್ತಿರಲಿಲ್ಲ. ಆಗೆಲ್ಲಾ ನಾನೇ ಬಲವಂತದಿಂದ ಕರೆದೊಯ್ಯುತ್ತಿದ್ದೆ. ಆದರೆ ಅಂದು ಮಾತ್ರ ಸ್ವತಃ ಅವಳೇ ನನಗೆ ಜ್ಯೂಸ್ ಬೇಕು ಅಂತ ಕೇಳಿದ್ದಳು. ಅಲ್ಲಿಗೆ ಕಾವ್ಯಾಳ ವರ್ತನೆಯಲ್ಲಾದ ಎರಡನೆಯ ಬದಲಾವಣೆಯ ಅರಿವು ನನಗಾಯಿತು. ಹಾಗಾಗಿ ಅವಳೊಂದಿಗೆ ಅಲ್ಲೇ ಇದ್ದ ಹೊಟೇಲ್ಗೆ ಹೋದೆ. ಅಲ್ಲಿಯ ತನಕ ಕಾವ್ಯಾ ಯಾವತ್ತೂ ತನಗೆ ಇಷ್ಟವಾದ ತಿಂಡಿ ಕೇಳಿದವಳಲ್ಲ. ಆದರೆ ಅಂದು ಮಾತ್ರ ತನಗಿಷ್ಟದ ತಿಂಡಿ ಕೇಳಿದ್ದಳು. ತಿಂಡಿ ಬಂದ ತಕ್ಷಣ ಮೊದಲ ತುತ್ತು ನನ್ನ ಬಾಯಿಗಿಟ್ಟವಳೇ ತನ್ನ ಮಕ್ಕಳಾಟದ ನಗು ಚೆಲ್ಲಿದಳು. ಈ ತುತ್ತು ಇವಳಿಂದ ಪಡೆದ ಮೊದಲ ತುತ್ತಾಗಿತ್ತು. ನನ್ನಲ್ಲೂ ಒಂದು ಹಂತಕ್ಕೆ ಪ್ರೀತಿ ತುಂಬಿದ ನಗು ಹೊರ ಹೊಮ್ಮಿತ್ತು. ಇನ್ನು ಜ್ಯೂಸ್ ಬಂದಾಗಲೂ ಅರ್ಧ ಕುಡಿದು ಉಳಿದರ್ಧ ನೀವು ಕುಡಿಯಿರಿ ಅಂದಳು. ಅಂದು ಯಾಕೋ ಗೊತ್ತಿಲ್ಲ, ಹೆಚ್ಚು ಮಾತನಾಡುವ ನಾನು ಮಾತ್ರ ಸುಮ್ಮನಾಗಿದ್ದೆ. ಕಾವ್ಯಾಳ ಪ್ರೀತಿ ಕಂಡು ಅತೀ ಭಾವುಕನಾಗಿದ್ದೆ. ಅವಳ ಪ್ರತಿಯೊಂದು ಅಜ್ಞೆಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೆ. ಹೀಗೆ ತಿಂಡಿ ತಿಂದ ನಂತರ ಕಾವ್ಯಾಳನ್ನು ಅವಳ ಕೆಲಸಕ್ಕೆ ಬಿಟ್ಟು ಮನೆಗೆ ತೆರಳಿದೆ (ಬಟ್ಟೆ ಅಂಗಡಿಯಲ್ಲಿದ್ದ ಕಾರಣ ಕಾವ್ಯಾಗೆ ಭಾನುವಾರವೂ ಕೆಲಸವಿತ್ತು. ಎಲ್ಲೋ ಕೆಲವೊಮ್ಮೆ ರಜೆ ಹಾಕುತಿದ್ದಳು) ಅಂದು ಮಾತ್ರ ನಾನು ಸಾಕಷ್ಟು ಮೌನಿಯಾಗಿದ್ದೆ. ಯಾವತ್ತೂ ಅಷ್ಟು ಚಟುವಟಿಕೆಯಿಂದಿರದ ಕಾವ್ಯಾ ಮಾತ್ರ ಅಂದು ನನ್ನನ್ನು ಸ್ವಲ್ಪ ಹೆಚ್ಚೇ ಎನ್ನುವಂತೆ ಪ್ರೀತಿಸಿದ್ದಳು.
ಅಂದು ಮಧ್ಯಾಹ್ನವೂ ಅವಳ ಕಾಲ್ ಎಂದಿನಂತೆ ಬಂದಿತ್ತು. ರಾತ್ರಿಯೂ ಕಾಲ್ ಮಾಡಿ ಮುಕ್ಕಾಲು ಘಂಟೆ ಹರಟೆ ಹೊಡೆದಿದ್ದಳು. ಆವಾಗೆಲ್ಲಾ ಕಾವ್ಯಾಳ ವರ್ತನೆಯಲ್ಲಿ ಏನೋ ಒಂದು ಬದಲಾವಣೆಯಿತ್ತು. ಆದರೆ ತುಂಬಾ ಖುಷಿಯಾಗಿದ್ದ ಕಾರಣ ನಾನೂ ಪ್ರಶ್ನಿಸುವ ಗೋಜಿಗೆ ಕೈ ಹಾಕಲಿಲ್ಲ. ಅಲ್ಲಿಗೆ ಅದೊಂದು ಭಾನುವಾರ ನನ್ನ ಪಾಲಿಗೆ ವಿಶೇಷ ದಿನವಾಗಿ ಮುಗಿದು ಹೋಗಿತ್ತು.
ಮರುದಿನ ಸೋಮವಾರ ಸಮಯ ಸುಮಾರು 7.35. ನಾನಿನ್ನೂ ಎದ್ದಿರಲಿಲ್ಲ. ಅದಾಗಲೇ ಕಾವ್ಯಾಳ ಕರೆಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಅವಳಿಗಾಗಿಯೇ ಬೇರೊಂದು ರಿಂಗ್ಟೋನ್ ಇಟ್ಟಿದ್ದ ನಾನು ಅದನ್ನು ಕೇಳಿಯೇ ಎಚ್ಚರವಾಗಿದ್ದೆ. ಆಗಳೂ ನನಗೊಂದು ಆಶ್ಚರ್ಯ ಕಾದಿತ್ತು. ನಾವಿಬ್ಬರೂ ಪ್ರೀತಿಸಿದ ಇದೇ ಮೊದಲ ಬಾರಿಗೆ  ಕಾವ್ಯ ಅಷ್ಟು ಬೆಳಿಗ್ಗೆ ಕಾಲ್ ಮಾಡಿದ್ದು. ಯಾಕೆಂದರೆ ಏಳರಿಂದ ಓಂಭತ್ತು ಗಂಟೆ ಅವಳ ಕಂಪ್ಯೂಟರ್ ಕ್ಲಾಸ್ ಸಮಯ. ಆಗೆಲ್ಲಾ  ಕಾವ್ಯ ಯಾರಿಗೂ ಕಾಲ್ ಮಾಡೋದಿಲ್ಲ. ಆದರೆ ಅಂದು ಮಾತ್ರ ಅದು  ಕಾವ್ಯಳದ್ದೇ ಕಾಲ್!
ಎದ್ದವನೇ ಫೋನ್ ಎತ್ತಿದೆ. ಗುಡ್ಮಾನರ್ಿಂಗ್ ಅಂದವಳೇ ಮಾತಿಗಿಳಿದಳು ಕಾವ್ಯ. ಏನಮ್ಮಾ ಇವತ್ತು ಕ್ಲಾಸ್ ಇಲ್ವಾ? ಅಂತ ಕೇಳಿದೆ. ಇವತ್ತು ನಾನು ಕ್ಲಾಸ್ ಮತ್ತು ಕೆಲಸಕ್ಕೆ ರಜೆ. ಗುರುವಾರ ನನ್ನ ಕಸೀನ್ ಮದುವೆ ಇದೆ, ಅದಕ್ಕೆ ಸೀರೆ ಖರೀದಿಸಲಿಕ್ಕೆ ಇದೆ ಅಂದಳು. ಗುರುವಾರ ಕಸೀನ್ ಮದುವೆ ಇದೆ ಎನ್ನುವುದನ್ನು ಈ ಮೊದಲೇ ನನಗೆ ತಿಳಿಸಿದ್ದ ಕಾರಣ ನಾನೂ ಆಗಿರಬಹುದು ಅಂದುಕೊಂಡೆ. ಸೀರೆ ಖರೀದಿಗೆ ನಾನೂ ಬರ್ತೀನಿ ಅಂದೆ. ಆಗ ಅವಳು, ಬೇಡ....ನೀವು ಮಧ್ಯಾಹ್ನ 1.30ಕ್ಕೆ ಹಾಸ್ಟೆಲ್ ಹತ್ತಿರ ಬನ್ನಿ ಸಿಗ್ತೀನಿ ಅಂದಳು. ಆಗಲೀ ಅಂದವನೇ ಯಾವ ಬಣ್ಣದ ಸೀರೆ ತೆಗಿತೀಯಾ ಅಂತ ಕೇಳಿದೆ. ಆಗ ಅವಳು ಕೊಟ್ಟ ಉತ್ತರ ನಿಜಕ್ಕೂ ನನಗೆ ಮತ್ತೊಂದು ಆಘಾತ ತಂದಿತ್ತು...! ಬಿಳಿ ಬಣ್ಣದ ಸೀರೆ ಅಂತ ಹೇಳಿದ್ದ ಪ್ರಮಿಯ ಉತ್ತರ ಕೇಳಿ ನನಗೆ ದಂಗು ಬಡಿದಿತ್ತು. ಬೇಡಮ್ಮಾ ಬಿಳಿ ಬಣ್ಣದ ಸೀರೆ ಒಳ್ಳೆಯದಲ್ಲ, ಬೇರೆ ತೆಗಿ ಅಂದೆ. ಓಕೆ ಆಯ್ತು, ಬೇರ ತೆಗೀತೀನಿ, ನಿಮ್ಮ ಇಷ್ಟಕ್ಕೆ ಯಾವತ್ತೂ ವಿರುದ್ದವಾಗಿ ಹೋಗೋಲ್ಲ ಅಂದಳು. ಎಲ್ಲದಕ್ಕೂ ಆಯಿತು ಅಂದ ನಾನು ಮಧ್ಯಾಹ್ನ ಸಿಗೋದಾಗಿ ಹೇಳಿದೆ.
