ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!
ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!
ಧ್ವನಿ