ಹೀಗೆ ಅಂದಿನ ನನ್ನೆಲ್ಲಾ ನಿತ್ಯ ಕರ್ಮಗಳನ್ನು ಮುಗಿಸಿ 12 ಗಂಟೆಗೆ ಮನೆಯಿಂದ ಹೊರಟೆ. ಸುಮಾರು ಒಂದು ಗಂಟೆಯ ಹೊತ್ತಿಗೆಲ್ಲಾ ಕಾವ್ಯಾಳ ಹಾಸ್ಟೆಲ್ ತಲುಪಿದ್ದೆ. ತಲುಪಿದವನೇ ಅವಳಿಗೊಂದು ಕಾಲ್ ಕೊಟ್ಟೆ. ಆದರೆ ಕಾವ್ಯಾಳ ನಂಬರ್ ಸ್ವಿಚ್ ಆಫ್ ಆಗಿತ್ತು. ಎಲ್ಲೋ ಬ್ಯಾಟರಿ ಚಾಜರ್್ ಖಾಲಿಯಾಗರಬೇಕು ಅಂದುಕೊಂಡು ಸರಿಸುಮಾರು ಒಂದು ಘಂಟೆ ಅಲ್ಲೇ ಕಾದೆ. ಆದರೂ ಕಾವ್ಯ ಕಾಣಿಸಲಿಲ್ಲ. ಮತ್ತೆ ಕಾಲ್ ಮಾಡಿದಾಗಳೂ ಫೋನ್ ಸ್ವಿಚ್ ಆಫ್ ಆಗಿತ್ತು. ಆ ವೇಳೆಗಾಗಲೇ ಒಂದಷ್ಟು ಆತಂಕ ನನ್ನಲ್ಲಿ ಮನೆ ಮಾಡಿತ್ತು. ಯಾಕೆಂದರೆ ಅಲ್ಲಿಯವರೆಗೆ  ಕಾವ್ಯ ಬರ ಹೇಳಿ ಕಾಯಿಸಿದವಲಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡವಳೂ ಅಲ್ಲ.  ಹಾಗಾಗಿ 2.30ರ ವೇಳೆಗೆ ನೇರವಾಗಿ ಅವಳ ಹಾಸ್ಟೆಲ್ಗೆ ಹೋಗಿ ವಾರ್ಡನ್ ಬಳಿ ವಿಚಾರಿಸಿದೆ. ಆದರೆ ವಾರ್ಡನ್ ಕೊಟ್ಟ ಉತ್ತರ ನನ್ನನ್ನು ಇನ್ನಷ್ಟು ಆತಂಕಿತನನ್ನಾಗಿ ಮಾಡಿತ್ತು. ಬೆಳಿಗ್ಗೆ ಹೋದ ಕಾವ್ಯ ಇನ್ನೂ ಹಾಸ್ಟೆಲ್ಗೆ ಬಂದಿಲ್ಲ ಅಂದಿದ್ದರು ಅವರು. ಅಲ್ಲಿಂದ ಹೊರಟವನೇ  ಕಾವ್ಯಳ ಎಲ್ಲಾ ಗೆಳೆತಿಯರಿಗೆ ಫೋನ್ ಮಾಡಿದೆ. ಆದರೆ ಯಾರಿಂದಲೂ ಇವಳ ಬಗ್ಗೆ ಸಮರ್ಪಕ ಉತ್ತರ ಮಾತ್ರ ದೊರೆಯಲಿಲ್ಲ.  ಕಾವ್ಯ ಕೆಲಸ ಮಾಡುವಲ್ಲಿಗೆ ಹೋಗೋಣವೆಂದರೆ, ನಾನು ಕೆಲಸಕ್ಕೆ ಹೋಗೋದಿಲ್ಲ ಇವತ್ತು ರಜೆ ಅಂತ  ಕಾವ್ಯ ಬೆಳಿಗ್ಗೆ ಫೋನ್ ಮಾಡಿದಾಗ ಹೇಳಿದ್ದಳು. ಹಾಗಾಗಿ ಮತ್ತೆ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಸುಮ್ಮನಾದೆ. ಹೀಗೆ ಸಂಜೆ ಆರರವರೆಗೂ ಇವಳಿಗಾಗಿ ಇಡೀ ಮಂಗಳೂರು ಸುತ್ತಿದ್ದೆ. ಆದರೆ  ಕಾವ್ಯ ಮಾತ್ರ ಎಲ್ಲೂ ಸಿಗಲೇ ಇಲ್ಲ. ಸಂಜೆಯ ಹೊತ್ತಿಗಾಗಲೇ  ಕಾವ್ಯ ಮೊಬೈಲ್ಗೆ ನೂರಕ್ಕೂ ಹೆಚ್ಚು ಕಾಲ್ ಮಾಡಿದ್ದೆ. ಆದರೆ ಉತ್ತರ ಮಾತ್ರ ಸ್ವಿಚ್ ಆಫ್. ಹುಡುಕಿ ಹುಡುಕಿ ಸುಸ್ತಾಗಿ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಪತ್ರಿಕೆಯ ಕೆಲಸಕ್ಕೆ ಹೋದೆ. ಇಲ್ಲೂ ಅಷ್ಟೇ, ಒಂಚೂರು ಕೆಲಸ ಮಾಡುವ ಮನಸ್ಸು ನನಗಿರಲಿಲ್ಲ. ರಾತ್ರಿ ಎಂಟು ಗಂಟೆಗೆ  ಕಾವ್ಯ ರೂಮ್ಮೇಟ್ಗೆ ಕರೆ ಮಾಡಿದಾಗಲೂ ಅವಳು ಹಾಸ್ಟೆಲ್ಗೆ ಬಂದಿರಲಿಲ್ಲ. ಅಂದು ಹತ್ತು ಗಂಟೆಗೆಲ್ಲಾ ನನ್ನ ಅರ್ಧರ್ಧ ಕೆಲಸ ಮುಗಿಸಿ ಮನೆಗೆ ತೆರಳಿದ್ದೆ. ಊಟ ಮಾಡದೆ ಹಾಗೇ ಮಲಗಿದ ನನಗೆ  ಕಾವ್ಯ ಎಲ್ಲಿ ಹೋಗಿರಬಹುದು ಎಂಬ ಚಿಂತೆ ಕಾಡುತ್ತಿತ್ತು. ಮಲಗಿದ್ದರೂ ನಿದ್ರೆ ಬಂದಿರಲಿಲ್ಲ. ಹೇಗೋ ಸೋಮವಾರ ಕಳೆದು ಮಂಗಳವಾರದ ಸೂರ್ಯ ಬಾನಿಗೆ ಬಂದಿದ್ದ. ಬೆಳಿಗ್ಗೆ ಎದ್ದವನೇ ಮತ್ತೆ  ಕಾವ್ಯಳ ಮೊಬೈಲ್ಗೆ ಕಾಲ್ ಮಾಡಿದ್ದೆ. ಆಗಲೂ ಸ್ವಿಚ್ ಆಫ್. ಮತ್ತೆ ಅಲ್ಲಿಂದ ಓಂಭತ್ತು ಗಂಟೆಗೆ ಅವಳ ಕಂಪ್ಯೂಟರ್ ಕ್ಲಾಸ್ ಮತ್ತು ಕೆಲಸ ಮಾಡುವ ಬಟ್ಟೆ ಅಂಗಡಿಗೆ ಹೋದಾಗಲೂ  ಕಾವ್ಯ ಸಿಗಲಿಲ್ಲ. ಹೀಗೇ ಹುಡುಕಾಟ ನಡೆಸಿ ಸಮಯ ಮಧ್ಯಾಹ್ನ 12 ದಾಟಿತ್ತು. ಆದರೆ ಕಾವ್ಯ ಮಾತ್ರ ಸಿಗಲೇ ಇಲ್ಲ. ಗೆಳತಿಯ ಮೂಲಕ ಕಾವ್ಯಾಳ ಮನೆಗೆ ಕಾಲ್ ಮಾಡಿಸಿ ಕೇಳಿದಾಗಲೂ ಅವಳು ಅಲ್ಲಿಲ್ಲ ಅನ್ನುವ ಉತ್ತರ ಬಂದಿತ್ತು. ಅಂದು ಮಾತ್ರ ನಾನು ಸಂಪೂರ್ಣ ಸೊರಗಿ ಹೋಗಿದ್ದೆ. ಒಂದು ದಿನವೂ ಅವಳ ಬಳಿ ಮಾತನಾಡದೇ ಇರುತ್ತಿರದ ನಾನು ಅಂದು ನಿಸ್ಸಾಯಕನಾಗಿ ಹೋದೆ, 4 ಗಂಟೆಗಲ್ಲಾ ನನ್ನ ಪತ್ರಿಕಾ ಕಛೇರಿಗೆ ಹೋಗಿ ಒಬ್ಬಂಟಿಯಾಗಿ ಒಂದು ಕೋಣೆಯಲ್ಲಿ ಟೇಬಲ್ಗೆ ತಲೆಯಿಟ್ಟು ಮಲಗಿದೆ. ಅವಳ ಯೋಚನೆಯಲ್ಲೇ ಒಂದು ಗಂಟೆ ಕಳೆದು ಹೋಗಿತ್ತು. ಮತ್ತೆ ಐದು ಘಂಟೆಗೆ ಕಾವ್ಯಾಳ ಮೊಬೈಲ್ಗೆ ಕಾಲ್ ಮಾಡೋಣ ಅಂದುಕೊಂಡು ಅವಳ ನಂಬರ್ ಡಯಲ್ ಮಾಡಿದೆ. ಏನಶ್ಚರ್ಯವೋ, ಅವಳ ಮೊಬೈಲ್ ರಿಂಗಣಿಸಿತು. ಅಂದು ಹೋದ ಜೀವ ಮತ್ತೆ ಬಂದಂತಾಗಿತ್ತು. ಕಾವ್ಯಾ ಬೇಗ ಫೋನ್ ಎತ್ತಮ್ಮ ಅಂದುಕೊಳ್ಳುತ್ತಿರುವಾಗಲೇ ಗಂಡಸಿನ ಧ್ವನಿಯೊಂದು ಫೋನ್ ಎತ್ತಿಕೊಂಡಿತು. ಒಮ್ಮೆಲೇ ಶಾಕ್ ಆಯಿತಾದರೂ ಸಾವರಿಸಿಕೊಂಡು ಹಲೋ ಅಂದಾಗ, ಅಘಾತಕಾರಿ ವಿಚಾರವೊಂದು ನನ್ನ ಪ್ರಜ್ಞೆ ತಪ್ಪಿಸಿದಂತಾಯಿತು. ಅಲ್ಲಿಂದ ಮಾತನಾಡಿದ ವ್ಯಕ್ತಿ ಪೊಲೀಸರಾಗಿದ್ದರು...! ಈ ಹುಡುಗಿ ನಿಮಗೆ ಗೊತ್ತಾ? ಇವಳ ಮನೆ ಎಲ್ಲಿ? ಹೆಸರೇನು? ಅಂತ ಕೇಳಿದರು. ಅದೆಲ್ಲಾ ಗೊತ್ತು ಸಾರ್, ಅವಳಿಗೆ ಏನಾಯ್ತು ಅಂತ ಕೇಳಿದೆ. ಆಗಲೇ ಗೊತ್ತಾಗಿದ್ದು, ಕಾವ್ಯ ತನ್ನ ಇಹಲೋಕದ ಪಯಣ ಮುಗಿಸಿದ್ದಾಳೆ ಅನ್ನುವುದು....!
ಇದರ ಜೊತೆಗೆ ನನ್ನೊಂದಿಗಿನ ಪ್ರೀತಿಗೂ  ಕಾವ್ಯ ಶಾಶ್ವತ ಇತೀಶ್ರೀ ಹಾಡಿದ್ದಳು. ನಗರದ ಪಾಕರ್್ ಒಂದರಲ್ಲಿ ನಾನು ತೆಗೆಸಿಕೊಟ್ಟಿದ್ದ ಚೂಡಿದಾರದ ಶಾಲಿನಿಂದ ನೇಣು ಮುಗಿದು  ಕಾವ್ಯ ತನ್ನ ಪಯಣ ಮುಗಿಸಿದ್ದಳು. ಎಲ್ಲವನ್ನೂ ಕೇಳಿದ ನನಗೆ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ. ಕಾರಣ ಹೇಳದೆ ಕಾವ್ಯ ದೂರವಾಗಿದ್ದಳು.
ಕಾವ್ಯ ದೂರವಾಗುವ ಮುನ್ನ ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಪ್ರೀತಿಗೆ ಅಂತಿಮ ಸ್ಪರ್ಶ ನೀಡುವಂತೆ ನನ್ನ ಕೈಯಿಂದಲೇ ಹಣೆಗೆ ಕುಂಕುಮ ಇರಿಸಿದ್ದಳು, ಬೆಳಿಗ್ಗಿನ ಉಪಹಾರವನ್ನೂ ನನ್ನ ಬಾಯಿಗಿಟ್ಟು ಹಂಚಿಕೊಂಡು ತಿಂದಿದ್ದಳು. ತನ್ನ ವರ್ತನೆಯಲ್ಲೇ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಡೆಯ ಕ್ಷಣಗಳನ್ನು ನನ್ನ ಜೊತೆ ಕಳೆದಿದ್ದಳು ಕಾವ್ಯ. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡವಳಂತೆ ನನ್ನ ಎದುರಿಗೆ ನಿಂತಿದ್ದಳು. ಆದರೆ ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ. ಸೀರೆ ಖರೀದಿಸುವಾಗಲೂ ಬಿಳಿ ಸೀರೆಯನ್ನೇ ಆಯ್ದುಕೊಂಡಿದ್ದ ಕಾವ್ಯಾ, ಆಗಲೇ ತನ್ನ ಬದುಕಿನ ಪುಟಗಳಿಗೆ ಇತೀಶ್ರೀ ಹಾಡುವ ನಿಧರ್ಾರಕ್ಕೆ ಬಂದಿದ್ದಳು ಎನ್ನುವುದು ನಂತರ ನನಗೆ ಸ್ಪಷ್ಟವಾಗಿತ್ತು. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಕಾವ್ಯ. ಆದರೆ ಈಗ ಕಾವ್ಯಾ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲಿ ಕಾವ್ಯಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......
ಕಾವ್ಯಾಳ ಸಾವಿಗೆ ಕಾರಣ ಹುಡುಕಿ ಹೊರಟಾಗ ಸಾಕಷ್ಟು ವಿಚಾರಗಳು ಚಚರ್ೆಯಾದವು. ಮರುದಿನ ಕಸೀನ್ ಮದುವೆಯಿದ್ದ ಕಾರಣ ಆಕೆಗೆ ಅದೊಂದು ಚಿನ್ನದ ಸರದ ಅವಶ್ಯಕತೆಯಿತ್ತು. ಹಾಗಾಗಿ ಅದಿಲ್ಲದೆ ಮನೆಗೆ ಹೋದರೆ ಮನೆಯವರು ಬೈಯುತ್ತಾರೆ ಎಂದು ಕಾವ್ಯಾ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸರ ಕಾವ್ಯಾಳ ಬದುಕು ಕಿತ್ತುಕೊಂಡಿತು........ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳ ಸಾವಿನ ಸುತ್ತ ಗಿರಕಿ ಹೊಡೆದಿವೆ. ಪೊಲೀಸರು ಅಸ್ವಾಭಾವಿಕ ಮರಣ ಅಂತ ಹೇಳಿ ಆತ್ಮಹತ್ಯೆ ಪ್ರಕರಣ ದಾಖಲಿಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ನನ್ನಿಂದ 60ಕಿ.ಮೀ ದೂರದ ಮಣ್ಣಿನಲ್ಲಿ ನಾನು ಪ್ರೀತಿಸುತ್ತಿದ್ದ ಜೀವವೊಂದು ಬೂದಿಯಾಗಿ ಹೋಗಿದೆ. ಕಾವ್ಯ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇವಳನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ಕಾವ್ಯ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಈ ಕಥೆ ಕಾಲ್ಪನಿಕವಲ್ಲ. ಕೆಲ ತಿಂಗಳ ಹಿಂದಷ್ಟೇ ನನ್ನದೇ ಜೀವನದಲ್ಲಿ ನಡೆದ ನೈಜ ಘಟನೆ. ಆದರೆ ಕೆಲವೊಂದು ಕಾರಣಗಳಿಂದ ಇಲ್ಲಿರುವ ಹೆಸರುಗಳನ್ನು ಬದಲಾಯಿಸಿದ್ದೇನೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಯೆಂಬ ಬಹುದೊಡ್ಡ ನಿಧರ್ಾರ ತಳೆಯುವ ಅದೇ ರೀತಿ ಮಕ್ಕಳನ್ನು ಹಾಸ್ಟೆಲ್ನಲ್ಲಿಟ್ಟು ಬೆಳೆಸುವ ಪ್ರತಿಯೊಬ್ಬರಿಗೂ ಈ ಘಟನೆ ಪಾಠವಾಗಲಿ ಎಂಬ ಆಶಯದಿಂದ ಇದನ್ನು ಬರೆಯುತಿದ್ದೇನೆ.

ಇಂತೀ ನಿಮ್ಮವ......
ಧ್ವನಿ.......

Monday, 1 April 2013

ಹಾಸ್ಟೆಲ್ ಯುವತಿಯರ ಸಾವಿನಲ್ಲಿ ಪೋಷಕರೂ ಪಾಲುದಾರರು!

ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಹೊರ ದೇಶ, ಹೊರ ರಾಜ್ಯ ಸೇರಿದಂತೆ ಸಮೀಪದ ಅದೆಷ್ಟೋ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುವ ಹೆಣ್ಮಕ್ಕಳ ದೊಡ್ಡ ದಂಡೇ ಇದೆ. ಆದರೆ ಇಂಥ ಒಂದು ಒಳ್ಳೆಯ ಉದ್ದೇಶವಿಟ್ಟು ಕೊಂಡು ಬರುವ ಈ ವರ್ಗ ಕೆಲವೊಮ್ಮೆ ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿವೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳು ಹತ್ತರಲ್ಲಿ ಒಂದು ಎಂಬಂತೆ ಮುಚ್ಚಿಹೋಗುತ್ತಿರುವುದು ವಿಪಯರ್ಾಸ. ಎಲ್ಲಿಂದಲೋ ಇಲ್ಲಿ ಬಂದು ಬದುಕಿಗೆ ಅಂತ್ಯ ಹಾಡುವವರ ಜೀವನದಲ್ಲಿ ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಗಳು ಕಾರಣವಾಗಿ ಕಂಡರೂ ಇಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳೇ ಎಲ್ಲವಕ್ಕೂ ಮೂಲ ಕಾರಣ ಎಂದರೆ ತಪ್ಪಿಲ್ಲ.
ಮನೆ ಬಿಟ್ಟು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯು ವವರು, ಇಲ್ಲಿನ ಸಾಫ್ಟ್ವೇರ್ ಸಂಸ್ಥೆ, ಮಾಲ್ ಇಲ್ಲವೇ ಯಾವು ದಾದರೂ ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ಗಲರ್್ಗಳಾಗಿ ದುಡಿ ಯುವವರ ವಾಸಸ್ಥಾನ ನಾಯಿಕೊಡೆಗಳಂತೆ ತಲೆಯೆತ್ತುವ ಪಿಜಿ ಸೆಂಟರ್ ಮತ್ತು ಹಾಸ್ಟೆಲ್ಗಳು. ಮೇಲ್ನೋಟಕ್ಕೆ ಇವೆಲ್ಲವೂ ಸುರಕ್ಷಿತ ತಾಣವಾಗಿ ಕಂಡರೂ ಇದರ ಒಳಗಿನ ಕಾಣದ ಲೋಕ ಮಾತ್ರ ತೀರಾ ಅಸಹ್ಯ ಹುಟ್ಟಿಸುತ್ತದೆ.
ಮಂಗಳೂರಿಗೆ ಬರುವ ಮುನ್ನ ತಮ್ಮ ತಮ್ಮ ಊರಿನಲ್ಲಿ ಸುಸಂಸ್ಕೃತರು, ಉತ್ತಮರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಯುವತಿಯರು ಇಲ್ಲಿ ಬಂದ ಒಂದೇ ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ವಿದ್ಯಮಾನಗಳು ನಡೆದಿವೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಷರಾ ಬರೆದು ಫೈಲ್ ಕ್ಲೋಸ್ ಮಾಡಿದ್ದೂ ಆಗಿದೆ. ಆದರೆ ಯಾರೊಬ್ಬರೂ ಈ ಎಲ್ಲಾ ಆತ್ಮಹತ್ಯೆಗಳ ಬೆನ್ನು ಬಿದ್ದಿಲ್ಲ ಎನ್ನುವುದು ವಿಪಯರ್ಾಸ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನವರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಶಿಕ್ಷಣ ಇಲ್ಲವೇ ಕೆಲಸ ಮಾಡಿ ಕೊಂಡಿದ್ದವರು. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ನೂರಾರು ಪಿಜಿಗಳು ಹತ್ತಾರು ಹಾಸ್ಟೆಲ್ಗಳಿವೆ. ಆದರೆ ಈ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ಗಳು ಅಧಿಕೃತ ಅಲ್ಲ ಎನ್ನುವುದು ಇಲ್ಲಿರುವ ಮತ್ತೊಂದು ಆಘಾತಕಾರಿ ಸಂಗತಿ! ಅದರಲ್ಲೂ ಹೆಚ್ಚಿನ ಪಿಜಿ ಸೆಂಟರ್ಗಳು ವಾಸದ ಮನೆಯ ಉದ್ದೇಶದಿಂದ ನಿಮರ್ಿಸಿ ಕೊಂಡವಾಗಿದ್ದು, ಇವಕ್ಕೆಲ್ಲಾ ಪಾಲಿಕೆ ಪಿಜಿ ಸೆಂಟರ್ ನಡೆಸಲು ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದರೂ ಒಂದಷ್ಟು ಕಾಲೇಜು ಹುಡುಗಿಯರನ್ನು ಇಲ್ಲವೇ ಕೆಲಸಕ್ಕೆ ಹೋಗುವ ಯುವತಿಯರನ್ನು ಒಟ್ಟು ಸೇರಿಸಿ ಪಿಜಿ ಹೆಸರಿನಲ್ಲಿ ಹಣ ಮಾಡುವವರ ದೊಡ್ಡ ದಂಡೇ ಇದೆ. ಈ ಪಿಜಿಗಳಲ್ಲಿ ಉಳಿದುಕೊಳ್ಳುವ ಹೆಣ್ಣುಮಕ್ಕಳು ರಾತ್ರಿ ಎಷ್ಟು ಗಂಟೆಗೆ ಬಂದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಉಳಿಸಿಕೊಂಡಿದ್ದ ಲೇಡಿಸ್ ಹಾಸ್ಟೆಲ್ಗಳು ಕೂಡ ಅವ್ಯವಸ್ಥೆಯ ಅಡ್ಡೆಯಾಗಿ ಬದಲಾಗುತ್ತಿದೆ. ಬರೋಬ್ಬರಿ 300 ಜನರಿಗೆ ಒಬ್ಬಳೇ ಒಬ್ಬ ವಾರ್ಡನ್ ಇರುವ ಹಾಸ್ಟೆಲ್ಗಳೂ ಇವೆ. ಒಂದು ವೇಳೆ ಇಲ್ಲಿನ ವಾರ್ಡನ್ ರಜೆ ಹಾಕಿ ಊರಿಗೆ ಹೋದರೆ ಕೇಳುವವರೇ ಇಲ್ಲ ಎಂಬಂಥ ಪರಿಸ್ಥಿತಿ. ಇನ್ನು ಇಲ್ಲಿನ ಯುವತಿಯರ ಹಾಜರಾತಿ, ಸಂದರ್ಶಕರ ದಾಖಲಾತಿ ಎಲ್ಲವೂ ಅಪ್ಡೇಟ್ ಆಗುವುದೇ ಇಲ್ಲ. ಒಬ್ಬ ಯುವತಿಗೆ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಶುಲ್ಕ ಪಡೆಯುವ ಈ ಖಾಸಗಿ ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎನ್ನುವುದು ಇಲ್ಲಿನ ದುರಂತ ಬದುಕು ಅನುಭವಿಸಿ ಬಂದವರ ಮಾತು. ಊರು ಬಿಟ್ಟು ಬಂದ ತಪ್ಪಿಗೆ ಅನಿವಾರ್ಯವಾಗಿ ಇಲ್ಲಿನ ನರಕಸದೃಶ ಬದುಕಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ.  
ಯುವತಿಯರು ದಾರಿ ತಪ್ಪಲು ಹಾಸ್ಟೆಲ್ ಮತ್ತು ಪಿಜಿಗಳ ಜೊತೆಗೆ ಅವರು ಕೆಲಸ ಮಾಡುವ ಕೇಂದ್ರಗಳು ಕೂಡ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದರಲ್ಲೂ ನಗರದ ಬಹುತೇಕ ಬಟ್ಟೆ ಅಂಗಡಿಗಳು, ನಗರದ ಪ್ರಮುಖ ಮಾಲ್ಗಳಲ್ಲಿನ ಖಾಸಗಿ ಸಂಸ್ಥೆಗಳು ಯುವತಿಯರನ್ನು ರಾತ್ರಿಯವರೆಗೂ ದುಡಿಸಿಕೊಳ್ಳುತ್ತದೆ. ಈ ಮಧ್ಯೆ ಈ ಯುವತಿಯರ ಪ್ರತೀದಿನದ ಚಲನವಲನಗಳ ಮೇಲೆ ಕಣ್ಣಿಡುವ ಪೋಲಿಗಳ ವರ್ಗದ ಕಾಟ ಬೇರೆ. ಕೆಲವೊಂದು ಯುವತಿಯರು ಇವುಗಳಿಗೆ ಕೇರ್ ಅನ್ನದೇ ತಮ್ಮ ಸೋಕಾಲ್ಡ್ `ಗೂಡು ಸೇರಿದರೆ, ಇನ್ನು ಕೆಲವರು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಈ ರೀತಿ ದಾರಿ ತಪ್ಪಿ ಆ ದಿನ ಬೇರೆಲ್ಲೋ ರಾತ್ರಿ ಕಳೆದರೂ  ಈ ಬಗ್ಗೆ ವಿಚಾರಿಸುವ ಗೋಜಿಗೆ ಯಾವೊಂದು ಹಾಸ್ಟೆಲ್ ಆಡಳಿತವೂ ಕೈ ಹಾಕುವುದಿಲ್ಲ. ಅಷ್ಟೇ ಯಾಕೆ? ಬಹುತೇಕ ಹಾಸ್ಟೆಲ್-ಪಿಜಿಗಳ ಆಡಳಿತದವರಲ್ಲಿ ಉಳಿದುಕೊಳ್ಳುವ ಯುವತಿಯರ ಮನೆ ವಿಳಾಸ ಇಲ್ಲವೇ ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ದಿನನಿತ್ಯ ಬರುವವರು ಒಂದು ದಿನ ಬಾರದಿದ್ದರೂ ಕೇಳುವ ಅಗತ್ಯತೆ ಪಿಜಿ ಸೆಂಟರ್ ಇಲ್ಲವೇ ಹಾಸ್ಟೆಲ್ ವಾರ್ಡನ್ಗಳಿಗೆ ಇಲ್ಲ ಎನ್ನುವುದೇ ದುರಂತ.
ಈ ರೀತಿ ದಾರಿ ತಪ್ಪುವ ಯುವತಿಯರು ಕೆಲ ತಿಂಗಳು ತಮಗೇ ಗೊತ್ತಿಲ್ಲದಂತೆ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಜ್ಞಾನೋದಯವಾಗುವುದು ಮಾತ್ರ ಹಲವು ತಿಂಗಳುಗಳೇ ಕಳೆದ ನಂತರ. ಹೀಗಾಗಿ ಬದುಕಿನ ಅಂತಿಮ ಕ್ಷಣ ಆತ್ಮಹತ್ಯೆಯ ರೂಪದಲ್ಲಿ ದುರಂತ ಅಂತ್ಯ ಕಾಣುತ್ತದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಎಲ್ಲೋ ಒಂದಿಬ್ಬರು ಸಾವಿಗೆ ಕಾರಣ ಕೊಟ್ಟುಹೋದರೆ, ನೂರರಲ್ಲಿ ತೊಂಬತ್ತು ಭಾಗದಷ್ಟು ಯುವತಿಯರು ಕಾರಣವನ್ನೇ ತಿಳಿಸದೆ ಇಹಲೋಕ ತ್ಯಜಿಸಿರುತ್ತಾರೆ. ಈ ಸಾವಿನ ದುಃಖ ತಡೆಯಲಾಗದೆ ಒಂದೇ ಸಮನೆ ಬೊಬ್ಬಿಡುವ ಈ ಹೆಣ್ಮಕ್ಕಳ ಕುಟುಂಬ ವರ್ಗವೂ ಸಾವಿನಲ್ಲಿ ಪಾಲುದಾರರು ಎಂಬುದು ನೆನಪಿರಲಿ. ವರ್ಷಗಟ್ಟಳೆ ಒಂಟಿಹೆಣ್ಣನ್ನು ಎಲ್ಲೋ ದೂರದಲ್ಲಿಟ್ಟು ಬೆಳೆಸಿದರೂ ಒಂದೇ ಒಂದು ಬಾರಿ ನೋಡಿಕೊಂಡು ಹೋಗುವ ಕನಿಷ್ಟ ಕಾಳಜಿಯೂ ಅವರಿಗಿರುವುದಿಲ್ಲ. ಹೀಗಾಗಿ ನಮಗೆ ಕೇಳುವವರೇ ಇಲ್ಲ ಅಂದುಕೊಂಡು ತಮ್ಮದೇ ಆದ ಸ್ವಾತಂತ್ರ್ಯ ಜೀವನ ನಡೆಸಿಕೊಂಡು ಯುವತಿಯರು ದಾರಿ ತಪ್ಪುವುದು ಸಾಮಾನ್ಯ ವಾಗಿದೆ. ಇಂದಿಗೂ ಬದುಕು ಕಳೆದುಕೊಳ್ಳುವ ಹೆಚ್ಚಿನ ಯುವತಿಯರು ಮುಗ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ  ಇದೇ ಮುಗ್ಧತೆ ದಾರಿ ತಪ್ಪಿದಾಗ ಮಾತ್ರ ಸಾವಿನಲ್ಲಿ ಅಂತ್ಯ ಕಾಣುತ್ತದೆ. ಈ ವೇಳೆ ಸಾವಿಗೆ ಕಾರಣವಾದ ಕಾಣದ ಕೈಗಳು ವಿಜೃಂಭಿಸಿ ಮರೆಯಾಗುತ್ತದೆ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದರೆ ತಪ್ಪಿಲ್ಲ.
ಧ್ವ

Sunday, 24 March 2013

ಕಾಣದ ಕಡಲಿಗೆ ಹಂಬಲಿಸಿದೆ ಮನ.... ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

ಕಾಣದ ಕಡಲಿಗೆ ಹಂಬಲಿಸಿದೆ ಮನ....

ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

 

ನವಿರಾದ ಬದುಕಿನ ಸುಶ್ರಾವ್ಯ ಹೆಜ್ಜೆ ಗುರುತು ಕಳೆದು ಹೋಗಿದೆ. ಆಕಾಶದಲ್ಲಿ ಚಂದ್ರನನ್ನು ಕಂಡು ಕಣ್ಣ ಬಿಂಬಗಳನ್ನು ಒಂದಾಗಿಸಿದ ಕ್ಷಣ ಎದೆಯೊಳಗೆ ಹೊತ್ತು ಗೊತ್ತಿಲ್ಲದೇ ಕಾಡುತ್ತಿದೆ. ದೇವಸ್ಥಾನದ ಮೆಟ್ಟಿಲ ತುದಿಯಲ್ಲಿ ಒಟ್ಟಾಗಿ ಇಟ್ಟ ಹೆಜ್ಜೆಗಳನ್ನು ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಹಸಿರು ಪರಿಸರದ ಮಧ್ಯೆ ಗರಿ ಬಿಚ್ಚಿ ಕಳೆದ ಪ್ರತೀ ಕ್ಷಣದ ನೆನಪುಗಳೂ ಒತ್ತರಿಸಿ ಬರುತ್ತಿವೆ. ಆದರೇನೂ ಮಾಡುವುದು ...ದೂರವಾಗಿದ್ದಾಳೆ ಅವಳು....!
ವರ್ಷಗಳಿಂದ ಸುರಿಯದ ಕಣ್ಣೀರು ಇಂದು ಪ್ರತೀ ಕ್ಷಣವೂ ಕಟ್ಟೆಯೊಡೆದು ಧುಮ್ಮಿಕ್ಕುತ್ತಿದೆ. ಎಲ್ಲವೂ ನೆನಪುಗಳ ಮೆರವಣಿಗೆಯಲ್ಲಿ ಕಳೆದುಕೊಂಡ  ಆ ದಿನಗಳ ಸಣ್ಣದೊಂದು ಕುರುಹುಗಳಷ್ಟೇ....
ಒಂಟಿ ಜೀವದ ಒಬ್ಬಂಟಿ ಪಯಣದಲ್ಲಿ ಜಂಟಿಯಾದವಳು ಕಳೆದು ಹೋಗಿದ್ದಾಳೆ. ಆದರೆ ಅವಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲಾಗುತ್ತಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕಣ್ಣಿಗೆ ಕಾಣದ ಮನಸ್ಸು ಕೂಡ ಕಣ್ಣೀರು ಸುರಿಸಿದ ಅನುಭವ. ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಯೋ ಎಂಬಂತೆ ಜೀವ ಕಳೆಯೇ ಇಲ್ಲದ ಬದುಕೊಂಡು ನನ್ನನ್ನು ಅಪ್ಪಿಕೊಂಡಿದೆ.  ಏನೇ ಆದರೂ ಈಗಿನ ಪ್ರತೀ ಕ್ಷಣ ನನ್ನ ಜೊತೆಯಾಗುತ್ತಿರುವುದು.....ಅಳು........ಅಳು.....ಅಳು........!
ನನಗ್ಯಾರೂ ಇಷ್ಟವಾಗದ ಎಲ್ಲರಿಗೂ ಇಷ್ಟವಾಗುವ ಒಬ್ಬಂಟಿ ಜೀವನ ನನ್ನದು. ಈ ಮದ್ಯೆ ಹೆತ್ತು-ಹೊತ್ತು ಬದುಕಲು ಕಲಿಸಿದ ತಾಯಿಯೆಂದರೆ ನನಗೆ ಪಂಚಪ್ರಾಣ. ಈ ಮಧ್ಯೆ ಹೆತ್ತಮ್ಮನ ಜೊತೆಗೆ ಜೀವನಕ್ಕೆ ಸ್ಫೂತರ್ಿಯಾದ ನನ್ನ ಪ್ರೀಮಾ ಅಕ್ಕ ಅಂದ್ರೆ ಇಷ್ಟ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ನನಗೆ ಅಷ್ಟು ಹತ್ತಿರವಲ್ಲ. ಆದರೆ ಸ್ವಭಾವತಃ ತೀರಾ ಸೆನ್ಸಿಟಿವ್ ಆದ ನನ್ನನ್ನು ಕಂಡರೆ ಎಲ್ಲರಿಗೂ ಇಷ್ಟ. ನನಗೂ ಇವರೆಲ್ಲರೂ ಇಷ್ಟವಾದರೂ ಅಮ್ಮ-ಅಕ್ಕನಷ್ಟು ಹತ್ತಿರವಲ್ಲ.
ನಿಧಾನಗತಿಯ ಬದುಕು, ಸಣ್ಣದೊಂದು ಆಸೆ, ಬಹುದೊಡ್ಡ ಉದ್ದೇಶ, ತೀರಾ ಸೆನ್ಸಿಟಿವ್ ಮನಸ್ಸು, ಈ ಮಧ್ಯೆ ಅರ್ಥ ಮಾಡಿಕೊಳ್ಳುವ ನನ್ನದೇ ಆದ ಜೀವಕ್ಕೆ ಮಾತ್ರ ಕೊರತೆ.. ಹೀಗೆ ಸಾಗುತ್ತಿದ್ದ ಜೀವನದ ಮಧ್ಯೆ ಸಿಕ್ಕವಳೇ ಪ್ರಮೀ. ನಗುವಿನಲ್ಲೇ ಇಷ್ಟವಾದವಳು, ಕಣ್ಣ ನೋಟಕ್ಕೆ ಮನಸ್ಸಿಗೆ ಹತ್ತಿರವಾಗಿದ್ದಳು, ತಡಮಾಡದೇ ಬದುಕು ಕಟ್ಟಿಕೊಳ್ಳುವ ನನ್ನದೊಂದು ಪುಟ್ಟ ಹಾದಿಯಲ್ಲಿ ಅವಳನ್ನು ಜೊತೆಯಾಗಿಸಿದೆ. ಸಿಕ್ಕ ಮೊದಲ ಕ್ಷಣದಲ್ಲೇ ತೀರಾ ಹೆಚ್ಚೇ ಎನಿಸುವಷ್ಟು ಇಷ್ಟವಾಗಿದ್ದಳು. ಬದುಕಿನ ಹಾದಿಯಲ್ಲಿ ಜೀವನದ ಕೊನೆಯವರೆಗೂ ಉಸಿರಾಗಿ ನಿಲ್ಲಲು ಇವಳೇ ಸೂಕ್ತ ಅಂದುಕೊಂಡು ಜೊತೆಯಾಗಿದ್ದೆ. ನನ್ನಷ್ಟೇ ಸೂಕ್ಷ್ಮ, ತೂಕ=ಎತ್ತರ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್..! ಸಿಕ್ಕಾಗಲೆಲ್ಲಾ ಇವಳಿಂದ ಬಯಸಬಹುದಾದ ಇಷ್ಟವಾದ ಗಿಫ್ಟ್ ಮುಖದಲ್ಲಿ ಬೀಳುವ ಗುಳಿ ಕೆನ್ನೆಯ ನಗು ಮಾತ್ರ. ಯಾಕೋ ಗೊತ್ತಿಲ್ಲ ಹುಟ್ಟಿದ 22 ವರ್ಷದಲ್ಲಿ ಅಮ್ಮ- ಅಕ್ಕನ ನಂತರ ಪ್ರಮೀ ತುಂಬಾ ಇಷ್ಟವಾಗಿದ್ದಳು. ಪ್ರೀತಿ ಹೇಳಿಕೊಳ್ಳುವ ಸಣ್ಣದೊಂದು `ಪದ್ದತಿ' ಮುಗಿಸಿ ಒಂದೆರೆಡು ತಿಂಗಳಲ್ಲಿ ನಾವಿಬ್ಬರು ತುಂಬಾನೇ ಹತ್ತಿರವಾಗಿದ್ದೆವು. ಎಲ್ಲಾ ಪ್ರೇಮಿಗಳಂತೆ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ, ವಾರಕ್ಕೆರೆಡು ಬಾರಿ ದೇವಸ್ಥಾನ.... ಹೀಗೆ ತಿರುಗಾಟ ನಮ್ಮಲ್ಲೂ ಇತ್ತು. ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಇಬ್ಬರ ಹೆಸರಿನಲ್ಲೂ ಒಂದು ಕುಂಕುಮಾರ್ಚನೆ ಪರ್ಮನೆಂಟ್ ಎಂಬಂತಾಗಿತ್ತು. ಹೀಗಾಗಿಯೋ ಏನೋ ನಮ್ಮಿಬ್ಬರ ಹೆಸರು, ರಾಶಿ-ನಕ್ಷತ್ರ ಇಲ್ಲಿನ ಅರ್ಚಕರಿಗೆ ಅಪ್ಡೇಟ್ ಆಗಿತ್ತು. ಒಟ್ಟಿನಲ್ಲಿ ನಾವಿಬ್ಬರೂ ಈ ದೇವಸ್ಥಾನದ ಖಾಯಂ ಭಕ್ತರು ಎಂದರೆ ತಪ್ಪಿಲ್ಲ...!
ಪ್ರಮಿಯದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಕೆಲವೊಮ್ಮೆ ಮಕ್ಕಳಂತ ಸ್ವಭಾವ. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಪ್ರಮಿ. ಆದರೆ ಈಗ ಪ್ರಮಿ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲ್ಲಿ ಪ್ರಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......ಎಲ್ಲವೂ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ...
ದೂರವಾಗುವ ಮುನ್ನ ಕೊನೆಯದಾಗಿ ಮಾತಿಗೆ ಸಿಕ್ಕವಳು ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡದಂತೆ ನನ್ನ ಎದುರಿಗೆ ನಿಂತಿದ್ದಳು. ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ..
ಪ್ರಮೀ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪ್ರಮಿಯನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ನಂತರ ಪ್ರಮಿ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಧ್ವನಿ

Friday, 1 February 2013

ಹಾಗೇ ಸುಮ್ಮನೆ ಒಮ್ಮೆ `ವಿಶ್ವರೂಪಂ' ನೋಡಿ ಬನ್ನಿ

ತಮಿಳು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡದೆ ತುಂಬಾ ದಿನಗಳೇ ಆದವು. ಇಂದಿನ ಕನ್ನಡ ಸಿನಿಮಾಗಳ ಅಬ್ಬರದ ಮಧ್ಯೆ ಅವುಗಳನ್ನು ನೋಡುವುದರಲ್ಲೇ ಕಳೆದು ಹೋಗಿದ್ದೆ. ಆದರೆ ಇತ್ತೀಚಿಗೆ ನೋಡಿದ `ಎದೆಗಾರಿಕೆ ಬಿಟ್ಟರೆ ಬೇರ್ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. ಹಾಗಂತ ಭಾಷೆ ಬದಲಿಸಿ ಅನ್ಯ ಭಾಷೆಯ ಸಿನಿಮಾ ನೋಡೋಣವೆಂದರೆ ಪತ್ರಿಕಾ ವಿಮಶರ್ೆಗಳೇ ಸಿನಿಮಾ ಮಂದಿರಗಳಿಗೆ ಹೋಗದಂತೆ ತಡೆಯುತ್ತಿದ್ದವು. ಆದರೂ  ಇಂದು ಶುಕ್ರವಾರ ಒಂದು ತಮಿಳು ಸಿನಿಮಾ ನೋಡಿಯೇ ಬಿಟ್ಟ. ಈ ಸಿನಿಮಾದ ಬಗ್ಗೆ ನನ್ನೊಳಗಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಣ್ಣದೊಂದು ಪ್ರಯತ್ನ ಇದಾಗಿತ್ತು. ಆ ಸಿನಿಮಾ ಬೇರಾವುದೂ ಅಲ್ಲ. ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿ ನಿಷೇಧದ ಮಧ್ಯೆ ಅಲ್ಲಲ್ಲಿ ಪ್ರದರ್ಶನ ಕಾಣುತ್ತಿರುವ `ವಿಶ್ವರೂಪಂ..!
ಪತ್ರಿಕೆಯಲ್ಲಿ ಕೆಲಸ ಮಾಡುವ ಕಾರಣ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಏನದು ವಿಶ್ವರೂಪಂ ಎಂಬ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದೆ. ಅದರಲ್ಲೂ ಈ ಸಿನಿಮಾ ದೇಶದ ಭದ್ರತೆಗೆ ಸವಾಲೊಡ್ಡುತ್ತದೆ ಎಂಬ ವಿವಾದ ಎದ್ದ ಮೇಲಂತೂ ಸಿನಿಮಾದ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸತೊಡಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾತ್ರ ಆಗಲೇ ಇಲ್ಲ. ಆದರೆ ಯಾವಾಗ ನಟನೆಯಲ್ಲೇ ಅತೀ ಹೆಚ್ಚು ಪ್ರಶಸ್ತಿ ಪಡೆದ ನಟ ಕಮಲ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರೋ ಆಗಲೇ ಒಂದು ಹಂತಕ್ಕೆ ಸಿನಿಮಾವೊಂದು ಸೃಷ್ಟಿಸಿದ ನೈಜ ವಿವಾದದ ಬಗ್ಗೆ ಅರಿವಾಯಿತು. ಇಷ್ಟಾದ ಮೇಲೂ ಸಿನಿಮಾ ನೋಡದೆ ಹೋದರೆ ಸರಿ ಬರಲ್ಲ ಅಂತ ತಿಳಿದು, ಶುಕ್ರವಾರ ನಗರದ ಪ್ಲಾಟಿನಂ ಚಿತ್ರ ಮಂದಿರಕ್ಕೆ ಹೋಗಿದ್ದೆ.   ಎರಡೂವರೆ ಘಂಟೆಯ ಸಿನಿಮಾದಲ್ಲಿ ತೋರಿಸಲಾದ ವಿವಾದವಾದರೂ ಏನಪ್ಪ ಅಂತ ಕಣ್ಣು ಮಿಟುಕಿಸದೆ ಗಮನಿಸಿದೆ. ಆದರೆ ನನ್ನ ಪ್ರಕಾರ ಸಿನಿಮಾದಲ್ಲಿ ಅಂತಹ ಯಾವುದೇ ವಿವಾದ ವೈಯಕ್ತಿಕವಾಗಿ ನನಗೆ ಕಂಡು ಬರಲಿಲ್ಲ.
ಕಮಲ್ ಹಾಸನ್ ಒಬ್ಬ ಅಧ್ಬುತ ನಟ. ಇಡೀ ಭಾರತದಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದಾಖಲೆಯೂ ಕಮಲ್ ಮೇಲಿದೆ. ಇಂತಹ ಕಮಲ್ಹಾಸನ್ ತಾನೇ ದುಡ್ಡು ಹಾಕಿ, ನಿದರ್ೇಶಿಸಿ, ನಟಿಸಿ ಸಿನಿಮಾ ಮಾಡುತ್ತಾರೆಂದರೆ ಸಹಜವಾಗಿಯೇ ಕುತೂಹಲ ಇದ್ದದ್ದೇ. ಅದರಲ್ಲೂ ವಿಭಿನ್ನವಾದ ಶೀಷರ್ಿಕೆಯ ಮೂಲಕ ಪ್ರೇಕ್ಷಕನ ಮೆದುಳಿನ ಕದ ತಟ್ಟುವುದು ಕಮಲ್ `ಕಮಾಲ್. ಆದರೆ ಕಮಲ್ಹಾಸನ್ರ ವಿಶ್ವರೂಪಂ ಮಾತ್ರ ಪಕ್ಕಾ ವಿಭಿನ್ನ.
ಮುಸ್ಲಿಮರನ್ನು ಉಗ್ರರಂತೆ ಚಿತ್ರಿಸಲಾಗಿದೆ ಎನ್ನುವುದು ಈಗಿರುವ ವಿವಾದ. ಚಿತ್ರ ನೋಡುತ್ತಾ ಹೋದಂತೆ ಇಂತಹ ಅನುಭವ ಎಲ್ಲೂ ಆಗುವುದಿಲ್ಲ. ಕಮಲ್ ಹೇಳಿದಂತೆ ಎಲ್ಲವೂ ಅಪಘಾನಿಸ್ಥಾನದಲ್ಲಿ ನಡೆಯುವ ಟೆರರ್ ಸ್ಟೋರಿ ಅನ್ನುವುದು ಸ್ಪಷ್ಟ. ನಾವು ದಿನಬೆಳಗಾದರೆ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ನೋಡುವ ಅಂತರಾಷ್ಟ್ರೀಯ ಸುದ್ದಿಗಳೇ ಚಿತ್ರದ ಕೇಂದ್ರ ಬಿಂದು. ಒಬ್ಬ ಭಾರತೀಯ ನಟ ಕಮ್ ನಿದರ್ೆಶಕ ಅಪಘಾನಿಸ್ಥಾನದ ಉಗ್ರ ಜಗತ್ತಿನ ಸಂಪೂರ್ಣ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾನೆ ಎನ್ನುವುದು ಚಿತ್ರ ನೋಡಿದವರ ಗಮನಕ್ಕೆ ಬರುತ್ತದೆ. ನ್ಯಾಟೋ ಪಡೆಗಳು ಅಪಘಾನಿಸ್ಥಾನದ ಉಗ್ರ ಅಡಗುತಾಣಗಳ ಮೇಲೆ ನಡೆಸುವ ದಾಳಿಯನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಲಾಗಿದೆ. ಆದರೆ ಎಲ್ಲ್ಲೂ ಕೂಡ ಭಾರತೀಯ ಮುಸ್ಲಿಮರನ್ನು ಮಾತ್ರ ಉಗ್ರರಂತೆ ಚಿತ್ರಿಸಿಲ್ಲ ಎನ್ನುವುದು ಅಷ್ಟೇ ಸತ್ಯ.
ಕಮಲ್ ಒಬ್ಬ ಅಪ್ರತಿಮ ನಟ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ  ಈತನಲ್ಲೂ ಓರ್ವ ಅಧ್ಬುತ ನಿದರ್ೇಶಕನಿ ದ್ದಾನೆ ಎನ್ನುವುದು ಮಾತ್ರ ವಿಶ್ವರೂಪಂನಲ್ಲಿ ಸಾಬೀತಾಗುತ್ತದೆ. ಇಡೀ ಚಿತ್ರ ಉಗ್ರರ ಸುತ್ತ ಗಿರಕಿ ಹೊಡೆದರೂ ಸಿನಿಮಾದಲ್ಲಿ ಭಾರತೀಯರಿಗೆ ಎಳ್ಳಷ್ಟೂ ನೋವು ತರುವ ಸನ್ನಿವೇಶಗಳನ್ನು ಕಮಲ್ ಸೃಷ್ಟಿಸಿಲ್ಲ. ಅಷ್ಟೇ ಯಾಕೆ ಸಿನಿಮಾದಲ್ಲಿ ತೋರಿಸಲಾದ ಸ್ಥಳಗಳು ಕೂಡ ಭಾರತದ್ದಲ್ಲ. (ಸಿನಿಮಾದಲ್ಲಿ ತೋರಿಸಲಾಗಿರುವಂತೆ)
95ಕೋಟಿ ಸುರಿದು ಕಮಲ್ ಸಿನಿಮಾ ಮಾಡಿದ್ದಾರೆ ಅಂದಾಗ ಕಮಲ್ ಬಗ್ಗೆ ಸಹಜವಾಗಿಯೇ ಅಭಿಮಾನವಿತ್ತು. ಈ ಅಭಿಮಾನ ಸಿನಿಮಾ ನೋಡಿದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ನಟನೊಬ್ಬ ಸಿನಿಮಾದ ಮೇಲೆ ಈ ಮಟ್ಟಿನ ಭರವಸೆಯಿಟ್ಟು, ಇಂದಿನ ಲವ್ಸ್ಟೋರಿಗಳ ಮಧ್ಯೆ ಇಂತಹ ಸಿನಿಮಾ ನಿಮರ್ಿಸಿರುವುದು ನಿಜಕೂ ಗ್ರೇಟ್ ಅನಿಸದೆ ಇರದು. ಇಡೀ ಸಿನಿಮಾ ವೀಕ್ಷಿಸುವಾಗ ಕಮಲ್ ಹಣದ ವಿಚಾರದಲ್ಲಿ ರಾಜಿಯಾದಂತೆ ತೋರುತ್ತಿಲ್ಲ. ಕಮಲ್ ಎಂಟ್ರಿ ಕೊಟ್ಟಾಗ ಇಂದಿಗೂ ಮಂಗಳೂರಿನ ಥಿಯೇಟರ್ಗಳಲ್ಲೇ ವಿಶಿಲ್, ಚಪ್ಪಾಲೆ ಎಲ್ಲೆ ಮೀರುತ್ತಿದೆ ಎಂದರೆ ಊಹಿಸಿ...ಕಮಲ್ ಖದರ್ ಎಷ್ಟಿರಬೇಡ ಎನ್ನುವುದನ್ನು.
ಕೆಲ ಮುಸ್ಲಿಂ ಮುಖಂಡರು ಹೇಳುವಂತೆ `ವಿಶ್ವರೂಪಂ ದೇಶದ ಭದ್ರೆತೆಗೆ ಹಾನಿ ಮಾಡುವುದೇ ಆದರೆ ಶಾರುಖ್ ಖಾನ್ರ `ಮೈ ನೇಮ್ ಈಸ್ ಖಾನ್ ನಿಂದ ಇಡೀ ದೇಶವೇ ಹೊತ್ತಿ ಉರಿಯ ಬೇಕಿತ್ತು.,. ಆದರೆ ಎಲ್ಲೂ ಹಾಗಾಗಿಲ್ಲ. ಮೈ ನೇಮ್ ಈಸ್ ಖಾನ್ನಲ್ಲಿ ಶಾರುಕ್ ಪದೇ ಪದೇ ಬಳಸುವ `ಆ್ಯಮ್ ಖಾನ್, ಬಟ್ ನಾಟ್ ಟೆರರಿಸ್ಟ್ ಎಂಬ ಒಂದು ಪದವನ್ನೇ ಗಮನಿಸಿ. ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲು ಈ ಡೈಲಾಗ್ ಸಾಕಲ್ಲವೇ? ಆದರೆ ಆಗ ಮಾತ್ರ ಯಾರಿಗೂ ಚಿತ್ರದಲ್ಲಿ ವಿವಾದದ ವಸ್ತು ಕಾಣಲಿಲ್ಲ. ಮೈ ನೇಮ್ ಇಸ್ ಖಾನ್ ಗೆದ್ದಿತು.....!?
ವಿಶ್ವರೂಪಂನಲ್ಲಿ `ಅಲ್ಲಾ ಅಕ್ಬರ್, ದುವಾ ಎಂಬ ಕೆಲವೊಂದು ಮುಸ್ಲಿಂ ಶಬ್ದಗಳನ್ನು ಬಳಸಿದ್ದನ್ನು ಬಿಟ್ಟರೆ ಎಲ್ಲೂ ಮುಸ್ಲಿಂ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ ಎನ್ನುವುದು ನನ್ನ ವೈಯಕ್ತ್ತಿಕ ಅಭಿಪ್ರಾಯ. ಆದರೇನು ಮಾಡುವುದು ನಮ್ಮ ದೇಶದ ಹೊಲಸು ರಾಜಕೀಯದಲ್ಲಿ `ವಿಶ್ವರೂಪಂ ವಿರೂಪಗೊಳ್ಳುತ್ತಿದೆಯಷ್ಟೇ..
ನೆನಪಿರಲಿ, ಸಿನಿಮಾ ಎನ್ನುವುದು ಮನೋರಂಜನಾ ಮಾಧ್ಯಮ. ಈ ಮಾಧ್ಯಮದಲ್ಲಿ ಬೇಕೆಂದೇ ವಿವಾದಗಳನ್ನು ಸೃಷ್ಟಿಸುವವರಿದ್ದಾರೆ. ಕಾರಣ ಸಿನಿಮಾ ಗೆಲ್ಲಬೇಕು ಎನ್ನುವುದು. ಆದರೆ ಕಮಲ್ ಎಲ್ಲೂ ವಿವಾದ ಸೃಷ್ಟಿಸಿಲ್ಲ. ವಿವಾದ ಎನ್ನುವುದು ತಾನಾಗಿಯೇ ಹುಟ್ಟಿಕೊಂಡಿದೆ. 95 ಕೋಟಿ ಸುರಿದು ದೇಶದ ಮಹಾನ್ ಕಲಾವಿದನೊಬ್ಬ ತನ್ನ ಚಿತ್ರದಿಂದ ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದಾನೆಂದರೆ ಏನರ್ಥ? ಅಷ್ಟಕ್ಕೂ ಟೆರರಿಸಂ ಎಂಬ ವಸ್ತು ವಿಷಯದಲ್ಲಿ ಎಷ್ಟು ಸಿನಿಮಾಗಳು ಬಂದು ಹೋಗಿಲ್ಲ ಹೇಳಿ?
ಇನ್ನಾದರೂ ಸಿನಿಮಾಗಳನ್ನು ವೈಯಕ್ತಿಕ ಹಿತದೃಷ್ಟಿಯಿಂದ ನೋಡುವುದು ಬೇಡ. ಅಷ್ಟಕ್ಕೂ ವಿಶ್ವರೂಪಂ ಆ ಮಟ್ಟಿಗೆ ವಿವಾದ ಸೃಷ್ಟಿಸಿದ ಸಿನಿಮಾವೂ ಅಲ್ಲ. ನೆನೆಪಿರಲಿ, ಇದು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದರೂ  ಹಾಗೇ ಸುಮ್ಮನೆ ಸಿನಿಮಾ ನೋಡಿ ಬನ್ನಿ, ಮನೋರಂಜನೆ ಸಿಗದಿದ್ದರೂ ವಿಶ್ವರೂಪಂನಲ್ಲಿ ವಿವಾದವಿದೆಯೇ ಎಂಬ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು.
                                                                                                                                                       ಧ್ವನಿ  

Tuesday, 20 November 2012

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....

ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
  ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!

                                                                                                                                ಧ್ವನಿ








Friday, 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ

Tuesday, 21 August 2012

`ಕಾಲದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

`ಕಾಲ'ದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

 

ತಾಯಿಯ ಹೊಟ್ಟೆಯಿಂದ ಭೂಮಿಗಿಳಿಯುವಾಗ ಸಣ್ಣದೊಂದು ಅಳುವಿನ ಜೊತೆಗೆ ಪುಕ್ಕಟೆಯಾಗಿ ಸಿಗುವುದು `ಮಗು ಎಂಬ ನಾಮಧೇಯವಷ್ಟೇ. ಆಸ್ಪತ್ರೆಯ ತೊಟ್ಟಿಲಲ್ಲಿ ಪಿಲಿ ಪಿಲಿ ಕಣ್ಣು ಬಿಡುತ್ತಾ ಅಮ್ಮನ ತೋಳ ತೆಕ್ಕೆಯ ಆಸರೆ ಬೇಡುತ್ತಿದ್ದರೆ ಅಲ್ಲಿ ನೆರೆದವರಿಗೆ ಅದೆಂಥದೋ ಪುಳಕ. ಹೆತ್ತ ತಾಯಿಗಂತೂ ಆ ಮಗುವಿನ ಆಳುವೇ ಸಾರ್ಥಕ ಎನಿಸುವಂಥ ಅನುಭವ. ಆದರೆ ಭೂಮಿಯ ಸ್ಪರ್ಶಕ್ಕೆ ಸಿಕ್ಕಿ ಕೆಲವೇ ಸೆಕೆಂಡ್ ಕಳೆದ ಮಗುವಿಗೆ ಜಗವೇ ನೂತನ....ಅಳು ಕಂಡು ನಗುವವರ ವ್ಯಕ್ತಿತ್ವ ವಿನೂತನ....ಹುಟ್ಟಿದ ಮಗುವಿನ ಅಳು ನಗುವಾಗಿ ಬದಲಾಗುವಾಗ ಅದಕ್ಕೊಂದು ಸ್ವಂತ ಹೆಸರಿನ ಆಸರೆ....ಮನೆಯವರೆಲ್ಲರ ಸ್ಪರ್ಶ....
ಸಣ್ಣ ವಯಸ್ಸಿನಲ್ಲೊಂದು ಇಂತಹ ಪ್ರೀತಿ, ಪ್ರತೀ ಮಗುವಿಗೂ ಸಿಗಬೇಕು. ಸಿಕ್ಕೇ ಸಿಗುತ್ತೆ ಕೂಡ...ಆದರೆ ಎಷ್ಟು ದಿನ?
ಆ ಮಗುವಿಗೂ ಕಾಲದ ಜವಾಬ್ದಾರಿಗೆ ಹೆಗಲು ಕೊಡುವ ಅನಿವಾರ್ಯತೆ ಬಂದೇ ಬರುತ್ತೆ ಅಲ್ವಾ?
ಹೌದು, ಬದಲಾವಣೆ ಜಗದ ನಿಯಮ..ಹುಟ್ಟು ಸಾವಿನ ಮಧ್ಯೆ ಕಂಡುಕೊಂಡ ಪ್ರತೀ ಹಾದಿಯಲ್ಲೂ ಜವಾಬ್ದಾರಿಯ ನೊಗ ಹೊತ್ತು ಸಾಗಬೇಕಾದದ್ದು ಅನಿವಾರ್ಯ....ಎಳೆಯ ವಯಸ್ಸಿನ ಆಟ, ತುಂಟಾಟಗಳು, ನಮ್ಮದೇ ಆದ ಜೀವನ, ಎಲ್ಲವೂ ದೂರ ಸರಿದು `ಜವಾಬ್ದಾರಿಯೆಂಬ ಹಣೆಪಟ್ಟಿ ಹೊತ್ತು ನಮ್ಮ ಹೆಗೆಲೇರುತ್ತದೆ.
ಇಂದೊಂಥರ ಅನ್ಯಗ್ರಹವನ್ನು ಪ್ರವೇಶಿಸಿದ ಹಾಗೆ...!
ಜೀವನ ಸುಗಮವಾಗಿರಲಿ ಎಂದು ಮುಂದಡಿಯಿಡುವ ಪ್ರತೀ ಜೀವವೂ ಬಯಸದೇ ಪಡೆದ ಭಾಗ್ಯ, ದೌಭರ್ಾಗ್ಯಗಳು ಎಷ್ಟು ಎನ್ನುವುದು ಕೇಳಿಯೂ ಕೇಳದಂತಿರುವ ದುರಂತ ಕಥಾನಕಗಳೇ ಸರಿ....
ಶಾಲಾ ದಿನಗಳಲ್ಲಿ ಜವಾಬ್ದಾರಿ ಅನ್ನುವುದನ್ನೇ ಮರೆತ ಅದೆಷ್ಟೋ ಗೆಳೆಯರ ಬಳಗ ನನ್ನ ಜೊತೆಯಲ್ಲಿತ್ತು. ಪ್ರತೀ ದಿನ, ಪ್ರತೀ ಕ್ಷಣ ಮನೋರಂಜನೆಯೊಂದನ್ನು ಬಿಟ್ಟರೆ ನನ್ನ ಗೆಳೆಯರ(ಒಂದು ವರ್ಗ) ಬಳಗಕ್ಕೆ ಕಾಲದ ಜೊತೆ ಬರುವ ಜವಾಬ್ದಾರಿಯ ಪರಿಚಯವೇ ಇರಲಿಲ್ಲ. ಆದರೆ ವಯಸ್ಸು 20 ದಾಟುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿದ್ದ ಶಾಲಾ ದಿನಗಳ ಗೆಳೆಯರು ಜವಾಬ್ದಾರಿಯ ಪರಿಚಯ ಮಾಡಿಸಿಕೊಂಡು ಒಂದು ಹಂತಕ್ಕೆ ಕುಟುಂಬದ ಬಂಡಿ ಎಳೆಯುವುದನ್ನು ಕಂಡಿದ್ದೇನೆ. ಆಗೆಲ್ಲಾ ಯೋಚಿಸಿದ್ದಿದೆ...
ನಿಜಕ್ಕೂ ಜವಾಬ್ದಾರಿ ಅಂದ್ರೆ ಇದೇನಾ?
ಹೌದೋ? ಅಲ್ವೋ? ನಂಗತ್ತೂ ಅಷ್ಟು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಶಾಲಾ ದಿನಗಳಲ್ಲಿ ಈ ಗೆಳೆಯರ ಬಳಗದ ವರ್ತನೆ ಕಂಡ ನಾನು ಇಂದು ಮಾತ್ರ ಮಾತೆತ್ತದೆ ಮೌನವಾಗಬೇಕಿದೆ. ಆ ದಿನಗಳಲ್ಲಿ ಶಿಕ್ಷಣದ ಸ್ಪರ್ಶ ಕಂಡರೆ ಬೆಚ್ಚಿ ಬೀಳುತ್ತಿದ್ದ ಈ ವರ್ಗ..ಇಂದು ಹೇಗೋ ಜವಾಬ್ದಾರಿಯ ಅರ್ಥವನ್ನು ಅಥರ್ೈಸಿ ಜೀವನ ಸಾಗಿಸುತ್ತಿದ್ದಾರೆ. ಕಾಲವೇ ಎಲ್ಲವನ್ನೂ ಕಲಿಸುತ್ತೆ ಅನ್ನೋದು ಬಹುಶಃ ಇದಕ್ಕೆ ಇರಬೇಕು...
ಏನೇ ಆದರೂ ಇಂಥವರಿಗೊಂದು ಸಲಾಂ ಮೀಸಲಿಡಲೇ ಬೇಕು. ನನ್ನ ಪ್ರಕಾರ ಸಾಧಕರಲ್ಲದಿದ್ದರು ಸಾಧಕರಿವರು!
ಪ್ರತೀ ಬಾರಿ ಬ್ಲಾಗ್ ಬರೆಯುವಾಗ ನನ್ನ ಚಿಂತನೆಗಳಿಗೆ ಕೆಲಸ ಕೊಡುವ ನಾನು ಈ ಬಾರಿ ಕಣ್ಣಿಗೆ ಬಿದ್ದ ನೈಜ ಪರಿಶ್ರಮದ ಬೆನ್ನು ಬಿದ್ದು ಬರೆದಿದ್ದೇನೆ. ಶಾಲಾ ದಿನಗಳಲ್ಲಿ ರೌಡಿಸಂ, ಗಲಾಟೆ, ಲವ್ ಎಂದು ಹುಚ್ಚರಂತೆ ಬೀದಿ ಸುತ್ತುತ್ತಿದ್ದ ನನ್ನ ಗೆಳೆಯರ ಬಳಗದ ಬಗ್ಗೆ(ಒಂದು ವರ್ಗ) ಬರೆಯಬೇಕೆನಿಸಿತು. ಆದರೆ ಈಗ ಮಾತ್ರ ಇವರ್ಯಾರೂ ಹಾಗಿಲ್ಲ. ಬದಲಾಗಿದ್ದಾರೆ...ಬದಲಾಗುತ್ತಿದ್ದಾರೆ...!
ಮೊದಲೇ ಹೇಳಿದ ಹಾಗೆ ಜವಾಬ್ದಾರಿಗಳನ್ನು ಅಥರ್ೈಸಿಕೊಂಡಿದ್ದಾರೆ. ಆ ದಿನಗಳಲ್ಲಿ ಇವರ ವರ್ತನೆಗೆ ಬೇಸರ ಪಟ್ಟುಕೊಂಡ ಜನರೂ ಇಂದು ತೃಪ್ತಿ ಪಟ್ಟುಕೊಳ್ಳಬೇಕು ಅನ್ನೋ ಹಾಗೆ ಜೀವನ ನಡೆಸುತ್ತಿದ್ದಾರೆ. 10ರಿಂದ 20 ಸಾವಿರ ಸಂಬಳ ಹಿಡಿಯದಿದ್ದರೂ ಸಾಮಾಜಿಕವಾಗಿ ಒಂದು ಹಂತಕ್ಕೆ ಗಟ್ಟಿಮುಟ್ಟು ಎನ್ನಬಹುದುದು.
ಫ್ರೆಂಡ್ಸ್, ಇಷ್ಟೆಲ್ಲಾ ಯಾಕೆ ಹೇಳಬೇಕೆನಿಸಿತು ಅಂದರೆ,,,
ಮೊನ್ನೆಯಷ್ಟೆ ನನ್ನೊಬ್ಬ ಆಕಾಲದ ಗೆಳೆಯ ಸಿಕ್ಕಿದ್ದ. ಅಂದು ಅವನಿದ್ದ ರೀತಿಗೂ ಇಂದು ಅವನಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿದ್ದ ಅಹಂಕಾರ, ಅರ್ಭಟ, ಮಾತೆತ್ತಿದರೆ ಸುಳಿಯುತ್ತಿದ್ದ ಕೋಪ ಇದ್ಯಾವುದೂ ಇಲ್ಲ. ಆಗೆಲ್ಲಾ ಇವರ ವರ್ತನೆ ಬದಲಾಗಲಿ ಎಂದು ಆಶಿಸುತ್ತಿದ್ದೆ. ಮುಂದೆ ಅದೇ ಗೆಳೆಯ ಜೀವನವನ್ನು ಈ ಮಟ್ಟಿಗೆ ಅಥರ್ೈಸಿಕೊಂಡು ಕಣ್ಣಿಗೆ ಬೀಳುತ್ತಾನೆ ಎಂಬ ಸಣ್ಣ ಊಹೆಯೂ ನನಗಿರಲಿಲ್ಲ. ಮಾತಿನಲ್ಲಿ ನಗುವಿನ ಸ್ಪರ್ಶ, ಗೌರವದ ಭಾವ, ಪ್ರೀತಿ ತುಂಬಿದ ಸ್ಪಷ್ಟ ನಿಲುವು....ಹಿಂದಿದ್ದ ವ್ಯಕ್ತಿತ್ವಕ್ಕೆ ಸಿಡಿಲು ಬಡಿದಂತೆ ಬದಲಾಗಿದ್ದ ನನ್ನ ಆತ್ಮೀಯ ಗೆಳೆಯ..!
ಇಂಥದ್ದೊಂದು ಬದಲಾವಣೆಗೆ ಕಾರಣನಾದ ಆ `ಕಾಲಕ್ಕೊಂದು ಥ್ಯಾಂಕ್ಸ್ ಹೇಳಲೇ ಬೇಕು.
ಫ್ರೆಂಡ್ಸ್, ಹಾಗಂತ ಬದಲಾವಣೆಯ ಪ್ರತೀ ಮಗ್ಗುಲನ್ನು ತಿರುವಿ ಹಾಕಿಕೊಂಡು ನೋಡುವ ಅಭ್ಯಾಸ ನನಗಿಲ್ಲ. ಒಬ್ಬನ ವ್ಯಕ್ತಿತ್ವ ನೋಡಿ ಗುಣಮಟ್ಟದ ಸಟರ್ಿಪಿಕೇಟ್ ಕೊಡುವ ಹಂತಕ್ಕೂ ನಾನು ಬೆಳೆದಿಲ್ಲ. ಆದರೆ ಎಲ್ಲೋ ಹಾಳಾಗಿ ಹೋಗುತ್ತಿದ್ದ ಹೊವೊಂದು ತುಂತುರು ಹನಿಗೆ ಮೈದಡವಿ ನಿಂತರೆ ಪೋಟೋ ಕ್ಲಿಕ್ಕಿಸಿ ಚೆಂದಗಾಣಿಸುವ ಅನ್ನೋ ಹವ್ಯಾಸವಷ್ಟೇ! ನನ್ನ ಹವ್ಯಾಸಗಳು ಕೆಲವರ ಪಾಲಿಗೆ ದುರಾಭ್ಯಾಸಗಳಾಗಿ ಕಂಡರೆ ನಾನು ಜವಾಬ್ದಾರನಲ್ಲ.
ಬದುಕಿನ ಪ್ರತೀ ಹಂತದಲ್ಲೂ ಎಡವಿ ಬೀಳುವ ವರ್ಗಕ್ಕಿಂತ, ಈ ಹಿಂದೆ ಎಡವಿ ಬಿದ್ದು ಈಗಷ್ಟೇ ಎದ್ದು ನಿಲ್ಲುತ್ತಿರುವ ನನ್ನ ಆ ಕಾಲದ ಗೆಳೆಯನ ವರ್ಗ ನನಗಿಷ್ಟ..
ಇವರು ಅಂದೆಲ್ಲಾ ಜೀವನದ ಪ್ರತೀ ಕ್ಷಣವನ್ನು ಇಂಚಿಂಚೂ ಎಂಜಾಯ್ ಮಾಡಿದ್ದಾರೆ...ಒಂದು ಕ್ಷಣವೂ ಭಾವುಕರಾಗದೆ ಸಣ್ಣ ವಯಸ್ಸಿನ ಸುಖವನ್ನು ಪ್ರತೀ ಕ್ಷಣವೂ ಅನುಭವಿಸಿದ್ದಾರೆ..ಜವಾಬ್ದಾರಿಯೆಂಬ ಕಾಲನ ಕರೆ ಬಂದಾಗ ನಿಯತ್ತಾಗಿ ಅದಕ್ಕೆ ಹೊಂದಿಕೊಂಡಿದ್ದಾರೆ.
ನಿಜಕ್ಕೂ ಈ ರೀತಿಯ ಜೀವನ ಗ್ರೇಟ್ ಅಲ್ವಾ?
ಫ್ರೆಂಡ್ಸ್, ಈ ಮೂಲಕ ಹೇಳುವುದಿಷ್ಟು...
ಯಾರೇ ಆಗಲಿ ವಯಸ್ಸಿನ ಒಂದು ಹಂತದವರಗೆ ಇರುವಷ್ಟು ದಿನಗಳನ್ನು ಎಂಜಾಯ್ ಮಾಡೋಣ, ನಕ್ಕು ನಲಿಯೋಣ, ಹೇಗಿದ್ದರೂ ಜವಾಬ್ದಾರಿಯೆಂಬ ಕಾಲನ ಕರೆಗೆ ಮತ್ತೆ ಕಿವಿಕೊಡಲೇ ಬೇಕಲ್ಲವೇ?
ನನ್ನ ಈ ಬ್ಲಾಗ್ ಬರಹದ ಉದ್ದೇಶವಿಷ್ಟೇ...ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ನನ್ನ ಆ ಕಾಲದ ಗೆಳೆಯರ ಜೊತೆ ಸಂಭ್ರಮಿಸಿಲ್ಲ. ನಕ್ಕು ನಲಿದಿರಲಿಲ್ಲ...ಎಲ್ಲಕ್ಕೂ ಲಕ್ಷ್ಮಣ ರೇಖೆ ಎಳೆದು ಜೀವಿಸಿದ್ದೆ. ಆದರೆ ಈಗ ಆ ಕಾಲ ಮಿಂಚಿ ಹೋಗಿದೆ. ಇದೀಗ ಜವಾಬ್ದಾರಿಯ ಕಾಲ...ಇಂದು ಸಂಭ್ರಮಿಸಲು ಸಮಯದ ತಿಕ್ಕಾಟ, ಕೆಲಸ ಕಾರ್ಯಗಳ ಜಂಜಾಟ ಬ್ರೇಕ್ ಹಾಕುತ್ತಿದೆ...ಅಪ್ಪಿ ತಪ್ಪಿ ಎಲ್ಲೋ ಒಂದೆರೆಡು ರಜಾ ದಿನಗಳಲ್ಲಿ ಆ ದಿನಗಳ ಸಂಭ್ರಮ ಮರುಕಳಿಸುತ್ತದೆ. ಅದು ಬಿಟ್ಟರೆ ಮುಂದಿನ ಜೀವನದ ಭವಿಷ್ಯತ್ ಕಾಲದಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎನ್ನಬಹುದು.
ಏನೇ ಆದರೂ ಜವಾಬ್ದಾರಿ ಮತ್ತು ಮಜಾ ಎಂಬ ಎರಡು ಶಬ್ದಕ್ಕೆ ಅಡ್ಡಗಾಲಿಡುವ `ಕಾಲ ಎಂಬ ಎರಡಕ್ಷರಕ್ಕೆ ದೊಡ್ಡದೊಂದು ಸಲಾಂ...